ಈ ದೇವಾಲಯಗಳಲ್ಲಿ ನೂಡಲ್ಸ್, ಫ್ರೈಡ್ ರೈಸ್, ಚಾಕೋಲೇಟ್ ಗಳೇ ಪ್ರಸಾದ..!
ಭಾರತ ದೇಶದ ವಿಶಿಷ್ಟತೆಯೂ ಅಂಥಹದ್ದು, ಇಲ್ಲಿ ಎಲ್ಲಾ ರೀತಿಯ ದೇವರುಗಳನ್ನು ಪೂಜಿಸುವ ವೈವಿಧ್ಯಮಯ ದೇವಾಲಯಗಳು ಇಲ್ಲಿವೆ. ಹಲವು ದೇವಾಲಯಗಳಲ್ಲಿ ಭಿನ್ನ-ವಿಭಿನ್ನ ಪದ್ಧತಿ, ಆಚರಣೆಗಳನ್ನು ಸಹ ನೋಡಬಹುದು. ಎಲ್ಲಾ ದೇವಸ್ಥಾನಗಳನ್ನು ಪೂಜೆ ಮಾಡುವ ಸಮಯ, ವಿಗ್ರಹವನ್ನು ಪ್ರತಿಷ್ಠಾಪಿಸಿದ ರೀತಿ, ಭಕ್ತರಿಗೆ ನೀಡುವ ಪ್ರಸಾದ ಹೀಗೆ ಎಲ್ಲಾ ವಿಚಾರದಲ್ಲೂ ಭಿನ್ನತೆಯನ್ನು ಕಾಣಬಹುದು. ಅದೇ ರೀತಿ ಭಾರತದಲ್ಲಿರುವ ಹಲವು ದೇವಾಲಯಗಳಲ್ಲಿ ವಿಶಿಷ್ಟ ಪದ್ಧತಿಯಿದ್ದು, ಇದರಿಂದಾಗಿಯೇ ಈ ದೇವಸ್ಥಾನಗಳು ಹೆಚ್ಚು ಪ್ರಸಿದ್ಧಿ ಹೊಂದಿವೆ.
ದಕ್ಷಿಣಭಾರತದ ಹಲವು ದೇವಸ್ಥಾನಗಳಲ್ಲಿ ಹೆಚ್ಚಾಗಿ ದೇವಾಲಯಕ್ಕೆ ಬರುವ ಭಕ್ತರಿಗೆ ಅನ್ನಸಂತರ್ಪಣೆಯ ವ್ಯವಸ್ಥೆ ಇರುತ್ತದೆ. ಕೆಲವೊಂದು ದೇವಾಲಯದಲ್ಲಿ ಅನ್ನ, ನೈವೇದ್ಯ, ಕಾಳುಗಳು, ಪಂಚಕಜ್ಜಾಯವನ್ನು ನೀಡಲಾಗುತ್ತದೆ. ಮತ್ತೆ ಕೆಲವು ದೇಗುಲಗಳಲ್ಲಿ ಕುಂಕುಮ ಹಾಗೂ ತೀರ್ಥವನ್ನಷ್ಟೇ ನೀಡಲಾಗುತ್ತದೆ. ದೇವಾಲಯಗಳು ಭಕ್ತರಿಗೆ ಅನ್ನಸಂತರ್ಪಣೆ ಮಾಡುವುದು ಪುಣ್ಯಕಾರ್ಯವೆಂದೇ ಭಾವಿಸಿವೆ. ಕೆಲವೊಂದು ಹೆಸರುವಾಸಿ ದೇವಾಲಯಗಳಲ್ಲಿ ಅಲ್ಲಿನ ಅನ್ನಪ್ರಸಾದವೇ ಹೆಚ್ಚು ಪ್ರಸಿದ್ಧಿ ಪಡೆದಿರುತ್ತದೆ. ಸ್ವಾದಿಷ್ಟಕರ ಊಟ ಹಲವೆಡೆ ಹೆಸರುವಾಸಿಯಾಗಿರುತ್ತದೆ. ಭಾರತದಲ್ಲಿರುವ ಇಂಥಹಾ ಹಲವು ದೇವಾಲಯಗಳಿವೆ. ಅದಲ್ಲದೆಯೂ ಭಾರತದಲ್ಲಿ ಭಕ್ತರಿಗೆ ನೀಡುವ ಪ್ರಸಾದದಲ್ಲೇ ವೈವಿಧ್ಯತೆ ತೋರಿರುವ ಇನ್ನೂ ಕೆಲವು ವಿಶಿಷ್ಟ ದೇವಾಲಯಗಳಿವೆ. ಅವುಗಳು ಯಾವುವೆಂದು ತಿಳಿಯೋಣ.
ಹೌದು, ಭಾರತದ ಹಲವು ದೇವಸ್ಥಾನಗಳಲ್ಲಿ ಈ ರೀತಿ ವಿಶಿಷ್ಟ ಪ್ರಸಾದವನ್ನು ನೀಡುವ ಸಂಪ್ರದಾಯವಿದೆ. ಕೆಲವೊಂದು ದೇವಾಲಯಗಳಲ್ಲಿ ಕಡಲೆಗಳನ್ನು, ಒಣಗಿದ ಹಣ್ಣುಗಳನ್ನು, ತೆಂಗಿನಕಾಯಿಯನ್ನು, ಪಂಜಕಜ್ಜಾಯಗಳನ್ನು, ಲಡ್ಡುಗಳನ್ನು ಪ್ರಸಾದದ ರೂಪದಲ್ಲಿ ನೀಡುತ್ತಾರೆ. ಇನ್ನು ಕೆಲವೊಂದು ದೇವಾಲಯಗಳಲ್ಲಿ ಜಾಮ್, ಚಾಕೋಲೇಟ್ ಹಾಗೂ ದೋಸೆ ಸೇರಿದಂತೆ ಮುಂತಾದ ರೀತಿಯ ವಿಭಿನ್ನ ರೀತಿಯ ವಸ್ತುಗಳನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಅಷ್ಟೇ ಅಲ್ಲ ಉತ್ತರಭಾರತದ ಕೆಲವು ದೇವಾಲಯಗಳಲ್ಲಿ ಚೈನೀಸ್ ಫುಡ್ ನ್ನು ಭಕ್ತರಿಗೆ ಪ್ರಸಾದವೆಂದು ನೀಡಲಾಗುತ್ತದೆ.
ಕಾಳಿದೇವಿ ದೇವಾಲಯದಲ್ಲಿ ನೂಡಲ್ಸ್ ಪ್ರಸಾದ
Image Credits : Scoopwhoop
ಕೋಲ್ಕತ್ತಾದ ಟಂಗ್ರಾ ಎಂಬ ಪ್ರದೇಶದಲ್ಲಿ ಕಾಳಿಮಾತಾ ದೇವಾಲಯವಿದೆ. ಈ ಪ್ರದೇಶಕ್ಕೆ ಚೈನಾಟೌನ್ ಎಂಬ ಹೆಸರು ಕೂಡಾ ಇದೆ. 60 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ಕಾಳಿ ಮಾತಾ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಇಲ್ಲಿನ ವಿಶೇಷತೆಯೆಂದೆ ಈ ದೇವಾಲಯದಲ್ಲಿ ಕಾಳಿ ದೇವಿಗೆ ನೂಡಲ್ಸ್, ಚೌಮಿನ್, ಫ್ರೈಡ್ರೈಸ್ ನ್ನು ಅರ್ಪಿಸಲಾಗುತ್ತದೆ. ಪೂಜೆಯ ಬಳಿಕ ಭಕ್ತರಿಗೆ ಇದನ್ನೇ ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ.
ಮಂಚ್ ಪ್ರಿಯ ಮುರುಗನ್ ದೇವಸ್ಥಾನ
Image Credits : InUth.com
ಚಾಕೋಲೇಟ್ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಎಲ್ಲರೂ ಇಷ್ಟಪಟ್ಟು ಬಾಯಿ ಚಪ್ಪರಿಸಿ ತಿನ್ನುತ್ತಾರೆ. ಈ ದೇವಸ್ಥಾನದಲ್ಲಿ ದೇವರಿಗೂ ಚಾಕೋಲೇಟ್ನ್ನೇ ಸಲ್ಲಿಸಲಾಗುತ್ತದೆ. ತೆಕ್ಕನ್ ಪಳನಿ ಬಾಲಸುಬ್ರಹ್ಮಣ್ಯ ದೇವಸ್ಥಾನದ ಗರ್ಭಗುಡಿಯಲ್ಲಿ ಚಾಕೊಲೇಟ್ ತುಂಡುಗಳನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತಿದೆ. ಕೇರಳದ ಆಲಪ್ಪುಳ ಎನ್ನುವ ಪ್ರದೇಶದಲ್ಲಿ ನಾವು ಈ ದೇವಾಲಯವನ್ನು ನೋಡಬಹುದಾಗಿದೆ. ಆಲಪ್ಪುಳ ನಗರದ ಹೊರವಲಯದ ಸುಬ್ರಹ್ಮಣ್ಯಪುರಂನಲ್ಲಿರುವ ಈ ದೇವಸ್ಥಾನದ ದೇವರು ಸ್ಥಳೀಯವಾಗಿ 'ಮಂಚ್ ಮುರುಗನ್ ಎಂದೇ ಖ್ಯಾತನಾಗಿದ್ದಾನೆ. ಎಲ್ಲಾ ದೇವಸ್ಥಾನಗಳಲ್ಲಿ ಭಕ್ತರು ತಮ್ಮ ಕೋರಿಕೆಗಳನ್ನು ಈಡೇರಿಸಿಕೊಳ್ಳಲು ದೇವರಿಗೆ ಹೂವು, ಶ್ರೀಗಂಧ, ಹಣ್ಣು-ಹಂಪಲುಗಳನ್ನು ಅರ್ಪಿಸಿದರೆ, ಇಲ್ಲಿ ಚಾಕೋಲೇಟ್ಗಳನ್ನು ಅರ್ಪಿಸುತ್ತಾರೆ.
ಪ್ರಮುಖ ಬ್ರಾಂಡ್ ಒಂದರ ಚಾಕೊಲೇಟ್ ಬಾರ್ಗಳನ್ನು ದೇವರಿಗೆ ಅರ್ಪಿಸಿದ ಬಳಿಕ ಭಕ್ತರಿಗೆ ಅವುಗಳನ್ನೇ ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಯಾವುದೇ ಜಾತಿ, ಧರ್ಮ, ಅಂತಸ್ತುಗಳ ಭೇದವಿಲ್ಲದೆ ಜನರು ಈ ದೇವಾಲಯಕ್ಕೆ ಆಗಮಿಸಿ ಮುರುಗನಿಗೆ ಚಾಕೊಲೇಟ್ಗಳನ್ನೇ ಅರ್ಪಿಸುತ್ತಾರೆ. ವಾರ್ಷಿಕ ಪರೀಕ್ಷೆಗಳು ನಡೆಯುತ್ತಿರುವ ಕಾಲದಲ್ಲಿ ವಿದ್ಯಾಥಿಗಳೇ ಹೆಚ್ಚಾಗಿ ಆಗಮಿಸಿ ದೇವರಿಗೆ ಚಾಕೊಲೇಟ್ ಅರ್ಪಿಸುತ್ತಾರೆ. ಅರ್ಚನೆ ನಡೆಸಿದ ಬಳಿಕ ಭಕ್ತರಿಗೆ ಪ್ರಸಾದ ರೂಪದಲ್ಲಿ ಹೂಗಳನ್ನು ನೀಡುವಂತೆ, ಇಲ್ಲಿ ಚಾಕೊಲೇಟ್ ಪ್ರಸಾದ ನೀಡಲಾಗುತ್ತದೆ.
ತುಲಾಭಾರದಂತಹ ಸಾಂಪ್ರದಾಯಿಕ ಸೇವೆಗಳಿಗೂ ಇಲ್ಲಿ ಹೂವು, ಬೆಲ್ಲ ಇತ್ಯಾದಿಗಳ ಜತೆಗೆ ಚಾಕೊಲೇಟ್ಗಳನ್ನೂ ಬಳಸಲಾಗುತ್ತದೆ. ಮೊದಮೊದಲು ಮಕ್ಕಳು ಮಾತ್ರ ಚಾಕೊಲೇಟ್ ಸೇವೆ ನಡೆಸುತ್ತಿದ್ದರು. ಆದರೆ ಈಗೀಗ ಎಲ್ಲ ವಯೋಮಾನದವರೂ ಬಾಲಮುರುಗನಿಗೆ ಚಾಕೊಲೇಟ್ಗಳನ್ನೇ ಅರ್ಪಿಸುತ್ತಾರೆ. ಇಲ್ಲಿಗೆ ಇತರ ರಾಜ್ಯಗಳು ಮತ್ತು ವಿದೇಶಗಳಿಂದ ಬರುವ ಭಕ್ತರೂ ದೊಡ್ಡ ದೊಡ್ಡ ಚಾಕೊಲೇಟ್ ಬಾಕ್ಸ್ಗಳನ್ನೇ ಹಿಡಿದುಕೊಂಡು ಬರುತ್ತಾರೆ.
ಪಳನಿ ದೇವಸ್ಥಾನದಲ್ಲಿ ಸಕ್ಕರೆ ಕ್ಯಾಂಡಿ ಪ್ರಸಾದ
Image Credits : tezzbuzz
ತಮಿಳುನಾಡಿನ ಪಳನಿ ಎನ್ನುವ ಸ್ಥಳದಲ್ಲಿರುವ ದಂಡಾಯುತಪಾಣಿ ಸ್ವಾಮಿ ದೇವಸ್ಥಾನದಲ್ಲಿ ವಿಶಿಷ್ಟ ರೀತಿಯ ಪ್ರಸಾದವನ್ನು ನೀಡಲಾಗುತ್ತದೆ. ಐದು ಹಣ್ಣುಗಳಿಂದ ತಯಾರಿಸಿದ ವಿಶೇಷ ರೀತಿಯ ಜಾಮ್ ಈ ದೇವಾಲಯಕ್ಕೆ ಬರುವ ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ. 5 ವಿವಿಧ ಬಗೆಯ ಹಣ್ಣುಗಳನ್ನು, ಸಕ್ಕರೆ ಕ್ಯಾಂಡಿಗಳನ್ನು ಹಾಗೂ ಬೆಲ್ಲವನ್ನು ಬೆರೆಸಿ ತಯಾರಿಸಿದ ಜಾಮ್ ಇದಾಗಿದ್ದು, ಇದನ್ನೇ ಇಲ್ಲಿ ಪಂಚಾಮೃತವೆಂದು ಕರೆಯಲಾಗುತ್ತದೆ. ಈ ಜಾಮ್ ನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ..
ಮಧುರೈನ ವಿಷ್ಣುವಿನ ದೇವಾಲಯದಲ್ಲಿ ದೋಸೆಯೇ ಪ್ರಸಾದ

Image Credits : Facebook
ತಮಿಳುನಾಡಿನ ಮಧುರೈನಲ್ಲಿರುವ ಈ ದೇವಾಲಯವು ವಿಷ್ಣುವಿನ ಪ್ರಸಿದ್ಧ ದೇವಾಲಯವಾಗಿದೆ. ಭಕ್ತರಿಗೆ ನೀಡುವ ಪ್ರಸಾದದ ಮೂಲಕವೇ ಇದು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿದೆ. ಇಲ್ಲಿ ಭಕ್ತರು ದೇವರಿಗೆ ಭಕ್ತಿಯಿಂದ ದೋಸೆಯನ್ನು ಅರ್ಪಿಸುತ್ತಾರೆ. ದೇವರಿಗೆ ಅರ್ಪಿಸಿದ ದೋಸೆಯನ್ನೇ ಭಕ್ತರಿಗೂ ಕೂಡ ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ.
ಕಾಮಾಕ್ಯ ದೇವಾಲಯದಲ್ಲಿ ಒದ್ದೆ ಬಟ್ಟೆಯೇ ಪ್ರಸಾದ
Image Credits : New Indian Express
ಗುವಾಹಟಿಯಲ್ಲಿರುವ ಕಾಮಾಕ್ಯ ದೇವಿ ದೇವಾಲಯದಲ್ಲಿ ಪ್ರತಿ ವರ್ಷವೂ ಕೂಡಾ ಸುಂದರ ಜಾತ್ರೆಯನ್ನು ಆಯೋಜಿಸಲಾಗುತ್ತದೆ. ಇಲ್ಲಿ ಭಕ್ತರಿಗೆ ಒದ್ದೆ ಬಟ್ಟೆಯನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಈ ವಿಶೇಷ ಜಾತ್ರೆಯ ಸಮಯದಲ್ಲಿ ದೇವಿಯ ದರ್ಶನವನ್ನು ಬರೋಬ್ಬರಿ ಮೂರು ದಿನಗಳ ವರೆಗೆ ಸ್ಥಗಿತಗೊಳಿಸಲಾಗುತ್ತದೆ. ಹಾಗೂ ಜಾತ್ರೆಯ ನಾಲ್ಕನೇ ದಿನದಂದು ದೇವಾಲಯದ ಬಾಗಿಲನ್ನು ತೆರೆದು ಭಕ್ತಾದಿಗಳಿಗೆ ದರ್ಶನ ಮಾಡಲು ಅವಕಾಶವನ್ನು ಕಲ್ಪಿಸಲಾಗುತ್ತದೆ. ಈ ಸಂದರ್ಭದಲ್ಲಿಯೇ ಒದ್ದೆ ಬಟ್ಟೆಯನ್ನು ಪ್ರಸಾದವಾಗಿ ನೀಡಲಾಗುತ್ತದೆ.
ತ್ರಿಶ್ಯೂರಿನ ಮಹಾದೇವ ದೇವಾಲಯದಲ್ಲಿ ಸಿಡಿಗಳೇ ಪ್ರಸಾದ
Image credits : Facebook
ಎಲ್ಲಾ ದೇವಾಲಯಗಳಲ್ಲಿ ಆಹಾರ ಪದಾರ್ಥಗಳನ್ನು ಪ್ರಸಾದದ ರೂಪದಲ್ಲಿ ನೀಡುವುದಾದರೆ. ಈ ದೇವಾಲಯ ಮಾತ್ರ ಅದೆಲ್ಲಕ್ಕಿಂತ ವಿಭಿನ್ನ. ತ್ರಿಶ್ಯೂರಿನ ಮರುವಚ್ಚೇರಿ ಮಹಾದೇವ ದೇವಾಲಯದಲ್ಲಿ ಪ್ರಸಾದದ ರೂಪದಲ್ಲಿ ಆಹಾರಕ್ಕೆ ಸಂಬಂಧಿಸಿದ ಪುಸ್ತಕಗಳನ್ನು, ಸಿಡಿಗಳನ್ನು ಹಾಗೂ ಡಿವಿಡಿಗಳನ್ನು ನೀಡಲಾಗುತ್ತದೆ. ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ಜ್ಞಾನವನ್ನು ಎಲ್ಲೆಡೆ ಪಸರಿಸುವುದೇ ಈ ರೀತಿಯ ಪ್ರಸಾದ ನೀಡುವುದರ ಮುಖ್ಯ ಉದ್ದೇಶ ಎನ್ನುತ್ತಾರೆ
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv
June 14, 2021 at 02:50PM