ಯಾವ ದೇವರಿಗೆ ಯಾವ ಎಣ್ಣೆಯ ದೀಪ ಹಚ್ಚಬೇಕು..?

Image Credits : Happyshappy
ಹಿಂದೂ ಸಂಪ್ರದಾಯದಲ್ಲಿ ಮುಂಜಾನೆ ಹಾಗೂ ಮುಸ್ಸಂಜೆಯ ಹೊತ್ತು ದೇವರಿಗೆ ದೀಪ ಹಚ್ಚುವ ಪದ್ಧತಿಯಿದೆ. ದೇವರಿಗೆ ದೀಪ ಹಚ್ಚುವುದರಿಂದ ಒಳಿತಾಗುತ್ತದೆ. ಸುತ್ತಮುತ್ತಲಿನ ಪರಿಸರದಲ್ಲಿ ಪಾಸಿಟಿವ್ ಎನರ್ಜಿ ತುಂಬಿರುತ್ತದೆ ಎಂದು ಹೇಳುತ್ತಾರೆ. ದೇವರಿಗೆ ದೀಪ ಹಚ್ಚುವುದು ನಮ್ಮ ಮನಸ್ಸು ಮತ್ತು ಹೃದಯದ ಕತ್ತಲೆಯನ್ನು ತೆಗೆದುಹಾಕುವುದರ ಸಂಕೇತ. ದೀಪದ ಬೆಳಕು ಮನಸ್ಸಲ್ಲಿರುವ ಕಲ್ಮಶವನ್ನು ದೂರವಾಗಿಸಿ, ಶುದ್ಧೀಕರಿಸಿ ನಮ್ಮ ಮನಸ್ಸನ್ನು ಪರಿಶುದ್ಧಗೊಳಿಸುವುದರ ಸಂಕೇತ ಎಂದು ಹಿರಿಯರು ಹೇಳುತ್ತಾರೆ.
ಎಣ್ಣೆಯ ಆಳವು ಜ್ಞಾನದ ಬೆಳಕನ್ನು ತೋರಿಸುತ್ತದೆ. ಅದು ಅಜ್ಞಾನದ ಕತ್ತಲೆಯನ್ನು ಅಳಿಸಿ ಹಾಕುತ್ತದೆ. ದೀಪ ತಾನು ಹೊಳೆಯುವುದರ ಜೊತೆಗೆ ತನ್ನ ಸುತ್ತಲಿರುವವರನ್ನು ಹೊಳೆಯುವಂತೆ ಮಾಡುತ್ತದೆ. ಪಂಚಭೂತಗಳಾದ ಅಗ್ನಿ, ನೀರು, ವಾಯು, ಆಕಾಶ,ಭೂಮಿ ನಡುವೆ ಇದ್ದು ಅವುಗಳಿಗೆಲ್ಲಾ ಬೆಳಕು ಮತ್ತು ಶಾಖವನ್ನು ಕೊಡುತ್ತದೆ. ಮುಂಜಾನೆ, ಮಧ್ಯಾಹ್ನ, ಮುಸ್ಸಂಜೆ ಮೂರು ಕಾಲಗಳು. ಮಧ್ಯಾಹ್ನದ ಹೊತ್ತಿಗೆ ಸೂರ್ಯನು ಪ್ರಕಾಶಮಾನವಾಗಿ ಹೊಳೆಯುತಿರುತ್ತಾನೆ. ಆದ್ದರಿಂದ ದೀಪದ ಅಗತ್ಯವಿಲ್ಲ. ಆದರೆ ಮುಂಜಾನೆ ಮತ್ತು ಮುಸ್ಸಂಜೆ ಕತ್ತಲಿರುವುದರಿಂದ ಬೆಳಕು ಪಸರಿಸಲು ದೀಪದ ಅಗತ್ಯವಿದೆ.
ಹಿಂದಿನ ಕಾಲದಲ್ಲಿ ಹಿರಿಯರು ಮುಸ್ಸಂಜೆ ಸಮಯದಲ್ಲಿ ದೇವರಿಗೆ ಮಾತ್ರವಲ್ಲ, ಮನೆಯ ಮುಂದೆ ಸಹ ದೀಪವನ್ನು ಬೆಳಗಿಸಿಡುತ್ತಿದ್ದರು. ತುಳಸಿ ಕಟ್ಟೆಯ ಮೇಲೆ, ಮನೆಯ ಹೊರಗಿನ ಚಾವಡಿಯ ಮೇಲೆ, ಕಿಟಕಿಯ ಮೇಲೆ, ಅರಳಿ ಕಟ್ಟೆಯ ಮೇಲೆ ಸಂಜೆ ಸಮಯದಲ್ಲಿ ದೀಪಗಳನ್ನು ಹಚ್ಚಿಡಲಾಗುತ್ತಿತ್ತು. ಆದರೆ ದಿನಗಳು ಕಳೆದಂತೆ ಈ ಸಂಪ್ರದಾಯ ಕಣ್ಮರೆಯಾಗುತ್ತಾ ಹೋಯಿತು. ಈಗ ಕೆಲವೇ ಕೆಲವು ಮನೆಗಳಲ್ಲಿ ಈ ಸಂಪ್ರದಾಯವನ್ನು ಪಾಲಿಸಲಾಗುತ್ತದೆ.
ದೀಪವನ್ನು ಬೆಳಗಿಸಲು ಬೇಕಾದ ಪ್ರಮುಖ ಅಂಶಗಳೆಂದರೆ ದೀಪ, ಬೆಂಕಿ ಕಡ್ಡಿ, ಬತ್ತಿ ಹಾಗೂ ತೈಲ. ದೇವರಿಗೆ ಎಲ್ಲಾ ರೀತಿಯ ತೈಲಗಳನ್ನು ಉಪಯೋಗಿಸಲಾಗುವುದಿಲ್ಲ. ಕೆಲವೊಂದು ವಿಧದ ತೈಲಗಳನ್ನು ಮಾತ್ರ ದೀಪ ಬೆಳಗಿಸಲು ಉಪಯೋಗಿಸಲಾಗುತ್ತದೆ. ಯಾವ ತೈಲಗಳನ್ನು ಪೂಜೆಯಲ್ಲಿ ಬಳಸಬೇಕು..? ಅದರ ಪ್ರಯೋಜನಗಳೇನು. ಯಾವ ದೇವರಿಗೆ ಯಾವ ರೀತಿಯ ಎಣ್ಣೆಯ ದೀಪ ಪ್ರಿಯವಾಗುತ್ತದೆ. ಇಲ್ಲಿದೆ ಹೆಚ್ಚಿನ ಮಾಹಿತಿ.
ಇದನ್ನು ಓದಿ : ವೈದ್ಯನಾಥ ಜ್ಯೋತಿರ್ಲಿಂಗ ದರ್ಶನಕ್ಕೆ ಜನ ಸಾಗರ..
ಯಾವ ದೇವರಿಗೆ ಯಾವ ಎಣ್ಣೆಯಲ್ಲಿ ದೀಪ ಪ್ರಿಯವಾಗುತ್ತದೆ..?

Featured Image Credits : Greaves India
ಅಗ್ನಿ ಪುರಾಣ ಹೇಳುವ ಪ್ರಕಾರ, ಶುದ್ಧ ಹಸುವಿನ ತುಪ್ಪ ಸುತ್ತಮುತ್ತಲಿನ ಸಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಶುದ್ಧ ಹಸುವಿನ ತುಪ್ಪವನ್ನು ಹೋಮ, ಹವನಾದಿಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಮನೆಯಲ್ಲಿ ಹಸುವಿನ ತುಪ್ಪದಿಂದ ದೀಪ ಹಚ್ಚಿದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಎಂದು ಹೇಳುತ್ತಾರೆ. ಹಸುವಿನ ತುಪ್ಪದಿಂದ ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ, ಸಂಪತ್ತು ಮತ್ತು ಸಂತೋಷ ನೆಲೆಯಾಗುತ್ತದೆ ಎಂಬ ನಂಬಿಕೆಯಿದೆ. ಅದರಲ್ಲೂ ಲಕ್ಷ್ಮಿಗೆ ತುಪ್ಪದ ದೀಪ ಪ್ರಿಯ ಎಂದು ಹೇಳಲಾಗುತ್ತದೆ
ತೆಂಗಿನ ಎಣ್ಣೆ ಭಗವಾನ್ ಗಣೇಶನಿಗೆ ಪ್ರಿಯವಾದ ಎಣ್ಣೆಯಾಗಿದೆ. ಆದ್ದರಿಂದ ಗಣೇಶನನ್ನು ಆರಾಧಿಸುವಾಗ ಅಥವಾ ಗಣೇಶನ ಪೂಜೆಯಲ್ಲಿ ಹೆಚ್ಚಾಗಿ ತೆಂಗಿನ ಎಣ್ಣೆಯನ್ನು ಉಪಯೋಗಿಸುತ್ತಾರೆ. ಅಷ್ಟು ಮಾತ್ರವಲ್ಲ, ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿಗಾಗಿ ಗಣೇಶನಿಗೆ ತೆಂಗಿನ ಎಣ್ಣೆಯ ದೀಪವನ್ನು ಹಚ್ಚಬೇಕು ಎಂದು ಹೇಳುತ್ತಾರೆ.
ಎಳ್ಳೆಣ್ಣೆ ದೀಪವು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಬಳಸುವ ಎಣ್ಣೆಗಳಲ್ಲಿ ಪ್ರಮುಖವಾದುದ್ದಾಗಿದೆ. ಶನಿಗೆ ಎಳ್ಳೆಣ್ಣೆಯೆಂದರೆ ಬಹಳ ಪ್ರೀತಿಯಾಗಿರುವ ಕಾರಣ ಶನಿ ಪೂಜೆಯಲ್ಲಿ ಎಳ್ಳೆಣ್ಣೆಯನ್ನು ಉಪಯೋಗಿಸುತ್ತಾರೆ. ಶನಿಗೆ ಎಳ್ಳೆಣ್ಣೆಯ ದೀಪವನ್ನು ಬೆಳಗುವುದರಿಂದ ಅಥವಾ ಹಚ್ಚುವುದರಿಂದ ಸಾಡೇಸಾತಿ ಶನಿ ದೋಷವು ನಿವಾರಣೆಯಾಗುತ್ತದೆ. ಗ್ರಹದೋಷಗಳಿಂದ ಮುಕ್ತಿ ಸಿಗುತ್ತದೆ ಎಂದು ಹೇಳುತ್ತಾರೆ. ಅಲ್ಲದೆ ಮನೆಯಲ್ಲಿ ಎಳ್ಳೆಣ್ಣೆ ದೀಪ ಹಚ್ಚುವುದರಿಂದ ನಕಾರಾತ್ಮಕ ಶಕ್ತಿಯು ದೂರಾಗುತ್ತದೆ ಎಂದು ಹೇಳಲಾಗುತ್ತದೆ.
ಇದನ್ನು ಓದಿ : ಬ್ರಹ್ಮ, ವಿಷ್ಣು, ಮಹೇಶ್ವರರು ನೆಲೆಸಿರುವ ಸ್ಥಳ ತ್ರ್ಯಂಬಕೇಶ್ವರ..
ಹರಳೆಣ್ಣೆಯನ್ನು ಸಹ ಆಧ್ಯಾತ್ಮಿಕ ಪೂಜೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ. ಹರಳೆಣ್ಣೆ ದೀಪ ಹಚ್ಚುವುದರಿಂದ ಫಲಪ್ರದ ಮದುವೆ ಜೀವನ ಮತ್ತು ಗಂಡ ಹೆಂಡತಿ ನಡುವೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಲು ಇದು ಸಹಾಯಮಾಡುತ್ತದೆ ಎನ್ನಲಾಗುತ್ತದೆ. ಅಲ್ಲದೆ, ಹರಳೆಣ್ಣೆಯ ದೀಪವನ್ನು ಹಚ್ಚಿದರೆ ಆ ಮನೆಯಲ್ಲಿ ಸಂತೋಷ, ಅಭಿವೃದ್ಧಿ, ಆಧ್ಯಾತ್ಮಿಕ ಬೆಳವಣಿಗೆ, ಸಮೃದ್ಧಿ ಮತ್ತು ಖ್ಯಾತಿಯು ಹೆಚ್ಚಾಗುತ್ತದೆ. ಸಂಬಂಧಗಳ ನಡುವಿನ ಬಾಂಧವ್ಯವನ್ನು ಹೆಚ್ಚಿಸುವ ಸಾಮರ್ಥ್ಯ ಹರಳೆಣ್ಣೆಯ ದೀಪಕ್ಕಿದೆ. ಆದ್ದರಿಂದ ಪೂಜೆಯಲ್ಲಿ ಹರಳೆಣ್ಣೆಯ ದೀಪವನ್ನು ಬೆಳಗಿಸಿ ಎಂದು ಹಿರಿಯರು ಹೇಳುತ್ತಾರೆ.
ಬೇವಿನ ಎಣ್ಣೆಯಿಂದ ದೇವರಿಗೆ ದೀಪ ಬೆಳಗುವುದರಿಂದ ಪರಾಶಕ್ತಿ ದೇವಿಯ ಅನುಗ್ರಹ ಹಾಗೂ ಕುಲದೇವತಾ ದೇವರ ಅನುಗ್ರಹ ನಿಮ್ಮ ಮೇಲಿರುತ್ತದೆ. ಬೇವಿನ ಎಣ್ಣೆಯ ದೀಪವನ್ನು ಮನೆಯಲ್ಲಿ ಹಚ್ಚುವುದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಎಂದು ಹೇಳುತ್ತಾರೆ. ಒಂದು ವೇಳೆ ನೀವು ಶತ್ರುಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಕೃಷ್ಣಾಷ್ಟಮಿಯಂದು 8 ಬೇವಿನ ಎಣ್ಣೆಯ ದೀಪವನ್ನು ಭೈರವನಿಗೆ ಬೆಳಗಿ ಆತನನ್ನು ಪೂಜಿಸಬೇಕು ಮತ್ತು ಸಹಸ್ರನಾಮವನ್ನು ಪಠಿಸಬೇಕು. ಇದರಿಂದ ಶತ್ರು ದೋಷ ದೂರಾಗುವುದು.
ಯಾವುದೇ ರೀತಿಯ ಆರ್ಥಿಕ ಲಾಭಕ್ಕಾಗಿ ನಿಯಮಿತ ರೂಪದಲ್ಲಿ ದೇವರ ಮನೆಯಲ್ಲಿ ತುಪ್ಪದ ದೀಪವನ್ನು ಹಚ್ಚಬೇಕು. ಜಾತಕದಲ್ಲಿ ದೋಷ ಕಂಡು ಬಂದರೆ ಭೈರವನ ಮುಂದೆ ಸಾಸಿವೆ ಎಣ್ಣೆ ದೀಪವನ್ನು ಹಚ್ಚಬೇಕು ಎಂದು ನಂಬಲಾಗುತ್ತದೆ. ಭಗವಂತ ಸೂರ್ಯನನ್ನು ಪ್ರಸನ್ನಗೊಳಿಸಲು ಹಾಗೂ ಕೃಪೆಗೆ ಪಾತ್ರರಾಗಲು ಸಾಸಿವೆ ಎಣ್ಣೆ ದೀಪವನ್ನು ಹಚ್ಚುವುದು ಒಳ್ಳೆಯದು. ಕಾರ್ತಿಕ ದೇವರ ಕೃಪೆಗಾಗಿ ಗೋವಿನ ಶುದ್ಧ ತುಪ್ಪದ ದೀಪವನ್ನು ಬಳಸಿಕೊಳ್ಳಬೇಕು ಎಂದು ಹೇಳುತ್ತಾರೆ.
ಇದನ್ನು ಓದಿ : ಶಿವ ಪಾವರ್ತಿ ವಿಶ್ರಾಂತಿ ಪಡೆಯುವ ಸ್ಥಳ ಓಂಕಾರೇಶ್ವರ..!
ಗಣೇಶನ ಕೃಪೆ ಪ್ರಾಪ್ತಿಗಾಗಿ ಮೂರು ಬತ್ತಿಯ ತುಪ್ಪದ ದೀಪ ಬೆಳಗುವುದು ಒಳ್ಳೆಯದು. ಲಕ್ಷ್ಮಿಯ ಪ್ರಸನ್ನತೆ ಗಳಿಸಲು ಏಳು ಬತ್ತಿಯ ದೀಪವನ್ನು ತುಪ್ಪದಲ್ಲಿ ಹಚ್ಚಬೇಕು. ಭಗವಂತ ವಿಷ್ಣುವಿನ ಕೃಪೆ ಪಡೆಯಲು ಹತ್ತು ಬತ್ತಿಯುಳ್ಳ ದೀಪವನ್ನು ಹಚ್ಚಬೇಕು.. ಕಡಲೇಕಾಯಿ ಎಣ್ಣೆ ದೀಪವನ್ನು ದೇವರಿಗೇ ಹಚ್ಚಲೇಬಾರದು ಎಂದು ಹೇಳುತ್ತಾರೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3wXLQ6Z
June 26, 2021 at 01:06PM