ಇಲ್ಲಿದೆ ಸತಿ ದೇವಿಯ ಹೃದಯ!
ಶ್ರೀಲಂಕಾದಲ್ಲಿರುವ ಮಹಾ ಶಕ್ತಿ ಪೀಠದ ಬಗ್ಗೆ ಗೊತ್ತಾ?
Image credits : IPL Tours
ದಕ್ಷ ಯಜ್ಞದಿಂದ ಸತಿಯನ್ನು ಕಳೆದುಕೊಂಡ ಶಿವನು, ಆಕೆಯ ದೇಹವನ್ನು ಹೊತ್ತು ತಾಂಢವವಾಡುವಾಗ ಲೋಕದ ಹಿತಕ್ಕಾಗಿ ವಿಷ್ಣುವು ಸುದರ್ಶನ ಚಕ್ರ ಪ್ರಯೋಗಿಸಿ ಸತಿಯ ದೇಹವನ್ನು ತುಂಡರಿಸಿದಾಗ, ಸತಿಯ ಹೃದಯ ಭಾಗ ಬಿದ್ದಿದ್ದು ತ್ರಿಕೋನಮಲೈನಲ್ಲಿ.
ಅಷ್ಟದಶ ಶಕ್ತಿ ಪೀಠ ಇಲ್ಲವೇ ಮಹಾ ಶಕ್ತಿಗಳಲ್ಲಿ ಮೊದಲನೇಯದ್ದೇ ತ್ರಿಕೋನಮಲೈ ಶಂಕರಿ ಪೀಠ. ಇದು ಇರುವುದು ಶ್ರೀಲಂಕಾದಲ್ಲಿ. ಭಾರತದಾಚೆಗೆ ಇರುವ ಏಕೈಕ ಮಹಾ ಶಕ್ತಿ ಪೀಠವಿದು. ಇಲ್ಲಿ ಸತಿ ದೇವಿಯನ್ನು ಶಂಕರಿ ಎನ್ನುವ ಹೆಸರಿನಲ್ಲಿ ಪೂಜಿಸಲಾಗುತ್ತದೆ.
Image Credit : TripAdvisor
ಈ ಕ್ಷೇತ್ರದಲ್ಲೀಗ ಶಂಕರಿಗಿಲ್ಲಿ ಪ್ರತ್ಯೇಕ ದೇವಾಲಯ!
ನಮ್ಮ ಪುರಾಣಗಳು, ಇತಿಹಾಸ ಎಷ್ಟು ಪ್ರಬಲವಾಗಿದೆ ಎನ್ನುವುದಕ್ಕೆ ಈ ಕ್ಷೇತ್ರವೇ ಸಾಕ್ಷಿ. ಇಲ್ಲಿ ಪೂಜಿಸುವ ಶಂಕರಿ ತಾಯಿಗೆಂದೇ ಪ್ರತ್ಯೇಕ ದೇವಾಲಯ ಇಲ್ಲ. ಆದರೂ ಈ ಕ್ಷೇತ್ರದ ಇತಿಹಾಸ, ಮಹಿಮೆ ಬಗ್ಗೆ ಮಾಹಿತಿಯ ಕೊರತೆ ಏನಿಲ್ಲ.
ಇಲ್ಲಿನ ಅರ್ಚಕರ ಪ್ರಕಾರ, 16-17ನೇ ಶತಮಾನದಲ್ಲಿ ಪ್ರೋರ್ಚುಗೀಸರು ಇಲ್ಲಿನ ಬೆಟ್ಟದ ಮೇಲಿದ್ದ ಶಂಕರಿಯ ದೇಗುಲವನ್ನು ನಾಶ ಪಡಿಸಿದರು. ದೇಗುಲದಲ್ಲಿದ್ದ ಅನೇಕ ವಿಗ್ರಹಗಳು, ಕಂಚಿನ ಪ್ರತಿಮೆಗಳು ಹಲವು ವರ್ಷಗಳ ಬಳಿಕ ಸಮುದ್ರದಲ್ಲಿ ದೊರೆತಿದ್ದವು. ಇಲ್ಲಿನ ಬೆಟ್ಟದ ಮೇಲೆ ಶಂಕರಿ ದೇಗುಲದ್ದೇ ಎನ್ನುವ ಒಂದು ಕಂಬ ಮಾತ್ರ ಈಗಲೂ ಇದೆ.
ಕೋನೇಶ್ವರಂ ದೇಗುಲದಲ್ಲಿದೆ ಮೂಲ ವಿಗ್ರಹ
ಶಂಕರಿ ದೇವಿಯ ಮೂಲ ವಿಗ್ರಹವನ್ನು ಪೋರ್ಚುಗೀಸರ ದಾಳಿಯಿಂದ ತಡೆದು, ಅದನ್ನು ಈ ಮೊದಲು ಶಂಕರಿ ದೇಗುಲವಿದ್ದ ಸ್ಥಳದ ಪಕ್ಕದಲ್ಲೇ ಈಗಿರುವ ಕೋನೇಶ್ವರ ದೇಗುಲದಲ್ಲಿ ಗುಡಿಯೊಂದನ್ನು ಕಟ್ಟಿ ಅಲ್ಲಿಟ್ಟು ಪೂಜಿಸಲಾಗುತ್ತಿದೆ.
Image credits : Like Sri Lanka
ಶ್ರೀಲಂಕಾದಲ್ಲಿರುವ ಹಿಂದೂಗಳು ಈ ದೇವಾಲಯಕ್ಕೆ ಭೇಟಿ ನೀಡಿ, ದೇವಿಯಲ್ಲಿ ತಮ್ಮ ಕಷ್ಟಗಳನ್ನು ಈಡೇರಿಸುವಂತೆ ಕೋರಿಕೊಳ್ಳುತ್ತಾರೆ. ಪ್ರತಿ ವರ್ಷ ಸಾವಿರಾರು ಭಾರತೀಯರೂ ಇಲ್ಲಿಗೆ ಆಗಮಿಸಿ, ಶಂಕರಿಯ ದರ್ಶನ ಪಡೆಯುತ್ತಾರೆ.
ಈ ಬೆಟ್ಟ ತ್ರಿಕೋನ ಆಕಾರದಲ್ಲಿರುವ ಕಾರಣ, ಇದನ್ನು ತ್ರಿಕೋನಮಲೈ ಎಂದು ಕರೆಯಲಾಗುತ್ತದೆ. ಮಲೈ ಇಲ್ಲವೆ ಮಲೆ ಎಂದರೆ ಬೆಟ್ಟ.
ನಿಮಗೆ ಈಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..
ಇನ್ನಷ್ಟು ಮಾಹಿತಿಗಾಗಿ ಈಕೆಳಗಿನ ಲಿಂಕ್ಕ್ಲಿಕ್ ಮಾಡಿ ನಮ್ಮನ್ನ ಫಾಲೋಮಾಡಿ..
► Subscribe to Planet Tv Kannada
https://www.youtube.com/Planet Tv Kannada
► Follow us on Facebook
https://www.facebook.com/Planettvkannada
► Follow us on Twitter
https://twitter.com/Planettvkannada
► Follow us on Instagram
https://www.instagram.com/planettvkannada
► Follow us on Pinterest
https://www.pinterest.com/Planettvkannada
► Follow us on Koo app
https://www.kooapp.com/planettvkannada
► Follow us on share chat
https://sharechat.com/planettvkannada
► Join us on Telegram
https://t.me/planettvkannada
► Follow us on Tumblr
https://www.tumblr.com/planet-tv-kannada
from ಸುದ್ದಿ - Planet Tv https://ift.tt/3wha8YS
May 19, 2021 at 09:52AM