ವರಮಹಾಲಕ್ಷ್ಮಿ ವ್ರತವನ್ನು ಯಾಕೆ ಆಚರಿಸುತ್ತಾರೆ?
Feature Image source: The Hans India
ಶ್ರಾವಣ ಮಾಸದಲ್ಲಿ ಬರುವ ಹಬ್ಬವಿದು
ವರಮಹಾಲಕ್ಷ್ಮಿ ವ್ರತ ಅಥವಾ ಪೂಜೆಯು ಶ್ರಾವಣ ಮಾಸದಲ್ಲಿ ಬರುವ ಅತಿ ಪ್ರಮುಖವಾದ ಪೂಜೆ. ಆಷಾಢ ಮಾಸ ಪೂರ್ತಿ ಲಕ್ಷ್ಮಿ ಪೂಜೆಯನ್ನು ಕೈಗೊಳ್ಳಾಗುತ್ತಾದರೂ ವರಮಹಾಲಕ್ಷ್ಮಿ ಹಬ್ಬ ಬರುವುದು ಶ್ರಾವಣ ಮಾಸದಲ್ಲಿ. ದಕ್ಷಿಣ ಭಾರತದಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಡಗರ ನೋಡಿದಷ್ಟೂ ಸಾಲದು. ಈ ದಿನದಂದು ಸಾಕ್ಷಾತ್ ಮಹಾಲಕ್ಷ್ಮಿಯೇ ಧರೆಗಿಳಿದು ಬಂದಂತೆ ಭಾಸವಾಗುತ್ತದೆ. ಬಹಳ ಶ್ರದ್ಧೆ, ಭಕ್ತಿಯಿಂದ ಆಚರಿಸುವ ಹಬ್ಬವಿದು. ಯಾವುದೋ ಒಂದ ಜಾತಿಗೆ ಸೀಮಿತವಾದ ಆಚರಣೆಯಲ್ಲ ಇದು. ಹಿಂದೂಗಳೆಲ್ಲರೂ ವರಾಮಹಾಲಕ್ಷ್ಮಿ ವ್ರತವನ್ನು ತಮ್ಮ ಮನೆಗಳಲ್ಲಿ ತಮಗೆ ಅನುಕೂಲವಾದ ರೀತಿಯಲ್ಲಿ ಆಚರಿಸುವ ಹಬ್ಬವಿದು.
ಹಬ್ಬದ ಸಂಭ್ರಮದಷ್ಟೆ ಮುಖ್ಯ ಅದಕ್ಕಿರಬೇಕಾದ ಆಚರಣೆ ಹಾಗು ರೀತಿ ನೀತಿಗಳು, ಮಡಿ ಮೈಲಿಗೆಗಳು. ಎಲ್ಲವೂ ದೇವರ ಸ್ರಷ್ಠಿಯಾಗಿರುವ ಈ ಲೋಕದಲ್ಲಿ ಮಡಿ ಮೈಲಿಗೆಯೇನು ಎಂಬ ಅಸಡ್ಡೆ ಎಂದಿಗೂ ಸಲ್ಲ.
ಹಿಂದೂ ಧರ್ಮದಲ್ಲಿ ಪ್ರತಿಯೊಂದು ಮಾಸಕ್ಕೂ ಅದರದ್ದೇ ಆದ ಮಹತ್ವವಿದೆ. ಪ್ರತಿ ಮಾಸದಲ್ಲೂ ಅನೇಕ ಹಬ್ಬ, ಹರಿದಿನಗಳು ಬರುತ್ತವೆ. ಹಿಂದೂ ಧರ್ಮೀಯರಿಗೆ ಒಂದು ಲೆಕ್ಕದಲ್ಲಿ ಪ್ರತಿದಿನವೂ ಹಬ್ಬವೇ. ಹಾಗಿದ್ದರೂ ಶ್ರಾವಣ ಮಾಸವು ಸ್ವಲ್ಪ ಹೆಚ್ಚಾಗಿಯೇ ವಿಶೇಷತೆ ಹೊಂದಿದೆ. ಶ್ರಾವಣ ಮಾಸ ನಿಜಕ್ಕು ಒಂದು ಸುಂದರ ಮಾಸ. ಸಾಮಾನ್ಯವಾಗಿ ಶ್ರಾವಣ ಮಾಸದ ಎರಡನೇ ಶುಕ್ರವಾರ ವರಮಾಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತದೆ.
ವರಮಹಾಲಕ್ಷ್ಮಿ ವ್ರತದ ಹಿಂದಿರುವ ಕಥೆ ಏನು?

Image Source : mylapore times
ಸ್ಕಂದ ಪುರಾಣದ ಪ್ರಕಾರ ಒಮ್ಮೆ ತಾಯಿ ಪಾರ್ವತಿ ದೇವಿ ಲೋಕದ ಚಿಂತನೆಯಲ್ಲಿ ಮುಳುಗಿ ಬಡಜನರ ಬಗ್ಗೆ ಚಿಂತಾಕ್ರಾಂತಳಾಗಿ ವಿಚಾರ ಮಾಡುತ್ತಿರುವಾಗ ಪತಿಯಾದ ಪರಮೇಶ್ವರ ಸತಿಯ ಚಿಂತೆಯನ್ನರಿತು ಹೀಗೊಂದು ಪರಿಹಾರಾರ್ಥಕವಾದ ಕಥೆ ಹೇಳುತ್ತಾನೆ.
ಚಾರುಮತಿಯೆಂಬ ಪತಿವ್ರತೆಯೋರ್ವಳು ದೇವಿಯಲ್ಲಿ ಮೊರೆಯಿಡುವ ಆರ್ತನಾದ ದೇವಿಗೆ ಕೇಳುತ್ತದೆ. ದೇವಿ ಕಿವಿಗೊಟ್ಟು ಆಲಿಸಿದಾಗ ಚಾರುಮತಿಯ ಬಡತನವೇ ಆಕೆಯ ಸಕಲ ಕಷ್ಟಕ್ಕೂ ಕಾರಣವೆಂಬುವುದು ತಿಳಿದು ಬರುತ್ತದೆ, ಆಗ ಲಕ್ಷ್ಮೀದೇವಿಯು ಸ್ವತಃ ಆಕೆಯ ಸ್ವಪ್ನದಲ್ಲಿ ಕಾಣಿಸಿಕೊಂಡು ಶ್ರಾವಣದ ಎರಡನೇ ಶುಕ್ರವಾರ ಅಂದರೆ ನವಮಿಯಂದು ಬ್ರಾಹ್ಮಿ ಮುಹೂರ್ತದಲ್ಲಿ ಕಲಶ ಸ್ಥಾಪನೆ ಮಾಡಿ, ಒಂದು, ಮೂರು, ಐದು ಅಥವಾ ಎಂಟು, ಒಂಬತ್ತು ಮುತ್ತೈದೆಯರಿಗೆ ಶಕ್ತ್ಯಾನುಸಾರ ಮಂಗಳದ್ರವ್ಯಗಳೊಂದಿಗೆ ಉಪಚರಿಸಿ ತನ್ನನ್ನು ಬೇಡಿಕೊಂಡರೆ ಸಕಲಸರ್ವೋತ್ತರ ಅಭಿವೃದ್ಧಿ ಯಾಗುವುದು ಎಂದು.
ನಿದಿರೆಯಿಂದ ಎಚ್ಚೆತ್ತ ಚಾರುಮತಿ ಮುಂಬರುಯವ ಶ್ರಾವಣಕ್ಕೆ ಕಾತರದಿಂದ ಕಾದಿದ್ದು ವರಮಹಾಲಕ್ಷ್ಮಿಯನ್ನು ಪೂಜಿಸುತ್ತಾಳೆ ಅಂದಿನಿಂದ ಚಾರುಮತಿಯ ಕಷ್ಟ ಕಳೆದು ಆಕೆಯ ಮನೆ ಮನ ಬೆಳಗಿ ವರಮಹಾಲಕ್ಷ್ಮಿ ವೃತ ಜಗತ್ಪ್ರಸಿದ್ಧವಾಯಿತು.
ದಕ್ಷಿಣ ಭಾರತದಲ್ಲಿ ಬಹಳ ಪ್ರಸಿದ್ಧವಾದ ಹಬ್ಬವಿದು

Image Source : Mysuru Today
ಭಾರತದಾದ್ಯಂತ ಲಕ್ಷ್ಮಿ ದೇವಿಯನ್ನು ಪೂಜಿಸಿದರೂ, ವರಮಹಾಲಕ್ಷ್ಮಿ ವ್ರತವೂ ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ಅದರಲ್ಲೂ ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತಮಿಳುನಾಡಿನಲ್ಲಿ ಇದು ಬಹಳ ಪ್ರಸಿದ್ಧಿ ಪಡೆದಿರುವ ಆಚರಣೆ. ಈ ದಿನ ತಮ್ಮ ಮನೆಗಳಲ್ಲಿ ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪಿಸಿ, ಆಕೆಗೆ ಅದ್ಧೂರಿಯಾಗಿ ಹೂವು, ವಸ್ತ್ರಗಳಿಂದ ಅಲಂಕರಿಸಿ, ದೀಪ ಹಚ್ಚಿ, ಆರತಿ ಬೆಳಗಿ, ಮುತ್ತೈದೆಯರಿಗೆ ಅರಿಶಿಣ-ಕುಂಕುಮ ನೀಡುವ ಮೂಲಕ ಆಯಸ್ಸು, ಆರೋಗ್ಯ, ಐಶ್ವರ್ಯ ಹಾಗೂ ಮುತ್ತೈದೆ ಭಾಗ್ಯಕ್ಕಾಗಿ ಮಹಿಳೆಯರು ಪ್ರಾರ್ಥಿಸುತ್ತಾರೆ. ಪ್ರಮುಖವಾಗಿ ಹೆಣ್ಣು ಮಕ್ಕಳೇ ಹೆಚ್ಚು ಸಕ್ರಿಯರಾಗಿ ಆಚರಿಸುವ, ಹೆಣ್ಣು ಮಕ್ಕಳಿಗೇ ಎಂದು ಇರುವ ಹಬ್ಬವಿದು.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3kqEML9
August 20, 2021 at 12:50PM
