ಬಾದಾಮಿ, ಅಂಜೂರ ಕೂಡ ಇನ್ನಷ್ಟು ಕಾಸ್ಟ್ಲಿ!

Feature Image Credits : Twitter
ತಾಲಿಬಾನಿಗಳಿಂದ ಕಂಗೆಟ್ಟಿದೆ ಅಫ್ಘಾನಿಸ್ತಾನ
ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ಆಕ್ರಮಿಸಿಕೊಂಡು, ದೇಶ ನಡೆಸಲು ಸಿದ್ಧತೆ ಮಾಡುತ್ತಿರುವ ಸಮಯದಲ್ಲೇ ಭಾರತಕ್ಕೆ ಹಲವು ರೀತಿಯಲ್ಲಿ ಆತಂಕವೂ ಶುರುವಾಗಿದೆ. ಒಂದು ಕಡೆ ಭಯೋತ್ಪಾದಕರ ಹಾವಳಿ ಹೆಚ್ಚಾಗಬಹುದು ಎನ್ನುವ ಶಂಕೆ ಮೇಲೆ ಭಾರತ ಸರ್ಕಾರ ಗಡಿ ಪ್ರದೇಶದಲ್ಲಿ ಹೆಚ್ಚಿನ ಸೈನಿಕರ ಜಮಾವಣೆ ಮಾಡುತ್ತಿದೆ. ಆಫ್ಘಾನಿಸ್ತಾನದಿಂದ ತಮ್ಮವರನ್ನು ಕರೆತರಲು ಶತ ಪ್ರಯತ್ನ ಮಾಡುತ್ತಿರುವ ಭಾರತ ಸರ್ಕಾರ, ಆಫ್ಘನ್ನರಿಗೂ ಆಶ್ರಯ ನೀಡುವುದಾಗಿ ಘೋಷಿಸಿದೆ.
ಆಫ್ಘನ್ ಜೊತೆ ತನಗಿರುವ ಸ್ನೇಹ, ಬಾಂಧವ್ಯದಿಂದಾಗ ಭಾರತ ಆಶ್ರಯ ನೀಡಲು ಕೈ ಚಾಚಿದೆ. ಆದರೆ ಆಶ್ರಯ ಪಡೆಯುವ ನೆಪದಲ್ಲಿ ತಾಲಿಬಾನಿ ಉಗ್ರರು ಭಾರತಕ್ಕೆ ಪ್ರವೇಶಿಸಿದರೆ ಏನು ಗತಿ ಎನ್ನುವ ಆತಂಕವೂ ಭಾರತ ಸರ್ಕಾರವನ್ನು ಕಾಡದೆ ಬಿಡುತ್ತಿಲ್ಲ. ಆದರೂ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಮ್ಮ ಸೇನೆ, ಸರ್ಕಾರ ಸಮರ್ಥವಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಈ ಸಮಸ್ಯೆಗಳ ನಡುವೆಯೇ ಭಾರತಕ್ಕೆ ಮತ್ತೊಂದು ಸಮಸ್ಯೆ ಎದುರಾಗಿದೆ. ಅದೇ ಡ್ರೈ ಫ್ರೂಟ್ಗಳ ಸಮಸ್ಯೆ.
ಗಗನಕ್ಕೇರಿದೆ ಡ್ರೈ ಫ್ರೂಟ್ಸ್ ರೇಟ್

Image Source : Twitter
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ಗಳ ಅಟ್ಟಹಾಸ ಹಿನ್ನೆಲೆ ನಮ್ಮ ದೇಶಕ್ಕೆ ಆಮದು ಆಗುತ್ತಿದ್ದ ಡ್ರೈಫ್ರೂಟ್ಸ್ ಸ್ಥಗಿತಗೊಂಡಿದೆ. ಇದು ಭಾರತಾದ್ಯಂತ ಪರಿಣಾಮ ಬೀರುತ್ತಿದೆ. ಕರ್ನಾಟಕದಲ್ಲೂ ಡ್ರೈ ಫ್ರೂಟ್ಸ್ ಬೆಲೆ ದುಬಾರಿ ಆಗಿದೆ. ತಿಂಗಳಿಗೆ 200 ರಿಂದ 300 ಟನ್ ಡ್ರೈ ಫ್ರೂಟ್ಗಳನ್ನು ಕರ್ನಾಟಕ ಆಫ್ಘಾನಿಸ್ತಾನದಿಂದ ಆಮದು ಮಾಡಿಕೊಳ್ಳುತ್ತೆ.
ಅಫ್ಘಾನಿಸ್ತಾನದಿಂದ ಬೆಂಗಳೂರಿಗೆ ಪ್ರಮುಖವಾಗಿ ಅಂಜೂರಾ, ಕೇಸರಿ, ಬಾದಾಮಿ ಹಾಗೂ ಪೈನ್ ನಟ್ಸ್ ಆಮದು ಆಗುತ್ತದೆ. ಅಫ್ಘಾನಿಸ್ತಾನದಲ್ಲಿ ಉತ್ಕೃಷ್ಟ ಗುಣಮಟ್ಟದ ಡ್ರೈ ಫ್ರೂಟ್ಸ್ ದೊರೆಯುತ್ತದೆ. ಇದರ ಜೊತೆಗೆ ಅಫ್ಘಾನಿಸ್ತಾನದಲ್ಲಿ ಒಣ ದ್ರಾಕ್ಷಿಯೂ ಫೇಮಸ್. ೧೦೦ಕ್ಕೂ ಹೆಚ್ಚು ತಳಿಯ ಒಣದ್ರಾಕ್ಷಿ ಅಫ್ಘಾನಿಸ್ತಾನದಲ್ಲಿ ಲಭ್ಯವಿದೆ ಎನ್ನಲಾಗುತ್ತದೆ. ಒಣದ್ರಾಕ್ಷಿಯನ್ನೂ ಕರ್ನಾಟಕದ ವರ್ತಕರು ಆಮದು ಮಾಡಿಕೊಳ್ಳುತ್ತಾರೆ. ಉತ್ತಮ ಗುಣಮಟ್ಟದ ಡ್ರೈ ಫ್ರೂಟ್ಸ್ಗೆ ಕರ್ನಾಟಕದಲ್ಲಿ ಒಳ್ಳೆಯ ಮಾರ್ಕೆಟ್ ಇದೆ.
ಅಫ್ಘಾನಿಸ್ತಾನದಿಂದ ಆಮದು ಸ್ಥಗಿತಗೊಂಡಿರುವುದು ಒಂದು ಸಮಸ್ಯೆಯಾದರೆ ಈಗಾಗಲೇ ಅಫ್ಘಾನಿಸ್ತಾನದಿಂದ ಹೊರಟಿರುವ ಪದಾರ್ಥಗಳು ಚೆಕ್ಪೋಸ್ಟ್ಗಳಲ್ಲೇ ಉಳಿದುಕೊಂಡಿವೆ. ಹೀಗಾಗಿ, ಭಾರತದ ಬಹುತೇಕ ರಾಜ್ಯಗಳಲ್ಲಿ ಡ್ರೈ ಫ್ರೂಟ್ಸ್ ಬೆಲೆ ಶೇ.೮೦ರಷ್ಟು ಹೆಚ್ಚಾಗಿದೆ.
ಆರೋಗ್ಯಕ್ಕೆ ತುಂಬಾ ಒಳ್ಳೆಯದು ಡ್ರೈ ಫ್ರೂಟ್ಸ್
ಅಫ್ಘಾನಿಸ್ತಾನದ ಒಣಹಣ್ಣುಗಳು ದುಬಾರಿಯಾದರೂ ಆರೋಗ್ಯಕ್ಕೆ ಪೂರಕವಾದ ಗುಣಗಳನ್ನು ಹೊಂದಿವೆ. ಕೋವಿಡ್ ಹಿನ್ನಲೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಡ್ರೈ ಫ್ರೂಟ್ಸ್ ಖರೀದಿ ಮಾಡ್ತಿದ್ರು. ಆದ್ರೆ ಈಗ ಗ್ರಾಹಕರಿಗೆ ದರ ಏರಿಕೆ ಹೊರೆಯಾಗಿದೆ.
ಅಂಜೂರಾ ೧೪೦೦, ಕೇಸರಿ ೧ ಲಕ್ಷ ರುಪಾಯಿ ಏರಿಕೆ

Image Source : Silkroadnews
ಅಂಜೂರಾ ಕಳೆದ ವಾರ ಕಿಲೋ ಗ್ರಾಂಗೆ ೧೦೦೦ ರುಪಾಯಿ ಬೆಲೆ ಇತ್ತು. ಈಗ ಅದರ ಬೆಲೆ ೨೪೦೦ ರುಪಾಯಿ ಆಗಿದೆ. ಕಾಶ್ಮೀರ ಕೇಸರಿಯಷ್ಟೇ ಅಫ್ಘಾನಿಸ್ತಾನದ ಕೇಸರಿಗೂ ಭಾರೀ ಡಿಮ್ಯಾಂಡ್ ಇದೆ. ಕೇಸರಿ ಬಲು ದುಬಾರಿ. ಈ ಹಿಂದೆಯೇ ಅದು ಒಂದು ಕೆ.ಜಿ.ಗೆ ೨ ಲಕ್ಷ ರುಪಾಯಿ ಇತ್ತು. ಈಗ ಅದರ ಬೆಲೆ ೧ ಲಕ್ಷ ಏರಿಕೆ ಆಗುತ್ತಿದ್ದು, ವರ್ತಕರು ಪ್ರತಿ ಕೆ.ಜಿ.ಗೆ ೩ ಲಕ್ಷ ರುಪಾಯಿ ಕೇಳುತ್ತಿದ್ದಾರೆ. ಕೆ.ಜಿ.ಗೆ ೫೦೦ ರುಪಾಯಿ ಇದ್ದ ಬಾದಾಮಿ ಈಗ ೧೦೦೦ ರುಪಾಯಿ ಆಗಿದೆ. ಅದೇ ರೀತಿ ಪೈನ್ ನಟ್ಸ್ ಬೆಲೆಯೂ ಏರಿಕೆಯಾಗಿದ್ದು, ಕಳೆದ ವಾರ ಕೆ.ಜಿ.ಗೆ ೩೦೦೦ ಇದ್ದ ಪೈನ್ ನಟ್ಸ್ ಈಗ ಕೆ.ಜಿ.ಗೆ ೪೮೦೦೦ ಆಗಿದೆ.
ಒಂದು ಕಡೆ ಪೆಟ್ರೋಲ್, ಅಡುಗೆ ಎಣ್ಣೆ, ದಿನ ನಿತ್ಯ ಬಳಕೆಯ ಸಾಮಾನುಗಳ ಬೆಲೆ ಗಗನಕ್ಕೇರಿರುವಾಗಲೇ ತಾಲಿಬಾನಿಗಳ ಕಾರಣದಿಂದಾಗಿ ಡ್ರೈ ಫ್ರೂಟ್ಸ್ ಬೆಲೆಯೂ ಏರಿಕೆ ಆಗಿರುವುದು ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಡ್ರೈಫ್ರೂಟ್ಸ್ ವಾರದ ಹಿಂದಿನ ದರ ಇಂದಿನ ದರ
ಅಂಜೂರಾ 1000 2400
ಕೇಸರಿ 2ಲಕ್ಷ 3ಲಕ್ಷ
ಬಾದಾಮಿ 550 1000
ಪೈನ್ ನಟ್ಸ್ 3000 4800
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3jdVWfC
August 24, 2021 at 02:31PM