ಇಲ್ಲಿದೆ ಬೆಳೆಯುವ ನಂದಿಯ ಪ್ರತಿಮೆ..! ಅಚ್ಚರಿ ಮೂಡಿಸುತ್ತಿದೆ ಪರಶಿವನ ದೇವಾಲಯದ ಪವಾಡ
Featured Image Credits : mykurnool.online
ಭಾರತದಲ್ಲಿ ಪುರಾತನ ಐತಿಹ್ಯವಿರುವ ಸಾವಿರಾರು ದೇವಾಲಯಗಳಿವೆ. ಸ್ಥಳ ಪುರಾಣ, ವಿಭಿನ್ನತೆ, ಪವಾಡದಿಂದ ಪ್ರಸಿದ್ಧ ಹೊಂದಿವೆ. ದೇಶದಲ್ಲಿರುವ ಅದೆಷ್ಟೋ ದೇವಾಲಯಗಳಲ್ಲಿ ಮನುಷ್ಯನನ್ನು ನಿಬ್ಬೆರಗೊಳಿಸುವ ಅದೆಷ್ಟೋ ಪವಾಡಗಳು ನಡೆದಿವೆ. ಅಚ್ಚರಿಗೊಳಿಸುವ ಘಟನೆ ದೇವಾಲಯಗಳಲ್ಲಿ ನಡೆದ ಮೇಲೆ ಆ ದೇಗುಲದ ಬಗ್ಗೆ ಜನರ ನಂಬಿಕೆ ಮತ್ತಷ್ಟು ಹೆಚ್ಚಾಗುವಂತೆ ಮಾಡುತ್ತದೆ. ಇದು ಅಂಥಹದ್ದೇ ಒಂದು ದೇವಾಲಯ. ದಕ್ಷಿಣಭಾರತದಲ್ಲಿರುವ ಈ ದೇವಾಲಯದಲ್ಲಿ ನಡೆಯುತ್ತಿರುವ ಪವಾಡ ಯಾರೂ ನಂಬುವಂಥದ್ದಲ್ಲ. ಇದು ನಿಜವಾಗಲೂ ನಡೆಯುತ್ತಿರುವ ಘಟನೆಯಾ ಅನ್ನೋದರ ಕುರಿತು ಹಲವರು ಕುತೂಹಲ ವ್ಯಕ್ತಪಡಿಸಿದ್ದಾರೆ. ಅದು ಯಾವುದು..? ಅಲ್ಲಿನ ವಿಶೇಷತೆಯೇನು..ಹೆಚ್ಚಿನ ಮಾಹಿತಿ ಇಲ್ಲಿದೆ.
ಭಾರತದಲ್ಲಿರುವ ಅನೇಕ ಪವಾಡಮಯ ದೇವಾಲಯಗಳ ಬಗ್ಗೆ ನಾವು ಕೇಳಿದ್ದೇವೆ. ತಮ್ಮದೇ ಆದ ಪವಾಡ ತೋರ್ಪಡಿಸುವ ಮೂಲಕ ಇಂಥಹಾ ದೇವಾಲಯಗಳು ಜನಮನದಲ್ಲಿ ಹೆಚ್ಚು ಪ್ರಸಿದ್ಧಿಯಾಗುತ್ತವೆ. ಇದು ಕೂಡಾ ಅಂತಹದ್ದೇ ಒಂದು ಪವಾಡಸದೃಶ ದೇವಾಲಯ. ಇಲ್ಲಿ ನಡೆಯುತ್ತಿರುವ ಪವಾಡ ಎಲ್ಲರಿಗೂ ಬಿಡಿಸಲಾಗದ ಕಗ್ಗಂಟಂತಾಗಿದೆ. ಯಾವತ್ತಿನಿಂದ ಹೀಗೆ ನಡೆಯುತ್ತಿದೆ. ಯಾಕಾಗಿ ಹೀಗೆ ನಡೆಯುತ್ತಿದೆ ಎಂಬ ಅಚ್ಚರಿ ಎಲ್ಲರನ್ನೂ ಕಾಡುತ್ತಲೇ ಇದೆ. ಹೌದು, ಇದು ಭಾರತದಲ್ಲಿರುವ ಅತಿ ಪ್ರಸಿದ್ಧ ಪವಾಡ ದೇವಾಲಯಗಳಲ್ಲೊಂದು. ಇಲ್ಲಿ ನಡೆಯುವ ಪವಾಡ ಎಂಥವರನ್ನೂ ಚಕಿತಗೊಳಿಸುತ್ತದೆ.
ನಂದಿ ವಿಗ್ರಹ ಬೆಳೆಯುವ ದೇವಾಲಯ.
Image Credits : mykurnool.online
ಹೌದು..ಇದು ನಂದಿ ವಿಗ್ರಹ ಬೆಳೆಯುವ ದೇವಾಲಯ. ನಂಬಲು ತುಸು ಕಷ್ಟವಾದರೂ ಇದು ನಿಜ. ಇದು ದಕ್ಷಿಣ ಭಾರತದಲ್ಲಿರುವ ಶಿವ ಮತ್ತು ಪಾರ್ವತಿ ದೇವಿಗೆ ಅರ್ಪಿತವಾದ ದೇವಾಲಯ. ಆಂಧ್ರಪ್ರದೇಶದ ಕರ್ನೂಲ್ ನಲ್ಲಿದೆ ಈ ನಂದಿ ವಿಗ್ರಹ ಬೆಳೆಯುವ ದೇವಾಲಯ. ಶ್ರೀ ಯಾಗಂಟಿ ಉಮಾಮಹೇಶ್ವರ ದೇವಾಲಯ ಅಥವಾ ಯಾಗಂಟಿ ದೇವಾಲಯವೆಂದು ಇದನ್ನು ಕರೆಯುತ್ತಾರೆ. ಇದೇ ದೇವಾಲಯದಲ್ಲಿರುವ ನಂದಿಯ ಪ್ರತಿಮೆಯು ಬೆಳೆಯುತ್ತಾ ಹೋಗುತ್ತಿದೆ. ಪುರಾತತ್ವ ಸಮೀಕ್ಷೆ ಕೂಡಾ ನಂದಿಯ ಪ್ರತಿಮೆ ಬೆಳೆಯುತ್ತಿರುವುದನ್ನು ದೃಢಪಡಿಸಿದೆ. ಆ ದೇವಾಲಯ ಯಾವುದು..? ನಂದಿಯ ಗಾತ್ರ ಹೆಚ್ಚಾಗಲು ಕಾರಣವೇನು..? ಇಲ್ಲಿದೆ ಹೆಚ್ಚಿನ ಮಾಹಿತಿ.
ಯಾಗಂಟಿ ಉಮಾಮಹೇಶ್ವರ ದೇವಾಲಯದಲ್ಲಿ ಶಿವ ಮತ್ತು ಪಾರ್ವತಿಯನ್ನು ಅರ್ಧನಾರೀಶ್ವರ ರೂಪದಲ್ಲಿ ಪೂಜಿಸಲಾಗುತ್ತದೆ. ಇಲ್ಲಿನ ವಿಗ್ರಹವನ್ನು ಕೇವಲ ಕಲ್ಲಿನಿಂದ ಕೆತ್ತಲಾಗಿದೆ. ಶಿವನನ್ನು ಶಿವಲಿಂಗ ರೂಪದ ಬದಲಾಗಿ, ಪ್ರತಿಮೆಯ ರೂಪದಲ್ಲಿ ಪೂಜಿಸಲಾಗುತ್ತದೆ. ದೇವಾಲಯದಲ್ಲಿರುವ ನಂದಿಯ ವಿಗ್ರಹವು ಪ್ರತಿನಿತ್ಯ ದೊಡ್ಡದಾಗುತ್ತಿದ್ದು, ಭಕ್ತರ ಅಚ್ಚರಿಗೆ ಕಾರಣವಾಗಿದೆ. ನಂದಿಯ ಗಾತ್ರ ದಿನದಿಂದ ದಿನಕ್ಕೆ ಅದೆಷ್ಟು ಹೆಚ್ಚಾಗುತ್ತಿದೆಯೆಂದರೆ, ನಂದಿಯ ಪಕ್ಕ ಇರುವ ದೇವಾಲಯದ ಕಂಬಗಳನ್ನು ತೆಗೆಯಲಾಗುತ್ತಿದೆ. ಮೊದಲು ನಂದಿಯ ವಿಗ್ರಹ ಈ ಕಂಬಗಳ ಮಧ್ಯೆಯಿತ್ತು. ನಂದಿ ದೊಡ್ಡದಾಗುತ್ತಾ ಹೋದಂತೆಲ್ಲಾ ಸ್ಥಳ ಸಾಕಾಗದೆ ಕಂಬಗಳನ್ನು ತೆಗೆಯುವಂತಾಗಿದೆ.
ಪ್ರತೀ 20 ವರ್ಷಗಳಿಗೊಮ್ಮೆ ಬೆಳೆಯುವ ನಂದಿ ಪ್ರತಿಮೆ
Image Credits : mykurnool.online
ಉಮಾಮಹೇಶ್ವರ ದೇವಾಲಯದಲ್ಲಿ ಶಿವ ಮತ್ತು ಪಾರ್ವತಿ ವಿಗ್ರಹದ ಮುಂದೆ ಇರುವ ನಂದಿ ವಿಗ್ರಹವು ಬೆಳೆಯುತ್ತಲೇ ಹೋಗುತ್ತಿದೆ ಎಂದು ಹೇಳುತ್ತಾರೆ. ಪ್ರತೀ 20 ವರ್ಷಗಳಿಗೊಮ್ಮೆ ನಂದಿಯ ಪ್ರತಿಮೆಯು ಒಂದು ಇಂಚುಗಳಷ್ಟು ಹೆಚ್ಚು ಬೆಳೆಯುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಆದರೆ ಈ ರೀತಿ ವಿಗ್ರಹ ಬೆಳೆಯುತ್ತಿರುವುದಕ್ಕೆ ಕಾರಣ ಏನೆಂದು ತಿಳಿದುಬಂದಿಲ್ಲ. ನಂದಿಯ ವಿಗ್ರಹವನ್ನು ಕೆತ್ತಿದ ಕಲ್ಲಿನ ಸ್ವರೂಪವೇ ಅಂತಹುದ್ದು, ಹಾಗಾಗಿ ಈ ನಂದಿ ವಿಗ್ರಹ ಬೆಳೆಯುತ್ತಿದೆ. ಎಂದು ಹಲವರು ಅಭಿಪ್ರಾಯ ಪಡುತ್ತಾರೆ.
ವೈಷ್ಣವ ಸಂಪ್ರದಾಯದ ಆಧಾರದಲ್ಲಿ ನಿರ್ಮಿಸಿದ ದೇವಾಲಯ
Image credits :Patrika
ಯಾಗಂಟಿ ಉಮಾಮಹೇಶ್ವರ ದೇವಾಲಯವನ್ನು 15ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಸಂಗಮ ರಾಜವಂಶದ ರಾಜ ಹರಿಹರ ಬುಕ್ಕಾ ರೈ ನಿರ್ಮಿಸಿದನೆಂದು ಹೇಳಲಾಗುತ್ತಿದೆ. ವೈಷ್ಣವ ಸಂಪ್ರದಾಯಗಳ ಆಧಾರದ ಮೇಲೆ ಈ ದೇವಾಲಯವನ್ನು ನಿರ್ಮಿಸಲಾಗಿದೆ. ದೇವಾಲಯದ ಕೆತ್ತನೆ-ಕೆಲಸಗಳು ಅತ್ಯಾಕರ್ಷಕವಾಗಿದ್ದು, ಪ್ರಾಚೀನ ಕಾಲದ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತದೆ. ಯಾಗಂಟಿ ಉಮಾಮಹೇಶ್ವರ ದೇವಾಲಯವು ಪ್ರಾಚೀನ ಕಾಲದ ಪಲ್ಲವರ, ಚೋಳರ, ಚಾಲುಕ್ಯರ ಮತ್ತು ವಿಜಯನಗರ ಆಡಳಿತಗಾರರ ಸಂಪ್ರದಾಯಗಳನ್ನು ಪ್ರತಿಬಿಂಬಿಸುತ್ತದೆ. ಈ ದೇವಾಲಯವನ್ನು ಅಗಸ್ತ್ಯ ಮುನಿಗಳು ಸ್ಥಾಪಿಸಿದರೆನ್ನುವ ನಂಬಿಕೆಯಿದೆ.
ಈ ಸ್ಥಳದಲ್ಲಿ ಅಗಸ್ತ್ಯ ಮುನಿಗಳು ವೆಂಕಟೇಶ್ವರ ಸ್ವಾಮಿಯ ದೇವಾಲಯವನ್ನು ಕಟ್ಟಲು ಬಯಸಿ, ವಿಗ್ರಹವನ್ನು ಸ್ಥಾಪಿಸಲು ಮುಂದಾಗಿದ್ದರಂತೆ. ಆದರೆ ವಿಗ್ರಹ ನಿರ್ಮಾಣದ ಸಮಯದಲ್ಲಿ ಪ್ರತಿಮೆಯ ಹೆಬ್ಬೆರಳು ಮುರಿದ ಕಾರಣ ಪ್ರತಿಮೆ ಸ್ಥಾಪನೆ, ದೇವಾಲಯ ಕಟ್ಟುವ ಕಾರ್ಯವನ್ನು ಅರ್ಧದಲ್ಲೇ ಕೈ ಬಿಡಬೇಕಾಯಿತು. ಇದರಿಂದ ಬೇಸರಗೊಂಡ ಅಗಸ್ತ್ಯ ಮುನಿಗಳು ಭಗವಾನ್ ಪರಶಿವನನ್ನು ಧ್ಯಾನಿಸಿದರು. ಆಗ ಮಹಾದೇವನು ಆ ಸ್ಥಳದಲ್ಲಿ ಶಿವ ದೇವಾಲಯವನ್ನು ಸ್ಥಾಪಿಸಲು ಸೂಚಿಸಿದರು ಎಂದು ಹೇಳಲಾಗುತ್ತದೆ.
ಸದ್ಯ ಯಾಗಂಟಿ ಉಮಾಮಹೇಶ್ವರ ದೇವಾಲಯದ ಸಮೀಪವೇ ಗುಹೆಯೊಂದಿದ್ದು, 120 ಮೆಟ್ಟಿಲುಗಳನ್ನು ಇಳಿದು ಈ ಗುಹೆಯೊಳಗೆ ಹೋಗಬಹುದಾಗಿದೆ. ಈ ಗುಹೆಯೊಳಗೆ ಅಗಸ್ತ್ಯ ಮುನಿ ರಚಿಸುವಾಗ ಭಗ್ನಗೊಂಡ ವಿಷ್ಣುದೇವರ ವಿಗ್ರಹವಿದೆ
ಪುಷ್ಕರಿಣಿ ನದಿಯಲ್ಲಿ ಸ್ನಾನ ಮಾಡಿದರೆ ಪಾಪ ಪರಿಹಾರ
Image Credits : mykurnool.online
ದೇವಾಲಯದಲ್ಲಿ ಪುಷ್ಕರಿಣಿ ಎನ್ನುವ ಪವಿತ್ರ ನೀರು ನಿರಂತರವಾಗಿ ಹರಿಯುತ್ತಿರುತ್ತದೆ. ಬೆಟ್ಟದ ಮೇಲಿಂದ ಹರಿದು ನಂದಿಯ ಬಾಯೊಳಗಿಂದ ಹರಿದು ಬರುವ ಈ ನೀರನ್ನು ಪವಿತ್ರವೆಂದು ಪರಿಗಣಿಸಲಾಗಿದೆ. 12 ವರ್ಷಗಳಿಂದ ಈ ಪುಷ್ಕರಿಣಿಯಲ್ಲಿ ನೀರು ಎಲ್ಲಿಂದ ಹರಿದು ಬರುತ್ತಿದೆ ಎನ್ನುವುದು ಇಂದಿಗೂ ತಿಳಿದಿಲ್ಲ. ಅಗಸ್ತ್ರ ಮುನಿ ಪುಷ್ಕರಿಣಿಯಲ್ಲಿ ಸ್ನಾನ ಮಾಡಿ ಶಿವನ ಪೂಜೆ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ. ದೇವಾಲಯಕ್ಕೆ ಪ್ರವೇಶಿಸುವ ಭಕ್ತರು ಸಹ ಈ ನೀರಿನಲ್ಲಿ ಸ್ನಾನ ಮಾಡುವುದರಿಂದ ಅವರ ಪಾಪಗಳೆಲ್ಲವೂ ತೊಳೆದು ಹೋಗುತ್ತದೆ ಎನ್ನುವ ನಂಬಿಕೆಯಿದೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3z8YlxR
June 07, 2021 at 05:53PM