ನೀವು ಅಮೆಜಾನ್ ಪ್ರೈಮ್ ಚಂದಾದಾರರಾ? ನಿಮಗೆ ಕಾದಿದೆ ಶಾಕಿಂಗ್ ನ್ಯೂಸ್
ಅಮೆಜಾನ್ ಪ್ರೈಮ್ ಓಟಿಟಿ ಚಂದಾದಾರಿಕೆಯನ್ನು ಇವತ್ತಿನ ದಿನದಲ್ಲಿ ಬಹುತೇಕರು ಹೊಂದಿರುತ್ತಾರೆ. ಒಂದೇ ವೇದಿಕೆಯಲ್ಲಿ ಹಲವು ಭಾಷೆಗಳ ಸಿನಿಮಾಗಳನ್ನು ಮನೆಯಲ್ಲೇ ಕೂತು ನೋಡಬಹುದಾದ ಆಯ್ಕೆಯದು.
ಒಂದು ಸಿನಿಮಾ ನೋಡಲು ಮಾಲ್ಗೆ, ಥಿಯೇಟರ್ಗೆ ಆಗುವ ಖರ್ಚಿನಲ್ಲಿ ಇಡೀ ಕುಟುಂಬ ವರ್ಷವಿಡೀ ಅನಿಯಮಿತ ಮನರಂಜನೆ ಪಡೆಯಬಹುದು.
ಇಂತಿಪ್ಪ ಅಮೆಜಾನ್ ಪ್ರೈಮ್ ವಾರ್ಷಿಕ ಸದಸ್ಯತ್ವದ ಶುಲ್ಕವನ್ನು 999 ರೂಪಾಯಿಗಳಿಂದ 1499 ರೂಪಾಯಿಗಳಿಗೆ ಏರಿಕೆ ಮಾಡಲು ಅಮೆಜಾನ್ ಸಂಸ್ಥೆ ನಿರ್ಧರಿಸಿದೆ.
ವರ್ಷದ ಪ್ಲಾನ್ಗೆ 1499 ರೂಪಾಯಿ, 3 ತಿಂಗಳ ಪ್ಲಾನ್ 329 ರೂಪಾಯಿ ಬದಲಿಗೆ 459 ರೂಪಾಯಿ, 1 ತಿಂಗಳ ಪ್ಲಾö್ಯನ್ಗೆ 129 ರೂಪಾಯಿ ಬದಲಿಗೆ 179 ರೂಪಾಯಿ ಶುಲ್ಕ ಪಡೆಯುವುದಾಗಿ ಸಂಸ್ಥೆಯ ವಕ್ತಾರ ತಿಳಿಸಿದ್ದಾರೆ.
ಭಾರತದಲ್ಲಿ ಸದ್ಯದಲ್ಲೇ ವಾರ್ಷಿಕ ಶುಲ್ಕ ಏರಿಸಲಿದ್ದೇವೆ. ಯಾವಾಗ ಏರಿಕೆಯಾಗಲಿದೆ ಎನ್ನುವುದನ್ನು ಸದ್ಯದಲ್ಲೇ ಘೋಷಿಸುತ್ತೇವೆ ಎಂದು ತಿಳಿಸಿದ್ದಾರೆ.
ಕಳೆದ 5 ವರ್ಷಗಳಿಂದ ಅಮೆಜಾನ್ ಪ್ರೈಮ್ ತನ್ನ ಚಂದಾದಾರರಿಗೆ ಅನಿಯಮಿತ ಮನರಂಜನೆ ಒದಗಿಸುತ್ತಿದೆ. ಸದ್ಯ 10 ಭಾಷೆಗಳಲ್ಲಿ ಸಿನಿಮಾ, ವೆಬ್ ಸೀರೀಸ್ಗಳನ್ನು ನೋಡಬಹುದಾಗಿದೆ. ಅಲ್ಲದೆ 7 ಕೋಟಿಗೂ ಅಧಿಕ ಹಾಡುಗಳನ್ನು ಕೇಳಬಹುದು. ಅಮೆಜಾನ್ ಪ್ರೈಮ್ ಸದಸ್ಯತ್ವ ಹೊಂದಿದ್ದರೆ, ಅಮೆಜಾನ್ ಡಾಟ್ ಇನ್ನಲ್ಲಿ ಆನ್ಲೈನ್ ಶಾಪಿಂಗ್ಗೂ ಅನುಕೂಲ.
ಪೆಟ್ರೋಲ್, ಡೀಸೆಲ್, ತರಕಾರಿ ಸೇರಿ ದಿನನಿತ್ಯ ಬಳಕೆಯ ಎಲ್ಲಾ ವಸ್ತುಗಳ ಬೆಲೆಯೂ ಜಾಸ್ತಿಯಾಗುತ್ತಿರುವ ವೇಳೆ ನಿತ್ಯ ಮನರಂಜನೆಗೆ ಬಳಸುವ ಅಮೆಜಾನ್ ಪ್ರೈಮ್ ನ ಬೆಲೆಯೂ ಏರಿಕೆ ಆಗುತ್ತಿರುವುದು ಬೇಸರದ ಸಂಗತಿಯೇ ಸರಿ.
from Planet Tv https://ift.tt/3joUC90
October 21, 2021 at 10:56PM