ಭಾರತದಲ್ಲಿರುವ ಪ್ರಸಿದ್ಧ 12 ಶ್ರೀರಾಮನ ದೇವಾಲಯಗಳು
ಮಹಾವಿಷ್ಣುವಿನ ಏಳನೇ ಅವತಾರವಾಗಿ ರಘುವಂಶದಲ್ಲಿ ಜನಿಸಿದವನು ಶ್ರೀರಾಮ. ರಾಮಾಯಣದಲ್ಲಿರುವ ಬರುವ ಪ್ರಮುಖ ವ್ಯಕ್ತಿ. ಮನುಕುಲಕ್ಕೆ ಜೀವನದ ಪಾಠ, ಧರ್ಮ-ಕರ್ಮಗಳ ನಿರ್ವಹಣೆ ಹಾಗೂ ಸತ್ಯ ಸಂಗತಿಯ ಮೂಲಕ ತಿಳಿಸಿದ ಮಹಾಪ್ರಭು. ಶ್ರೀರಾಮ. ಪುರುಷೋತ್ತಮ, ಜಾನಕೀವಲ್ಲಭ, ತ್ರಿವಿಕ್ರಮಯ ಹೀಗೆ ಹಲವು ಹೆಸರಿನಿಂದ ಕರೆಯಲ್ಪಡುವ ರಾಮನಿಗೆ ದೇಶದ ಹಲವೆಡೆ ಹಲವು ಪ್ರಸಿದ್ಧ ದೇವಾಲಯಗಳಿವೆ. ಉತ್ತರಪ್ರದೇಶದ ಅಯೋಧ್ಯಾ ರಾಮಮಂದಿರ, ತೆಲಂಗಾಣದ ಭದ್ರಾಚಲಂ ದೇವಾಲಯ, ಜಮ್ಮು ಕಾಶ್ಮೀರದ ರಘುನಾಥ ದೇಗುಲ, ಮಹಾರಾಷ್ಟ್ರದ ಕಾಲಾರಾಮ್ ದೇವಾಲಯ, ಒಡಿಶಾದ ರಾಮಮಂದಿರ, ಬಿಹಾರದ ರಾಮ್ ಚೌರಾ ಮಂದಿರ, ಮಧ್ಯಪ್ರದೇಶದ ರಾಮ್ ರಾಜಾ ಮಂದಿರ ಅದರಲ್ಲಿ ಕೆಲವು.
ಜಮ್ಮು ಕಾಶ್ಮೀರದ ರಘುನಾಥ ದೇಗುಲ
Image Credits : Tour My India
ಜಮ್ಮು ನಗರದ ಪಶ್ಚಿಮ ಭಾಗದಲ್ಲಿರುವ ಸುಯಿ ಎಂಬಲ್ಲಿರುವ ರಘುನಾಥ ದೇವಾಲಯ ಉತ್ತರಭಾರತದಲ್ಲೇ ಪ್ರಸಿದ್ಧಿ ಹೊಂದಿದೆ. ಜಮ್ಮುಕಾಶ್ಮೀರ ನಗರದ ಹೃದಯಭಾಗದಲ್ಲಿರುವ ರಘುನಾಥ ಮಂದಿರ ಭವ್ಯ ದೇವಾಲಯವಾಗಿದೆ. ದೇವಾಲಯದ ಶಿಲ್ಪಗಳು, ಆಕರ್ಷಣೆಯಿಂದ ಕೂಡಿದ್ದು, ನೋಡುಗರನ್ನು ಸೆಳೆಯುತ್ತವೆ. ಇದೊಂದು 7 ಮಂದಿರಗಳಿರುವ ಬೃಹತ್ ಮಂದಿರ ಸಮುಚ್ಛಯ. ಅನೇಕ ದೇವಾನುದೇವತೆಗಳಿದ್ದರೂ ರಾಮನೇ ಅಧಿದೈವ. ದ್ವಾರ ಗೋಪುರ ಸಿಖ್ಶೈಲಿಯಲ್ಲಿದ್ದರೆ ಉಳಿದವು ಮೊಗಲ್ ವಾಸ್ತು ಶೈಲಿಯನ್ನು ಹೊಂದಿವೆ. ಇಲ್ಲಿರುವ 7 ಮಂದಿರಗಳಲ್ಲಿ ರಾಮಾಯಣದ ದೇವ, ದೇವತೆಗಳ ಮೂರ್ತಿಗಳಿವೆ.
1822-1860ರ ಅವಧಿಯಲ್ಲಿ ಜಮ್ಮುಕಾಶ್ಮೀರದಲ್ಲಿರುವ ಈ ರಘುನಾಥ ಮಂದಿರ ನಿರ್ಮಾಣವಾಗಿದೆ. ಮಹಾರಾಜ ಗುಲಾಬ್ ಸಿಂಗ್ ಈ ದೇವಾಲಯ ನಿರ್ಮಾಣ ಆರಂಭಿಸಿದರು. ತಂದೆಯ ಕಾಲಾನಂತರ ಅವರ ಮಗ ಮಹಾರಾಜ ರಣಬೀರ್ ಸಿಂಗ್ ಈ ದೇವಾಲಯ ನಿರ್ಮಾಣ ಕಾರ್ಯವನ್ನು ಮುಕ್ತಾಯಗೊಳಿಸಿದರು. 1835ರಲ್ಲಿ ಶುರುವಾದ ನವೀಕರಣ ಕಾಮಗಾರಿ 1860 ರಲ್ಲಿ ಪೂರ್ಣಗೊಂಡ ಬಗ್ಗೆ ಐತಿಹಾಸಿಕ ದಾಖಲೆಗಳು ಹೇಳುತ್ತವೆ. ಈ ಅವಧಿಯಲ್ಲಿ ರಾಜಾಗುಲಾಭ್ಸಿಂಗ್ ನ ಮಗ ರಣಭೀರ್ ಸಿಂಗ್ ಆಳ್ವಿಕೆ ನಡೆಸುತ್ತಿದ್ದ.
ರಣಬೀರ್ ಸಿಂಗ್ ಆಳ್ವಿಕೆಯ ಕಾಲದಲ್ಲಿ ಈ ದೇವಾಲಯ ಸಂಸ್ಕೃತ ಕಲಿಸುವ ಕೇಂದ್ರವಾಗಿತ್ತು. ಇದಲ್ಲದೆ ಇದೊಂದು ಅನುವಾದ ಕೇಂದ್ರವೂ ಆಗಿತ್ತು. ಇಲ್ಲಿನ ಮುಸ್ಲಿಂ ವಿದ್ವಾಂಸರು ಅರೇಬಿಕ್, ಪರ್ಷಿಯನ್ನ ಚರಿತ್ರೆ ಮತ್ತು ತತ್ತ್ವಶಾಸ್ತ್ರದ ಕೃತಿಗಳನ್ನು ಸಂಸ್ಕೃತಕ್ಕೆ ಅನುವಾದ ಮಾಡಿದರು. ಇದಲ್ಲದೆ ಅನೇಕ ಹಸ್ತಪ್ರತಿಗಳನ್ನು ಹಿಂದಿ ಮತ್ತು ಡೋಗ್ರಿ ಭಾಷೆಗೂ ಅನುವಾದಿಸಲಾಯಿತು.
ಉತ್ತರಪ್ರದೇಶದ ಅಯೋಧ್ಯಾ ರಾಮ ಮಂದಿರ
Image Credit : Oneindia
ರಾಮಜನ್ಮಭೂಮಿ ಎಂದು ಕರೆಸಿಕೊಳ್ಳುವ ಅಯೋಧ್ಯಾ ಹೆಸರಲ್ಲಿ ಉತ್ತರಪ್ರದೇಶದಲ್ಲಿ ರಾಮಮಂದಿರವಿದೆ. ಉತ್ತರಪ್ರದೇಶದ ಸರಯೂ ನದಿ ತೀರದಲ್ಲಿ ಈ ಮಂದಿರವಿದ್ದು, ಹಿಂದೂಗಳ ಪವಿತ್ರ ತೀರ್ಥಯಾತ್ರಾ ಸ್ಥಳವೆಂದು ಗುರುತಿಸಿಕೊಂಡಿದೆ.
ಮಹಾರಾಷ್ಟ್ರದ ರಾಮಟೆಕ್ ದೇಗುಲ
Image Credits : Tripoto
ರಾಮಟೆಕ್ ದೇವಸ್ಥಾನ, ಮಹಾರಾಷ್ಟ್ರದ ನಾಗಪುರದಿಂದ 50 ಕಿ.ಮೀ. ದೂರದ ರಾಮಗಿರಿಯಲ್ಲಿದೆ. ಇದನ್ನು ರಾಮಮಂದಿರ, ರಾಮಧಾಮ, ರಾಮಟೆಕ್ ಕೋಟೆ ದೇವಸ್ಥಾನ ಎಂದು ಸಹ ಕರೆಯುತ್ತಾರೆ. ಇದು ಪ್ರಭು ಶ್ರೀರಾಮ ದುಷ್ಟ ದಾನವರ ದಮನಕ್ಕೆ ಶಪಥ ಮಾಡಿದ ಕ್ಷೇತ್ರ. ನೆಲದಿಂದ 350 ಮೀಟರ್ ಎತ್ತರದಲ್ಲಿದೆ. ಬಿಳಿ ಕಲ್ಲುಗಳಿಂದಲೇ ನಿರ್ಮಿತವಾದ ಹತ್ತಾರು ದೇಗುಲಗಳ ಸಂಕೀರ್ಣವಿದು. ರಾಮ-ಸೀತೆ ಈ ದೇವಾಲಯದ ಪ್ರಧಾನ ದೇವರು. ಜತೆಗೆ ಲಕ್ಷ್ಮಣ, ಆಂಜನೇಯನ ಗುಡಿ. ರಾಮ-ಲಕ್ಷ್ಮಣರ ತಾಯಂದಿರಾದ ಕೌಸಲ್ಯೆ-ಸುಮಿತ್ರೆಯರೂ ಇಲ್ಲಿ ದೇವರು.
ಈ ದೇವಾಲಯದಲ್ಲಿ ವರಾಹ, ನರಸಿಂಹ ಸಹಿತ 30ಕ್ಕೂ ಹೆಚ್ಚು ಗುಡಿಗಳಿವೆ. 350 ಅಡಿ ಉದ್ದ, 10.5 ಅಡಿ ಎತ್ತರ, 11 ಅಡಿ ಅಗಲದ ಓಂ ಸ್ವರೂಪದ ಕಟ್ಟಡ ದೇಗುಲದ ಪ್ರಮುಖ ಆಕರ್ಷಣೆ. ಇದರಲ್ಲಿ ರಾಮಾಯಣ, ಕೃಷ್ಣಲೀಲೆ, ಹನುಮಂತ, ಸಾಯಿಬಾಬಾರ ಚಿತ್ರಗಳಿವೆ. ರಾಮಗಿರಿಯ ತಪ್ಪಲಲ್ಲಿ ಅಗಸ್ತ್ಯ ಮಹರ್ಷಿಗಳ ತಪ, ಯಜ್ಞಾನುಷ್ಠಾನಕ್ಕೆ ರಾಕ್ಷಸರ ಪೀಡೆ ಇತ್ತು. ಋುತ್ವಿಜರ ಮಾರಣಹೋಮವಾಗಿತ್ತು. ಆ ಕಾಲಕ್ಕೆ ಈ ಭಾಗಕ್ಕೆ ಬಂದ ರಾಮ ದುಷ್ಟ ದಮನದ ಶಪಥ ಮಾಡಿದ ಎಂಬುದು ಪೌರಾಣಿಕ ಹಿನ್ನಲೆ.
ಮಹಾರಾಷ್ಟ್ರದ ಕಾಲಾರಾಮ್ ದೇವಾಲಯ
Image Credits : RVA Temples
ಮಹಾರಾಷ್ಟ್ರದ ಕಾಲಾರಾಮ್ ಜಿಲ್ಲೆಯ ಪಂಚವಟಿ ಪ್ರದೇಶದಲ್ಲಿ ಈ ಕಾಲಾರಾಮ್ ದೇವಾಲಯವಿದೆ. ದೇವಾಲಯದಲ್ಲಿ ಕಪ್ಪು ಬಣ್ಣದ ರಾಮನ ವಿಗ್ರಹವಿದ್ದು, ಇದಕ್ಕೆ ಪ್ರತಿನಿತ್ಯ ಪೂಜೆ ಸಲ್ಲಿಸಲಾಗುತ್ತದೆ.
ಒಡಿಶಾದ ರಾಮಮಂದಿರ
Image Credits : wikipedia
ಒಡಿಶಾದ ಭುವನೇಶ್ವರದಲ್ಲಿರುವ ರಾಮಮಂದಿರ ಉತ್ತರಭಾರತದಲ್ಲಿರುವ ಪ್ರಸಿದ್ಧ ರಾಮನ ದೇವಸ್ಥಾನಗಳಲ್ಲೊಂದು. ಈ ದೇವಾಲಯಲ್ಲಿ ಶ್ರೀರಾಮನಿಗೆ ಮಾತ್ರವಲ್ಲದೆ ಸಹೋದರ ಲಕ್ಷ್ಮಣನಿಗೂ ಪೂಜೆ ಸಲ್ಲಿಸಲಾಗುತ್ತದೆ.
ಬಿಹಾರದ ರಾಮ್ ಚೌರಾ ಮಂದಿರ
Image credits : India Today
ಬಿಹಾರದ ರಾಮ್ಚೌರಾ ಮಂದಿರ ಹೆಸರುವಾಸಿ ರಾಮಮಂದಿರವಾಗಿದೆ. ಪ್ರತಿನಿತ್ಯ ಈ ದೇವಾಲಯಕ್ಕೆ ಸಾವಿರಾರು ಮಂದಿ ಭೇಟಿ ನೀಡಿ ರಾಮನ ದರ್ಶನ ಪಡೆಯುತ್ತಾರೆ.
ಮಧ್ಯಪ್ರದೇಶದ ರಾಮ್ ರಾಜಾ ಮಂದಿರ
Image Credits : Rang colors of india
ಮಧ್ಯಪ್ರದೇಶದಲ್ಲಿರುವ ರಾಮ್ ರಾಜಾ ಮಂದಿರ ರಾಮನನ್ನು ಪೂಜಿಸುವ ಪ್ರಸಿದ್ಧ ದೇವಾಲಯವಾಗಿದೆ. ಈ ದೇವಾಲಯವನ್ನು ಓರ್ಚಾ ದೇವಸ್ಥಾನ ಎಂದು ಸಹ ಕರೆಯುತ್ತಾರೆ. ಇಲ್ಲಿರುವ ಚತುರ್ಭುಜ ದೇವಾಲಯದಲ್ಲಿಯೂ ರಾಮನನ್ನು ಪೂಜಿಸಲಾಗುತ್ತದೆ.
ತೆಲಂಗಾಣದ ಭದ್ರಾಚಲಂ ದೇಗುಲ
Image Credits : sitaramaswamy.com
ತೆಲಂಗಾಣದಲ್ಲಿರುವ ಈ ಭದ್ರಾಚಲಂ ದೇವಸ್ಥಾನ, ಶ್ರೀರಾಮ ಕ್ಷೇತ್ರಗಳಲ್ಲಿ ಪ್ರಸಿದ್ಧವಾದುದು. ಗೋದಾವರಿ ನದಿ ದಂಡೆಯಲ್ಲಿ 17ನೇ ಶತಮಾನದಲ್ಲಿ ನಿರ್ಮಾಣವಾದ ಈ ಸೀತಾರಾಮರ ದೇಗುಲವಿದ್ದು, ಇಲ್ಲಿದ್ದ ಪರಮಭಕ್ತ ಭದ್ರನ ದೆಸೆಯಿಂದಾಗಿಯೇ ಈ ನೆಲವು ಭದ್ರಾಚಲ ಎಂಬ ಹೆಸರು ಪಡೆಯಿತು. ಪೌರಾಣಿಕ ಹಿನ್ನಲೆಯ ಪ್ರಕಾರ, ತಂದೆ ದಶರಥ ಮಾತಿನಂತೆ ಕಾಡಿಗೆ ಹೋದ ಶ್ರೀರಾಮನು ಭದ್ರಾಚಲಂ ಇರುವ ದಂಡಕಾರಣ್ಯದಲ್ಲಿ ಹೆಚ್ಚು ಕಾಲ ನೆಲೆಸಿದ್ದನು. ಈ ಕಾಡಿನಲ್ಲಿಯೇ ಒಂದು ಗುಡಿಸಲು ಕಟ್ಟಿಕೊಂಡು ಸಹೋದರ ಲಕ್ಷ್ಮಣ ಮತ್ತು ಸೀತೆಯೊಂದಿಗೆ ವಾಸಿಸಿದ್ದನು ಎಂದು ಹೇಳಲಾಗುತ್ತದೆ. ಇಲ್ಲಿ ವಾಸಿಸುವಾಗಲೇ ಮಾರೀಚನು ಬಂಗಾರದ ಜಿಂಕೆಯಾಗಿ ಸೀತೆಯ ಮನಸ್ಸನ್ನು ಸೆಳೆದ, ರಾವಣನು ಸೀತೆಯನ್ನು ಅಪಹರಣ ಮಾಡಿದ ಎನ್ನುವ ಕತೆಗಳೂ ಇವೆ.
ಪ್ರಭು ಶ್ರೀರಾಮನು ತನ್ನ ಶಿರದ ಮೇಲೆ ಕೂರಬೇಕು ಎನ್ನುವುದು ಭದ್ರನ ಬಯಕೆ. ಇದಕ್ಕಾಗಿ ತಪಸ್ಸು ಮಾಡಿದಾಗ, ರಾಮನು ದರ್ಶನ ನೀಡಿದ. ಸೀತಾನ್ವೇಷಣೆ ಮುಗಿಸಿ ಬಂದು ನಿನ್ನ ಬಯಕೆಯನ್ನು ಈಡೇರಿಸುತ್ತೇನೆ ಎಂದಿದ್ದ ರಾಮ. ಆದರೆ, ತನ್ನ ಅವತಾರ ಮುಗಿದರೂ ಭಕ್ತನ ಬಯಕೆಯನ್ನು ಈಡೇರಿಸಲಿಲ್ಲ. ಕೊನೆಗೆ ಭಕ್ತನಿಗಾಗಿ ಭದ್ರಾಚಲಂಗೆ ಬಂದ ಮಹಾವಿಷ್ಣುವು ಮತ್ತೆ ರಾಮನಾಗಿ ದರ್ಶನ ನೀಡಿದ ಎನ್ನುವ ಕತೆಯೂ ಇದೆ.
ಆಂಧ್ರಪ್ರದೇಶದ ಕೋದಂಡರಾಮ ದೇವಸ್ಥಾನ
Image Credits : RVA Temples
ಆಂಧ್ರಪ್ರದೇಶದ ಕಡಪ ಜಿಲ್ಲೆಯ ಒಂಟಿಮಿಟ್ಟಾದಲ್ಲಿ ಈ ಪ್ರಸಿದ್ಧ ಕೋದಂಡರಾಮ ದೇವಸ್ಥಾನವಿದೆ. ಶ್ರೀರಾಮನನ್ನು ಪೂಜಿಸುವ ಈ ದೇವಾಲಯವು ಆಂಧ್ರಪದೇಶದ ಪ್ರಸಿದ್ಧ ರಾಮನ ದೇವಸ್ಥಾನವೆಂದು ಕರೆಸಿಕೊಂಡಿದೆ. ದಂತಕಥೆಯ ಪ್ರಕಾರ, ಹಿಂದೆ ಈ ಪ್ರದೇಶದಲ್ಲಿದ್ದ ಒಂಟುದು ಹಾಗೂ ಮಿಟ್ಟುದು ಎಂಬ ಇಬ್ಬರು ದರೋಡೆಕೋರರು ಕ್ರಮೇಣ ಅಪ್ರತಿಮ ರಾಮಭಕ್ತರಾಗಿ ಈ ದೇವಾಲಯ ನಿರ್ಮಿಸಿದರಂತೆ. ಪ್ರಖ್ಯಾತ ತೆಲುಗು ಕವಿ ಬೊಮ್ಮರ ಪೋತನ ಒಂಟಿಮಿಟ್ಟದಲ್ಲಿದ್ದುಕೊಂಡೇ ಮಹಾಭಾಗವತವನ್ನು ತೆಲುಗುವಿನಲ್ಲಿ ರಚಿಸಿ ಅದನ್ನು ಶ್ರೀರಾಮನಿಗೆ ಸಮರ್ಪಿಸಿದ್ದರು ಎಂದು ಸಹ ಹೇಳುತ್ತಾರೆ.
ಕೇರಳದ ಶ್ರೀ ರಾಮಸ್ವಾಮಿ ದೇವಾಲಯ
Image Credits : kerala tourism
ಶ್ರೀರಾಮನ್ನು ಪೂಜಿಸುವ ಶ್ರೀ ರಾಮಸ್ವಾಮಿ ದೇವಾಲಯವು ಕೇರಳದ ತಲಶ್ಶೇರಿಯಲ್ಲಿದೆ. ರಾಮನ ದರ್ಶನ ಪಡೆಯಲು ಪ್ರತಿನಿತ್ಯ ಇಲ್ಲಿ ಸಾವಿರಾರು ಭಕ್ತಾಧಿಗಳು ಭೇಟಿ ನೀಡುತ್ತಾರೆ. ರಾಮ ನವಮಿಯನ್ನು ಅತ್ಯಂತ ಭಕ್ತಿ ಶ್ರದ್ಧೆಗಳಿಂದ ಈ ದೇವಾಲಯದಲ್ಲಿ ಆಚರಿಸಲಾಗುತ್ತದೆ. ಇದನ್ನು ತಿರುವಂಗಾಡ್ ದೇವಾಲಯ ಎಂಬ ಹೆಸರಿನಿಂದ ಸಹ ಕರೆಯುತ್ತಾರೆ.
ತಮಿಳುನಾಡಿನ ರಾಮಸ್ವಾಮಿ ದೇವಾಲಯ
Image Credits : Travel Duo
ದಕ್ಷಿಣಭಾರತದಲ್ಲಿರುವ ಸುಂದರ ಮತ್ತು ಪ್ರಸಿದ್ಧ ರಾಮನ ದೇವಸ್ಥಾನಗಳಲ್ಲಿ ತಮಿಳುನಾಡಿನ ರಾಮಸ್ವಾಮಿ ದೇವಾಲಯ ಸಹ ಒಂದಾಗಿದೆ. ಕುಂಭಕೋಣಂನಲ್ಲಿರುವ ಈ ದೇವಸ್ಥಾನದಲ್ಲಿ ರಾಮನನ್ನು ಮಾತ್ರವಲ್ಲ ರಾಮನ ಸಹೋದರರಾದ ಲಕ್ಷ್ಮಣ, ಭರತ, ಶತ್ರುಘ್ನ ಮತ್ತು ರಾಮಭಂಟ ಹನುಮನನ್ನೂ ಕೂಡಾ ಇಲ್ಲಿ ಪೂಜಿಸಲಾಗುತ್ತದೆ. ರಾಮನವಮಿಯನ್ನು ಬಲು ಸಡಗರದಿಂದ ಇಲ್ಲಿ ಆಚರಿಸಲಾಗುತ್ತದೆ.
ಕರ್ನಾಟಕದ ಕೋದಂಡರಾಮ ದೇವಸ್ಥಾನ
Image Credits : Trip Advisor
ಕರ್ನಾಟಕದ ಹಂಪಿಯಲ್ಲಿರುವ ಪ್ರಸಿದ್ಧ ದೇವಸ್ಥಾನದಲ್ಲಿ ಹಂಪಿಯ ಕೋದಂಡರಾಮ ದೇವಸ್ಥಾನ ಸಹ ಒಂದಾಗಿದೆ. ಈ ದೇವಸ್ಥಾನದಲ್ಲಿ ರಾಮ, ಲಕ್ಷ್ಮಣ, ಸೀತೆಯನ್ನು ಪೂಜಿಸಲಾಗುತ್ತದೆ. ತುಂಗಭದ್ರಾ ನದಿ ತಟದಲ್ಲಿ ಸುಂದರವಾದ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಉತ್ತರಾಭಿಮುಖವಾಗಿ ಈ ದೇಗುಲವಿದ್ದು, ಎತ್ತರದ ಕೋದಂಡ (ಬಿಲ್ಲನ್ನು)ವನ್ನು ಹಿಡಿದು ಶ್ರೀರಾಮ ತನ್ನ ಪರಿವಾರದೊಂದಿಗೆ ನಿಂತಿರುವುದರಿಂದ ದೇವಾಲಯವನ್ನು ಕೋದಂಡರಾಮ ದೇವಸ್ಥಾನ ಎಂಬ ಹೆಸರಿನಿಂದ ಕರೆಯಲಾಗುತ್ತದೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv
June 11, 2021 at 01:10PM