Featured Image Source : Tabloidxo.com
ಭಾರತ ಅಂದ್ರೆ ವೈವಿಧ್ಯತೆಯಲ್ಲಿ ಏಕತೆ ಇರೋ ದೇಶ. ವಿವಿಧ ಭಾಷೆ, ಸಂಸ್ಕೃತಿ, ಆಚಾರ-ವಿಚಾರ, ಸಂಪ್ರದಾಯಗಳು ಭಾರತದ ವಿಶೇಷ. ಜತೆಗೇ ಭಿನ್ನ-ವಿಭಿನ್ನ ದೇವಾಲಯಗಳೂ ಇಲ್ಲಿವೆ. ಆಯಾ ಪ್ರದೇಶದ ನಂಬಿಕೆಗೆ ತಕ್ಕಂತೆ ವಿಶಿಷ್ಟವಾದ ದೇವಾಲಯಗಳು ರೂಪುಗೊಳ್ಳುತ್ತವೆ. ಅಲ್ಲಿ ನಡೆದ ಯಾವುದೋ ಘಟನೆಗೆ ಸಂಬಂಧಿಸಿದಂತೆ ಜನರಲ್ಲಿಯೂ ನಂಬಿಕೆ ಬೆಳೆದಿರುತ್ತದೆ. ಇದಕ್ಕೆ ಅನುಸಾರವಾಗಿ ದೇವರಿಗೆ ಮಾತ್ರವಲ್ಲದೆ, ವ್ಯಕ್ತಿಗೆ, ವಸ್ತುವಿಗೆ ದೇಶದ ಹಲವೆಡೆ ದೇವಾಲಯವನ್ನು.ಕಟ್ಟಿರುವುದನ್ನು ನೋಡಿರಬಹುದು. ಭಾರತೀಯರು ಬರೀ ನಂಬಿಕೆ ಮಾತ್ರವಲ್ಲ ಮೂಢನಂಬಿಕೆಗೂ ಹೆಚ್ಚು ಒಳಗಾಗುತ್ತಾರೆ. ಹೀಗಾಗಿ ದೇವರನ್ನು ಮಾತ್ರವಲ್ಲ ವ್ಯಕ್ತಿಯನ್ನೂ ಪೂಜಿಸುವ ಹಲವು ದೇವಾಲಯಗಳನ್ನು ದೇಶದ ಹಲವೆಡೆ ನೋಡಬಹುದು.
ದೇಶದ ಹಲವೆಡೆ ಶಿವ, ವಿಷ್ಣು, ಕೃಷ್ಣ, ಗಣೇಶ, ಸುಬ್ರಹ್ಮಣ್ಯ, ದೇವಿ, ದೇವಿಯ ಹಲವು ಅವತಾರಗಳ ದೇವಾಲಯಗಳನ್ನು ನಾವು ನೋಡಿದ್ದೇವೆ. ಅದಲ್ಲದೆ ದೇಶದಲ್ಲಿ ವಿಚಿತ್ರವೆನಿಸುವ, ವಿಚಿತ್ರ ಆಚರಣೆಯನ್ನು ಪಾಲಿಸಿಕೊಂಡು ಬಂದಿರುವ, ವಸ್ತು ಅಥವಾ ಪ್ರಾಣಿಗಳನ್ನು ಪೂಜಿಸುವ ಹಲವು ದೇವಸ್ಥಾನಗಳಿವೆ. ಅಷ್ಟೇ ಅಲ್ಲ ದೇವರನ್ನು ಮಾತ್ರವಲ್ಲ ಮನುಷ್ಯರನ್ನೂ ದೇಶದ ಹಲವೆಡೆ ಆರಾಧಿಸುತ್ತಾರೆ. ಮಾರಿಯಮ್ಮ ದೇವಾಲಯ, ಕೊರೋನಾ ದೇವಾಲಯ, ಬುಲೆಟ್ ಬಾಬಾ ದೇವಾಲಯ ಹೀಗೆ ಹಲವು ಮಂದಿರಗಳು ದೇಶದಲ್ಲಿವೆ. ಅಂಥಹದ್ದೇ ಒಂದು ದೇವಸ್ಥಾನ ತೆಲಂಗಾಣದಲ್ಲಿದೆ. ಇಲ್ಲಿ ರಾಜಕಾರಣಿ ಸೋನಿಯಾ ಗಾಂಧಿಯವರನ್ನು ಪೂಜಿಸಲಾಗುತ್ತದೆ.
ಇದನ್ನು ಓದಿ : ಅರಬ್ಬೀ ಸಮುದ್ರದ ಮಧ್ಯೆಯಿದೆ ಅದ್ಭುತ ದೇವಾಲಯ
ಸೋನಿಯಾ ಗಾಂಧಿಯನ್ನು ಪೂಜಿಸುವ ದೇವಾಲಯ
Image Source : Mirchi9.com
ತೆಲಂಗಾಣದ ಮಲ್ಲೈಲ್ ಪಟ್ಟಣದ ಕರೀಂನಗರದಲ್ಲಿರುವ ಈ ದೇವಾಲಯವನ್ನು 2014ರಲ್ಲಿ ನಿರ್ಮಿಸಲಾಯಿತು. ಸೋನಿಯಾ ಗಾಂಧಿ ದೇವಸ್ಥಾನವು ಗೌರವಾನ್ವಿತ ಸೋನಿಯಾ ಗಾಂಧಿಯವರ 9 ಅಡಿ ಬಿಳಿ ಅಮೃತಶಿಲೆಯ ಪ್ರತಿಮೆಯನ್ನು ಹೊಂದಿದೆ. ದೇವಾಲಯದ ಗೋಡೆಗಳ ಮೇಲೆ ರಾಜೀವ್, ರಾಹುಲ್ ಮತ್ತು ಇಂದಿರಾ ಗಾಂಧಿಯವರ ಭಾವಚಿತ್ರಗಳಿವೆ. ಶ್ರೀ ಶಂಕರ್ ರಾವ್, ಶ್ರೀ ಪೊನ್ನಮ್ ಪಭಾಕರ್ ಇದನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.
2014ರಲ್ಲಿ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಮುಂದಾಳುತ್ವದಿಂದ ತೆಲಂಗಾಣದಲ್ಲಿ ಹೊಸ ರಾಜ್ಯವನ್ನು ರಚಿಸಲಾಯಿತು. ಇದರಿಂದ ಅದೆಷ್ಟೂ ವರ್ಷಗಳಿಂದ ಪ್ರತ್ಯೇಕ ರಾಜ್ಯ ಕಂಡವರ ಕನಸು ನನಸಾಗಿತ್ತು. ಈ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಕಾಂಗ್ರೆಸ್ ಮುಖಂಡರು ಯೋಚಿಸಲಾಗದ ಕೆಲಸವನ್ನು ಮಾಡಿದರು. ತೆಲಂಗಾಣದ ಮಲ್ಲಿಯಲ್ ಎಂಬ ಪಟ್ಟಣದಲ್ಲಿ ಸೋನಿಯಾ ಗಾಂಧಿ ಅವರಿಗೆ ಮೀಸಲಾಗಿರುವ ದೇವಾಲಯವನ್ನು ನಿರ್ಮಿಸಿದರು.
ತೆಲಂಗಾಣದ ಜಿಲ್ಲೆಗಳ ಕಾಂಗ್ರೆಸ್ ಮುಖಂಡರು ಎಲ್ಲರೂ ಒಟ್ಟಾಗಿ ಸೇರಿ ಈ ಸೋನಿಯಾ ಗಾಂಧಿ ದೇವಸ್ಥಾನವನ್ನು ನಿರ್ಮಿಸಿದ್ದಾರೆ. ಇಲ್ಲಿನ ಕಾಂಗ್ರೆಸ್ ಮುಖಂಡರು ಸೋನಿಯಾ ಗಾಂಧಿ ತಮ್ಮ ಬೇಡಿಕೆಯನ್ನು ಈಡೇರಿಸಿದ್ದಕ್ಕೆ ಕೃತಜ್ಞತೆ ವ್ಯಕ್ತಪಡಿಸಿ ಸೋನಿಯಾ ಗಾಂಧಿಗೆ ದೇವಾಲಯವನ್ನು ನಿರ್ಮಿಸಿ ಅರ್ಪಿಸಿದ್ದಾರೆ.
ಮಾಜಿ ಸಂಸದ ಶ್ರೀ ಪೊನ್ನಮ್ ಪ್ರಭಾಕರ್ ಈ ದೇವಾಲಯದ ಕುರಿತು ಮಾತನಾಡುತ್ತಾ, “ಸೋನಿಯಾ ಗಾಂಧಿ ತೆಲಂಗಾಣದ ಉತ್ಸಾಹ ಮತ್ತು ಸ್ಫೂರ್ತಿ. ಅವರು ಮಾಡಿದ ಮಹತ್ಕಾರ್ಯಗಳಿಂದ ತೆಲಂಗಾಣ ಜನರ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ. ಸೋನಿಯಾ ಗಾಂಧಿ ಕೃಪೆಯಿರದಿದ್ದರೆ ತೆಲಂಗಾಣ ರಾಜ್ಯ ವಾಸ್ತವವಾಗುತ್ತಿರಲಿಲ್ಲ’ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ, ಕರೀಂನಗರದ ಪ್ರತಿ ಅಸೆಂಬ್ಲಿ ವಿಭಾಗದಲ್ಲಿ ಸೋನಿಯಾ ಗಾಂಧಿ ಪ್ರತಿಮೆಯನ್ನು ನಿರ್ಮಿಸುವುದಾಗಿ ಹೇಳಿಕೊಂಡಿದ್ದರು.
ಇದನ್ನು ಓದಿ : ಪ್ರಸಿದ್ಧ ತೀರ್ಥಕ್ಷೇತ್ರ ಪುರಿ ಜಗನ್ನಾಥ ದೇವಾಲಯ; ಗಾಳಿಯ ವಿರುದ್ಧ ದಿಕ್ಕಿಗೆ ಹಾರುತ್ತದೆ ದೇವಾಲಯದ ಮೇಲಿರುವ ಧ್ವಜ..!
ರಾಜಸ್ಥಾನದಲ್ಲಿ ನಿರ್ಮಿಸಿ ಈ ಸೋನಿಯಾ ಗಾಂಧಿ ವಿಗ್ರಹವನ್ನು ತೆಲಂಗಾಣಕ್ಕೆ ತರಲಾಗಿತ್ತು. ವಿಗ್ರಹ ತಾವರೆ ಹೂ ಹಿಡಿದುಕೊಂಡು ನಿಂತಿರುವ ರೂಪದಲ್ಲಿದೆ. ಮಾಜಿ ಸಂಸದ ಪೊನ್ನಮ್ ಪ್ರಭಾಕರ್, ಮಾಜಿ ಶಾಸಕ ಸುದಳ ದೇವಯ್ಯ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಮುಖಂಡ ಟಿ.ಜೀವನ್ ರೆಡ್ಡಿ 2014ರಲ್ಲಿ ಈ ಪ್ರತಿಮೆಯನ್ನು ಉದ್ಘಾಟಿಸಿದರು. ದೇವಾಲಯದ ಹಿಂದಿನ ಮನೋಭಾವವು ಹೊಸ ರಾಜ್ಯವನ್ನು ರಚಿಸಿದ್ದಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸುವುದಾಗಿದೆ.
ಆಂಧ್ರ ಪ್ರದೇಶದಲ್ಲಿ ತೆಲಂಗಾಣವನ್ನು ಪ್ರತ್ಯೇಕ ರಾಜ್ಯವೆಂದು ಘೋಷಿಸಿದ್ದಕ್ಕಾಗಿ ಪ್ರತಿಭಟನಾ ನಿರತ ನಾಯಕರು ಸೋನಿಯಾ ಗಾಂಧಿಯವರಿಗೆ ಸಮಾಧಿಯನ್ನು ನಿರ್ಮಿಸಿದ್ದರು, ಇದಕ್ಕೆ ಪ್ರತಿಯಾಗಿ ತೆಲಂಗಾಣದ ಮಲ್ಲೈಲ್ ನಲ್ಲಿರುವ ಕರೀಂನಗರದಲ್ಲಿ ಕಾಂಗ್ರೆಸ್ ನಾಯಕರು ಒಟ್ಟಾಗಿ ಸೋನಿಯಾ ಗಾಂಧಿ ದೇವಾಲಯವನ್ನು ಕಟ್ಟಿದರು. 9 ಅಡಿಗಳ ಸ್ಟ್ಯಾಚ್ಯೂನಲ್ಲಿ ಸೋನಿಯಾ ಗಾಂಧಿಯನ್ನು ದೇವಿಯಂತೆ ಚಿತ್ರಿಸಲಾಗಿದ್ದು, ಒಂದು ಕೈಯಲ್ಲಿ ಕಮಲವನ್ನು ಮತ್ತು ಇನ್ನೊಂದು ಕೈಯಲ್ಲಿ ಸಂಪತ್ತು ತುಂಬಿದ ತಟ್ಟೆಯನ್ನು ಹಿಡಿದಿರುವಂತೆ ಕೆತ್ತಲಾಗಿದೆ..
ತಮ್ಮ ಯೋಜನೆಯನ್ನು ಸಾಕಾರಗೊಳಿಸಲು ಕೇಂದ್ರದ ಕೆಲವು ಕಾಂಗ್ರೆಸ್ ನಾಯಕರು ನೆರವು ನೀಡಿದ್ದಾರೆ ಎಂದು ತೆಲಂಗಾಣದ ಶಾಸಕರು ಹೇಳುತ್ತಾರೆ. ‘ವಿಗ್ರಹವನ್ನು ಸ್ಥಾಪಿಸಬೇಕಾದ ಮೂಲಮಾದರಿಯನ್ನು ನಾವು ತೋರಿಸಿದ್ದೆವು ಮತ್ತು ಹಿರಿಯ ಮುಖಂಡರು ಅದಕ್ಕೆ ಅನುಮೋದನೆ ನೀಡಿದ್ದರು’ ಎಂದು ತಿಳಿಸಿದ್ದಾರೆ. ಸೋನಿಯಾ ಗಾಂಧಿಯವರ ಜನ್ಮದಿನವಾದ ಡಿಸೆಂಬರ್ 9ರಂದು ಪ್ರತಿಮೆಯನ್ನು ಸ್ಥಾಪಿಸುವ ಕಾಮಗಾರಿ ಪ್ರಾರಂಭವಾಗಿತ್ತು. ಕಂಚಿನಿಂದ ಮಾಡಿದ ಈ ಪ್ರತಿಮೆ 500 ಕೆಜಿ ತೂಕವಿದ್ದು, ಈ ಪ್ರತಿಮೆಯನ್ನು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಲ್ಪಿ ರಚಿಸಿದ್ದರು.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3f040On
July 27, 2021 at 09:00AM