ಇಂದು ಕಂಕಣ ಸೂರ್ಯಗ್ರಹಣ: ಎಷ್ಟು ಗಂಟೆಗೆ ಸ್ಪರ್ಶ, ಮೋಕ್ಷ, ಎಲ್ಲಿ ಗೋಚರವಾಗುತ್ತದೆ, ಇಲ್ಲಿದೆ ಮಾಹಿತಿ
Featured Image Credits : Nasa
ಭಾರತದಲ್ಲಿ ಗ್ರಹಣಗಳಿಗೆ ವಿಶೇಷ ಮಹತ್ವವಿದೆ. ಸೂರ್ಯ ಹಗಲಿನಲ್ಲಿಯೂ, ಚ೦ದ್ರ ರಾತ್ರಿಯಲ್ಲಿಯೂ ಕಾಣುತ್ತಾನೆ. ಈ ಸೂರ್ಯ, ಚ೦ದ್ರ ಮರೆಯಾಗುವ ಕಾರ್ಯಕ್ಕೆ ಗ್ರಹಣ ಎನ್ನುತ್ತಾರೆ. ಸಾಮಾನ್ಯವಾಗಿ ಜನರು ಗ್ರಹಣಗಳನ್ನು ಭಯಪೂರಿತ ಮನಸ್ಸಿನಿ೦ದಲೇ ಬರಮಾಡಿಕೊಳ್ಳಲಾಗುತ್ತದೆ. ಆದರೆ ವಿಜ್ಞಾನಿಗಳು ಮಾತ್ರ ಇ೦ತಹ ಗ್ರಹಣಗಳನ್ನು ನಿರೀಕ್ಷಿಸುತ್ತಲೇ ಇರುತ್ತಾರೆ. ಯಾಕೆಂದರೆ ಗ್ರಹಣಗಳು ಆಕಾಶಕಾಯಗಳ ಬಗೆಗಿನ ನೂತನ ಸತ್ಯಗಳನ್ನು ಆವಿಷ್ಕರಿಸಲು ಅವರಿಗೊ೦ದು ಅವಕಾಶವನ್ನು ಒದಗಿಸುತ್ತದೆ ಎಂದು ಹೇಳಲಾಗುತ್ತದೆ.
ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರನು ಚಲಿಸುವಾಗ, ಭೂಮಿಯ ಮೇಲೆ ನೆರಳು ಬಿತ್ತರಿಸುವಾಗ, ಸೂರ್ಯನ ಬೆಳಕನ್ನು ಸಂಪೂರ್ಣವಾಗಿ ಅಥವಾ ಭಾಗಶಃ ತಡೆಯುವಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಸೌರಮಂಡಲದಲ್ಲಿ ನಡೆಯುವ ಸಹಜ ಪ್ರಕ್ರಿಯೆ ಎಂದು ವಿಜ್ಞಾನಿಗಳು ಇದನ್ನು ವಿಶ್ಲೇಷಿಸಿದರೆ, ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಣದಿಂದ ಪ್ರಕೃತಿಯಲ್ಲಿ, ಮನುಷ್ಯ ಜೀವನದಲ್ಲಿ ಆಗುವ ಆಗುಹೋಗುಗಳು, ಒಳಿತು-ಕೆಡುಕುಗಳ ಬಗ್ಗೆ ಮಾತನಾಡುತ್ತಾರೆ.
ಇಂದು ಜೂನ್ 10ರ ಗುರುವಾರದಂದು ಕಂಕಣ ಸೂರ್ಯಗ್ರಹಣ ಸಂಭವಿಸಲಿದ್ದು, ಖಗೋಳ ಲೋಕದ ಕೌತುಕವನ್ನು ಕಣ್ತುಂಬಿಕೊಳ್ಳಲು ಜಗತ್ತು ಕಾತರದಿಂದ ಕಾಯುತ್ತಿದೆ. ಈ ವರ್ಷದ ಮೊದಲ ಸೂರ್ಯಗ್ರಹಣಕ್ಕೆ ಕೌಂಟ್ಡೌನ್ ಸ್ಟಾರ್ಟ್ ಆಗಿದೆ. ಇಡೀ ಭೂಮಂಡಲವನ್ನೇ ಬೆಳಗುವ ಸೂರ್ಯನಿಗೆ ಮಂಕು ಆವರಿಸಲಿದೆ. ಇಂದು ಕಂಕಣ ಸೂರ್ಯಗ್ರಹಣ ಸಂಭವಿಸಲಿದ್ದು, ಕೌತುಕ ಕಣ್ತುಂಬಿಕೊಳ್ಳಲು ಇಡೀ ಜಗತ್ತೇ ಕಾದು ಕೂತಿದೆ. ಕಂಕಣ ಸೂರ್ಯ ಗ್ರಹಣ ಅಂದ್ರೆ ಸೂರ್ಯನ ಕೇಂದ್ರ ಭಾಗವು ಮುಚ್ಚಿಕೊಂಡು, ಸೂರ್ಯ ಬಳೆ ತೊಟ್ಟಂತೆ ಕಾಣುವುದೇ ವಿಶೇಷ.
ಕಂಕಣ ಸೂರ್ಯಗ್ರಹಣ ಎಂದರೇನು..?
ಸೂರ್ಯನ ಕೇಂದ್ರ ಭಾಗ ಮುಚ್ಚಿಕೊಂಡು ಸುತ್ತಲೂ ಬಳೆ ತೊಟ್ಟಂತೆ ಸೂರ್ಯ ಗೋಚರವಾಗುವುದಕ್ಕೆ ಕಂಕಣ ಸೂರ್ಯಗ್ರಹಣ ಎಂದು ಕರೆಯುತ್ತಾರೆ. ಈ ರೀತಿಯ ವಾರ್ಷಿಕ ಗ್ರಹಣದ ಸಂದರ್ಭದಲ್ಲಿ, ಚಂದ್ರನು ಭೂಮಿಯಿಂದ ಸಾಕಷ್ಟು ದೂರದಲ್ಲಿರುತ್ತಾನೆ. ಅದು ಆಕಾಶದಲ್ಲಿ ಸೂರ್ಯನಿಗಿಂತ ಚಿಕ್ಕದಾಗಿ ಕಾಣುತ್ತದೆ. ಚಂದ್ರನು ಸೂರ್ಯನ ಸಂಪೂರ್ಣ ನೋಟವನ್ನು ನಿರ್ಬಂಧಿಸುವುದಿಲ್ಲವಾದ್ದರಿಂದ, ಅದು ದೊಡ್ಡದಾದ, ಪ್ರಕಾಶಮಾನವಾದ ಡಿಸ್ಕ್ ನ ಮೇಲೆ ಕಪ್ಪು ಡಿಸ್ಕ್ ನಂತೆ ಕಾಣುತ್ತದೆ. ಇದು ಚಂದ್ರನ ಸುತ್ತಲೂ ಬೆಂಕಿಯ ಉಂಗುರದಂತೆ ಕಾಣುತ್ತದೆ, ಹಾಗಾಗಿ ಇದಕ್ಕೆ ಕಂಕಣ ಸೂರ್ಯಗ್ರಹಣ ಎಂದು ಕರೆಯುತ್ತಾರೆ.
ಸ್ಪರ್ಶ ಕಾಲ, ಮೋಕ್ಷ ಕಾಲ
ಕಂಕಣ ಸೂರ್ಯಗ್ರಹಣ ಇಂದು ಭೂಮಿಗೆ ಸ್ಪರ್ಶವಾಗುವುದು ಮಧ್ಯಾಹ್ನ 1 ಗಂಟೆ 31 ನಿಮಿಷಕ್ಕೆ, ಗ್ರಹಣದ ಮಧ್ಯಕಾಲ ಅಥವಾ ಪರ್ವಕಾಲ ಅಪರಾಹ್ನ 4 ಗಂಟೆ 23 ನಿಮಿಷಕ್ಕೆ ಹಾಗೂ ಗ್ರಹಣದ ಮೋಕ್ಷ ಕಾಲ ಸಂಜೆ 6 ಗಂಟೆ 40 ನಿಮಿಷಕ್ಕೆ, ಗ್ರಹಣದ ಉತ್ತುಂಗ ಅಂದರೆ ಮಧ್ಯ ಕಾಲದಲ್ಲಿ ಸೂರ್ಯ ಕಂಕಣ ಬಳೆ ತೊಟ್ಟಂತೆ ಕಾಣುತ್ತಾನೆ. ಸಾಯಂಕಾಲ 6 ಗಂಟೆ 40 ನಿಮಿಷಕ್ಕೆ ಗ್ರಹಣ ಮುಗಿಯಲಿದೆ.
ಎಲ್ಲೆಲ್ಲಿ ಗೋಚರಿಸುತ್ತೆ ಗ್ರಹಣ..?
ಈ ಭಾಗಶಃ ಸೂರ್ಯಗ್ರಹಣವು ಪೂರ್ವ ಯುನೈಟೆಡ್ ಸ್ಟೇಟ್ಸ್ ಮತ್ತು ಉತ್ತರ ಅಲಾಸ್ಕಾದ ಕೆಲವು ಭಾಗಗಳ ಜೊತೆಗೆ ಕೆನಡಾ ಮತ್ತು ಕೆರಿಬಿಯನ್, ಯುರೋಪ್, ಏಷ್ಯಾ ಮತ್ತು ಉತ್ತರ ಆಫ್ರಿಕಾದ ಕೆಲವು ಭಾಗಗಳಲ್ಲಿ ಜನರಿಗೆ ಗೋಚರಿಸುತ್ತದೆ ಎಂದು ಅಮೇರಿಕಾದ ನಾಸಾ ಹೇಳಿದೆ. ವಾರ್ಷಿಕ ಸೂರ್ಯಗ್ರಹಣ ಗೋಚರಿಸದ ಭಾಗಗಳಲ್ಲಿ, ಜನರು ಭಾಗಶಃ ಸೂರ್ಯಗ್ರಹಣ ಕಾಣುತ್ತಾರೆ. ಇದು ಸಂಭವಿಸಿದಾಗ, ಸೂರ್ಯ, ಚಂದ್ರ ಮತ್ತು ಭೂಮಿಯು ಭಾಗಶಃ ಸಾಲಾಗಿ ನಿಲ್ಲುವುದಿಲ್ಲ. ಸೂರ್ಯನು ಅದರ ಮೇಲ್ಮೈಯಲ್ಲಿ ಮಾತ್ರ ಗಾಢ ನೆರಳು ತೋರುತ್ತಾನೆ. ಭಾರತದಲ್ಲಿ ಭಾಗಶಃ ಸೂರ್ಯಗ್ರಹಣವನ್ನು ಮಾತ್ರ ಕಾಣಬಹುದು ಎಂದು ತಿಳಿಸಲಾಗಿದೆ.
ಉತ್ತರಭಾರತದ ರಾಜಸ್ಥಾನ, ಹರಿಯಾಣ, ಉತ್ತರಾಖಂಡದ ಕೆಲ ಭಾಗಗಳಲ್ಲಷ್ಟೇ ಈ ಕಂಕಣ ಸೂರ್ಯಗ್ರಹಣ ಗೋಚರಿಸಲಿದೆ. ದಕ್ಷಿಣ ಭಾರತದಲ್ಲಿ ಪಾರ್ಶ್ವ ಸೂರ್ಯಗ್ರಹಣ ಕಾಣಿಸಿಕೊಳ್ಳಲಿದೆ. ಶೇಕಡಾ 40ರಷ್ಟು ಪ್ರಮಾಣದಲ್ಲಿ ಈ ಗ್ರಹಣ ಗೋಚರಿಸಲಿದ್ದು, ಇದನ್ನು ಬರಿಗಣ್ಣಿನಲ್ಲಿ ನೋಡುವುದು ಅಪಾಯಕಾರಿ ಎಂದು ವಿಜ್ಞಾನಿಗಳ ತಂಡ ತಿಳಿಸಿದೆ.
ಇನ್ನೂ ಪ್ರತಿ ಸಲ ಗ್ರಹಣ ಬಂದಾಗಲು ನಂಬಿಕೆ ಅಪನಂಬಿಕೆ ಬಗ್ಗೆ ಚರ್ಚೆ ಶುರುವಾಗುತ್ತದೆ. ವಿಜ್ಞಾನಿಗಳ ಪ್ರಕಾರ ಸೂರ್ಯಗ್ರಹಣ ಎನ್ನುವಂತದ್ದು ಸೌರಮಂಡಲದಲ್ಲಿ ನಡೆಯುವ ಒಂದು ಸಹಜ ಪ್ರಕ್ರಿಯೆ ಹಾಗೂ ಒಂದು ಕೌತುಕ. ಆದ್ರೆ, ಜ್ಯೋತಿಷಿಗಳು ಹೇಳೋ ಪ್ರಕಾರ ಈ ಗ್ರಹಣ ತುಂಬಾ ಅಪಾಯಕಾರಿಯಾಗಿದೆ. ಗ್ರಹಣದ ಪ್ರಭಾವದಿಂದ ಪಂಚಭೂತಗಳಲ್ಲಿ ವ್ಯತ್ಯಾಸ ಉಂಟಾಗಿ, ಪ್ರಕೃತಿ ವಿಕೋಪಗಳು ಹೆಚ್ಚಾಗಬಹುದು ಅಂತ ಜ್ಯೋತಿಷಿಗಳು ವಿಶ್ಲೇಷಿಸುತ್ತಾರೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv
June 10, 2021 at 11:58AM