ಕೋರವಂಗಲದ ಸುಂದರ ಬುಚೇಶ್ವರ ದೇವಸ್ಥಾನ, ಒಂದು ಅದ್ಭುತ ಹೊಯ್ಸಳ ಕಲಾಕೃತಿ
Image Credits : Findmessages.com
ಭಾರತದಲ್ಲಿ ಅಸಂಖ್ಯಾತ ಪುರಾತನ ದೇವಾಲಯಗಳಿವೆ. ವಿಭಿನ್ನ ಕೆತ್ತನೆ, ಕುಸರಿ ಮತ್ತು ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲ್ಪಟ್ಟಿರುವ ದೇವಾಲಯಗಳನ್ನು ನಾವಿಲ್ಲಿ ನೋಡಬಹುದು. ಭಾರತದ ಶ್ರೀಮಂತ ಪರಂಪರೆ, ಸಂಸ್ಕೃತಿ, ಆಚಾರ-ವಿಚಾರವನ್ನು ಈ ದೇವಾಲಯಗಳು ಪ್ರತಿನಿಧಿಸುತ್ತವೆ. ಅತ್ಯಪೂರ್ವ ಕೆತ್ತನೆ ಕೆಲಸ ಮಾಡಿರುವ ಕಂಬಗಳು, ಮಂಟಪಗಳು, ಅದ್ಭುತ ಶೈಲಿಯ ಗೋಪುರಗಳು ನಿಬ್ಬೆರಗಾಗಿಸುತ್ತವೆ. ಆದರೆ, ಭಾರತದಲ್ಲಿ ಅದೆಷ್ಟೋ ಇಂಥಹಾ ರಾಜಪರಂಪರೆಯ ದೇವಸ್ಥಾನಗಳು ಶಿಥಿಲಾವಸ್ಥೆಯಲ್ಲಿವೆ. ರಾಜರ ಕಾಲದಲ್ಲಿ ನಿರ್ಮಿಸಿರುವಂತಹಾ ಇಂತಹಾ ದೇಗುಲಗಳು ಗತವೈಭವವನ್ನು ಸಾರುತ್ತಾ, ಯಾವುದೇ ರೀತಿಯಲ್ಲಿ ಅಭಿವೃದ್ಧಿಯಾಗದೆ ಉಳಿದುಕೊಂಡಿವೆ.
ಭಾರತ ಐತಿಹಾಸಿಕ ದೇವಾಲಯಗಳ ನೆಲೆಯಾಗಿದೆ. ಇಲ್ಲಿ ಸಾವಿರ ಸಾವಿರ ವರ್ಷಗಳಿಗೂ ಹಿಂದಿನ ಅನೇಕ ದೇವಾಲಯಗಳಿವೆ. 1000 ವರ್ಷಗಳಿಗೂ ಹಿಂದಿನ ಅದೆಷ್ಟೋ ಅದ್ಭುತ ರಚನೆಗಳು ಹೆಚ್ಚು ಅಭಿವೃದ್ಧಿಗೊಳ್ಳದೆ, ಶಿಥಿಲವಾಗಿ ಗುರುತಿಸದೇ ಉಳಿದುಕೊಂಡಿವೆ. ಅದರಲ್ಲೊಂದು ಹಾಸನದ ಕೋರವಂಗಲದ ಬುಚೇಶ್ವರ ದೇವಸ್ಥಾನ. ದೇವಾಲಯಗಳ ಗೋಡೆಗಳು ಮತ್ತು ಸ್ತಂಭಗಳ ಮೇಲೆ ಸಂಕೀರ್ಣವಾದ ಮಾದರಿಗಳು ಮತ್ತು ಸುಂದರವಾದ ವಿನ್ಯಾಸಗಳ ಕೆತ್ತನೆ ಕೆಲಸಗಳು ಒಳಗೊಂಡಿವೆ. ಆ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ವಾಸ್ತುಶಿಲ್ಪದ ಸೌಂದರ್ಯವನ್ನು ಪ್ರದರ್ಶಿಸುತ್ತವೆ. ಬನ್ನಿ ಆ ದೇವಾಲಯದ ಬಗ್ಗೆ ಇನ್ನಷ್ಟು ತಿಳಿಯೋಣ
ಕೋರವಂಗಲದ ಬುಚೇಶ್ವರ ದೇವಾಲಯ
Image Credits : Sanskriti Magzine
ಕರ್ನಾಟಕದ ಹಾಸನ ಜಿಲ್ಲೆಯ ಕೋರವಂಗಲದಲ್ಲಿ ಬುಚೇಶ್ವರ ದೇವಾಲಯವಿದೆ. ಇದನ್ನು ಬುಸೇಶ್ವರ ದೇವಸ್ಥಾನವೆಂದೂ ಕರೆಯುತ್ತಾರೆ. ಈ ದೇವಸ್ಥಾನ ಸಂಪೂರ್ಣವಾಗಿ ಹೊಯ್ಸಳ ಕಲಾತ್ಮಕತೆಯಲ್ಲಿ ನಿರ್ಮಾಣಗೊಂಡಿದೆ. ಈ ದೇವಾಲಯವನ್ನು ಕ್ರಿ.ಶ 1173ರಲ್ಲಿ ಬುಚಿರಾಜ ಎಂಬವನು ನಿರ್ಮಿಸಿದನು ಎಂದು ಹೇಳಲಾಗುತ್ತಿದೆ. ಹೀಗಾಗಿ ಈ ದೇವಸ್ಥಾನಕ್ಕೆ ಬುಚೇಶ್ವರ ಎಂಬ ಹೆಸರು ಬಂದಿದೆ. ಬುಚಿರಾಜ ಹೊಯ್ಸಳ ದೊರೆ ಎರಡನೇ ಬಲ್ಲಾಳ, ವೀರ ಬಲ್ಲಾಳನ ಆಳ್ವಿಕೆಯ ಕಾಲದಲ್ಲಿ ಆತನ ಮಂತ್ರಿಯಾಗಿದ್ದನು. 2ನೇ ವೀರಬಲ್ಲಾಳ ರಾಜರ ಪಟ್ಟಾಭಿಷೇಕ ಸಂಭ್ರಮವನ್ನು ಆಚರಿಸಲು ಬುಚಿರಾಜ ನಿರ್ಮಿಸಿದ ಎಂದು ಹೇಳಲಾಗುತ್ತದೆ..
ಹೊಯ್ಸಳ ವಾಸ್ತುಶಿಲ್ಪದಿಂದ ನಿರ್ಮಿಸಲ್ಪಟ್ಟಿರುವ ಬುಚೇಶ್ವರ ದೇವಾಲಯ ತನ್ನದೇ ಆದ ವಿಶಿಷ್ಟತೆಯಿಂದ ಎಲ್ಲೆಡೆ ಹೆಸರುವಾಸಿಯಾಗಿದೆ. ಈ ದೇಗುಲ 22 ಕಂಬಗಳ ಮುಖಮಂಟಪ, 4 ಕಂಬಗಳುಳ್ಳ ನವರಂಗ, ಸುಖನಾಸಿ ಮತ್ತು ಗರ್ಭಗೃಹಗಳನ್ನು ಒಳಗೊಂಡಿದೆ. ಈ ದೇವಾಲಯದ ವಿಶೇಷತೆಯೆಂದರೆ ಸೂರ್ಯನಾರಾಯಣ ದೇವರ ಗರ್ಭಗುಡಿ, ಗರ್ಭಗುಡಿಗೆ ಮುಖಮಾಡಿ ಮತ್ತು ಮುಖಮಂಟಪಕ್ಕೆ ತಾಗಿಕೊಂಡೇ ಇದೆ. ಹೀಗಾಗಿ ದೇವಾಲಯದ ಪ್ರವೇಶದ್ವಾರ ಮುಂದಿನಿಂದ ಇರದೇ ಎರಡೂ ಪಾರ್ಶ್ವಗಳಿಂದ ಇದೆ.
ಏಕಕೂಟ ರಚನೆಯಲ್ಲಿ ನಿರ್ಮಾಣವಾದ ದೇವಾಲಯ
Image credits : Journey of Life
ಬುಚೇಶ್ವರ ದೇವಸ್ಥಾನ ಏಕಕೂಟ ರಚನೆಯ ಅನುಸಾರ ನಿರ್ಮಾಣವಾಗಿದೆ. ಈ ದೇವಾಲಯದ ಹೊರಗೋಡೆಯಲ್ಲಿ ಪೌರಾಣಿಕ ಘಟನೆಗಳನ್ನು ಕೆತ್ತನೆಯ ಮೂಲಕ ಚಿತ್ರಿಸಲಾಗಿದೆ. ದೇವಸ್ಥಾನದ ಗೋಡೆಗಳಲ್ಲಿ ಕೃಷ್ಣ ದೇವರ ಚಿತ್ರಣಗಳಿವೆ. ಗೋಪುರದ ರಚನೆಯೂ ವಿಭಿನ್ನವಾಗಿದ್ದು, ಎಲ್ಲರ ಗಮನ ಸೆಳೆಯುವಂತಿದೆ. ದೇವಾಲಯದ ಎರಡೂ ಪ್ರಮುಖ ದ್ವಾರಗಳ ಇಕ್ಕೆಲಗಳಲ್ಲಿ ಸುಂದರ ಆನೆಗಳ ಕೆತ್ತನೆಯಿದ್ದು, ಎಲ್ಲರ ಗಮನಸೆಳೆಯುವಂತಿದೆ. ದೇವಸ್ಥಾನದ ಒಳಗೆ, ಸಣ್ಣ ಸಣ್ಣ ಮಂಟಪಗಳಿದ್ದು ದ್ರಾವಿಡ, ವೇಸರ, ಭೂಮಿಜಾ ಶೈಲಿಯಲ್ಲಿ ಇವು ನಿರ್ಮಿಸಲ್ಪಟ್ಟಿವೆ.
ಬುಚೇಶ್ವರ ದೇವಾಲಯದ ಇನ್ನೊಂದು ವಿಶಿಷ್ಟತೆ, ಗರ್ಭಗುಡಿಯಲ್ಲಿರುವ ಶಿವಲಿಂಗದ ಮೇಲೆ ಸ್ವರ್ಣರಂಗಿನ ನಾಗನ ಹೆಡೆಯಿದೆ. ನವರಂಗದ ಛಾವಣಿಯಲ್ಲಿ ಅತ್ಯದ್ಭುತವೆನಿಸುವ ಕೆತ್ತನೆಗಳಿವೆ. ನವರಂಗದ ದ್ವಾರದಲ್ಲಿ 5 ಕವಾಟಗಳಿದ್ದು ವೈವಿಧ್ಯತೆಯ ಕೆತ್ತನೆ ಕೆಲಸವನ್ನು ನೋಡಬಹುದಾಗಿದೆ. ನವರಂಗ ಮತ್ತು ಸೂರ್ಯನಾರಾಯಣ ದೇವರ ಗರ್ಭಗುಡಿಗಳ ದ್ವಾರಗಳ ದ್ವಾರಪಾಲಕರನ್ನು ಸುಂದರವಾಗಿ ಕೆತ್ತಲಾಗಿದೆ. ಮುಖಮಂಟಪದಲ್ಲಿ ಸುತ್ತಲೂ ಕುಳಿತುಕೊಳ್ಳಲು ವ್ಯವಸ್ಥೆಯಿದ್ದು, ಚೆನ್ನೆಮಣೆಯಂತಹ ಆಟಗಳನ್ನು ಆಡಲು ಕಲ್ಲಿನ ಆಸನದಲ್ಲೇ ಬೇಕಾದ ಹಾಗೆ ವ್ಯವಸ್ಥೆ ಮಾಡಲಾದ ಕುರುಹುಗಳಿವೆ.
ಕಾಲಭೈರವ ದೇವರ ಗುಡಿ
Image Credits : Tripadvisor
ಬುಚೇಶ್ವರ ದೇವಾಲಯದ ಎದುರಲ್ಲೇ ಕಾಲಭೈರವ ದೇವರ ಗುಡಿಯಿದೆ. ಮಾತ್ರವಲ್ಲ ಸರಸ್ವತಿ, ದುರ್ಗಾ, ಮಹೇಶ್ವರ, ನರಸಿಂಹ, ಬ್ರಹ್ಮ , ವೇಣುಗೋಪಾಲವನ ವಿಗ್ರಹವನ್ನು ಈ ದೇವಾಲಯದಲ್ಲಿ ನೋಡಬಹುದು. ಬುಚೇಶ್ವರ ದೇವಸ್ಥಾನದ ಸಮೀಪವೇ ಇನ್ನೆರಡು ದೇವಾಲಯಗಳಿದ್ದು, ಇವು ಶಿಥಿಲಾವಸ್ಥೆಯಲ್ಲಿವೆ. ಬುಚೀಶ್ವರನ ಇಬ್ಬರು ಅಣ್ಣಂದಿರಾದ ಗೋವಿಂದ ಹಾಗೂ ನಕಾ ಎಂಬವರು ಈ ಎರಡು ದೇಗುಲವನ್ನು ನಿರ್ಮಿಸಿದರು ಎಂದು ಹೇಳಲಾಗುತ್ತದೆ. ಬುಚಿರಾಜನ ಸಹೋದರನು ಕ್ರಿ.ಶ. 1160ರಲ್ಲಿ ಕಟ್ಟಿಸಿರುವ ನಕೇಶ್ವರ ಮತ್ತು ಗೋವಿಂದೇಶ್ವರ ದೇವಾಲಯಗಳಿದ್ದು, ಸದ್ಯ ಪಾಳು ಬೀಳುತ್ತಿವೆ.
12ನೇ ಶತಮಾನದ ಹೊಯ್ಸಳ ವಾಸ್ತುಶಿಲ್ಪದ ಸರಳ ಮತ್ತು ಸೊಗಸಾದ ಮಾದರಿಯ ದೇವಾಲಯ ಕರ್ನಾಟಕದಲ್ಲಿದೆ ಅನ್ನೋದು ನಮ್ಮ ಹೆಮ್ಮೆ. ಬುಚೇಶ್ವರ ದೇವಾಲಯ, ಹಾಸನ ನಗರದಿಂದ 10 ಕಿ.ಮೀ ದೂರದಲ್ಲಿರುವ ಕೊರವಂಗಲ ಗ್ರಾಮದಲ್ಲಿದೆ. ಈ ದೇವಾಲಯವನ್ನು ಭಾರತೀಯ ಪುರಾತತ್ವ ಇಲಾಖೆಯಿಂದ ರಾಷ್ಟ್ರೀಯ ಮಹತ್ವವಿರುವ ಸ್ಮಾರಕವಾಗಿ ರಕ್ಷಿಸಲಾಗಿದೆ. ಅಪರೂಪದ ಸೂಕ್ಷ್ಮ ಕಲಾಕೃತಿಯ ಕೆತ್ತನೆಯನ್ನು ಹೊಂದಿರುವ ಈ ದೇಗುಲ ಹಾಸನ ಜಿಲ್ಲೆಯ ಪ್ರಮುಖ ಆಕರ್ಷಣಾ ಕೇಂದ್ರ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3vS4fBl
June 04, 2021 at 09:18AM