ದೇಶದ ಈ ದೇವಾಲಯಗಳಿಗೆ ಪುರುಷರಿಗೆ ಪ್ರವೇಶ ನಿಷೇಧ, ಮಹಿಳೆಯರಿಗೆ ಮಾತ್ರ ಪ್ರವೇಶ..!
Featured Image Credits : tripoto.com
ಹಿಂದೂ ಧರ್ಮದಲ್ಲಿ ದೇವಸ್ಥಾನ, ಪೂಜೆ, ಪೂಜಾ ಪರಿಕರಗಳು ಮೊದಲಾದವುಗಳಿಗೆ ಮಹತ್ವವಾದ ಸ್ಥಾನವಿದೆ. ಹೀಗಾಗಿಯೇ ಮುಟ್ಟಾದಾಗ ಹೆಣ್ಣುಮಕ್ಕಳು ದೇವಸ್ಥಾನಗಳಿಗೆ ಹೋಗಬಾರದು, ಪೂಜೆಯಲ್ಲಿ ಪಾಲ್ಗೊಳ್ಳಬಾರದು ಎಂದು ಹೇಳುತ್ತಾರೆ. ಈ ರೀತಿಯ ನಿಯಮಗಳಲ್ಲದೆಯೂ ಭಾರತದಲ್ಲಿ ಕೆಲವೊಂದು ದೇವಾಲಯಗಳಲ್ಲಿ ಪ್ರವೇಶ ನೀಡುವುದಿಲ್ಲ. ಮುಖ್ಯವಾಗಿ ದೇಶದ ಪ್ರಮುಖ ದೇವಾಲಯವಾದ ಶಬರಿಮಲೆಗೆ ಹೆಣ್ಣುಮಕ್ಕಳಿಗೆ ಪ್ರವೇಶವಿಲ್ಲ. ಈ ಕುರಿತು ಹಿಂದೊಮ್ಮೆ ಹಲವು ವಾದ, ವಿವಾದಗಳು, ಪ್ರತಿಭಟನೆಗಳು ಸಹ ನಡೆದಿದ್ದವು.
ಹೆಣ್ಣುಮಕ್ಕಳು ಪ್ರವೇಶಿಸಬಾರದ ಶಬರಿಮಲೆ ದೇವಾಲಯದ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ನಿಮಗೆ ಗೊತ್ತಾ..ಭಾರತದಲ್ಲಿ ಹೆಣ್ಣುಮಕ್ಕಳ ಪ್ರವೇಶ ನಿಷೇಧಿಸಿರುವ ದೇವಸ್ಥಾನ ಇರುವುದು ಮಾತ್ರವಲ್ಲ, ಪುರುಷರ ಪ್ರವೇಶವನ್ನೂ ನಿಷೇಧಿಸುವ ದೇವಸ್ಥಾನಗಳೂ ಇವೆ. ಅಚ್ಚರಿಯಾಯ್ತಾ ಆದರೂ ನಿಜ. ಆ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
ಹೌದು, ಭಾರತದಲ್ಲಿರುವ ಈ ಕೆಲವು ದೇವಾಲಯಗಳಲ್ಲಿ ಪುರುಷರಿಗೆ ಪ್ರವೇಶವಿಲ್ಲ. ದೇಶದಲ್ಲಿರುವ ಕೆಲವೊಂದು ದೇವಾಲಯಗಳಲ್ಲಿ ಅಲ್ಲಿಯದ್ದೇ ಆದ ಕಟ್ಟುಪಾಡುಗಳಿವೆ. ಹೀಗಾಗಿ ಅಲ್ಲಿಯ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಇಂಥದ್ದೇ ಕಟ್ಟುಪಾಡುಗಳಿಂದಾಗಿಯೇ ಕೆಲವೊಬ್ಬರಿಗೆ ಅಲ್ಲಿ ಪ್ರವೇಶ ನಿಷೇಧಿಸಲಾಗಿರುತ್ತದೆ. ಅದೇ ರೀತಿ ಪುಷ್ಕರದಲ್ಲಿರುವ ಬ್ರಹ್ಮ ದೇವಾಲಯ, ಬಿಹಾರದಲ್ಲಿರುವ ಮಠ ದೇವಾಲಯ, ಗೌಹಾಟಿಯಲ್ಲಿರುವ ಕಾಮಾಕ್ಯ ದೇಗುಲ, ಕನ್ಯಾಕುಮಾರಿಯಲ್ಲಿರುವ ಕುಮಾರಿ ಅಮ್ಮನ್ ದೇವಾಲಯ, ಕೇರಳದಲ್ಲಿರುವ ಆಟ್ಟುಕಲ್ ದೇವಾಲಯಗಳಲ್ಲಿ ಪುರುಷರ ಪ್ರವೇಶವನ್ನು ನಿಷೇಧಿಸಲಾಗಿದೆ.
ಇದನ್ನು ಓದಿ : ದೇವಸ್ಥಾನ, ಮನೆಯೊಳಗೆ ಚಪ್ಪಲಿ ಧರಿಸಬಾರದು ಯಾಕೆ..?
ರಾಜಸ್ಥಾನದ ಪುಷ್ಕರದಲ್ಲಿರುವ ಬ್ರಹ್ಮ ದೇವಾಲಯ
Image Source : tourmyindia.com
ಭಗವಾನ್ ಬ್ರಹ್ಮನನ್ನು ಪೂಜಿಸುವ ಪ್ರಸಿದ್ಧ ದೇವಾಲಯವು ರಾಜಸ್ಥಾದ ಪುಷ್ಕರದಲ್ಲಿದೆ. ಈ ದೇವಾಲಯವನ್ನು 14ನೇ ಶತಮಾನದಲ್ಲಿ ನಿರ್ಮಿಸಲಾಯಿತು ಎಂದು ಹೇಳುತ್ತಾರೆ. ಈ ದೇವಸ್ಥಾನದೊಳಗೆ ವಿವಾಹಿತ ಪುರುಷರು ಪ್ರವೇಶಿಸುವಂತಿಲ್ಲ. ಸರಸ್ವತಿ ದೇವಿಯ ಶಾಪದಿಂದಾಗಿ, ಈ ದೇವಾಲಯದೊಳಗೆ ವಿವಾಹಿತ ಪುರುಷರಿಗೆ ಪ್ರವೇಶಿಸಲು ಅವಕಾಶವಿಲ್ಲ ಎಂದು ಹೇಳುತ್ತಾರೆ. ಅವರು ದೇವಾಲಯದ ಅಂಗಳದಿಂದ ಕೈ ಮುಗಿಯಬಹುದು. ಮಹಿಳೆಯರು ಮಾತ್ರ ದೇವಸ್ಥಾನಕ್ಕೆ ಹೋಗಿ ಪೂಜಿಸುತ್ತಾರೆ. ಕಾರ್ತಿಕ ಪೂರ್ಣಿಮಾದಂದು ಈ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯುತ್ತದೆ.
ಬಿಹಾರದಲ್ಲಿರುವ ಮಠ ದೇವಸ್ಥಾನ
Image Credits : muzaffarpurcity.com
ಬಿಹಾರದ ಮುಜಾಫರ್ಪುರ್ ನಲ್ಲಿರುವ ದೇವಾಲಯಗಳಿಗೂ ಪುರುಷರಿಗೆ ಪ್ರವೇಶವಿಲ್ಲ. ದೇವಾಲಯದ ಪೂಜಾರಿ ಸಹ ಮಹಿಳೆಯೇ ಆಗಿದ್ದಾರೆ. ಹೆಣ್ಣುಮಕ್ಕಳನ್ನು ಬಿಟ್ಟು ಬೇರೆ ಯಾರೂ ಈ ದೇವಾಲಯದೊಳಗೆ ಬರುವಂತಿಲ್ಲ.
ಇದನ್ನು ಓದಿ : ರುದ್ರಾಕ್ಷಿ ಎಂದರೇನು..? ಅದನ್ನು ಧರಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ..?
ಗುವಾಹಟಿಯಲ್ಲಿರುವ ಕಾಮಾಕ್ಯ ದೇವಸ್ಥಾನ
Image source : The Sentinel Assam
ದೇವಿಯ ಎಲ್ಲಾ ಶಕ್ತಿಪೀಠಗಳ ಪೈಕಿ, ಕಾಮಾಕ್ಯ ಶಕ್ತಿಪೀಠದ ಸ್ಥಳವು ಮೇಲ್ಭಾಗದಲ್ಲಿದೆ. ತಾಯಿಯ ಮುಟ್ಟಿನ ದಿನಗಳಲ್ಲಿ ಇಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಸಮಯದಲ್ಲಿ, ದೇವಾಲಯದಲ್ಲಿ ಪುರುಷರ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಈ ಸಮಯದಲ್ಲಿ ಸಹ ಒಬ್ಬ ಮಹಿಳೆ ಮಾತ್ರ ಅರ್ಚಕರ ಕೆಲಸವನ್ನು ಮಾಡುತ್ತಾರೆ. ಇದೇ ರೀತಿ ವಿಶಾಖಂಪಟ್ಟಣಂನಲ್ಲಿರುವ ಕಾಮಾಕ್ಯ ಪೀಠದಲ್ಲೂ ಪುರುಷರಿಗೆ ದೇವಾಲಯದೊಳಗೆ ಪ್ರವೇಶವಿಲ್ಲ.
ಕನ್ಯಾಕುಮಾರಿಯಲ್ಲಿರುವ ಕುಮಾರಿ ಅಮ್ಮನ್ ದೇವಾಲಯ
Image Credits : kanyakumaritourism.in
ಕನ್ಯಾಕುಮಾರಿಯಲ್ಲಿರುವ ಕುಮಾರಿ ಅಮ್ಮನ್ ದೇವಾಲಯದೊಳಗೂ ಪುರುಷರಿಗೆ ಪ್ರವೇಶ ನೀಡಲಾಗುವುದಿಲ್ಲ. ವಿವಾಹಿತ ಪುರುಷರು ದೇವಾಲಯದೊಳಗೆ ಬರಕೂಡದು. ಈ ಪ್ರದೇಶವು ಪಾರ್ವತಿ ದೇವಿ, ಶಿವನನ್ನು ಗಂಡನಾಗಿ ಪಡೆಯಲು ತಪಸ್ಸು ನಡೆಸಿದ ಸ್ಥಳವೆಂದು ಹೇಳಲಾಗುತ್ತದೆ. ಈ ದೇವಾಲಯದಲ್ಲಿ ಭಗವತಿ ದೇವಿಯನ್ನು ಪೂಜಿಸುತ್ತಾರೆ. ಭಗವತಿ ಮಾತಾ ಅವರನ್ನು ಸನ್ಯಾಸ ದೇವಿ ಎಂದೂ ಸಹ ಕರೆಯುತ್ತಾರೆ. ಆದ್ದರಿಂದ ಸನ್ಯಾಸಿ ಪುರುಷರು ದೇವಾಲಯದದ್ವಾರದಿಂದ ತಾಯಿಯ ದರ್ಶನ ಪಡೆಯಬಹುದು..
ಇದನ್ನು ಓದಿ : ತಮಿಳುನಾಡಿನಲ್ಲಿದೆ ಮಾನವ ದೇಹದ ಆಕಾರದ ಚಿದಂಬರಂ ನಟರಾಜ ದೇವಾಲಯ
ಅಟ್ಟುಕಲ್ ಭಗವತಿ ದೇವಸ್ಥಾನ
Image Source : Kerala tourism.org
ಕೇರಳ ರಾಜ್ಯದಲ್ಲಿರುವ ಅಟ್ಟುಕಲ್ ಭಗವತಿ ದೇವಸ್ಥಾನ ಮಹಿಳೆಯರಿಗೆ ಪ್ರಾಧಾನ್ಯತೆ ನೀಡುವ ದೇವಸ್ಥಾನವಾಗಿದೆ. ಪುರುಷರಿಗೆ ದೇವಾಲಯಕ್ಕೆ ಪ್ರವೇಶವಿಲ್ಲ. ಈ ದೇವಸ್ಥಾನದಲ್ಲಿ ನಡೆಯುವ ಪೊಂಗಲ್ ಉತ್ಸವದಲ್ಲಿ ಲಕ್ಷಾಂತರ ಮಂದಿ ಭಾಗವಹಿಸುತ್ತಾರೆ. 10 ದಿನಗಳ ಕಾಲ ನಡೆಯುವ ಉತ್ಸವ ಫೆಬ್ರವರಿ-ಮಾರ್ಚ್ನಲ್ಲಿ ನಡೆಯುತ್ತದೆ. ಇಲ್ಲಿ ಉತ್ಸವದಲ್ಲಿ ಭಕ್ತಾಧಿಗಳು ದೇವರಿಗೆ ಬಳೆಯನ್ನು ಅರ್ಪಿಸುತ್ತಾರೆ. ಇಲ್ಲಿ ನಡೆಯುವ ಪೊಂಗಲ್ ಉತ್ಸವ ಗಿನ್ನೆಸ್ ಬುಕ್ ನಲ್ಲಿಯೂ ದಾಖಲಾಗಿದೆ. ಈ ಪೊಂಗಲ್ ಉತ್ಸವ ಅತ್ಯಂತ ಹೆಚ್ಚು ಜನರು ಒಂದೆಡೆ ಸೇರುವ ಧಾರ್ಮಿಕ ಉತ್ಸವವೆಂದು ಪರಿಗಣಿಸಲ್ಪಟ್ಟಿದೆ.
ಕೇರಳದ ಚಕ್ಕಲತ್ತುಕಾವು ದೇವಸ್ಥಾನ
Image Source : Kerala Tourism.org
ಕೇರಳದ ಚಕ್ಕಲತ್ತುಕಾವು ದೇವಸ್ಥಾನದಲ್ಲಿ ಭಗವತಿ ದೇವಿಯನ್ನು ಪೂಜಿಸಲಾಗುತ್ತದೆ. ಈ ದೇವಾಲಯದಲ್ಲಿ ಪೊಂಗಲ್ ಸಮಯದಲ್ಲಿ ನಾರೀ ಪೂಜಾ ಹೆಸರಿನಲ್ಲಿ ಪ್ರತಿವರ್ಷ ಮಹಿಳೆಯರನ್ನು ಪೂಜಿಸಲಾಗುತ್ತದೆ. ಡಿಸೆಂಬರ್ ಮೊದಲ ಶುಕ್ರವಾರದಿಂದ 10 ದಿನಗಳ ವರೆಗೆ ಈ ಪೂಜೆ ನಡೆಯುತ್ತದೆ. ಮತ್ತು ಈ ಸಮಯದಲ್ಲಿ ಪುರುಷರು ದೇವಾಲಯಕ್ಕೆ ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಲ್ಲದೆ, ಪೂಜೆಯ ಕೊನೆಯ ದಿನದಂದು ಪುರುಷರು 10 ದಿನಗಳ ಕಾಲ ವ್ರತ ನಡೆಸಿದ ಮಹಿಳೆಯರ ಪಾದ ತೊಳೆದು ಪೂಜಿಸುವ ಸಂಪ್ರದಾಯವಿದೆ.
ಇದನ್ನು ಓದಿ : ಪೂಜೆಯ ಸಂದರ್ಭ ಅಗರಬತ್ತಿಯನ್ನು ಹಚ್ಚಿಡುವುದು ಯಾಕೆ..? ಇದರ ಹಿಂದಿರುವ ಕಾರಣವೇನು..?
ಅದೇನೆ ಇರ್ಲಿ, ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಪ್ರವೇಶ ನೀಡದ ಹಲವು ದೇವಸ್ಥಾನಗಳು ದೇಶದಲ್ಲಿವೆ ಅನ್ನೋದೆ ಅಚ್ಚರಿಯ ವಿಚಾರ. ಇವುಗಳ ಬಗ್ಗೆ ಭಕ್ತಿ, ನಿಷ್ಠ, ನಂಬಿಕೆ ಹೊಂದಿರುವ ಭಕ್ತಾಧಿಗಳು ಇದುವರೆಗೂ ಈ ಬಗ್ಗೆ ಏನನ್ನೂ ಪ್ರಶ್ನಿಸದೆ ಈ ಆಚರಣೆಗಳನ್ನು, ನಿಯಮಗಳನ್ನು ವರ್ಷಗಳಿಂದ ತಪ್ಪದೇ ಪಾಲಿಸುತ್ತಾ ಬಂದಿದ್ದಾರೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3yOGtrl
July 08, 2021 at 05:36PM