ಕೊರೋನಾದಿಂದ ಮೃತಪಟ್ಟವರ ಕುಟುಂಬಕ್ಕೆ ಕೇವಲ 12 ರೂಪಾಯಿಗೆ ಸಿಗಲಿದೆ 2 ಲಕ್ಷ ರೂ. ವಿಮೆ..!
source and pic credit: https://ift.tt/2SwcGU8
ಕೊರೋನಾ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭಿಸದೆ, ಐಸಿಯು ಬೆಡ್ ದೊರಕದೆ, ಆಕ್ಸಿಜನ್ ಸಿಗದೆ ಹೀಗೆ ಹಲವು ಕಾರಣಗಳಿಂದ ದಿನಕ್ಕೆ ಸಾವಿರಾರು ಮಂದಿ ಸಾವನ್ನಪ್ಪುತ್ತಿದ್ದಾರೆ. ಹಲವರು ಮಕ್ಕಳನ್ನು ಕಳೆದುಕೊಂಡರೆ, ಇನ್ನು ಕೆಲವು ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದಾರೆ. ಮನೆಮಂದಿ ಮೃತಪಟ್ಟು ಅದೆಷ್ಟೋ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ದೈನಂದಿನ ತುತ್ತಿಗೂ ಪರದಾಡುವ ಪರಿಸ್ಥಿತಿಯಲ್ಲಿದ್ದಾರೆ. ಆದರೆ ನಿಮಗೆ ಗೊತ್ತಾ, ಇಂಥಹಾ ಸಂಕಷ್ಟದ ಸಮಯದಲ್ಲಿ ನೆರವಿಗೆಂದೇ ಕೇಂದ್ರ ಸರ್ಕಾರದ ಜೀವನ ಸುರಕ್ಷಾ ಬಿಮಾ ಯೋಜನೆಯಿದೆ.
ಆದರೆ ಈ ಯೋಜನೆಯ ಬಗ್ಗೆ ಮಾಹಿತಿ ಕೊರತೆಯಿಂದ ಬಹಳಷ್ಟು ಜನರು ಈ ಸೌಲಭ್ಯದ ಸದುಪಯೋಗ ಪಡೆಯುತ್ತಿಲ್ಲ. ಜೀವನ ಸುರಕ್ಷಾ ಬಿಮಾ ಯೋಜನೆಗೆ ಆರಂಭದಲ್ಲಿ ಕೇವಲ 12 ರೂ. ಮತ್ತು 330 ರೂ. ಪಾವತಿಸಿದರಷ್ಟೇ ಸಾಕಾಗುತ್ತಿದೆ. ಜನ್ ಧನ್ ಮತ್ತು ಇತರ ಬ್ಯಾಂಕ್ ಖಾತೆ ಹೊಂದಿದವರಿಗೆ ಕೇಂದ್ರ ಸರ್ಕಾರವು ಎರಡು ವಿಮಾ ಯೋಜನೆಗಳನ್ನು 2015ರಲ್ಲಿ ಘೋಷಣೆ ಮಾಡಿತ್ತು. ಪಿಎಂಜೆಜೆಬಿವೈ ಹಾಗೂ ಪಿಎಂಎಸ್ ಬಿವೈ ಎಂಬ ಈ ಯೋಜನೆಯನ್ನು 12 ರೂ. ಮತ್ತು 330 ರೂ.ಗಳ ವಿಮೆಗಳೆಂದೇ ಕರೆಯಲಾಗುತ್ತದೆ.
source and pic credit: mission new India
ಬ್ಯಾಂಕ್ ಖಾತೆಯಿಂದ ಹಣವನ್ನು ಪ್ರಧಾನ್ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ ಬಿವೈ)ಯ ಪ್ರೀಮಿಯಂ ಆಗಿ ಕಡಿತಗೊಳಿಸಲಾಗುತ್ತದೆ, ಇದರ ಬಗ್ಗೆ ನಿಮಗೆ ಎಸ್ಎಂಎಸ್ ಮೂಲಕವೂ ಮಾಹಿತಿ ಸಿಗುತ್ತದೆ. ಈ ಯೋಜನೆಗೆ ದಾಖಲಾದವರು ಮಾತ್ರ ಈ ಪ್ರೀಮಿಯಂ ಪಾವತಿಸಬೇಕು. ಬ್ಯಾಂಕ್ ಖಾತೆದಾರರಿಂದ ಪ್ರತಿವರ್ಷ ವಿಮಾ ಕಂತನ್ನು ಕಡಿತ ಮಾಡಿಕೊಳ್ಳಲಾಗುತ್ತದೆ.
ಪಿಎಂಎಸ್ ಬಿವೈ ಯೋಜನೆ ಎಂದರೇನು..?
ಪ್ರಧಾನ್ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ ಬಿವೈ) ಎಂಬುದು ಆಕಸ್ಮಿಕ ಸಾವು ಮತ್ತು ಅಂಗವೈಕಲ್ಯದ ವಿಮೆಯನ್ನು ಒದಗಿಸುವ ಒಂದು ಯೋಜನೆಯಾಗಿದೆ. ಇದು ಒಂದು ವರ್ಷದ ಕವರ್ ಹೊಂದಿದ್ದು ಇದನ್ನು ಪಡೆದ ವ್ಯಕ್ತಿಗಳು ವಾರ್ಷಿಕವಾಗಿ ಪಾಲಿಸಿಯನ್ನು ನವೀಕರಿಸುತ್ತಾರೆ. ಆಟೋ ಡೆಬಿಟ್ ಸೌಲಭ್ಯದ ಮೂಲಕ ಈ ಯೋಜನೆಗೆ ಈಗಾಗಲೇ ದಾಖಲಾದವರ ಖಾತೆಯಿಂದ 12 ರೂಪಾಯಿಗಳ (ಜಿಎಸ್ಟಿ ಸೇರಿದಂತೆ) ಪ್ರೀಮಿಯಂ ಅನ್ನು ಕಡಿತಗೊಳಿಸಲಾಗುತ್ತದೆ. ಸಾಮಾನ್ಯವಾಗಿ ಈ ಹಣವನ್ನು ಪಾಲಿಸಿದಾರರ ಬ್ಯಾಂಕ್ ಖಾತೆಯಿಂದ ಪ್ರತಿ ವರ್ಷ ಮೇ ತಿಂಗಳ ಕೊನೆಯ ವಾರದಲ್ಲಿ ಕಡಿತ ಮಾಡಲಾಗುತ್ತದೆ.
source and pic credit: google.com
18ರಿಂದ 70 ವರ್ಷದೊಳಗಿನ ವ್ಯಕ್ತಿಗಳು ಪಾಲಿಸಿ ಮಾಡಲು ಅರ್ಹರು. ಅಪಘಾತದಿಂದ ವಿಮಾದಾರ ಮೃತಪಟ್ಟರೆ, ಪೂರ್ಣ ಅಂಗವೈಕಲ್ಯಕ್ಕೆ ಒಳಗಾದರೆ 2 ಲಕ್ಷ ರೂ ಪರಿಹಾರ, ಭಾಗಶಃ ಅಂಗವೈಕಲ್ಯಕ್ಕೆ ಒಳಗಾದರೆ 1 ಲಕ್ಷ ರೂ.ವಿಮಾ ಪರಿಹಾರಕ್ಕೆ ಲಭಿಸುತ್ತದೆ.
ಪಿಎಂಜೆಜೆಬಿವೈ ಯೋಜನೆ ಎಂದರೇನು..?
ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ(ಪಿಎಂಜೆಜೆಬಿವೈ) ಇದು ವಾರ್ಷಿಕ 330 ರೂ.ಮೊತ್ತದ ವಿಮೆ. 18ರಿಂದ 50 ವರ್ಷದೊಳಗಿನ ವ್ಯಕ್ತಿಗಳು ಅರ್ಹರು. ವಿಮಾದಾರರು ಯಾವುದೇ ಕಾರಣದಿಂದ ಮೃತಪಟ್ಟರೂ 2 ಲಕ್ಷ ರೂ. ಸಿಗುತ್ತದೆ.
ವಿಮೆಗೆ ನೋಂದಣಿ ಮಾಡಿಕೊಳ್ಳುವುದು ಹೇಗೆ..?
source and pic credit: https://ift.tt/2hzaTbc
ಈ ಯೋಜನೆಗೆ ಸೇರಲು ಬಯಸಿದರೆ, ನಿಮ್ಮ ಬ್ಯಾಂಕ್ ನಲ್ಲಿ ಈ ಕುರಿತಾದ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬೇಕು. ಇದಲ್ಲದೆ, ನೆಟ್ಬ್ಯಾಂಕಿಂಗ್ಗೆ ಲಾಗ್ ಇನ್ ಮಾಡುವ ಮೂಲಕ ಆನ್ಲೈನ್ನಲ್ಲಿ ಪಿಎಂಎಸ್ ಬಿವೈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಗಾಗಿ ನೀವು 18-70 ವರ್ಷ ವಯಸ್ಸಿನವರಾಗಿರಬೇಕು. ಈ ಯೋಜನೆಯಡಿ ಸಾವು, ಅಪಘಾತ ಅಥವಾ ಸಂಪೂರ್ಣ ಅಂಗವೈಕಲ್ಯದ ಸಂದರ್ಭದಲ್ಲಿ 2 ಲಕ್ಷ ರೂ.ವರೆಗಿನ ವಿಮಾ ಲಾಭ ಸಿಗುತ್ತದೆ.
ಪರಿಹಾರ ಪಡೆಯುವುದು ಹೇಗೆ..?
source and pic credit: gogole.com
ವಿಮಾದಾರರು ಮೃತಪಟ್ಟ ಸಂದರ್ಭದಲ್ಲಿ ಅವರ ಖಾತೆ ಇರುವ ಬ್ಯಾಂಕ್ ಗೆ ಮರಣಪ್ರಮಾಣ ಪತ್ರ ಮತ್ತು ನಾಮಿನಿಯ ಗುರುತಿಗೆ ಸಂಬಂಧಿಸಿದ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬೇಕು. ಎರಡೂ ವಿಮೆಗೆ ಹಣ ಪಾವತಿಸಿದ ವಿಮಾದಾರರು ಈ ಎರಡು ವಿಮೆಗಳ ನಿಯಮದ ವ್ಯಾಪ್ತಿಯಲ್ಲಿ ಇದ್ದರೆ ತಲಾ 2 ಲಕ್ಷ ರೂ.ದಂತೆ 4 ಲಕ್ಷ ರೂ. ಪರಿಹಾರ ಪಡೆಯಬಹುದು. ಅಂದರೆ 50 ವರ್ಷದೊಳಗಿನ ವ್ಯಕ್ತಿ ಮೃತಪಟ್ಟರೆ ಅಪಘಾತದ ಸಾವಿನ ಕಾರಣಕ್ಕೆ ಪಿಎಂಎಸ್ ಬಿವೈ ಮತ್ತು ಸಾವಿನ ಕಾರಣಕ್ಕೆ ಪಿಎಂಜೆಜೆಬಿವೈ ಹೀಗೆ ಎರಡೂ ವಿಮಾ ಪರಿಹಾರಕ್ಕೆ ಅರ್ಹರು.
from ಸುದ್ದಿ - Planet Tv https://ift.tt/2RN9tQe
May 26, 2021 at 10:02PM