Featured Image Source : Dheivegam
ಹಿಂದೂ ಧರ್ಮದಲ್ಲಿ ಆಚಾರ-ವಿಚಾರ, ಪದ್ಧತಿ, ಸಂಪ್ರದಾಯಗಳಿಗೆ ಹೆಚ್ಚಿನ ಮಹತ್ವವಿದೆ. ಮಗು ಹುಟ್ಟುವಲ್ಲಿಂದ ಹಿಡಿದು ವ್ಯಕ್ತಿ ಸಾಯುವ ವರೆಗೆ ಜೀವನದ ಪ್ರತಿಯೊಂದು ಘಟ್ಟವನ್ನೂ ಸಂಪ್ರದಾಯಬದ್ಧವಾಗಿ ನಡೆಸಲಾಗುತ್ತದೆ. ನಾಮಕರಣ, ಪೂಜೆ, ಗೃಹಪ್ರವೇಶ, ಮದುವೆ, ಸೀಮಂತ ಹೀಗೆ ಎಲ್ಲವನ್ನೂ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ಆ ರೀತಿ ಕ್ರಮಬದ್ಧವಾಗಿ ನಡೆದರಷ್ಟೇ ಆ ಕಾರ್ಯವು ಸಂಪನ್ನ ಎಂಬ ನಂಬಿಕೆಯಿದೆ. ಮದುವೆಯ ಸಂದರ್ಭದಲ್ಲೂ ಅಷ್ಟೇ ಈ ರೀತಿ ಎಲ್ಲಾ ವಿಧಾನಗಳನ್ನು ಅನುಸರಿಸಿ ಶಾಸ್ತ್ರೋಕ್ತವಾಗಿ ಮದುವೆ ನಡೆಸಲಾಗುತ್ತದೆ.
ಮದುವೆಗೆ ಹಿಂದೂ ಸಂಫ್ರದಾಯದಲ್ಲಿ ಮಹತ್ತರ ಸ್ಥಾನವಿದೆ. ಮದುವೆಯನ್ನು ಒಂದು ಪವಿತ್ರ ಬಂಧನವೆಂದು ಪರಿಗಣಿಸಲಾಗುತ್ತದೆ. ಮದುವೆಯಲ್ಲಿ ಅರಿಶಿನ, ಧಾರೆ ಎರೆಯುವುದು, ಮಾಂಗಲ್ಯ ಧಾರಣೆ ಹೀಗೆ ಹಲವು ಸಂಪ್ರದಾಯಗಳಿವೆ. ಮದುವೆಯ ಸಂಕೇತವಾಗಿ ಸ್ತ್ರೀಯರಿಗೆ ತಾಳಿ, ಕುಂಕುಮ, ಗಾಜಿನ ಬಳೆ, ಕಾಲುಂಗುರ ಹೂ ನೀಡಲಾಗತ್ತದೆ. ಇವು ಪ್ರತಿಯೊಬ್ಬ ಗೃಹಿಣಿಗೂ ಸೌಭಾಗ್ಯವಾದದ್ದು ಎಂದು ಪರಿಗಣಿಸಲಾಗುತ್ತದೆ. ಅದರಲ್ಲಿ ವರ ವಧುವಿಗೆ ಧಾರಣೆ ಮಾಡೋ ಮಾಂಗಲ್ಯಕ್ಕೂ ಅತಿ ಹೆಚ್ಚು ಪ್ರಾಮುಖ್ಯತೆ ಇದೆ. ಮಂಗಳಸೂತ್ರ, ತಾಳಿ, ಕಂಠಿ, ಕರಿಮಣಿ ಹೀಗೆ ವರ ವಧುವಿಗೆ ಧಾರಣೆ ಮಾಡೋ ಮಾಂಗಲ್ಯಕ್ಕೆ ವಿವಿಧ ಹೆಸರುಗಳಿವೆ.
ಇದನ್ನು ಓದಿ : ಮುಂಜಾನೆ ಸೂರ್ಯನಿಗೆ ನೀರು ಅರ್ಪಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ..?
ಹಿಂದೂ ಧರ್ಮದಲ್ಲಿ ಅತಿ ಪಾವಿತ್ರ್ಯದ, ಅತ್ಯಂತ ಭಾವನಾತ್ಮಕವಾದ ಆಭರಣವೆಂದರೆ ಮಾಂಗಲ್ಯ. ಹುಡುಗಿ ವಿವಾಹಿತಳೇ ಇಲ್ಲವೋ ಎಂಬುದನ್ನು ಆಕೆಯ ಕತ್ತಿನಲ್ಲಿರುವ ಕರಿಮಣಿ ಸರದಿಂದ ಅಥವಾ ಕಾಲುಂಗುರದಿಂದ ಗುರುತಿಸಲಾಗುತ್ತದೆ. ಮಾಂಗಲ್ಯಧಾರಣದ ಸಂಪ್ರದಾಯ ಹೇಗೆ ಬಂತು..? ಬಂಗಾರದೊಡವೆಯಲ್ಲಿ ಕರಿಮಣಿಗಳೇಕೆ..? ವಿವಾಹವಾದ ಮಹಿಳೆಯರು ಮಾಂಗಲ್ಯ ಧರಿಸುವುದು ಯಾಕೆ ಮುಖ್ಯ ಎಂಬುದನ್ನು ತಿಳಿಯೋಣ..
Image Credits : Aadishakti.co
ಕರಿಮಣಿ ಸರ ಅದೆಷ್ಟೇ ಆಧುನಿಕ ರೀತಿಯಲ್ಲಿ ತಯಾರಿಸದ್ದಾಗಿರಲಿ, ಅದರಲ್ಲಿ ಕರಿಮಣಿ ಸರ ಇಲ್ಲದಿದ್ದರೆ ಅದು ಸಾಮಾನ್ಯ ಸರ ಎನಿಸಿಕೊಂಡು ಬಿಡುತ್ತದೆ. ಬಂಗಾರದ ಜತೆಗೆ ಕರಿಮಣಿ ಇದ್ದರಷ್ಟೇ ಅದನ್ನು ಪವಿತ್ರವೆಂದು ಭಾವಿಸಲಾಗುತ್ತದೆ. ವಿವಾಹಿತ ಮಹಿಳೆ ಮೇಲೆ ಕೆಟ್ಟ ದೃಷ್ಟಿ ಬೀಳದಿರಲಿ ಎಂದು ಮಂಗಳಸೂತ್ರದಲ್ಲಿ ಕಪ್ಪು ಬಣ್ಣದ ಮಣಿಗಳನ್ನು ಪೋಣಿಸಲಾಗುತ್ತದೆ ಎಂಬ ನಂಬಿಕೆಯಿದೆ. ಆದಿಶಂಕರರು ರಚಿಸಿದ ಸೌಂದರ್ಯ ಲಹರಿಯಲ್ಲಿ ಶಿವನು ಪಾರ್ವತಿಗೆ ಮಂಗಲಸೂತ್ರವನ್ನು ಕಟ್ಟಿದ್ದನಂತೆ. ಲಲಿತಾ ಸಹಸ್ರನಾಮದ ಸೌಂದರ್ಯ ಲಹರಿಗಳು ಮಾಂಗಲ್ಯದಲ್ಲಿ ಚಾಲ್ತಿಯಿರೋ ಸ್ತೋತ್ರಗಳಾಗಿವೆ.
ವಿವಾಹಿತ ಮಹಿಳೆಗೆ ಧರ್ಮ, ಸಂಸ್ಕೃತಿ, ನಿಯಮಗಳ ಬಗ್ಗೆ ಯಾವತ್ತೂ ಗೌರವವಿಡುವುದರ ಸೂಚಕವಾಗಿ, ತನ್ನ ಕರ್ತವ್ಯ, ಜವಾಬ್ದಾರಿಗಳನ್ನು ನೆನಪಿಸಲು ಮಾಂಗಲ್ಯ ಧಾರಣೆ ಮಾಡುತ್ತಾರೆ ಎಂದು ಹೇಳಲಾಗಿದೆ. ಮಾಂಗಲ್ಯಧಾರಣೆಯು ಮಹಿಳೆಯು ತನ್ನ ವಿವಾಹಿತೆ ಎಂಬುದನ್ನು ಸ್ವತಃ ತಿಳಿಯುವುದಕ್ಕೆ ಪರ ಪುರುಷರಿಗೆ ತಿಳಿಯಪಡಿಸುವುದಕ್ಕೆ ಅಗತ್ಯವೆಂದು ಪರಿಗಣಿಸಲಾಗಿದೆ. ಮಂಗಳಸೂತ್ರವನ್ನು ಶಿವ ಮತ್ತು ಪಾರ್ವತಿಯ ಪ್ರತೀಕವೆಂದು ನಂಬಲಾಗಿದೆ.
ಇದನ್ನು ಓದಿ : ಲಿಪ್ ಸ್ಟಿಕ್ ಹಚ್ಚುವಾಗ ಈ ಮಿಸ್ಟೇಕ್ಗಳನ್ನು ಮಾಡಬೇಡಿ
ಮಾಂಗಲ್ಯ ಸರದಲ್ಲಿರುವ ಕಪ್ಪು ಮಣಿಗಳು ಋಣಾತ್ಮಕ ಶಕ್ತಿಯನ್ನೆಲ್ಲಾ ಹೀರಿಕೊಳ್ಳುತ್ತದೆ. ಬಳಿಕ ಆ ಮಣಿಗಳು ನೆಗೆಟಿವ್ ಎನರ್ಜಿಯನ್ನು ವಧು ಹಾಗೂ ಅವಳ ಕುಟುಂಬವನ್ನು ತಗುಲದಂತೆ ಮಾಡುತ್ತದೆ ಎಂದು ನಂಬಲಾಗುತ್ತದೆ. ಕರಿಮಣಿ ಸರದ ಮತ್ತೊಂದು ವೈಶಿಷ್ಟ್ಯವೇನೆಂದರೆ ಇದು ಎದೆಯ ಭಾಗದಲ್ಲಿ ಉಂಟಾಗುವ ಉಷ್ಣತೆಯನ್ನು ಹೀರಿಕೊಳ್ಳುತ್ತದೆ. ಇದರ ಅತಿ ಮುಖ್ಯವಾದ ಉಪಯುಕ್ತತೆ ಎಂದರೆ ಹಾಲುಣಿಸುವ ತಾಯಿಯಲ್ಲಿ ಎದೆಹಾಲಿನ ಉಷ್ಣತೆಯನ್ನು ಹೀರಿಕೊಂಡು ಎದೆಹಾಲು ಕೆಡದಂತೆ ಶಿಶುವಿಗೆ ಉಣಲು ಅನುಕೂಲವಾದ ಸಮ ಉಷ್ಣತೆಯಲ್ಲಿರಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.
Image Source : Theindusparent
ಸ್ತ್ರೀಯರು ಮಾಂಗಲ್ಯ ಸರದಲ್ಲಿ ಕೇವಲ ಕರಿಮಣಿ ಮಾತ್ರವಲ್ಲ ಹವಳವನ್ನೂ ಧರಿಸುವ ಸಂಪ್ರದಾಯ ಹಿಂದೂ ಧರ್ಮದಲ್ಲಿದೆ. ಅದು ಕೇವಲ ಅಲಂಕಾರಕ್ಕೆ ಮಾತ್ರವಲ್ಲದೆ ಅದೆಷ್ಟೋ ಒಳ್ಳೆಯದನ್ನು ಮಾಡುತ್ತದೆ ಎಂದು ನಂಬಲಾಗುತ್ತದೆ. ಹವಳ ಕುಜನಿಗೆ ಪ್ರೀತಿಕಾರಕ ಮತ್ತು ಕರಿ ಮಣಿ ಚಂದ್ರನಿಗೆ ಪ್ರೀತಿಕಾರಕ. ಇವೆರಡು ಸೂರ್ಯ-ಚಂದ್ರರ ತೇಜಸ್ಸು. ಸ್ತ್ರೀಯರಲ್ಲಿ ಲೀನವಾಗಿ ಇರುತ್ತವೆ ಎಂದು ಹೇಳುತ್ತಾರೆ.
ಸ್ತ್ರೀಯರ ಶರೀರಕ್ಕೆ ಬೇಕಾದ ಉತ್ತೇಜನವನ್ನು ಹವಳ ನೀಡುತ್ತದೆ. ನಾಡಿ ಮಂಡಲವನ್ನು ಚುರುಕಾಗಿ ಇಡುತ್ತದೆ. ಕರಿ ಮಣಿ ಶರೀರದ ಅತಿಯಾದ ತಾಪಮಾನವನ್ನು ಕಡಿಮೆ ಮಾಡುತ್ತದೆ. ಮನಸ್ಸಿಗೆ ಪ್ರಶಾಂತತೆ ಮತ್ತು ಸಹನೆಯನ್ನು ನೀಡುತ್ತದೆ ಎನ್ನುತ್ತಾರೆ. ಅಸಲಿಯಾದಂತಹ ಹವಳ ಧರಿಸುವುದರ ಹಿಂದೆ ನಮ್ಮ ಋಷಿಮುನಿಗಳು ವಿಶೇಷವಾದ ರಹಸ್ಯ ಅಡಗಿದೆ ಎಂದು ಹೇಳಿದ್ದಾರೆ. ಆ ರಹಸ್ಯವೇನೆಂದರೆ ಕರಿಮಣಿ, ಹವಳವನ್ನು ಧರಿಸಿದ್ದರಿಂದಲೇ ಹಿಂದಿನ ಕಾಲದ ಸ್ತ್ರೀಯರಿಗೆ ಶಸ್ತ್ರಚಿಕಿತ್ಸೆಗೆ ಒಳಪಟ್ಟಿರುವುದು ಬಹಳ ವಿರಳ. ಆದರೆ, ಈಗ ಶಸ್ತ್ರಚಿಕಿತ್ಸೆ ಇಲ್ಲದೇ ಪ್ರಸವವು ಸಹ ನಡೆಯುವುದೇ ಇಲ್ಲ ಎಂಬಂತೆ ಆಗಿದೆ.
ಇದನ್ನು ಓದಿ : ಉಗುರುಗಳ ಮೇಲೆ ಮೂಡುವ ಅರ್ಧ ಚಂದ್ರಾಕೃತಿಯ ಬಿಳಿಯ ಬಣ್ಣ ಏನನ್ನು ಸೂಚಿಸುತ್ತದೆ..?
ಈಗಿನ ಆಧುನಿಕತೆ ಯ ಹೆಸರಿನಲ್ಲಿ ಕೆಲವರು ಮಾಂಗಲ್ಯವನ್ನು ಕೇವಲ ಚಿನ್ನದ ಸರವನ್ನಾಗಿ ಮಾರ್ಪಾಡು ಮಾಡಿಕೊಂಡಿದ್ದಾರೆ. ಹೆಸರಿಗಷ್ಟೇ ಮಾಂಗಲ್ಯಸರ, ಆದರೆ ಇದರಲ್ಲಿ ಕಪ್ಪು ಮಣಿ, ಹವಳ ಇರುವುದಿಲ್ಲ. ಹಲವರು ಮಾಂಗಲ್ಯವನ್ನು ಇತರೆ ಆಭರಣ ಸರದಂತೆ ಬೇಕಾದಾಗ ಮಾತ್ರ ಧರಿಸುತ್ತಿದ್ದಾರೆ. ಹೆಣ್ಣುಮಕ್ಕಳು ಕರಿಮಣಿಯ ಮಹತ್ವ ತಿಳಿದುಕೊಂಡು ಅದನ್ನು ಮುಂದಿನ ಪೀಳಿಗೆಗೆ ತಿಳಿಹೇಳುವ ಪ್ರಯತ್ನ ಮಾಡಬೇಕಾಗಿದೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3B3fZUX
July 12, 2021 at 05:57PM