Featured Image Source : Fact Junction
ಪ್ರಕೃತಿ ಎನ್ನುವುದು ಹಾಗೆಯೇ ವಿಸ್ಮಯದ ಅತಿ ದೊಡ್ಡ ಭಂಡಾರ. ಇಲ್ಲಿ ನಡೆಯುವ ಘಟನಾವಳಿಗಳು ಎಲ್ಲರೂ ನಿಬ್ಬೆರಗಾಗುವಂತೆ ಮಾಡುತ್ತದೆ. ಪರಿಸರದ ಎಲ್ಲಾ ಚಟುವಟಿಕೆಗಳೂ ಪ್ರಕೃತಿ ನಿಯಮದಂತೆಯೇ ನಡೆಯುತ್ತದೆ. ಹೀಗಾಗಿ ಇದು ಹೇಗಾಯ್ತು, ಯಾಕಾಯ್ತು, ಇದರ ಪರಿಣಾಮವೇನು ಅನ್ನೋದು ಯಾರಿಗೂ ಅರ್ಥವಾಗದ ನಿಗೂಢ. ಪ್ರಕೃತಿಯಲ್ಲಿನ ವಿಸ್ಮಯದ ಬಗ್ಗೆ ಮನುಷ್ಯರು ಅಚ್ಚರಿಯಾಗುವುದು ಬಿಟ್ಟರೆ ಇನ್ನೇನು ಮಾಡಲು ಸಾಧ್ಯವಾಗುವುದಿಲ್ಲ. ಹೀಗಿದ್ದೂ ಕುತೂಹಲದ ಬೆನ್ನು ಬಿದ್ದು ಮಾನವ ಈ ವಿಸ್ಮಯಗಳ ಬೆನ್ನೆತ್ತಿ ಹೋಗುತ್ತಾನೆ. ಬಗೆಹರಿಯದ ವಿಸ್ಮಯಗಳನ್ನು ಬಗೆಹರಿಸಲು ಯತ್ನಿಸುತ್ತಾನೆ.
ಮನುಷ್ಯನನ್ನು ಊಹೆಗೂ ನಿಲುಕದ ಅದೆಷ್ಟೋ ಘಟನೆಗಳು ಪ್ರಕೃತಿಯಲ್ಲಿ ನಡೆಯುತ್ತಿರುತ್ತವೆ. ಅದರಲ್ಲೊಂದು ಒಡಿಶಾದ ಚಂಡೀಪುರದಲ್ಲಿರುವ ಬಾಲಸೋರ್ ಬೀಚ್. ಅಲ್ಲಿ ನಡೆಯುತ್ತಿರುವ ಘಟನೆ ಎಂಥವರನ್ನೂ ಚಕಿತಗೊಳಿಸುತ್ತೆ. ಇಂಥಹಾ ಘಟನೆಗಳು ಪ್ರಕೃತಿಯಲ್ಲಿ ನಡೆಯುವುದಾದರೂ ಹೇಗೆ ಅನ್ನೋದು ಪ್ರಶ್ನಾರ್ಥಕವಾಗಿಯೇ ಉಳಿಯುತ್ತೆ. ಏನಿದೆ ಆ ಬೀಚ್ನಲ್ಲಿ. ಅಲ್ಲಿ ನಡೆಯುತ್ತಿರೋದೇನು..? ಇಲ್ಲಿದೆ ಹೆಚ್ಚಿನ ಮಾಹಿತಿ.
ಸೋಲ್ ಆಫ್ ಇಂಡಿಯಾ ಎಂದು ಪ್ರೀತಿಯಿಂದ ಕರೆಯಲ್ಪಡುವ ಒಡಿಶಾ, ಅದರ ಸಂಸ್ಕೃತಿ ಮತ್ತು ಪರಂಪರೆಯಿಂದ ಸಮೃದ್ಧವಾಗಿದೆ. ಮತ್ತು ತನ್ನ ವಿಶಿಷ್ಟತೆಯಿಂದಲೇ ಇದು ಪ್ರವಾಸಿಗರು ಹೆಚ್ಚು ಭೇಟಿ ನೀಡುವ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಒಡಿಶಾದ ಚಂಡೀಪುರ ನಗರದಲ್ಲಿರುವ ಸಮುದ್ರದಲ್ಲಿಯೇ ಇಂಥಹಾ ಒಂದು ವಿಸ್ಮಯಕಾರಿ ಘಟನೆ ನಡೆಯುತ್ತಿದೆ.
ಹೈ ಆಂಡ್ ಸೀಕ್ ಆಟವಾಡುವ ಸಮುದ್ರ..!
Image Source : Nerd's Travel
ಚಂಡೀಪುರದ ಸಮುದ್ರದಲ್ಲಿ ಆಗುತ್ತಿರುವುದು ಪ್ರಪಂಚದ ಯಾವುದೇ ಭಾಗದಲ್ಲಿ ವಿರಳವಾಗಿ ಕಂಡುಬರುವ ಒಂದು ವಿದ್ಯಮಾನ. ಇಲ್ಲಿನ ಚಂಡೀಪುರ ಸಮುದ್ರ ಎಲ್ಲರೂ ನೋಡ ನೋಡುತ್ತಿದ್ದಂತೆಯೇ ಕಣ್ಣ ಮುಂದೆಯಿಂದಲೇ ಕಣ್ಮರೆಯಾಗುತ್ತದೆ. ಮತ್ತೆ ಸ್ಪಲ್ಪ ಹೊತ್ತಿನ ಬಳಿಕ ಕಣ್ಣ ಮುಂದೆ ಕಾಣಿಸಿಕೊಳ್ಳುತ್ತದೆ. ಒಟ್ಟಿನಲ್ಲಿ ಇಲ್ಲಿ ಸಮುದ್ರ ದಿನವಿಡೀ ಪ್ರವಾಸಿಗರ ಜತೆ ಹೈಡ್ ಆಂಡ್ ಸೀಕ್ ಆಟವಾಡುತ್ತಿರುತ್ತದೆ. ಅಚ್ಚರಿ ಎನಿಸಿದರೂ ಇದು ನೂರಕ್ಕೆ ನೂರು ನಿಜ. ಈ ಅಚ್ಚರಿಯ ವಿದ್ಯಮಾನ ನಡೆಯುತ್ತಿರುವ ಚಂಡೀಪುರ ಬೀಚ್ ಭುವನೇಶ್ವರದಿಂದ 200 ಕಿಮೀ ದೂರದಲ್ಲಿದೆ.
ಎಲ್ಲಾ ಕಡೆ ನಾವು ನೋಡಿರುವ ಸಮುದ್ರ ಹೇಗಿರುತ್ತದೆ. ಕಣ್ಣಿಗೆ ಕಾಣದಷ್ಟೂ ದೂರ. ಬೆಳ್ಳಗೆ ನೊರೆ ನೊರೆಯಾಗಿ ನೀರು ಭೋರ್ಗರೆಯುತ್ತಿರುತ್ತದೆ. ಎತ್ತರೆತ್ತರದ ಅಲೆಗಳು ಬಂದು ದಡಕ್ಕೆ ಅಪ್ಪಳಿಸುತ್ತವೆ. ಕಾಲನ್ನು ತೊಯ್ಯಿಸಿ ಮತ್ತೆ ಮರಳಿ ಹೋಗುತ್ತವೆ. ಆದರೆ ಇಲ್ಲಿರುವ ಸಮುದ್ರ ಹಾಗಿಲ್ಲ. ಈ ಸಮುದ್ರ ಇದ್ದಲ್ಲೇ ಇರುವುದಿಲ್ಲ. ಒಂದು ಸಾರಿ ಅಬ್ಬರಿಸುತ್ತದೆ. ಮರುಘಳಿಗೆಯೇ ಮೌನವಾಗುತ್ತದೆ. ನೀರಿನಿಂದ ತೊಯ್ದ ನೆಲ ನೀರೇ ಇಲ್ಲದೆ ಖಾಲಿ ಖಾಲಿಯಾಗುತ್ತದೆ. ಹೀಗೆ ಕಣ್ಣಾಮುಚ್ಚಾಲೆಯಾಡುವ ಈ ಸಮುದ್ರವಿರುವುದು ಒಡಿಶಾದ ಚಂಡೀಪುರದಲ್ಲಿ.
ಚಂಡಿಪುರ ಬೀಚ್ ಅನ್ನು ಅದರ ವಿಶಿಷ್ಟ ಗುಣಲಕ್ಷಣಗಳಿಗಾಗಿ ಹೈಡ್ ಮತ್ತು ಸೀಕ್ ಬೀಚ್ ಎಂದೂ ಕರೆಯುತ್ತಾರೆ. ಇಲ್ಲಿ ಸಮುದ್ರವು ಪ್ರತಿದಿನ ಐದು ಕಿಲೋಮೀಟರ್ಗಳಷ್ಟು ಹಿಂದಕ್ಕೆ ಹೋಗುತ್ತದೆ. ಹೀಗಾಗಿ ಈ ಬೀಚ್ನಲ್ಲಿದ್ದಾಗ, ಕಡಲತೀರದಿಂದ ನೀರು ಬೃಹತ್ ಪ್ರಮಾಣದಲ್ಲಿ ಇಳಿಯುವುದನ್ನು ನೋಡಬಹುದು. ಈ ಸಂದರ್ಭದಲ್ಲಿ ನೆಲದಲ್ಲಿ ನಡೆದಂತೆಯೇ ಸಮುದ್ರದಲ್ಲಿ ನಡೆಯಲು ಸಾಧ್ಯವಾಗುತ್ತದೆ. ಹೀಗೆ ಸಮುದ್ರ ಮಾಯವಾಗುವುದಕ್ಕೆ ನಿರ್ಧಿಷ್ಟ ಸಮಯ ಅಥವಾ ಇಂಥಹಾ ದಿನವೇ ಆಗಿರಬೇಕೆಂದೇನಿಲ್ಲ. ಈ ಬೀಚ್ನಲ್ಲಿ ಕನಿಷ್ಠ ಎರಡು ಬಾರಿ ಈ ರೀತಿ ಸಮುದ್ರ ಮಾಯವಾಗುತ್ತದೆ.
ಸಮುದ್ರ ನೀರಿಲ್ಲದೆ ಖಾಲಿಯಾಗುವುದು ಹೇಗೆ..?
ಚಂಡೀಪುರ ಸಮುದ್ರವು ಕುದುರೆ ಏಡಿಗಳು, ಕಿಂಗ್ ಏಡಿಗಳು, ಸ್ಟಾರ್ಫಿಶ್ಗಳು ಮತ್ತು ಆಮೆಗಳಂತಹ ಅಪರೂಪದ ಮತ್ತು ಮೋಡಿಮಾಡುವ ಸಮುದ್ರ ಜೀವಿಗಳ ನೆಲೆಯಾಗಿದೆ. ಏಡಿಗಳು, ಆಮೆ ಮತ್ತು ನಕ್ಷತ್ರ ಮೀನುಗಳು ಸಾಮಾನ್ಯವಾಗಿ ಕಡಲತೀರದಿಂದ ದೂರದಲ್ಲಿರುವ ಆಳವಾದ ನೀರಿನಲ್ಲಿ ಉಳಿಯುತ್ತವೆ. ಅದು ಮುಂದೆ ಬಂದಾಗ ನೀರು ಅವುಗಳನ್ನು ತರುತ್ತದೆ, ಮತ್ತು ಹಿಮ್ಮೆಟ್ಟುವ ಸಮಯದಲ್ಲಿ ಅವುಗಳನ್ನು ಮತ್ತೆ ಒಯ್ಯುತ್ತದೆ..
ನೀರು ಹಿಮ್ಮೆಟ್ಟಿದಾಗ, ತೀರದಲ್ಲಿ ಈ ಎಲ್ಲಾ ಜಲಚರಗಳು ಕಾಣಸಿಗುತ್ತವೆ. ವಿವಿಧ ಆಕಾರಗಳು ಮತ್ತು ಗಾತ್ರಗಳ ಸೀಶೆಲ್ಗಳನ್ನು ಕಾಣುತ್ತವೆ. ಅನೇಕ ಪ್ರವಾಸಿಗರು ಈ ಸೀಶೆಲ್ಗಳನ್ನು ಸಂಗ್ರಹಿಸಿ ಖುಷಿ ಪಡುತ್ತಾರೆ. ಸ್ಥಳೀಯರಿಗೆ ಈ ರೀತಿ ಸಮುದ್ರ ಮಾಯವಾಗಿ ಸೀ ಶೆಲ್ಗಳು ಸುಲಭವಾಗಿ ದೊರೆಯುವುದು ವರದಾನವಾಗಿ ಪರಿಣಮಿಸಿದೆ. ಈ ಸೀಶೆಲ್ಗಳನ್ನು ಸಂಗ್ರಹಿಸಿ ಅವುಗಳನ್ನು ಆಭರಣಗಳಾಗಿ ಪರಿವರ್ತಿಸುತ್ತಾರೆ ಮತ್ತು ಅಗ್ಗದ ಬೆಲೆಗೆ ಮಾರಾಟ ಮಾಡುತ್ತಾರೆ.
ಸಮುದ್ರ ಕಣ್ಮರೆಯಾಗಲು ಕಾರಣವೇನು..?
Image Source : kolkotaweekends
ಸಮುದ್ರದ ನೀರಲ್ಲೇ ಮರಳಿ ಹೋದಾಗ ಕ್ಯಾಸುಆರಿನಾ ಮರಗಳು ಮತ್ತು ಮರಳು ದಿಬ್ಬಗಳ ದೃಶ್ಯವು ಕಣ್ಣಿಗೆ ಹಬ್ಬದಂತೆ ಗೋಚರಿಸುತ್ತದೆ. ಅಲ್ಲದೆ, ಹುಣ್ಣಿಮೆ ಮತ್ತು ಅಮಾವಾಸ್ಯೆಯ ಸಮಯದಲ್ಲಿ, ಈ ಸಂದರ್ಭಗಳಲ್ಲಿ ಅಲೆಗಳು ತೀವ್ರ ಎತ್ತರಕ್ಕೆ ತಲುಪುವುದರಿಂದ ಪ್ರವಾಸಿಗರು ತೀರದಿಂದ ದೂರವಿರಲು ಎಚ್ಚರಿಕೆ ನೀಡಲಾಗುತ್ತದೆ. ಒಂದು ದಿನ ಕಡಲತೀರವನ್ನು ನೋಡಿದರೆ, ಮರುದಿನ ನೀವು ಬೀಚ್ ಕಣ್ಮರೆಯಾಗಿರುವುದನ್ನು ನೋಡಬಹುದು.
ಆದರೆ ಈ ಅಪರೂಪದ ವಿದ್ಯಮಾನ ಹೇಗೆ ನಡೆಯುತ್ತಿದೆ ಎಂಬುದರ ಬಗ್ಗೆ ಯಾರಿಗೂ ಗೊತ್ತಿಲ್ಲ. ಆದರೆ ಸಮುದ್ರ ಮಾಯವಾಗುವ ಸಮಯ, ಮತ್ತೆ ಮರಳಿ ಬರುವ ಸಮಯವನ್ನು ಇಲ್ಲಿನ ಸ್ಥಳೀಯರು ಸ್ಪಷ್ಟವಾಗಿ ಹೇಳುತ್ತಾರೆ. ಈ ಕಡಲತೀರದ ಪ್ರವಾಸವು ಭಾರತದ ಪ್ರತಿಯೊಂದು ಸ್ಥಳವು ಎಷ್ಟು ಸುಂದರ ಮತ್ತು ಆಸಕ್ತಿದಾಯಕವಾಗಿದೆ ಎಂದೆನಿಸುವಂತೆ ಮಾಡುತ್ತದೆ. ಮಧ್ಯಾಹ್ನದ ನಂತರ ಚಂಡಿಪುರ ಬೀಚ್ಗೆ ಭೇಟಿ ನೀಡಿದರೆ ಅದ್ಭುತವಾದ ಸೂರ್ಯಾಸ್ತಮಾನದ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.
ಚಂಡೀಪುರದಲ್ಲಿ ನಡೆಯುವ ಉತ್ಸವದಲ್ಲಿ ಗೋಲ್ಡನ್ ಬೀಚ್ ಉತ್ಸವವು ಪ್ರಮುಖವಾಗಿದೆ. ಈ 4 ದಿನಗಳ ಉತ್ಸವವು ಪ್ರತಿ ವರ್ಷ ಡಿಸೆಂಬರ್ ಅಥವಾ ಜನವರಿಯಲ್ಲಿ ನಡೆಯುತ್ತದೆ. ಹಬ್ಬದ ಸಂದರ್ಭದಲ್ಲಿ ಇಲ್ಲಿ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಕ್ರೀಡಾಕೂಟಗಳು ನಡೆಯುತ್ತವೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3zWMGBr
October 01, 2021 at 04:25PM