ಮೊದಲ ಫಿಲ್ಮ್’ಫೇರ್ ಪ್ರಶಸ್ತಿ ಪಡೆದ ದಿಗ್ಗಜ
Feature Image Source : Upperstall.com
ಭಾರತೀಯ ಚಿತ್ರರಂಗದ ದಂತಕತೆ ದಿಲೀಪ್ ಕುಮಾರ್ ಇನ್ನಿಲ್ಲ. ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ ಇಂದು ಬೆಳಗ್ಗೆ 7.30ಕ್ಕೆ ಕೊನೆಯುಸಿರೆಳೆದಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಬಾಲಿವುಡ್ ನಟ ದಿಲೀಪ್ ಕುಮಾರ್ ಇಹಲೋಕ ತ್ಯಜಿಸಿದ್ದಾರೆ. ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ದಿಲೀಪ್ ಕುಮಾರ್ ಅವರಿಗೆ ಮುಂಬೈನ ಪಿಡಿ ಹಿಂದುಜ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು.
ಮಹಮ್ಮದ್ ಯೂಸುಫ್ ಖಾನ್, ದಿಲೀಪ್ ಕುಮಾರ್ ಆಗಿದ್ದು ಹೇಗೆ..?
Image Credits : Filmibeat
1922 ಡಿಸೆಂಬರ್ 11ರಲ್ಲಿ ಜನಸಿದ್ದ ದಿಲೀಪ್ ಕುಮಾರ್ ನಿಜವಾದ ಹೆಸರು ಮಹಮ್ಮದ್ ಯೂಸುಫ್ ಖಾನ್. ಹಾಗಾಗಿ ಇವರನ್ನು ಬಾಲಿವುಡ್ ನ ಮೊದಲ ಖಾನ್ ಎನ್ನಲಾಗುತ್ತಿತ್ತು. ದಿಲೀಪ್ ಕುಮಾರ್ ಹರೆಯದಲ್ಲಿದ್ದಾಗ ತಮ್ಮ ತಂದೆಯೊಂದಿಗೆ ಜಗಳ ಮಾಡಿಕೊಂಡು ಮುಂಬೈನ ಮನೆಯಿಂದ ಓಡಿ ಹೋಗಿ ಮಹಾರಾಷ್ಟ್ರದ ಪುಣೆ ನಗರಕ್ಕೆ ಬಂದಿಳಿದಿದ್ದರು. ಬಿಸಿನೆಸ್ ಮಾಡುವ ಆಲೋಚನೆಯಲ್ಲಿದ್ದ ರು ಅವರಿಗೆ ಬಾಂಬೆ ಟಾಕೀಸ್ ಮಾಲಕಿ ದೇವಿಕಾ ರಾಣಿ ಅವರ ಪರಿಚಯ ಆಯಿತು.
ದೇವಿಕಾ ರಾಣಿ ದಿಲೀಪ್ ಕುಮಾರ್ ಅವರಿಗೆ 1,250 ರೂ ಸಂಬಳಕ್ಕೆ ಕೆಲಸಕ್ಕೆ ಸೇರಿಸಿಕೊಂಡರು. ಆಗಿನ್ನೂ ಆವರು ಮೊಹಮ್ಮದ್ ಯೂಸುಫ್ ಆಗಿದ್ದರು. ದಿಲೀಪ್ ಕುಮಾರ್ ಎಂದು ನಾಮಕರಣ ಮಾಡಿದ್ದು ದೇವಿಕಾ ರಾಣಿ ಅವರೆಯೇ. ಬಾಂಬೆ ಟಾಕೀಸ್ ಮಾಲಕಿ ದೇವಿಕಾ ರಾಣಿ ಅವರು 1943ರಲ್ಲಿ ಮೊಹಮ್ಮದ್ ಯೂಸುಫ್ ಖಾನ್ ಅವರಿಗೆ ದಿಲೀಪ್ ಕುಮಾರ್ ಎಂದು ಸ್ಕ್ರೀನ್ ನೇಮ್ ಕೊಟ್ಟರು. ಅಲ್ಲಿಂದ ದಿಲೀಪ್ ಕುಮಾರ್ ಅಭಿನಯದ ಎಲ್ಲಾ ಚಿತ್ರಗಳೂ ಥಿಯೇಟರ್ ನಲ್ಲಿ ಸೂಪರ್ ಹಿಟ್ ಆದವು.
ಕೆಲ ಮೂಲಗಳ ಪ್ರಕಾರ, ಮುಸ್ಲಿಮ್ ಹೆಸರನ್ನು ಇಟ್ಟುಕೊಂಡರೆ ಜನರಿಗೆ ಇಷ್ಟವಾಗುವುದಿಲ್ಲ ಎಂಬ ಕಾರಣಕ್ಕೆ ಮೊಹಮ್ಮದ್ ಯೂಸುಫ್ ಖಾನ್ ಅವರು ತಮ್ಮ ಸಿನಿಮಾಗಳಿಗಾಗಿ ತಮ್ಮ ಹೆಸರನ್ನ ದಿಲೀಪ್ ಕುಮಾರ್ ಎಂದು ಬದಲಾಯಿಸಿಕೊಂಡರಂತೆ. ಆದರೆ, ಆರು ದಶಕಗಳ ಕಾಲ ಬಾಲಿವುಡ್ ಆಳಿದ ಅವರು ಹೆಸರಿಗಿಂತ ತಮ್ಮ ನಟನಾ ಸಾಮರ್ಥ್ಯದ ಮೂಲಕ ಜನಮನದಲ್ಲಿ ನೆಲೆಯಾದರು. ದಿಲೀಪ್ ಕುಮಾರ್, 1966ರಲ್ಲಿ ಸೈರಾ ಬಾನು ಅವರೊಂದಿಗೆ ವಿವಾಹವಾದರು.
ದಿಲೀಪ್ ಕುಮಾರ್ ಸಿನಿಮಾ ಜೀವನ
Image Credits : Media News 4 U
1944ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ದಿಲೀಪ್ ಕುಮಾರ್ ಅವರು 5 ದಶಕಗಳ ಕಾಲ ಸಕ್ರಿಯರಾಗಿದ್ದರು. ಜ್ವರ್ ಭಾತಾ ಚಿತ್ರದ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ದಿಲೀಪ್ ಅಂದಾಜ್, ದಾಗ್, ದೇವದಾಸ್, ಆಜಾದ್, ಶಕ್ತಿ, ಮಸಾಲ್, ಸೌದಾಗರ್, ಕ್ರಾಂತಿ, ಮಘಲ್ ಎ ಆಜಮ್, ಗಂಗಾ ಜಮುನಾ, ಮುಂತಾದ ಚಿತ್ರಗಳಲ್ಲಿ ಅದ್ಭುತ ಅಭಿನಯದಿಂದ ಜನರ ಗಮನ ಸೆಳೆದಿದ್ದಾರೆ. ಕೊಹಿನೂರ್, ಮುಘಲ್-ಏ-ಆಜಮ್, ಶಕ್ತಿ, ರಾಮ್ ಔರ್ ಶ್ಯಾಮ್ ಮುಂತಾದ ಕ್ಲಾಸಿಕ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
1950ರ ದಶಕ ದಿಲೀಪ್ ಕುಮಾರ್ ಅವರ ದಶಕ ಎಂದೇ ಕರೆಯಲಾಗುತ್ತದೆ. ಅವರ ವೃತ್ತಿಜೀವನದ ಅತಿದೊಡ್ಡ ಪ್ರಗತಿಯು 1949 ರಲ್ಲಿ ಆಂದಾಜ್ ಚಲನಚಿತ್ರದೊಂದಿಗೆ ಆರಂಭವಾಯಿತು. ಇದರಲ್ಲಿ ಅವರು ರಾಜ್ ಕಪೂರ್ ಮತ್ತು ನರ್ಗಿಸ್ ಅವರೊಂದಿಗೆ ನಟಿಸಿದರು. 1950ರ ದಶಕದಲ್ಲಿ ಜೋಗನ್, ಹಲ್ಚುಲ್, ಬಾಬುಲ್, ದೀದಾರ್, ನಯಾ ದೌರ್, ದೇವದಾಸ್, ದಾಗ್ ಮತ್ತು ಮಧುಮತಿ ಸೇರಿದಂತೆ ಅನೇಕ ಹಿಟ್ ಚಲನಚಿತ್ರಗಳನ್ನು ನೀಡುವ ಮೂಲಕ ಯಶಸ್ಸಿನ ಉತ್ತುಂಗಕ್ಕೆ ಏರಿದ್ದರು
ಮೊಘಲ್-ಇ-ಆಜಮ್ ದಿಲೀಪ್ ಕುಮಾರ್ ಅವರ ಹೆಚ್ಚು ಗಳಿಕೆ ಕಂಡ ಚಿತ್ರ. 1960ರ ದಶಕದಲ್ಲಿ, ಅವರು ಮೊಘಲ್-ಇ-ಆಜಮ್ ಚಿತ್ರದಲ್ಲಿ ನಟಿಸಿದರು. ಇದು ಭಾರತೀಯ ಚಲನಚಿತ್ರ ಇತಿಹಾಸದಲ್ಲಿ ಅತಿ ಹೆಚ್ಚು ಗಳಿಕೆ ಕಂಡು ಈ ದಾಖಲೆಯನ್ನು 11 ವರ್ಷಗಳವರೆಗೆ ಉಳಿಸಿಕೊಂಡಿತ್ತು..
ತಮ್ಮ ವೃತ್ತಿ ಜೀವನದ ಆರಂಭದಲ್ಲಿ ದಿಲೀಪ್ ಕುಮಾರ್ ಅವರು ಹೆಚ್ಚಾಗಿ ಟ್ರಾಜಿಡಿ ಪಾತ್ರಗಳಲ್ಲಿ ಅಭಿನಯಿಸಿದರು. ಇದರಿಂದಲೇ ಅವರಿಗೆ ಟ್ರಾಜಿಡಿ ಕಿಂಗ್ ಎಂಬ ಹೆಸರು ಬಂತು. ದಿಲೀಪ್ ಕುಮಾರ್ ನಟಿಸಿದ ಕೊನೇ ಸಿನಿಮಾ ‘ಖಿಲಾ’ 1998ರಲ್ಲಿ ತೆರೆಕಂಡಿತು. ಆ ನಂತರ ಅವರು ಯಾವುದೇ ಚಿತ್ರದಲ್ಲೂ ಅಭಿನಯಿಸಿಲ್ಲ.
ಪ್ರಶಸ್ತಿ-ಪುರಸ್ಕಾರಗಳ ಗೌರವ
Image Credits : Twitter
ಫಿಲ್ಮ್’ಫೇರ್ ಪ್ರಶಸ್ತಿ ಆರಂಭವಾದಾಗ ಅದನ್ನು ಪಡೆದ ಮೊದಲ ವ್ಯಕ್ತಿ ದಿಲೀಪ್ ಕುಮಾರ್. ದಿಲೀಪ್ ಕುಮಾರ್ ಅವರಿಗೆ ಭಾರತೀಯ ಸಿನಿಮಾ ಜಗತ್ತಿನ ಅತ್ಯುನ್ನತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಹ ಲಭಿಸಿದೆ. 2015ರಲ್ಲಿ ಕೇಂದ್ರ ಸರ್ಕಾರ ಇವರಿಗೆ ಪದ್ಮವಿಭೂಷಣ ನೀಡಿ ಗೌರವಿಸಿದೆ. 2000ರಲ್ಲಿ ರಾಜ್ಯಸಭಾ ಸದಸ್ಯರೂ ಆಗಿದ್ದರು. 1998ರಲ್ಲಿ ಪಾಕಿಸ್ತಾನ ಸರ್ಕಾರ ದಿಲೀಪ್ ಕುಮಾರ್ ಅವರಿಗೆ ನಿಶಾನ್-ಇ-ಇಮ್ತಿಯಾಜ್ ಪ್ರಶಸ್ತಿ ನೀಡಿ ಗೌರವಿಸಿದೆ. ಇವಲ್ಲದೇ ದಿಲೀಪ್ ಕುಮಾರ್ ಅತ್ಯುತ್ತಮ ನಟನೆಗಾಗಿ 8 ಫಿಲಂ ಫೇರ್ ಪ್ರಶಸ್ತಿಗಳನ್ನ ಪಡೆದಿದ್ದಾರೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3jPG9UN
July 07, 2021 at 12:11PM