ಹೊಟ್ಟೆ ಉಬ್ಬರದ ಸಮಸ್ಯೆನಾ..? ಟೆನ್ಶನ್ ಬೇಡ..ಇಲ್ಲಿದೆ ಸುಲಭ ಪರಿಹಾರ
Feature Image Credits : Milli Chronicle
ಇತ್ತೀಚಿನ ದಿನಗಳಲ್ಲಿ ಹೊಟ್ಟೆ ಉಬ್ಬರ ಎಲ್ಲರಲ್ಲೂ ಕಂಡು ಬರುವಂಥಹಾ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಕೆಲವೊಮ್ಮೆ ನಾವು ಅತಿಯಾಗಿ ತಿಂದಾಗ ಹೊಟ್ಟೆ ಉಬ್ಬರ ಕಂಡುಬರುತ್ತದೆ, ಆದರೆ ಕೆಲವೊಮ್ಮೆ ಕಡಿಮೆ ತಿಂದರೂ ಸಹ ಈ ಸಮಸ್ಯೆ ಕಂಡುಬರುತ್ತದೆ. ಅತಿಯಾಗಿ ಆಹಾರ ಸೇವಿಸುವುದರಿಂದ ಅಥವಾ ದೇಹಕ್ಕೆ ಅಲರ್ಜಿಯನ್ನುಂಟು ಮಾಡುವ ಸೇವಿಸುವುದರಿಂದ ಈ ರೀತಿ ಹೊಟ್ಟೆ ಉಬ್ಬರದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆಹಾರ ಸೇವನೆಯ ನಂತರ ಊಟ ಜೀರ್ಣವಾಗದಿದ್ದರೆ ಈ ರೀತಿ ಹೊಟ್ಟೆಯ ಗ್ಯಾಸ್ನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದ ಹೊಟ್ಟೆ ನೋವು, ಸುಸ್ತು ಹೆಚ್ಚಾಗಿ ಸಂಪೂರ್ಣ ಆರೋಗ್ಯವೇ ಹದಗೆಟ್ಟಂತೆ ಭಾಸವಾಗುತ್ತದೆ.
ಹೊಟ್ಟೆ ಉಬ್ಬರದ ಸಮಸ್ಯೆಯಿಂದ ಹೊಟ್ಟೆಯಲ್ಲಿ ಸೆಳೆತ, ಹೊಟ್ಟೆ ಉಬ್ಬು, ಹೊಟ್ಟೆ ಭಾರ ಹಾಗೂ ಎದೆ ಉರಿಯಂತಹ ಸಮಸ್ಯೆ ಹೆಚ್ಚುತ್ತದೆ. ಅಲ್ಲದೆ, ಜೀರ್ಣಕ್ರಿಯೆ ಸುಗಮವಾಗಿ ನೆರವೇರದೆ ಹೊಟ್ಟೆಯಲ್ಲಿ ಸಂಗ್ರಹವಾಗುವ ಗಾಳಿಯಿಂದ ಹೊಟ್ಟೆ ಉಬ್ಬರ ಅಥವಾ ಗ್ಯಾಸ್ ಸಮಸ್ಯೆಗೆ ಕಾರಣವಾಗುತ್ತದೆ. ಕೆಲವರಿಗೆ ಕೆಲ ಆಹಾರ ಸೇವಿಸುತ್ತಿದ್ದಂತೆ ಗ್ಯಾಸ್ಟ್ರಿಕ್ ಸಮಸ್ಯೆ ಎದುರಾಗುತ್ತದೆ. ತಿಂದ ತಕ್ಷಣವೇ ಹೊಟ್ಟೆ ಉಬ್ಬರಿಸಿದಂತಾಗಿ ಹೊಟ್ಟೆ ನೋವು ಶುರುವಾಗುತ್ತದೆ. ಇದಕ್ಕೇನು ಪರಿಹಾರ ಅಂತ ಹಲವರು ತಲೆಕೆಡಿಸಿಕೊಂಡಿದ್ದೂ ಇದೆ. ಈ ಹೊಟ್ಟೆ ಉಬ್ಬುವ ಸಮಸ್ಯೆಗೆ ನಿಜವಾದ ಕಾರಣ ಏನು, ಇದಕ್ಕೇನು ಪರಿಹಾರ..ಇಲ್ಲಿದೆ ಮಾಹಿತಿ.
ನಿಗದಿತ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಬೇಕು
Image Credits : The List
ಹೊಟ್ಟೆ ಉಬ್ಬರಕ್ಕೆ ನಿಗದಿತ ಸಮಯದಲ್ಲಿ ಆಹಾರ ಸೇವಿಸುವುದು ಅತೀ ಮುಖ್ಯ. ಪ್ರತಿನಿತ್ಯ ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ, ರಾತ್ರಿಯ ಆಹಾರ ಸೇವಿಸಲು ನಿಗದಿತ ಸಮಯವನ್ನು ರೂಢಿಸಿಕೊಳ್ಳಬೇಕು. ಮತ್ತು ಆ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಬೇಕು. ಸರಿಯಾದ ಸಮಯದಲ್ಲಿ ಆಹಾರ ತಿನ್ನುವುದನ್ನು ತಪ್ಪಿಸುವುದರಿಂದಲೇ ಹೊಟ್ಟೆ ಖಾಲಿಯಾಗಿ ಬ್ಯಾಕ್ಟಿರೀಯಾದಿಂದ ಹೊಟ್ಟೆಯೊಳಗೆ ಗಾಳಿ ತುಂಬಿಕೊಳ್ಳುತ್ತದೆ. ಇದರಿಂದ ಹೊಟ್ಟೆ ಉಬ್ಬರದ ಸಮಸ್ಯೆ ಉಂಟಾಗುತ್ತದೆ.
ಹೀಗಾಗಿ ಆಹಾರ ಸೇವನೆಯ ಸಮಯಗಳ ಮಧ್ಯೆ ಹೆಚ್ಚು ಅಂತರವಿಡಬೇಡಿ. ದಿನದಲ್ಲಿ ಹೊಟ್ಟೆ ಖಾಲಿಯಾಗದಂತೆ ಆಗಾಗ ಮಿತ ಪ್ರಮಾಣದಲ್ಲಿ ಆಹಾರ ಸೇವಿಸುತ್ತಿರಿ. ಊಟದ ಮಧ್ಯದ ಸಮಯದಲ್ಲಿ ಹಣ್ಣುಗಳನ್ನು ಅಥವಾ ಡ್ರೈಫ್ರೂಟ್ಸ್ಗಳನ್ನು ತಿನ್ನುವುದು ಒಳ್ಳೆಯದು. ಈ ರೀತಿ ಮಾಡುವುದರಿಂದ ಹೊಟ್ಟೆ ಉಬ್ಬರದ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ.
ಅತಿಯಾಗಿ ಆಹಾರ ಸೇವಿಸುವುದನ್ನು ನಿಲ್ಲಿಸಬೇಕು
Image credits : Irish mirror
ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಅತಿ ಹೆಚ್ಚು ಆಹಾರ ಸೇವಿಸಿದಾಗ ಹೊಟ್ಟೆ ಭಾರವಾದ ಅನುಭವವಾಗುತ್ತದೆ. ಆಹಾರವನ್ನು ಅವಸರವಾಗಿ ತಿನ್ನುವುದರಿಂದಲೂ ಈ ಸಮಸ್ಯೆ ತಲೆದೋರುತ್ತದೆ. ಫಾಸ್ಟ್ ಆಗಿ ತಿನ್ನುವಾಗ ನೀವು ಎಷ್ಟು ಪ್ರಮಾಣದಲ್ಲಿ ಆಹಾರ ಸೇವಿಸಿದ್ದೀರಿ ಎಂಬುದು ನಿಮ್ಮ ಗಮನಕ್ಕೆ ಬರುವುದಿಲ್ಲ. ಈ ರೀತಿ ಆಹಾರ ಸೇವಿಸುವಾಗ ತಿನ್ನುವಾಗ ನೀವು ನಿಗದಿತ ಪ್ರಮಾಣಕ್ಕಿಂತ ಅದೆಷ್ಟೋ ಹೆಚ್ಚು ಪ್ರಮಾಣದಲ್ಲಿ ಆಹಾರ ಸೇವಿಸಿರುತ್ತೀರಿ. ಹೀಗಾಗಿ ಊಟ ಮಾಡಿದ ನಂತರ ಹೊಟ್ಟೆ ಉಬ್ಬಿದಂತೆ ಭಾಸವಾಗುತ್ತದೆ.
ದೇಹಕ್ಕೆಅಲರ್ಜಿಯಾಗುವ ಆಹಾರವನ್ನು ಸೇವಿಸಬಾರದು
Image Credits : A.vogel
ಕೆಲವೊಬ್ಬರಿಗೆ ಕೆಲವೊಂದು ಆಹಾರ ಆಗಿಬರುವುದಿಲ್ಲ. ಹೀಗಾಗಿ ಇಂಥಹಾ ಆಹಾರ ಸೇವಿಸುವುದರಿಂದ ದಿಢೀರ್ ಆಗಿ ಹೊಟ್ಟೆ ಉಬ್ಬರಿಸುತ್ತದೆ. ಯಾವುದಾದರೂ ಫುಡ್ ಸೇವಿಸಿ ನಿಮಗೆ ಹೊಟ್ಟೆ ಉಬ್ಬರಿಸಿದಂತೆ ಅನುಭವವಾದರೆ ಇದು ಆ ಆಹಾರ ದೇಹಕ್ಕೆ ಹೊಂದಿಕೊಳ್ಳುವುದಿಲ್ಲ ಎಂಬುದನ್ನು ಸೂಚಿಸುತ್ತದೆ. ಲ್ಯಾಕ್ಟೋಸ್, ಫ್ರುಕ್ಟೋಸ್, ಮೊಟ್ಟೆಗಳ ಸೇವನೆಯಿಂದ ಹಲವರಿಗೆ ಅಲರ್ಜಿ ಉಂಟಾಗಿ ಹೊಟ್ಟೆ ಉಬ್ಬುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಹೆಚ್ಚು ಫೈಬರ್ ಅಂಶವಿರುವ ಆಹಾರಗಳಿಂದ ಆದಷ್ಟು ದೂರವಿರಿ. ಹೆಚ್ಚು ಕೊಬ್ಬಿನಾಂಶವಿರುವ ಆಹಾರಗಳು ಬೇಗ ಜೀರ್ಣವಾಗುವುದಿಲ್ಲ. ಮತ್ತು ಅಜೀರ್ಣದಿಂದ ಹೊಟ್ಟೆ ಉಬ್ಬರ ಬರಲು ಶುರುವಾಗುತ್ತದೆ. ಇವತ್ತಿನ ದಿನಗಳಲ್ಲಿ ಹೊಟ್ಟೆ ಉಬ್ಬರದ ಸಮಸ್ಯೆ ಇರುವ ಹಲವರು ಕೊಬ್ಬಿನಾಂಶದ ಆಹಾರ ಹೆಚ್ಚು ಸೇವಿಸುವುದು ಇದಕ್ಕೆ ಕಾರಣವಾಗಿದೆ.
ಕೂಲ್ಡ್ರಿಂಕ್ಸ್ ಕುಡಿಯುವುದು ಒಳ್ಳೆಯದಲ್ಲ
Image Credis : Firstcry Parenting
ಕೂಲ್ ಡ್ರಿಂಕ್ಸ್ ಕುಡಿಯುವುದರಿಂದ ಹೊಟ್ಟೆ ಉಬ್ಬರ ಹೆಚ್ಚಾಗುತ್ತದೆ.ಕೂಲ್ ಡ್ರಿಂಕ್ಸ್ ಕುಡಿಯುವ ಸಮಯದಲ್ಲಿ ಹೊಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಗಾಳಿ ಹೋಗುವುದರಿಂದ ಹೊಟ್ಟೆ ಉಬ್ಬರದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕನ್ಫ್ಯೂಸ್ ಆಗಬೇಡಿ. ಇದರರ್ಥ ನೀವು ಕಾರ್ಬೋನೇಡ್ ಡ್ರಿಂಕ್ಸ್ ಕುಡಿಯುವಾಗ, ಚೂಯಿಂಗ್ ಗಮ್ ಜಗಿಯುವಾಗ ಹೆಚ್ಚಿನ ಪ್ರಮಾಣದಲ್ಲಿ ಗಾಳಿ ಹೊಟ್ಟೆ ಸೇರುತ್ತದೆ. ಸ್ಟ್ರಾ ಮೂಲಕ ಜ್ಯೂಸ್ ಸೇವಿಸುವಾಗಲೂ ಇದೇ ಸಮಸ್ಯೆ. ಈ ಥರದ ಕೂಲ್ಡ್ರಿಂಕ್ಸ್ ನಲ್ಲಿ ಡಿಯೋಕ್ಸೈಡ್ ಬಬಲ್ಸ್ ಇರುತ್ತವೆ. ಹೀಗಾಗಿ ಕೂಲ್ ಡ್ರಿಂಕ್ಸ್ ಹೊಟ್ಟೆಗೆ ತಲುಪಿದ ಕೂಡಲೇ ಅದು ಹೊಟ್ಟೆ ಉಬ್ಬರಕ್ಕೆ ಕಾರಣವಾಗುತ್ತದೆ.
ಚೂಯಿಂಗ್ ಗಮ್ ಜಗಿಯುತ್ತಿರುವಾಗ ಅದರ ರಸಕ್ಕಿಂತ ಹೆಚ್ಚಾಗಿ ಗಾಳಿ ನಿಮ್ಮ ಹೊಟ್ಟೆ ಸೇರುತ್ತಿರುತ್ತದೆ. ಹಾಗೆಯೇ ಸ್ಟ್ರಾ ಮೂಲಕ ಜ್ಯೂಸ್ನ್ನು ಹೀರುವಾಗಲೂ ಜ್ಯೂಸ್ ಜತೆಗೆ ಗಾಳಿ ನಮ್ಮ ಹೊಟ್ಟೆಯನ್ನು ಸೇರುತ್ತಿರುತ್ತದೆ. ಇದು ಹೊಟ್ಟೆ ಉಬ್ಬರ ಬರಲು ಕಾರಣವಾಗುತ್ತದೆ. ಮೊಸರು, ಉಪ್ಪಿನಕಾಯಿಯನ್ನು ಹೆಚ್ಚು ಸೇವಿಸುವುದು ಒಳ್ಳೆಯದಲ್ಲ. ಇದು ಹೊಟ್ಟೆಯಲ್ಲಿರುವ ಆಹಾರ ಬೇಗ ಕರಗುವಂತೆ ಮಾಡುತ್ತದೆ. ಇದರಿಂದ ಸಹಜವಾಗಿ ಹೊಟ್ಟೆ ಖಾಲಿಯಾಗಿ ಹೊಟ್ಟೆ ಉಬ್ಬರದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಫಾಸ್ಟ್ ಫುಡ್ಗಳಿಂದ ದೂರವಿರುವುದು ಒಳ್ಳೆಯದು
Image Credits : Down To Earth
ಸ್ನಾಕ್ಸ್ ಗಳು ಅಥವಾ ಹೆಚ್ಚಿನ ಪ್ರಮಾಣದಲ್ಲಿ ಸೋಡಿಯಂ ಬಳಕೆ ಮಾಡಿರುವ ಫುಡ್ ಹೊಟ್ಟೆ ಉಬ್ಬರಕ್ಕೆ ಕಾರಣವಾಗುತ್ತದೆ. ಇಂಥಹಾ ಆಹಾರದ ಸೇವನೆಯಿಂದ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಹೊಟ್ಟೆ ಉಬ್ಬರವಾದಂತೆ ಅನುಭವವಾಗಲು ಆರಂಭವಾಗುತ್ತದೆ. ಫಾಸ್ಟ್ ಫುಡ್ ಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡುವುದು ಒಳ್ಳೆಯದು. ಸೋಡಿಯಂನ್ನು ಅಧಿಕವಾಗಿ ಬಳಸುವ ಆಹಾರಗಳಿಂದಲೂ ದೂರವಿರಿ.
ಹೊಟ್ಟೆ ಉಬ್ಬರಕ್ಕೆ ಮನೆಮದ್ದಿನ ಪರಿಹಾರ:
Featured Image Credits : Express.co.uk
ಹೊಟ್ಟೆ ಉಬ್ಬರ ಬಂದಾಗ ಪ್ರತಿ ಬಾರಿಯೂ ಮಾತ್ರೆಗಳನ್ನು ಸೇವಿಸುವ ಬದಲು ಮನೆಮದ್ದಿನ ಮೊರೆಹೋಗುವುದು ತುಂಬಾ ಒಳ್ಳೆಯದು. ಯಾವಾಗಲೂ ಊಟಕ್ಕೆ ಮೊದಲು ಕನಿಷ್ಟ ಒಂದು ಗ್ಲಾಸ್ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಹೆಚ್ಚು ನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ಹೊಟ್ಟೆಯಲ್ಲಿ ಸೇರಿರುವ ಗ್ಯಾಸ್ನ್ನು ಕಡಿಮೆ ಮಾಡಲು ಹರ್ಬಲ್ ಪಾನೀಯಗಳು ಅತ್ಯುತ್ತಮ.
ಜೇನು ಮತ್ತು ದಾಲ್ಚಿನ್ನಿಯನ್ನು ಸೇವಿಸುವುದರಿಂದ ಹೊಟ್ಟೆ ಉಬ್ಬರದ ಸಮಸ್ಯೆ ಸ್ಪಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಒಂದು ಲೋಟ ನೀರಿಗೆ ಒಂದು ಚಮಚ ಅಡುಗೆ ಸೋಡಾ ಹಾಗೂ ಅರ್ಧ ಹೋಳು ನಿಂಬೆರಸವನ್ನು ಚೆನ್ನಾಗಿ ಹಿಂಡಿ ಕುಡಿದರೆ ಗ್ಯಾಸ್ ಟ್ರಬಲ್ ಸಮಸ್ಯೆ ಪರಿಹಾರವಾಗುತ್ತದೆ. ಕೊತ್ತಂಬರಿ ಬೀಜ ಮತ್ತು ಒಣಶುಂಠಿಯನ್ನು ಚೆನ್ನಾಗಿ ಜಜ್ಜಿ ಕುಡಿಯುವ ನೀರಿಗೆ ಬೆರೆಸಿ, ಇದಕ್ಕೆ ಸ್ಪಲ್ಪ ಜೇನುತುಪ್ಪ ಸೇರಿಸಿ ಸಹ ತಿನ್ನುವುದು ಒಳ್ಳೆಯದು. ಎರಡು ಲೋಟ ನೀರನ್ನು ಚೆನ್ನಾಗಿ ಕಾಯಿಸಿ, ಜೀರಿಗೆ ಹಾಕಿ ಕುದಿಸಿ ನಿಯಮಿತವಾಗಿ ಸೇವಿಸುವುದರಿಂದ ಗ್ಯಾಸ್ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv
June 15, 2021 at 02:32PM