ಜೂನ್ 5, World Environment Day: ಪರಿಸರ ದಿನದ ಇತಿಹಾಸ ಮತ್ತು ಮಹತ್ವ
Image credts : Youtube ( How to Planet a Tree )
ಪ್ರತೀ ವರ್ಷ ಜೂನ್ 5ರಂದು ಜಗತ್ತಿನಾದ್ಯಂತ ವಿಶ್ವ ಪರಿಸರ ದಿನ (World Environment Day)ವನ್ನು ಆಚರಿಸಲಾಗುತ್ತದೆ. ವೃಕ್ಷೋ ರಕ್ಷತಿ ರಕ್ಷಿತಃ ಎಂಬಂತೆ ಪರಿಸರವಿದ್ದರೆ ಮಾತ್ರ ಮಾನವನಿದ್ದಾನೆ. ಹಸಿರಿಲ್ಲದೆ ಉಸಿರಿಲ್ಲ..ಪರಿಸರವು ಜೀವರಾಶಿಗೆ ಲಭಿಸಿರುವ ಅತ್ಯಂತ ಅಮೂಲ್ಯ ಕೊಡುಗೆಯಾಗಿದೆ. ಪ್ರಕೃತಿಯಲ್ಲಿನ ಗಾಳಿ, ನೀರು, ಮಣ್ಣು, ಮರಗಳಿಲ್ಲದೆ ಮನುಷ್ಯ ಸಂಕುಲವಿಲ್ಲ. ಮಾನವನಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪರಿಸರ ದಿನವನ್ನು ಆಚರಿಸಲು ಆರಂಭಿಸಲಾಯಿತು. ಪರಿಸರ ದಿನಾಚರಣೆಯ ಅಂಗವಾಗಿ ಪ್ರಪಂಚದಾದ್ಯಂತ ಜನರು ಗಿಡಗಳನ್ನು ನೆಡುತ್ತಾರೆ. ಗಿಡಗಳನ್ನು ನೆಡುವುದು, ನೆಟ್ಟ ಗಿಡಗಳಿಗೆ ನೀರು ಹಾಕುವ ಕೆಲಸವನ್ನು ಮಾಡುತ್ತಾರೆ.
ವಿಶ್ವದಾದ್ಯಂತ ಸುಮಾರು 143 ದೇಶಗಳು ಪರಿಸರ ದಿನವನ್ನು ಆಚರಿಸುತ್ತವೆ. ಪ್ರಕೃತಿಯ ಮೇಲಾಗುತ್ತಿರುವ ಹಾನಿಯನ್ನು ಕಡಿಮೆ ಮಾಡುವುದು ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವಸಂಸ್ಥೆಯು ವಿಶ್ವ ಪರಿಸರ ದಿನವನ್ನು ಆಚರಿಸಲು ಮುಂದಾಯಿತು. ಪ್ರತಿ ವರ್ಷ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ನಿರ್ಧಿಷ್ಟ ಥೀಮ್ ನೊಂದಿಗೆ ಆಚರಿಸುತ್ತಾ ಬರಲಾಗಿದೆ. ಪ್ರಸ್ತುತ ಜಗತ್ತಿನಲ್ಲಿ ಆಧುನಿಕತೆ, ನಗರೀಕರಣ, ಕೈಗಾರೀಕರಣ, ವಿಜ್ಞಾನ, ತಂತ್ರಜ್ಞಾನ ಅಭಿವೃದ್ಧಿ ಎಂಬ ಹಲವು ಕಾರಣಗಳಿಂದ ಪರಿಸರದಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಲೇ ಹೋಗುತ್ತಿದೆ.
ಗಣಿಗಾರಿಕೆ, ಕೈಗಾರಿಕೀಕರಣ, ಅರಣ್ಯನಾಶ ಮೊದಲಾದ ಚಟುವಟಿಕೆಗಳಿಂದ ಪರಿಸರ ನಾಶವಾಗುತ್ತಲೇ ಇದೆ. ಇಂದು ಇಡೀ ವಿಶ್ವ ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆ ಎಂದರೆ ಪರಿಸರ ಮಾಲಿನ್ಯ. ಜಲ ಮಾಲಿನ್ಯ, ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಮಣ್ಣಿನ ಮಾಲಿನ್ಯ ಹಾಗೂ ಸಮುದ್ರ ಮಾಲಿನ್ಯ. ಇವುಗಳ ಪ್ರಮಾಣ ಹಿಂದೆಂದಿಗಿಂತಲೂ ವ್ಯಾಪಕವಾಗಿದೆ.ಆದರೆ, ಅದೆಷ್ಟೋ ವರುಷಗಳು ಕಳೆದರೂ ಮನುಷ್ಯ ಪ್ರಕೃತಿಯ ಬೆಲೆಯೇನೆಂದು ತಿಳಿದುಕೊಂಡಿಲ್ಲ.
1974ರಲ್ಲಿ ವಿಶ್ವ ಪರಿಸರ ದಿನದ ಆಚರಣೆಯ ಆರಂಭ

1972ರ ವಿಶ್ವಸಂಸ್ಥೆ ಮಹಾಸಭೆಯಲ್ಲಿ, ಪರಿಸರ ದಿನಾಚರಣೆ ಆಚರಿಸಬೇಕೆಂದು ನಿರ್ಧರಿಸಲಾಯಿತು. 1974ರಿಂದ ಪ್ರತಿ ವರ್ಷ ಪ್ರಪಂಚದಾದ್ಯಂತ ಜೂನ್ 5ರಂದು, ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ. ನಾವು ಪ್ರಕೃತಿಯ ಒಂದು ಭಾಗವಾಗಿದ್ದೇವೆ ಮತ್ತು ಪ್ರಕೃತಿಯನ್ನೇ ಅವಲಂಬಿಸಿದ್ದೇವೆ. ಪ್ರಕೃತಿಯನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಅರಿವು ಮೂಡಿಸುವುದು ಪರಿಸರ ದಿನದ ಉದ್ದೇಶವಾಗಿದೆ. ಜೂನ್ 5, ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಪ್ರಪಂಚದಾದ್ಯಂತ ಗಿಡ ನೆಡಲಾಗುತ್ತದೆ. ನೆಲ, ಮಣ್ಣು, ಬೆಳೆ ಎಲ್ಲವೂ ಉಳಿಯುವಂತಾಗಲು ಈ ದಿನವನ್ನು ಜಾಗೃತ ದಿನವೆಂದು ಆಚರಿಸಲಾಗುತ್ತಿದೆ.
2021ನೇ ಪರಿಸರ ದಿನದ ವಿಷಯ; ಪರಿಸರ ವ್ಯವಸ್ಥೆಯ ಪುನರ್ಸ್ಥಾಪನೆ
Image Credits : Treesisters
ಪ್ರತಿ ವರ್ಷ ಪರಿಸರ ದಿನದ ಕಾರ್ಯಕ್ರಮದ ಮೂಲಕ ಪರಿಸರದ ಯಾವುದಾದರೂ ಒಂದು ಸಮಸ್ಯೆಯ ಬಗ್ಗೆ ಹೆಚ್ಚು ಗಮನ ಹರಿಸಲಾಗುತ್ತದೆ. 2021ನೇ ವರ್ಷದ ಪ್ರಮುಖ ವಿಷಯ ಪರಿಸರ ವ್ಯವಸ್ಥೆಯ ಪುನರ್ಸ್ಥಾಪನೆ. ಪರಿಸರ ವ್ಯವಸ್ಥೆಯನ್ನು ಪುನರ್ ಸ್ಥಾಪಿಸುವುದು ಎಂದರೆ ಸಕ್ರಿಯವಾಗಿ ಮರಗಳನ್ನು ನೆಡುವುದರ ಮೂಲಕ ಪರಿಸರ ವ್ಯವಸ್ಥೆಯನ್ನು ರಕ್ಷಿಸುವುದು, ಹಾಗೂ ಹೆಚ್ಚುತ್ತಿರುವ ಮಾಲಿನ್ಯವನ್ನು ಕಡಿಮೆ ಮಾಡಿ ಪರಿಸರವನ್ನು ರಕ್ಷಿಸಿಕೊಳ್ಳುವುದು.
ಜಾಗತಿಕ ತಾಪಮಾನ ಏರಿಕೆ ಜಾಗತಿಕ ಎಚ್ಚರಿಕೆ, ಭವಿಷ್ಯದಲ್ಲಿ ಉತ್ತಮ ಜೀವನಕ್ಕಾಗಿ ಈಗಿನ ಪರಿಸರವನ್ನು ಉಳಿಸಿ, ಮರಗಳು ಜೀವ ಮತ್ತು ಜೀವನ ಅವುಗಳನ್ನು ಕತ್ತರಿಸಬೇಡಿ, ಕಾಡನ್ನು ಬೆಳೆಸಿ, ನಾಡನ್ನು ಉಳಿಸಿ, ಮನೆಗೊಂದು ಮರ, ಊರಿಗೊಂದು ವನ ಎಂಬುದು ವಿಶ್ವ ಪರಿಸರ ದಿನ 2021ರ ಘೋಷಣೆಗಳಾಗಿವೆ.
ಪರಿಸರದ ಕುರಿತಾಗಿ ಜಾಗೃತಿ ಮೂಡಿಸುವ ಇತರ ಆಚರಣೆಗಳು
Image Credits : Sierra Club
ಪರಿಸರದ ಕುರಿತಾಗಿ ಜಾಗೃತಿ ಮೂಡಿಸುವ ಇತರ ಆಚರಣೆಗಳು ವಿಶ್ವ ಬೈಸಿಕಲ್ ದಿನ, ವಿಶ್ವ ಸಾಗರ ದಿನ, ಮರಳುಗಾರಿಕೆ ಮತ್ತು ಬರವನ್ನು ಎದುರಿಸಲು ವಿಶ್ವ ದಿನ ಮೊದಲಾದವು. ಜೂನ್ 3ರಂದು ಪ್ರತೀ ವರ್ಷ ವಿಶ್ವ ಸೈಕಲ್ ದಿನವನ್ನು ಆಚರಿಸಲಾಗುತ್ತದೆ. ಪರಿಸರ ಸ್ನೇಹಿಯಾಗಿ, ಕಡಿಮೆ ಖರ್ಚಿನಲ್ಲಿ ಜನರ ಆರೋಗ್ಯವನ್ನು ಸುಧಾರಿಸುವ ಒಂದು ಉಪಯುಕ್ತ ಸಾಧನವಿದು. ಹಾಗೂ ಯಾವುದೇ ರೀತಿಯಲ್ಲಿ ಸೈಕಲ್ ಉಪಯೋಗಿಸುವುದರಿಂದ ಪರಿಸರಕ್ಕೆ ಹಾನಿಯುಂಟಾಗುವುದಿಲ್ಲ.
ಜೂನ್ 17ರಂದು ಸಾಗರದ ಸಂರಕ್ಷಣೆ ಕುರಿತಾಗಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ವಿಶ್ವ ಸಾಗರ ದಿನವನ್ನು ಆಚರಿಸಲಾಗುತ್ತದೆ. ಸುಸ್ಥಿರ ಭೂ ನಿರ್ವಹಣಾ ಕ್ಷೇತ್ರದಲ್ಲಿ ದೇಶಗಳು ಕೈಗೊಂಡ ಕಾರ್ಯಕ್ರಮ ಮತ್ತು ಅಭಿವೃದ್ಧಿಯ ನೆನಪಿಗಾಗಿ ಜೂನ್ 17ರಂದು ಮರುಭೂಮೀಕರಣ ಮತ್ತು ಬರವನ್ನು ಎದುರಿಸಲು ವಿಶ್ವ ದಿನವೆಂದು ಆಚರಿಸಲಾಗುತ್ತದೆ. ಮಳೆಕಾಡನ್ನು ರಕ್ಷಿಸಲು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಮತ್ತು ಕ್ರಮವನ್ನು ಪ್ರೋತ್ಸಾಹಿಸುವ ಉದ್ದೇಶದಿಂದಾಗಿ ಜೂನ್ 22ರಂದು ಮಳೆಕಾಡು ದಿನವನ್ನು ಆಚರಿಸಲಾಗುತ್ತದೆ.
ಆದರೆ, ಪ್ರತಿವರ್ಷ ವಿಶ್ವದಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದರೂ, ವರ್ಷ ಕಳೆದಂತೆ ಪ್ರಕೃತಿ ಮೇಲಿನ ಮಾನವ ನಡೆಸುತ್ತಿರುವ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಮಾತ್ರ ದುರಂತ. ಇನ್ನಾದರೂ ಮನುಷ್ಯ ಜಾಗೃತನಾಗಿ ಪರಿಸರ ಸಂರಕ್ಷಣೆಗಾಗಿ ಕ್ರಮಗಳನ್ನು ಕೈಗೊಂಡು ಹಸಿರು ಕ್ರಾಂತಿ ಮಾಡಬೇಕಿದೆ. ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ ಅದು ನಿತ್ಯ ನಿರಂತರವಾಗಿರಬೇಕು. ಆಗ ಮಾತ್ರ ಪರಿಸರ ದಿನಾಚರಣೆಗೆ ನಿಜವಾದ ಅರ್ಥ ಸಿಗುತ್ತದೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/2T1gXPX
June 05, 2021 at 11:28AM