Image Credits : SHRM
ಜಗತ್ತಿನಾದ್ಯಂತ ಕೊರೋನಾ ಸೋಂಕು ಕಾಣಿಸಿಕೊಂಡಾಗಿನಿಂದಲೂ ಮನುಷ್ಯನ ಜೀವನದಲ್ಲಿ ಹಲವು ಬದಲಾವಣೆಗಳಾಗಿವೆ. ದಿನಪೂರ್ತಿ ಮನೆಯಿಂದ ಹೊರಗಿರುತ್ತಿದ್ದ ಮನುಷ್ಯ ನಾಲ್ಕು ಕೋಣೆಯೊಳಗೆ ಬಂಧಿಯಾಗಿದ್ದಾನೆ. ವೀಕೆಂಡ್, ಹಾಲಿಡೇಸ್ ಬಂದ್ರೆ ಸಾಕು ಟ್ರಕ್ಕಿಂಗ್, ಟೂರ್, ಪಿಕ್ನಿಕ್, ಟ್ರಿಪ್ ಎಂದೆಲ್ಲಾ ಹೋಗುತ್ತಿದ್ದವರು ಮನೆಯೊಳಗೇ ರೌಂಡ್ ಬರುವಂತಾಗಿದೆ. ಮನುಷ್ಯನ ಐಷಾರಾಮ ಜೀವನಕ್ಕೆ ಕಣ್ಣಿಗೆ ಕಾಣದ ಮಹಾಮಾರಿಯಿಂದ ಬ್ರೇಕ್ ಬಿದ್ದಿದೆ. ಲಂಗು ಲಗಾಮಿಲ್ಲದೆ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದ ಮನುಷ್ಯನ ನಾಗಾಲೋಟಕ್ಕೆ ಕಣ್ಣಿಗೆ ಕಾಣದ ವೈರಸ್ ನಿಂದ ಬ್ರೇಕ್ ಬಿದ್ದಂತಾಗಿದೆ,
ಕೊರೋನಾ ಹಾವಳಿ ಶುರುವಾದಾಗಿನಿಂದಲೂ ಮನುಷ್ಯನ ಜೀವನಕ್ರಮದಲ್ಲಿ ಹಲವು ಬದಲಾವಣೆಗಳಾಗಿವೆ. ಮನೆಯ ಬಾಗಿಲಿಗೇ ಫುಡ್ ಆರ್ಡರ್ ಮಾಡುವುದು, ಬೇಕಾಬಿಟ್ಟಿ ಶಾಪಿಂಗ್, ತಿರುಗಾಟ ಎಲ್ಲವೂ ಇಲ್ಲವಾಗಿದೆ, ವೈರಸ್ ನಿಂದ ಜನರ ಜೀವನದಲ್ಲಿ ಆಗಿರುವ ಮುಖ್ಯ ಬದಲಾವಣೆಯೆಂದರೆ ವರ್ಕ್ ಫ್ರಂ ಹೋಮ್.
ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದ ಬೆನ್ನಲ್ಲೇ ಬಹುತೇಕ ಕಂಪೆನಿಗಳ ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಆಪ್ಶನ್ ನೀಡಿದ್ದವು. ಇಂದಿಗೂ ಐಟಿ-ಬಿಟಿ ಕಂಪೆನಿಗಳು ವರ್ಕ್ ಫ್ರಂ ಹೋಮ್ ನಿಯಮ ಪ್ರಕಾರವೇ ಕಾರ್ಯ ನಿರ್ವಹಿಸುತ್ತವೆ. ಹಲವು ಮಂದಿ ವರ್ಕ್ ಫ್ರಂ ಹೋಮ್ ಬಂದಾಗಿನಿಂದ ಖುಷಿಯಾಗಿದ್ದಾರೆ. ಬೆಳ್ಳಂಬೆಳಗೆದ್ದು ಧಾವಂತದಲ್ಲಿ ರೆಡಿಯಾಗಿ ಹೊರಡುವ ಕಷ್ಟವಿಲ್ಲ, ಮನೆಯಲ್ಲಿಯೇ ಕೆಲಸ, ಹೊತ್ತು ಹೊತ್ತಿಗೆ ಸರಿಯಾಗಿ ತಿನ್ನಬಹುದು, ಬೇಕಾದಾಗ ರಿಲ್ಯಾಕ್ಸ್ ಆಗಬಹುದು ಎಂದೆಲ್ಲಾ ಖುಷಿಯಾಗಿದ್ದಾರೆ. ಅದೆಷ್ಟೋ ಮಂದಿ ಲ್ಯಾಪ್ ಟ್ಯಾಪ್ ಹೊತ್ತುಕೊಂಡು ಹಳ್ಳಿಯಲ್ಲೇ ಸೆಟಲ್ ಆಗಿರಬಹುದು.
ಇದನ್ನು ಓದಿ : ಆರೋಗ್ಯಕ್ಕೆ ಖರ್ಜೂರದ ಸೇವನೆಯಿಂದ ಸಿಗುವ ಪ್ರಯೋಜನಗಳೇನು
ವರ್ಕ್ ಫ್ರಂ ಹೋಮ್ ಬಂದಾಗಿನಿಂದ ಕೆಲವೊಂದು ವಿಚಾರದಲ್ಲಿ ಉಪಯೋಗವಾಗಿದೆ ನಿಜ. ಆದರೆ ವರ್ಕ್ ಫ್ರಂ ಹೋಮ್ ನಿಂದ ಇನ್ನು ಅದೆಷ್ಟೋ ವಿಚಾರಗಳಲ್ಲಿ ತೊಂದರೆಯಾಗ್ತಿದೆ. ಅದರಲ್ಲಿ ಮುಖ್ಯವಾಗಿ ಕಣ್ಣಿನ ಆರೋಗ್ಯ ಸಮಸ್ಯೆ. ಆ ಬಗ್ಗೆ ಇಲ್ಲಿದೆ ಮಾಹಿತಿ
Image Credits : DekhNews
ಮನೆಯಲ್ಲಿ ದಿನಪೂರ್ತಿ ಲ್ಯಾಪ್ಟಾಪ್ ನಲ್ಲಿ ಕೆಲಸ ಮಾಡುತ್ತೇವೆ. ಆದರೆ ನಾವು ತಿಳಿದಿರಬೇಕಾದ ವಿಷಯವೆಂದರೆ ಆಫೀಸ್ ವಾತಾವರಣವನ್ನೂ ಯಾರೂ ಮನೆಯಲ್ಲಿ ಸಿದ್ಧಪಡಿಸಿರುವುದಿಲ್ಲ. ಆಫೀಸ್ ಗಳನ್ನು ಉದ್ಯೋಗಿಗಳಿಗೆ ಅನುಕೂಲಕರವಾಗಿ ಗಾಳಿ, ಬೆಳಕು ಬರುವಂತೆ ಅಥವಾ ಕಂಪ್ಯೂಟರ್ ಬಳಕೆಗೆ ಅಗತ್ಯವಾದ ಲೈಟ್ ಗಳನ್ನು ಬಳಸಿ ನಿರ್ಮಿಸಲಾಗುತ್ತದೆ. ಆದರೆ ಹಲವರ ಮನೆಯಲ್ಲಿ ಕೆಲಸ ಮಾಡಲು ಈ ರೀತಿಯ ವಾತಾವರಣ ಇರುವುದಿಲ್ಲ. ಹೀಗಾಗಿ ಹೆಚ್ಚು ಬೆಳಕು, ಅಥವಾ ಕಡಿಮೆ ಬೆಳಕಿನಲ್ಲಿ ಕೆಲಸ ಮಾಡುವುದರಿಂದ ಕಣ್ಣಿಗೆ ಹೆಚ್ಚು ಒತ್ತಡ ಬೀಳುತ್ತದೆ. ಕಣ್ಣಿನಲ್ಲಿ ನೀರು ತುಂಬಿಕೊಳ್ಳುವುದು, ಕಣ್ಣಿನ ಉರಿಯೂತ, ತುರಿಕೆಯಂತಹ ಸಮಸ್ಯೆಗಳು ಎದುರಾಗಬಹುದು.
ಬೆಳಿಗ್ಗೆಯಿಂದ ಸಂಜೆಯವರೆಗೆ ವಿರಾಮವಿಲ್ಲದೇ ಲ್ಯಾಪ್ಟಾಪನ್ನೇ ದಿಟ್ಟಿಸಿ ನೋಡಿ ಕಣ್ಣಿಗೆ ಒತ್ತಡ ಉಂಟಾಗುತ್ತದೆ. ಹೀಗಾಗಿ ಕಣ್ಣಿಗೆ ಸ್ವಲ್ಪ ವಿರಾಮ ನೀಡಿ. ಜತೆಗೆ ಕೆಲಸ ಮಾಡುವಾಗ ಕಂಪ್ಯೂಟರ್ಕನ್ನಡಕವನ್ನು ಧರಿಸುವುದು ಉತ್ತಮ. ಒಂದೇ ಸಮನೆ ಕಂಪ್ಯೂಟರ್ಅನ್ನು ದಿಟ್ಟಿಸಿ ನೋಡುತ್ತಿರುವಾಗ ನೇರವಾಗಿ ಬೆಳಕು ನಮ್ಮ ಕಣ್ಣಿಗೆ ಪ್ರತಿಫಲಿಸದಂತೆ ಸಹಕರಿಸುತ್ತದೆ. ಅತ್ಯಂತ ಸೂಕ್ಷ್ಮವಾದ ಕಣ್ಣಿನ ಆರೋಗ್ಯದ ಬಗೆಗೆ ನಿರ್ಲಕ್ಷ್ಯ ಬೇಡ.
ಇದನ್ನು ಓದಿ : ಬೆಳಗ್ಗೆ ತಡವಾಗಿ ಎದ್ದರೆ ಯಾವೆಲ್ಲಾ ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಗೊತ್ತಾ..?
ನಿಮ್ಮ ಕಣ್ಣಿನ ಆರೋಗ್ಯವನ್ನು ನೋಡಿಕೊಳ್ಳುವ ಇನ್ನೊಂದು ಮಾರ್ಗವೆಂದರೆ ಆರೋಗ್ಯಕರ ಆಹಾರ. ವಿಟಮಿನ್ಯುಕ್ತ ಆಹಾರ ಪದಾರ್ಥವನ್ನು ಸೇವಿಸುವುದರಿಂದ ನಿಮ್ಮ ಕಣ್ಣಿನ ಆರೈಕೆಯನ್ನು ಮಾಡಿಕೊಳ್ಳಬಹುದು. ಹಾಗಾಗಿ ಪೌಷ್ಠಿಕಾಂಶಯುಕ್ತ ಆಹಾರವನ್ನು ಹೆಚ್ಚೆಚ್ಚು ಸೇವಿಸಿ. ತರಕಾರಿಗಳು, ಪೌಷ್ಠಿಕಾಂಶಯುಕ್ತ ಹಣ್ಣುಗಳನ್ನು ಸೇವಿಸಿ. ಕ್ಯಾರೆಟ್, ಕಿತ್ತಳೆ ಹಣ್ಣು, ಬಾಳೆಹಣ್ಣು, ಮಾವಿನ ಹಣ್ಣು, ದ್ರಾಕ್ಷಿ ಹಣ್ಣುಗಳನ್ನು ಸೇವಿಸಿ. ವಿಟಮಿನ್ ಎ ಮತ್ತು ಸಿ ಗುಣಗಳನ್ನು ಹೊಂದಿರುವ ಆಹಾರ ಪದಾರ್ಥವನ್ನು ಹೆಚ್ಚು ಸೇವಿಸಿ. ಹಾಗೂ ಹಸಿರು ಎಲೆಗಳು, ಸೊಪ್ಪಿನ ಪದಾರ್ಥವನ್ನು ಸೇವಿಸಿ. ಈ ಮೂಲಕ ನಿಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.
Image Credits : Nvisionscenters
ದಿಟ್ಟಿಸಿ ಕಂಪ್ಯೂಟರ್ ನೋಡುತ್ತಿರುವುದರಿಂದ ಕಣ್ಣಿಗೆ ಹೆಚ್ಚಿನ ಒತ್ತಡ ಉಂಟಾಗಿರುತ್ತದೆ. ಹಾಗಾಗಿ 10-15 ನಿಮಿಷಗಳ ನಂತರ ಕಣ್ಣನ್ನು ಒಮ್ಮೆ ಮುಚ್ಚಿ ಕೆಲವು ಸೆಕೆಂಡುಗಳ ಕಾಲ ವಿಶ್ರಾಂತಿ ಪಡೆಯಿರಿ. ಪ್ರತಿ ಎರಡು ಗಂಟೆಗೊಮ್ಮೆ ಕಣ್ಣಿನ ಸುತ್ತಲಿನ ಸ್ಯಾಯುವಿಗೆ ಬೆರಳುಗಳಿಂದ ಮಸಾಜ್ ಮಾಡಿ. ಆಥವಾ ನಿಮ್ಮ ಮುಖವನ್ನು ನೀರಿನಿಂದ ತೊಳೆಯಿರಿ. ಆಗಾಗ ನಿಮ್ಮ ಕಣ್ಣುಗಳನ್ನು ಮಿಟುಕಿಸುತ್ತಿರಿ. ಕಣ್ಣುಗಳನ್ನು ಉಜ್ಜುವುದನ್ನು ಆದಷ್ಟು ತಪ್ಪಿಸಿ.
ಯಾವುದೇ ಕಾರಣಕ್ಕೂ ನಿಮ್ಮ ಸೂಕ್ಷ್ಮವಾದ ಕಣ್ಣಿನ ಬಗ್ಗೆ ಅಲಕ್ಷ್ಯ ಬೇಡ. ಕಣ್ಣು ಸೂಕ್ಷ್ಮ ಭಾಗವಾಗಿದ್ದು ಒಂದು ಕ್ಷಣದ ನಿರ್ಲಕ್ಷ್ಯವೂ ಮುಂದೊಂದು ದಿನ ದೊಡ್ಡ ಸಮಸ್ಯೆಯನ್ನು ತಂದೊಡ್ಡಬಹುದು. ಹಾಗಾಗಿ ನಿಮ್ಮ ಆರೋಗ್ಯದ ಕುರಿತಾಗಿ ನಿಮಗೆ ಕಾಳಜಿ ಇರಲಿ. ಆರೋಗ್ಯದಲ್ಲಿ ಏರು-ಪೇರು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ವೈದ್ಯರ ಬಳಿ ಸಲಹೆ ಪಡೆಯುವುದು ಉತ್ತಮವಾಗಿದೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3iW5p9F
July 27, 2021 at 08:25PM