ಡಾರ್ಕ್ ಚಾಕೋಲೇಟ್ಸ್ ಬಗ್ಗೆ ನೀವು ತಿಳಿದಿರದ ವಿಷಯಗಳಿವು
Featured Image Credits : istock
ಡಾರ್ಕ್ ಚಾಕೋಲೇಟ್ಸ್ ಅನ್ನು ಹಲವಾರು ಮಂದಿ ಇಷ್ಟಪಟ್ಟು ತಿನ್ನುತ್ತಾರೆ. ಬರ್ತ್ ಡೇ, ಫೆಸ್ಟಿವಲ್, ಪ್ರಮೋಶನ್ ಅಂತ ಗಿಫ್ಟ್ ಸಹ ನೀಡುತ್ತಾರೆ. ಈ ಡಾರ್ಕ್ ಚಾಕೋಲೇಟ್ಸ್ ನಲ್ಲಿ ಹಲವು ವೆರೈಟಿಗಳೂ ಸಿಗುತ್ತವೆ. ಕೆಲವೊಂದು ಪ್ಲೈನ್ ಚಾಕೋಲೇಟ್ಸ್ ಆಗಿದ್ದರೆ, ಇನ್ನು ಕೆಲವು ಚಾಕೋಲೇಟ್ಸ್ ಗಳು ಬಾದಾಮಿ, ಗೋಡಂಬಿ, ಪಿಸ್ತಾ, ಒಣಖರ್ಜೂರ ಹೀಗೆ ಹಲವು ಡ್ರೈಫ್ರೂಟ್ಸ್ ಗಳನ್ನು ಒಳಗೊಂಡಿರುತ್ತವೆ. ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನೋ ಕಾರಣಕ್ಕೆ ಪೋಷಕರು, ಮಕ್ಕಳು ಚಾಕೋಲೇಟ್ ತಿನ್ನುವುದನ್ನು ತಡೆಯುತ್ತಾರೆ. ಹೀಗಾಗಿ ಡಾರ್ಕ್ ಚಾಕೋಲೇಟ್ ತಿನ್ನುವುದು ಉತ್ತಮವಾ, ಇಲ್ಲ ಆರೋಗ್ಯಕ್ಕೆ ಹಾನಿಕಾರಕನಾ ಅನ್ನೋ ಬಗ್ಗೆ ಹಲವರಿಗೆ ಗೊಂದಲಗಳಿವೆ. ಡಾರ್ಕ್ ಚಾಕೋಲೇಟ್ಸ್ ಬಗ್ಗೆ ನೀವು ತಿಳಿದಿರದ ಕೆಲವೊಂದು ವಿಚಾರಗಳು ಇಲ್ಲಿವೆ.
ಡಾರ್ಕ್ ಚಾಕೋಲೇಟ್ಸ್ ತಿನ್ನುವುದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಉತ್ತಮ ಅಂತಾರೆ ಆಹಾರತಜ್ಞರು. ಯಾಕೆಂದರೆ, ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ ಬೇಕಾದ ಫೈಬರ್, ಆಂಟಿ ಆಕ್ಸಿಡೆಂಟ್ ಗಳಿರುತ್ತವೆ, ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮಾತ್ರವಲ್ಲ ಇದು ಹೃದಯ ಸಂಬಂಧಿ ಕಾಯಿಲೆ, ರಕ್ತದೊತ್ತಡ ನಿಯಂತ್ರಣದಲ್ಲಿಡಲು ನೆರವಾಗುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ ಸೌಂದರ್ಯ ವರ್ಧನೆಗೂ ಈ ಡಾರ್ಕ್ ಚಾಕೋಲೇಟ್ ಗಳ ಸೇವನೆ ಸಹಕಾರಿ. ಆದರೆ, ನೆನಪಿರಲಿ ಮಿಲ್ಕ್ ಚಾಕೊಲೇಟ್ ಗಳಿಂದ ಈ ಯಾವುದೇ ಪ್ರಯೋಜನ ಸಿಗುವುದಿಲ್ಲ.
ಹೃದಯ ಸಂಬಂಧಿ ಕಾಯಿಲೆ ಬರುವ ಸಾಧ್ಯತೆ ಕಡಿಮೆ
Image Credits : istock
ಅಧ್ಯಯನಗಳ ಪ್ರಕಾರ ಹೆಚ್ಚು ಡಾರ್ಕ್ ಚಾಕೋಲೇಟ್ಸ್ ತಿನ್ನುವವರ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ. ಈ ಚಾಕೋಲೇಟ್ಸ್ ತಿನ್ನುವವರಿಗೆ ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಕಡಿಮೆಯೆಂದು ಹೇಳಲಾಗುತ್ತದೆ. ಡಾರ್ಕ್ ಚಾಕೊಲೇಟ್ ನಲ್ಲಿ ಹೃದಯದ ರಕ್ತನಾಳದ ಕಾರ್ಯವನ್ನು ಹೆಚ್ಚಿಸುವ ಗುಣಗಳಿವೆ. ಇದು ಅನೇಕ ರೀತಿಯ ಗಂಭೀರ ಕಾಯಿಲೆಗಳಿಂದ ಹೃದಯವನ್ನು ರಕ್ಷಿಸುತ್ತದೆ. ಡಾರ್ಕ್ ಚಾಕೊಲೇಟ್ ರಕ್ತದ ಹರಿವನ್ನು ಸುಗಮಗೊಳಿಸುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ.
ವಾರದಲ್ಲಿ ಐದು ಬಾರಿ ಡಾರ್ಕ್ ಚಾಕೋಲೇಟ್ಸ್ ತಿನ್ನುವವರಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಶೇಕಡಾ 57ರಷ್ಟು ಕಡಿಮೆಯಾಗಿದೆ ಎಂದು ಅಧ್ಯಯನ ತಿಳಿಸಿದೆ. ಅಷ್ಟೇ ಅಲ್ಲ ಡಾರ್ಕ್ ಚಾಕೋಲೇಟ್ ಸೇವನೆ ಸ್ಟ್ರೋಕ್ ಉಂಟಾಗುವ ಪ್ರಮಾಣವನ್ನು ಸಹ ತಗ್ಗಿಸುತ್ತದೆ.
ಮೆದುಳು ಚುರುಕಾಗಿ ಕಾರ್ಯನಿರ್ವಹಿಸುತ್ತದೆ
Image Credits : Gettyimages
ಡಾರ್ಕ್ ಚಾಕಲೇಟ್ನಲ್ಲಿರುವ ಕೋಕಾ ಮೆದುಳು ಚುರುಕಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಚಾಕೋಲೇಟ್ ಸೇವೆನೆ ಮೆದುಳಿನಲ್ಲಿರುವ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದ ಮೂಡ್ ಚೆನ್ನಾಗಾಗುತ್ತದೆ, ಹೀಗಾಗಿ ಮೆದುಳು ಚುರುಕಾಗಿ ಕಾರ್ಯನಿರ್ವಹಿಸಲು ಶುರು ಮಾಡುತ್ತದೆ. 70 ಗ್ರಾಂ ಕೋಕೋ ಅಂಶವುಳ್ಳ 48 ಗ್ರಾಂನ ಚಾಕೋಲೇಟ್ ತಿನ್ನುವುದರಿಂದ ಮೆದುಳಿನ ನ್ಯೂರೋಪ್ಲಾಸ್ಟಿಸಿಟಿ ಹೆಚ್ಚಾಗುತ್ತದೆ. ಇದು ಮೆದುಳಿನ ಚುರುಕು, ನೆನಪಿನ ಶಕ್ತಿಯನ್ನು ಉತ್ತಮವಾಗಿಸುತ್ತದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.
ರಕ್ತದಲ್ಲಿ ಸಕ್ಕರೆ ಅಂಶವನ್ನು ಹತೋಟಿಯಲ್ಲಿಡುತ್ತದೆ
Image credits : Alamy
ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುವುದರಿಂದ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ. ಹೀಗಾಗಿ ಮಧುಮೇಹದಂತಹಾ ಕಾಯಿಲೆಗಳು ಬರುವ ಸಾಧ್ಯತೆ ಕಡಿಮೆಯಾಗುತ್ತದೆ. ಡಾರ್ಕ್ ಚಾಕಲೇಟ್ ನಲ್ಲಿರುವ ಫ಼್ಲವೊನೈಡ್ ಗಳು ದೇಹವು ಇನ್ಸುಲಿನ್ ಅನ್ನು ಬಳಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.ಡಾರ್ಕ್ ಚಾಕಲೇಟ್ ನಲ್ಲಿರುವ ಕಡಿಮೆ ಗ್ಲೈಸೆಮಿಕ್ ಅಂಶ ರಕ್ತದಲ್ಲಿ ಸಕ್ಕರೆ ಅಂಶವನ್ನು ಹೆಚ್ಚು ಮಾಡುವುದಿಲ್ಲ.
ರಕ್ತದೊತ್ತಡ ಸಮಸ್ಯೆ ಇರುವವರು ಚಾಕೋಲೇಟ್ ಸೇವಿಸಿ
Image Credits : istock
ಜೀವನದಲ್ಲಿ ಮನುಷ್ಯನನ್ನು ಒತ್ತಡವು ಖಂಡಿತವಾಗಿ ಕಾಡುತ್ತಿರುತ್ತದೆ. ಅನೇಕ ಗಂಭೀರ ಕಾಯಿಲೆಗಳಿಗೆ ಒತ್ತಡವೇ ಮುಖ್ಯ ಕಾರಣ ಎನ್ನಬಹುದು. ಒತ್ತಡವನ್ನು ತಪ್ಪಿಸಲು ಡಾರ್ಕ್ ಚಾಕೊಲೇಟ್ ತುಂಬಾ ಸಹಾಯಕ. ಅಧಿಕ ರಕ್ತದೊತ್ತಡ ಸಮಸ್ಯೆ ಇರುವ ಜನರು ಡಾರ್ಕ್ ಚಾಕೊಲೇಟ್ ಸೇವಿಸಬಹುದು. ಡಾರ್ಕ್ ಚಾಕೊಲೇಟ್ ನಲ್ಲಿ ಮೆಗ್ನೀಷಿಯಮ್ ಅಂಶ ಕಂಡುಬರುತ್ತದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ
Image Credits : Roy Morsch/Getty Images
ಡಾರ್ಕ್ ಚಾಕೋಲೇಟ್ ಗಳು ಹೆಚ್ಚಾಗಿ ಡ್ರೈಫ್ರೂಟ್ಸ್ ನ್ನು ಒಳಗೊಂಡಿರುವುದರಿಂದ ಇದು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ ಅಂತಾರೆ ಆಹಾರತಜ್ಞರು. ಡಾರ್ಕ್ ಚಾಕೋಲೇಟ್ ಗಳು ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ ಅಗತ್ಯವಾದ ಫೈಬರ್ ಮತ್ತು ಮಿನರಲ್ ಅಂಶವನ್ನು ಒಳಗೊಂಡಿರುತ್ತವೆ. ಅಲ್ಲದೆ, ಡಾರ್ಕ್ ಚಾಕಲೇಟ್ ಆರೋಗ್ಯಕ್ಕೆ ಬೆಂಬಲಿಸುವ ವಿಟಮಿನ್ ಮತ್ತು ಖನಿಜಾಂಶಗಳನ್ನು ಹೊಂದಿರುತ್ತದೆ.ಡಾರ್ಕ್ ಚಾಕಲೇಟ್ ನಲ್ಲಿ ಪೊಟಾಶಿಯಂ,ಕಬ್ಬಿಣದ ಅಂಶ,ಮೆಗ್ನೀಷಿಯಂ ಮತ್ತು ತಾಮ್ರದ ಅಂಶವಿರುತ್ತದೆ.ತಾಮ್ರ ಮತ್ತು ಪೊಟಾಷಿಯಂ ಅಂಶ ಪಾರ್ಶ್ವವಾಯು ಮತ್ತು ಹೃದಯ ಸಂಬಂಧಿ ರೋಗಗಳಿಂದ ತಪ್ಪಿಸುತ್ತದೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
Image Credits : istock
ಡಾರ್ಕ್ ಚಾಕಲೇಟ್ನಲ್ಲಿರುವ ಆಂಟಿ ಆಕ್ಸಿಡೆಂಟ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೆಚ್ಚು ಕೋಕೋ ಒಳಗೊಂಡಿರುವ ಚಾಕೋಲೇಟ್ ನ್ನು ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ. ಡಾರ್ಕ್ ಚಾಕೋಲೇಟ್ಸ್ ಹಾಗೂ ಕೋಕೋದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೋಗ ನಿರೋಧಕ ಗುಣಗಳಿವೆ ಎಂದು ತಿಳಿದುಬಂದಿದೆ.
ಸೌಂಧರ್ಯಕ್ಕೂ ಡಾರ್ಕ್ ಚಾಕೋಲೇಟ್ಸ್ ಸೇವನೆ ಒಳ್ಳೆಯದು
Image Credits : Jamie Grill Atlas/Stocksy
ಕೇವಲ ಆರೋಗ್ಯಕ್ಕೆ ಮಾತ್ರವಲ್ಲ, ಸೌಂದರ್ಯಕ್ಕೂ ಡಾರ್ಕ್ ಚಾಕೋಲೇಟ್ಸ್ ಗಳ ಸೇವನೆ ಒಳ್ಳೆಯದು. ಬಿಸಿಲಿನಲ್ಲಿ ಹೋಗುವ ಟ್ಯಾನ್ ಪರಿಣಾಮ ಡಾರ್ಕ್ ಚಾಕೋಲೇಟ್ಸ್ ನಿಯಮಿತವಾಗಿ ತಿನ್ನುವವರಲ್ಲಿ ಕಡಿಮೆಯಿರುತ್ತದೆ. ಅಲ್ಲದೆ ಈ ಚಾಕೋಲೇಟ್ ಸೇವನೆ ಚರ್ಮದಲ್ಲಿ ರಕ್ತ ಪರಿಚಲನೆ ಹೆಚ್ಚು ಮಾಡಿ ಚರ್ಮ ಡಿಹೈಡ್ರೇಶನ್ ಆಗದಂತೆ ತಡೆಯುತ್ತದೆ. ತೂಕ ಇಳಿಸಲು ಡಾರ್ಕ್ ಚಾಕೋಲೇಟ್ಸ್ ಸೇವನೆ ಉತ್ತಮ.
ವೆಕೇಷನ್ ನಲ್ಲಿ ಬೀಚ್ ಗೆ ಹೋಗುವ ಪ್ಲಾನ್ ಮಾಡಿರುವವರು ಕೆಲವು ವಾರಗಳ ಮೊದಲೇ ಚಾಕೋಲೇಟ್ ಸೇವಿಸುವುದು ಒಳ್ಳೆಯದು. ಅಲ್ಲದೆ, ವಯಸ್ಸಾದ ಪರಿಣಾಮವನ್ನು ನಿಯಂತ್ರಿಸುವ ವಿಶೇಷ ಗುಣಗಳನ್ನು ಡಾರ್ಕ್ ಚಾಕೊಲೇಟ್ ಹೊಂದಿದೆ. ಇದು ಅ್ಯಂಟಿ ಏಜಿಂಗ್ ಅಂಶಗಳನ್ನು ಹೊಂದಿದ್ದು, ಈ ಮೂಲಕ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು. ಚಾಕೋಲೇಟ್ ನಲ್ಲಿ ಇಷ್ಟೊಂದು ಗುಣಗಳಿದೆ ಅಂದ್ಮೇಲೆ ಚಾಕೋಲೇಟ್ ಪ್ರಿಯರಿಗೆ ಇನ್ನು ಕಷ್ಟಾನೇ ಇಲ್ಲ. ಎಷ್ಟು ಚಾಕ್ಲೇಟ್ ತಿನ್ತೀಯಾ ಅಂದ್ರೆ ಡಾರ್ಕ್ ಚಾಕೋಲೇಟ್ಸ್ ತಿನ್ನೋದ್ರಿಂದಾಗೋ ಬೆನಿಫಿಟ್ಸ್ ನ್ನು ಹೇಳಿಬಿಡಿ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/2TIHcuz
June 17, 2021 at 05:10PM