ಮನೆ, ಅಂಗಡಿ ಬಾಗಿಲಿಗೆ ನಿಂಬೆಹಣ್ಣು,
ಮೆಣಸಿನಕಾಯಿ ಯಾಕೆ ಕಟ್ತಾರೆ ಗೊತ್ತಾ?
Image Credits : Rama's Quiz
ನೀವು ಕಟ್ಟಿಲ್ಲ ಅಂದ್ರೆ ಈಗಲೇ ಕಟ್ಟಿಬಿಡಿ
ಮನೆ ಹಾಗೂ ಅಂಗಡಿಗಳ ಮುಂದೆ ನಿಂಬೆ ಹಣ್ಣು, ಮೆಣಸಿನಕಾಯಿಗಳನ್ನು ಕಟ್ಟುವುದು ಸಾಮಾನ್ಯ. ಬಹುತೇಕರು ನಿಂಬೆ ಹಣ್ಣು ಹಾಗೂ ಮೆಣಸಿನಕಾಯಿಗಳನ್ನು ದಾರಕ್ಕೆ ಪೋಣಿಸಿ ಕಟ್ಟಿರುತ್ತಾರೆ. ಆದರೆ ಅದಕ್ಕೆ ಕಾರಣವೇನು ಎನ್ನುವುದು ಎಲ್ಲರಿಗೂ ಗೊತ್ತಿರುವುದಿಲ್ಲ.
ನಿಂಬೆ ಹಣ್ಣು ಹಾಗೂ ಮೆಣಸಿನಕಾಯಿ ಪೋಣಿಸಿ ಕಟ್ಟುವುದು ಒಂದು ಸಂಪ್ರದಾಯವಾಗಿ ಬೆಳೆದಿದೆ. ವಾಹನಗಳಿಗೆ ಪೂಜೆ ಮಾಡಿ ನಿಂಬೆ ಹಣ್ಣು ಹಾಗೂ ಮೆಣಸಿನಕಾಯಿ ಕಟ್ಟುವುದನ್ನು ಸಹ ನೋಡಿದ್ದೇವೆ. ಪುರಾಣಗಳ ಪ್ರಕಾರ, ಇದು ದರಿದ್ರ ಲಕ್ಷ್ಮಿಯನ್ನು ಮನೆ ಹಾಗೂ ಅಂಗಡಿಗಳಿಂದ ದೂರವಿಡಲು ಮಾಡುವ ಉಪಾಯ.
ದರಿದ್ರ ಲಕ್ಷ್ಮಿಗೆ ನಿಂಬೆ ಹಣ್ಣು ಏಕಿಷ್ಟ?

ನಮ್ಮಲ್ಲಿರುವ ದೇವತೆಗಳಲ್ಲಿ ಅದೃಷ್ಟಲಕ್ಷ್ಮಿ ಇರುವಂತೆ ದರಿದ್ರಲಕ್ಷ್ಮಿಯೂ ಇದ್ದಾಳೆ. ದರಿದ್ರ ಲಕ್ಷ್ಮಿಯನ್ನು ಅದೃಷ್ಟ ಲಕ್ಷ್ಮಿಯ ಸಹೋದರಿ ಎನ್ನುತ್ತಾರೆ. ಹೀಗೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಎಲ್ಲರೂ ನಂಬಿದ್ದಾರೆ ಕೂಡ. ದರಿದ್ರ ಲಕ್ಷ್ಮಿಗೆ ನಿಂಬೆ ಹಣ್ಣು ಹಾಗೂ ಮೆಣಸಿನಕಾಯಿ ಇಷ್ಟದ ಆಹಾರವಂತೆ.
ದರಿದ್ರ ಲಕ್ಷ್ಮಿ ಮನೆ, ಅಂಗಡಿಗಳಿಗೆ ಪ್ರವೇಶಿಸಲು ಬಂದಾಗ ಬಾಗಿಲಿನಲ್ಲೇ ತನ್ನಿಷ್ಟದ ಆಹಾರವನ್ನು ಕಂಡು, ಅದನ್ನು ಸೇವಿಸುತ್ತಾಳಂತೆ. ನಿಂಬೆ ಹಣ್ಣು ಹಾಗೂ ಮೆಣಸಿನಕಾಯಿಯನ್ನು ಸೇವಿಸಿದಾಗ ಆಕೆಗೆ ಕೋಪ ಕಡಿಮೆಯಾಗಿ ಆ ಸ್ಥಳವನ್ನು ಬಿಟ್ಟು ಹೋಗುತ್ತಾಳೆ. ಇದರಿಂದ ಬಡತನ, ಕಷ್ಟಗಳು ಸುಳಿಯುವುದಿಲ್ಲ ಎಂದು ನಂಬಲಾಗಿದೆ.
ವೈಜ್ಞಾನಿಕ ಕಾರಣವೇನು ಗೊತ್ತಾ?
ನಿಂಬೆ ಹಣ್ಣು ಹಾಗೂ ಮೆಣಸಿನಕಾಯಿಯನ್ನು ಹತ್ತಿಯ ದಾರಕ್ಕೆ ಕಟ್ಟಿ ನೇತು ಹಾಕಿದಾಗ, ಆ ದಾರವು ನಿಂಬೆ ಹಣ್ಣು ಹಾಗೂ ಮೆಣಸಿನಕಾಯಿಯಲ್ಲಿರುವ ರಸವನ್ನು ಹೀರಿಕೊಳ್ಳುತ್ತದೆ. ಇವೆರೆಡರ ವಾಸನೆಗೆ ಕ್ರಿಮಿ, ಕೀಟಗಳು ಸಾಯುತ್ತವೆ. ಹೀಗಾಗಿ ಮನೆ, ಅಂಗಡಿಗಳಲ್ಲಿ ಸುರಕ್ಷಿತವಾಗಿರಲು ಸಹಕಾರಿಯಾಗುತ್ತದೆ ಎಂದು ನಂಬಲಾಗಿದೆ.
ವಾಹನಗಳಿಗೆ ನಿಂಬೆ ಹಣ್ಣು ಹಾಗೂ ಮೆಣಸಿನಕಾಯಿಯನ್ನು ಕಟ್ಟಲು ಸಹ ಕಾರಣವಿದೆ. ಇವು ದೃಷ್ಟಿಯಾಗದಂತೆ ತಡೆಯುತ್ತವೆ ಎನ್ನುವುದು ಜನರ ನಂಬಿಕೆಯಾಗಿದೆ.
ನಿಮಗೆಈಮಾಹಿತಿಇಷ್ಟಆಗಿದ್ದರೆಲೈಕ್ಮಾಡಿ.. ಶೇರ್ಮಾಡಿ.. ನಿಮ್ಮಅನಿಸಿಕೆಗಳನ್ನುಕಮೆಂಟ್ಮೂಲಕತಿಳಿಸಿ..
ಇನ್ನಷ್ಟುಮಾಹಿತಿಗಾಗಿಈಕೆಳಗಿನಲಿಂಕ್ಕ್ಲಿಕ್ಮಾಡಿನಮ್ಮನ್ನಫಾಲೋಮಾಡಿ..
► Subscribe to Planet Tv Kannada
https://www.youtube.com/Planet Tv Kannada
► Follow us on Facebook
https://www.facebook.com/Planettvkannada
► Follow us on Twitter
https://twitter.com/Planettvkannada
► Follow us on Instagram
https://www.instagram.com/planettvkannada
► Follow us on Pinterest
https://www.pinterest.com/Planettvkannada
► Follow us on Koo app
https://www.kooapp.com/planettvkannada
► Follow us on share chat
https://sharechat.com/planettvkannada
► Join us on Telegram
https://t.me/planettvkannada
► Follow us on Tumblr
https://www.tumblr.com/planet-tv-kannada
from ಸುದ್ದಿ - Planet Tv https://ift.tt/3yekL07
May 14, 2021 at 06:16PM