Featured Image Source: TripAdvisor
ಗೋವಾ ಎಂದರೆ ಪ್ರವಾಸಿಗರ ಸ್ವರ್ಗ. ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿಯೂ ಗೋವಾ ಎಂದರೆ ಅತ್ಯುತ್ತಮ ಪ್ರವಾಸಿ ತಾಣವೆಂದು ಕರೆಯಲ್ಪಡುತ್ತದೆ. ಇಲ್ಲಿನ ಪ್ರಾಕೃತಿಕ ಸೌಂದರ್ಯ, ಸ್ಮಾರಕಗಳು, ದೇವಾಲಯಗಳನ್ನು ನೋಡಲು ದೇಶ-ವಿದೇಶಗಳಿಂದ ಜನರು ಆಗಮಿಸುತ್ತಾರೆ. ಪ್ರಾಚೀನ ಪರಂಪರೆಯನ್ನು ಎತ್ತಿ ಹಿಡಿಯುವ ಇಲ್ಲಿನ ದೇವಾಲಯಗಳು ಸಹ ಪ್ರಸಿದ್ಧಿಯಾಗಿವೆ. ಪಣಜಿ ಗೋವಾದ ರಾಜಧಾನಿಯಾಗಿದ್ದು, ಮಾರ್ಗೋವಾ, ಪೊಂಡಾ, ಮಾಪುಸಾ, ಲೊಂಡಾ ಮೊದಲಾದವು ಇಲ್ಲಿನ ಪ್ರಮುಖ ನಗರಗಳಾಗಿವೆ.
ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರದೊಂದಿಗೆ ಗಡಿಯನ್ನು ಹಂಚಿಕೊಂಡಿದ್ದು, ಪಶ್ಚಿಮಕ್ಕೆ ಇರುವ ಅರಬ್ಬೀ ಸಮುದ್ರದ ಸುಂದರ ಕಡಲ ತೀರ ಗೋವಾದ ಅಂದವನ್ನು ಹೆಚ್ಚಿಸಿದೆ. ಗೋವಾದಲ್ಲಿ ಹಲವು ಪ್ರಸಿದ್ಧ ದೇವಾಲಯಗಳಿವೆ. ಪ್ರತಿನಿತ್ಯ ಇಲ್ಲಿಗೆ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ಶಾಂತಾದುರ್ಗಾ ದೇವಸ್ಥಾನ, ಮಂಗೇಶಿ ದೇವಸ್ಥಾನ, ಶ್ರೀ ಬೇತಾಳ ದೇವಸ್ಥಾನ, ಸಪ್ತ ಕೋಟೇಶ್ವರ ದೇವಸ್ಥಾನ, ಬಾಲಾಜಿ ಅಮ್ಮನ ದೇವಸ್ಥಾನ, ಕಾಮಾಕ್ಷಿ ಅಮ್ಮನ ದೇವಸ್ಥಾನ ಅದರಲ್ಲಿ ಕೆಲವು. ಪ್ರತಿನಿತ್ಯ ನೂರಾರು ಜನರು ಈ ದೇವಾಲಯಗಳಿಗೆ ಭೇಟಿ ನೀಡುತ್ತಾರೆ.
ಇದನ್ನು ಓದಿ : ಕೇರಳದಲ್ಲಿದೆ ವಿಶ್ವದ ಅತಿ ದೊಡ್ಡ ಪಕ್ಷಿ ಶಿಲ್ಪ..!
ಗೋವಾದಲ್ಲಿರುವ ಇನ್ನೊಂದು ಪ್ರಮುಖ ದೇವಸ್ಥಾನ ಅತ್ಯಂತ ಪ್ರಾಚೀನ ದೇವಾಲಯವಾದ, ಮಹಾದೇವ್ ದೇವಾಲಯ. ಇದು ಶಿವ ದೇವರಿಗೆ ಅರ್ಪಿತವಾದುದಾಗಿದೆ. ಈ ದೇವಾಲಯವು ತಂಬದಿ ಸುರ್ಲಾ ಎಂಬ ಹಳ್ಳಿಯ ಬಳಿ ಇದ್ದು ಇದು ಭಗವಾನ್ ಮಹಾವೀರ್ ಅಭಯಾರಣ್ಯ ಮತ್ತು ಮೊಲ್ಲೆಮ್ ರಾಷ್ಟ್ರೀಯ ಉದ್ಯಾನವನ ಹಾಗೂ ಪಣಜಿಯಿಂದ ಸುಮಾರು 65 ಕಿ.ಮೀ ದೂರದಲ್ಲಿದೆ.
Image Credits : kevin standage
ಹಿಂದೆ ಗೋವಾ ಪೋರ್ಚುಗೀಸರ ಆಡಳಿತದಲ್ಲಿ ಇದ್ದಾಗ ಕಂಡ ಕಂಡಲ್ಲಿ ದೇವಸ್ಥಾನಗಳನ್ನು ಧ್ವಂಸ ಮಾಡುತ್ತಿದ್ದರು. ಒಂದಾನೊಂದು ಕಾಲದಲ್ಲಿ ಗೋವೆಯ ಸುತ್ತ ಹರಡಿಕೊಂಡಿದ್ದ ದೇವಾಲಯಗಳು ಪೋರ್ಚುಗೀಸರ ಆಕ್ರಮಣದ ಪ್ರಭಾವದಿಂದ ಪೊಂಡ ನಗರದ ಸುತ್ತಮುತ್ತ ಸ್ಥಳಾಂತರಗೊಂಡವು. ಆದರೆ ಮಹಾದೇವ ದೇವಾಲಯ ಮಾತ್ರ ಇದೆಲ್ಲರ ಮಧ್ಯೆಯೂ ತನ್ನ ಭವ್ಯತೆಯನ್ನು ಸಾರುತ್ತಾ ತಲೆ ಎತ್ತಿ ನಿಂತಿದೆ. ಈ ದೇವಾಲಯವು 12ನೇ ಶತಮಾನಕ್ಕೆ ಸೇರಿದ ಕದಂಬ ಯಾದವ ರಾಜರ ಆಳ್ವಿಕೆಗೆ ಒಳಪಟ್ಟಿರುವ ದೇವಾಲಯವಾಗಿದೆ.
ಸುರ್ಲಾ ಮಹಾದೇವ ದೇವಾಲಯವನ್ನು ಡೆಕ್ಕನ್ ಪ್ರಸ್ಥಭೂಮಿಯಿಂದ ತರಲಾಗಿರುವ ಅಪರೂಪದ ಬಸಾಲ್ಟ್ ಕಲ್ಲುಗಳಿಂದ ನಿರ್ಮಿಸಲಾಗಿದೆ, ಸಾವಿರಾರು ಕುಶಲಕರ್ಮಿಗಳು ಇದನ್ನು ಕೆತ್ತಿದ್ದಾರೆ. ಕದಂಬರ ಆಳ್ವಿಕೆಯಲ್ಲಿ ಬಸಾಲ್ಟ್ ಕಲ್ಲುಗಳಿಂದ ನಿರ್ಮಾಣವಾಗಿ ಇಂದಿಗೂ ಉಳಿದುಕೊಂಡಿರುವ ಏಕೈಕ ದೇವಾಲಯವೆಂದು ಇದು ಪರಿಗಣಿಸಲ್ಪಟ್ಟಿದೆ. ಈ ದೇವಾಲಯವು ಪಶ್ಚಿಮ ಘಟ್ಟದಬುಡದಲ್ಲಿರುವ ಹೆಚ್ಚು ಜನರು ಸಂಚರಿಸದೆ ಹಾಗೆಯೇ ಉಳಿದುಕೊಂಡಿದೆ.
ಇದನ್ನು ಓದಿ : ತಮಿಳುನಾಡಿನಲ್ಲಿದೆ ಶಿವನ ಅದ್ಭುತ ದೇಗುಲ, ಗಂಗೈಕೊಂಡ ಚೋಳಪುರಂ ದೇವಾಲಯ
ಈ ದೇವಾಲಯವು ಶಿವನಿಗೆ ಅರ್ಪಿತವಾಗಿದೆ ಮತ್ತು ಕರ್ನಾಟಕದ ಐಹೊಳೆಯಲ್ಲಿರುವ ದೇವಾಲಯಗಳನ್ನು ಪ್ರತಿನಿಧಿಸುವಂತಿದೆ. ಈ ದೇವಾಲಯದ ಗರ್ಭಗುಡಿಯ ಒಳಗೆ ಒಂದು ಪೀಠದ ಮೇಲೆ ಶಿವಲಿಂಗವನ್ನು ಸ್ಥಾಪಿಸಲಾಗಿದೆ. ಸ್ಥಳೀಯ ದಂತಕಥೆಯ ಪ್ರಕಾರ, ಒಂದು ದೊಡ್ಡ ನಾಗರಹಾವು ಮಂದ ಬೆಳಕಿನಲ್ಲಿರುವ ಒಳಾಂಗಣದಲ್ಲಿ ಶಾಶ್ವತವಾಗಿ ವಾಸವಾಗಿರುತ್ತದೆ ಎಂದು ಹೇಳುತ್ತಾರೆ.
Image Credits : Tourmet
ಈ ದೇವಾಲಯವು ಗರ್ಭಗೃಹ, ಅಂತಾರಾಳ ಮತ್ತು ಬಸಾಲ್ಟ್ ನಿಂದ ನಿರ್ಮಿಸಿದ ಕಂಬ, ನಂದಿ ಮಂಟಪವನ್ನು ಒಳಗೊಂಡಿದೆ. ನಾಲ್ಕು ಸ್ತಂಭಗಳಲ್ಲಿ ಆನೆಗಳು ಮತ್ತು ಸರಪಳಿಗಳ ಸಂಕೀರ್ಣವಾದ ಕೆತ್ತನೆಗಳನ್ನು ರೂಪಿಸಲಾಗಿದೆ. ಕಮಲದ ಹೂವುಗಳಿಂದ ಅಲಂಕರಿಸಲ್ಪಟ್ಟ ದೇವಾಲಯದ ಮೇಲಿನ ಆವರಣ ಮನಸೂರೆಗೊಳ್ಳುವಂತಿದೆ.ಕಟ್ಟಡದ ಒಳಭಾಗ ಮತ್ತು ಬದಿಗಳಲ್ಲಿ ನುರಿತ ಕುಶಲಕರ್ಮಿಗಳು ರಚಿಸಿದ ಸಂಕೀರ್ಣವಾದ ಕೆತ್ತನೆಗಳನ್ನು ನೋಡಬಹುದು. ಶಿವ, ಭಗವಾನ್ ವಿಷ್ಣು ಮತ್ತು ಬ್ರಹ್ಮನ ವಿಗ್ರಹಗಳು ದೇವಾಲಯದ ಬದಿಯಲ್ಲಿ ಗೋಚರಿಸುತ್ತದೆ.
ದೇವಾಲಯದ ಒಳಗೆ ಸಣ್ಣದಾದ ಮಂಟಪವೊಂದಿದ್ದು, ಇಲ್ಲಿ ತಲೆ ಇಲ್ಲದ ನಂದಿಯ ವಿಗ್ರಹವನ್ನು ನೋಡಬಹುದು. ಕಡಂಬ ಸಾಮ್ರಾಜ್ಯದ ಸಂಕೇತವಾದ, ಕುದುರೆಯನ್ನು ಮೆಟ್ಟಿಲು ಮಾಡುವ ಆನೆಯನ್ನು ಇಲ್ಲಿ ಕೆತ್ತಲಾಗಿದೆ. ರಗಾಡೋ ನಂದಿ ಇಲ್ಲೇ ಸಮೀಪದಲ್ಲೇ ಹರಿಯುತ್ತಿದ್ದು, ದೇವಸ್ಥಾನದ ಪೂಜೆಗೆ ಈ ನದಿಯ ನೀರನ್ನೇ ಬಳಸಿಕೊಳ್ಳಲಾಗುತ್ತದೆ. ಗೋವಾದಲ್ಲಿರುವ ಇತರ ದೇವಾಲಯಗಳಿಗೆ ಹೋಲಿಸಿದರೆ ಸುರ್ಲಾ ದೇವಾಲಯ ಪುಟ್ಟದೊಂದು ದೇವಾಲಯವಾಗಿದೆ. ಮತ್ತು ಇದು ನಗರಪ್ರದೇಶದಿಂದ ಬಹಳ ದೂರದಲ್ಲಿದೆ. ಹೀಗಿದ್ದೂ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಮಹಾದೇವನ ದರ್ಶನ ಪಡೆಯುತ್ತಾರೆ.
ಇದನ್ನು ಓದಿ : ಶಿಲ್ಪಕಲೆಯ ನೆಲೆವೀಡು ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ
ಸುರ್ಲಾ ಮಹಾದೇವ ದೇವಾಲಯದಲ್ಲಿ ಮಹಾ ಶಿವರಾತ್ರಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಸುತ್ತಮುತ್ತಲಿನ ಗ್ರಾಮದ ಜನರು ದೇವಾಲಯಕ್ಕೆ ಆಗಮಿಸಿ ಮಹಾ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಗೋವಾದ ರಾಜಧಾನಿ ಪಣಜಿಯಿಂದ ಸುರ್ಲಾ ದೇವಾಲಯ ಸುಮಾರು 65 ಕಿಲೋಮೀಟರ್ ನಷ್ಟು ದೂರದಲ್ಲಿದೆ. ಅದೇನೆ ಇರ್ಲಿ, ಪೋರ್ಚುಗೀಸರ, ಮುಸ್ಲಿಂ ದಾಳಿಯಿಂದಲೂ ಬಚಾವಾಗಿ ಉಳಿದುಕೊಂಡಿರುವ ಈ ಭವ್ಯ ದೇವಾಲಯ ನಮ್ಮ ಸಂಸ್ಕೃತಿಯ ಪ್ರತೀಕವೆಂದರೆ ತಪ್ಪಾಗಲಾರದು.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3xCzUba
July 10, 2021 at 11:59AM