ರೋಹಿತ್ ಪದಕಿಯ ಹೊಸ ಕೃತಿ ಅಮೆಜಾನ್ನಲ್ಲಿ ಸೂಪರ್ ಹಿಟ್!
ತಾಯಿಯ ಪ್ರೀತಿ, ಮಮತೆ, ಕರುಣೆ, ವಾತ್ಸಲ್ಯವನ್ನುಸಾರುವ ಸಿನಿಮಾಗಳು ಸ್ಯಾಂಡಲ್ವುಡ್ನಲ್ಲಿ ಮಾತ್ರವಲ್ಲ ಭಾರತೀಯ ಸಿನಿಮಾದಲ್ಲೇ ಹೊಸದಲ್ಲ. ನೂರಾರು ಸಿನಿಮಾಗಳು ತೆರೆಕಂಡು ಹಿಟ್ ಆಗಿವೆ. ಆದರೆ ಎಲ್ಲಾ ಸಿನಿಮಾಗಳಿಗಿಂತ ವಿಭಿನ್ನ ಕಥಾಹಂದರವನ್ನು ಹೊಂದಿರುವ ಸಿನಿಮಾ ರತ್ನನ್ ಪ್ರಪಂಚ.
ರತ್ನನ್ ಪ್ರಪಂಚದಲ್ಲಿ ಒಂದು ಸುತ್ತು ಹಾಕೊಂಡು ಬರೋಣ ಬನ್ನಿ.
ತಾಯಿ-ಮಗನ ನಡುವೆ ಸದಾ ಜಗಳ. ಮನೆಯಲ್ಲಿ ಪ್ರತಿ ದಿನ ಗಲಾಟೆ. ದಿನ ಚಿತ್ರಾನ ಮಾಡಿ ಬಡಿಸುವ ತಾಯಿ , ಆಫೀಸ್ಗೆ ಹೋಗುವ ಮಗನಿಗೆ ಯಾವ ಕಲರ್ ಒಳ ಉಡುಪು ಹಾಕಿಕೊಳ್ಳಬೇಕು ಎಂದು ಹೇಳುವಷ್ಟು ಸದರ.
ರತ್ನನ್ ಪ್ರಪಂಚ ಬಹಳ ಸಿಂಪಲ್. ಅಲ್ಲಿ ಜಾಸ್ತಿ ಜನರಿಲ್ಲ. ತಾಯಿ, ಮನೆ, ಹಳೇ ಬೈಕು. ಆಫೀಸು, ಆಗಾಗ ಭೇಟಿಯಾಗೋ ಸಹೋದರ, ಸದಾ ಲ್ಯಾಪ್ಟಾಪ್ ಹಿಡಿದು ಕುಟ್ಟುತ್ತಿರುವ ಅತ್ತಿಗೆ. ಇಷ್ಟೇ ಪ್ರಪಂಚ.
ಒಂದು ನಾಯಿಯನ್ನು ಹುಡುಕಿಕೊಂಡು ಹೋಗಾದ ಸಿಗುವ ಸಣ್ಣ ತಿರುವು ರತ್ನನ್ ಪ್ರಪಂಚದಲ್ಲಿ ಇನ್ನೊಂದಿಷ್ಟು ಹೊಸ ಜನರನ್ನು ಕರೆತರುತ್ತದೆ. ಇಲ್ಲಿಂದಲೇ ರತ್ನಾ ಅಲಿಯಾಸ್ ರತ್ನಾಕರನ ಜೀವನದ ಬಗ್ಗೆ, ಆತನ ಭಾವನೆಗಳ ಬಗ್ಗೆ ನೋಡುಗರಿಗೆ ಗೌರವ ಹೆಚ್ಚಾಗೋದು.
ರತ್ನನಿಗೆ ಪರಿಚಯವಾಗುವ ಮಯೂರಿಯ ಜೀವನದ ಹಿನ್ನೆಲೆ ಗೊತ್ತಾದ ಮೇಲಂತೂ ರತ್ನಾಕರ ಇನ್ನಷ್ಟು ಭಾವುಕನಾಗುತ್ತಾನೆ. ಆತ ನಡೆದುಕೊಳ್ಳುವ ರೀತಿ ಈ ಸಮಾಜಕ್ಕೆ ಪಾಠ.
ಜೀವನದ ಗುಟ್ಟು ತಿಳಿದು ತನ್ನ ಹೆತ್ತ ತಾಯಿ, ಜೊತೆಯಲ್ಲಿ ಹುಟ್ಟಿದವರನ್ನು ಹುಡುಕುತ್ತ ಹೊರಡುವ ರತ್ನನಿಗೆ ಒಂದೊಂದೇ ಸುಳಿವು ಸಿಗುತ್ತಾ ಹೋಗುತ್ತೆ.
ರತ್ನಾಕರನಿಗೆ ತನ್ನ ಹೆತ್ತ ತಾಯಿ ಸಿಗುತ್ತಾಳಾ? ಜೊತೆಯಲ್ಲಿ ಹುಟ್ಟಿದವರು ಸಿಗುತ್ತಾರಾ? ಎಲ್ಲರೂ ಒಂದಾಗುತ್ತಾರಾ? ಸಾಕಿದ ತಾಯಿಯನ್ನು ರತ್ನ ಬಿಟ್ಟುಬಿಡುತ್ತಾನಾ? ಇದೇ ಈ ಚಿತ್ರದ ಸಸ್ಪೆನ್ಸ್.
Image Source : OTT Play
ಅಮೆಜಾನ್ ಪ್ರೈಮ್ನಲ್ಲಿ ಕೆಲ ದಿನಗಳ ಹಿಂದಷ್ಟೇ ತೆರೆ ಕಂಡ ರೋಹಿತ್ ಪದಕಿ ನಿರ್ದೇಶನದ ರತ್ನನ್ ಪ್ರಪಂಚ ಸೂಪರ್ ಹಿಟ್ ಆಗಿದೆ. ಸಾಮಾಜಿಕ ತಾಣಗಳಲ್ಲಿ ಚಿತ್ರದ ಬಗ್ಗೆ ಸಾವಿರಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರತ್ನಾ ಅಲಿಯಾಸ್ ರತ್ನಾಕರನಾಗಿ ಡಾಲಿ ಧನಂಜಯ ಅವರ ನಟನೆ ಅಮೋಘವಾಗಿದೆ. ಡಾಲಿ ಎನ್ನುವ ರೌಡಿ ಪಾತ್ರದಲ್ಲಿ ಟಗರು ಸಿನಿಮಾದಲ್ಲಿ ಮಿಂಚಿದ್ದ ಧನಂಜಯ, ಮುಗ್ಧ ಯುವಕನಾಗಿ, ತನ್ನೊಳಗೆ ನೂರಾರು ಭಾವನೆಗಳನ್ನು ಬಿಗ್ಗಿದಿಟ್ಟುಕೊಂಡು, ತಾನು ನೋಡಿರದ ತನ್ನವರಿಗಾಗಿ ದೇಶ ಸುತ್ತುವ ಪರಿ ನೋಡುಗರನ್ನು ಸೆಳೆಯದೆ ಇರುವುದಿಲ್ಲ.
ಹಿರಿಯ ನಟಿಯರಾದ ಉಮಾಶ್ರೀ, ಶೃತಿ ತಾಯಿಂದರ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಇಬ್ಬರು ಶ್ರೇಷ್ಠ ನಟಿಯರನ್ನು ತೆರೆಯ ಮೇಲೆ ನೋಡಿದ ಮೇಲೆ ತಾಯಿಯನ್ನು ಪ್ರೀತಿಸುವ ಪ್ರತಿಯೊಬ್ಬರ ಕಣ್ಣಲ್ಲೂ ನೀರು ಬರದಿರಲು ಸಾಧ್ಯವೇ ಇಲ್ಲ.
ಪ್ರೀಮಿಯರ್ ಪದ್ಮಿನಿ ಬಳಿಕ ಪ್ರಮೋದ್ ಮತ್ತೊಂದು ಭರ್ಜರಿ ಪರ್ಫಾರ್ಮೆನ್ಸ್ ಕೊಟ್ಟಿದ್ದಾರೆ. ಉಡಾಲ ಬಾಬು ರಾವ್ ಪಾತ್ರ ಹಿಂದಿಯ ಮಿರ್ಜಾಪುರ್ ವೆಬ್ ಸೀರೀಸ್ನ ಮುನ್ನಾ ಭಯ್ಯಾ ಪಾತ್ರವನ್ನು ನೆನಪಿಸುತ್ತದೆ. ಆದರೆ ಬಾಬು ರಾವ್, ಮುನ್ನಾ ಭಯ್ಯಾನಂತೆ ದುಷ್ಟನಲ್ಲ. ಬಾಬು ರಾವ್ ಸಹೃದಯಿ. ಆತನ ದೋಸ್ತರ ದೋಸ್ತಾ. ಊರಿನ ಸೂಪರ್ ಸ್ಟಾರ್. ಎಲ್ಲಕ್ಕಿಂತ ಹೆಚ್ಚಾಗಿ ಆತ ಯಲ್ಲವ್ವನ ಮಗ.
Image Source : OTT Play
ಮಯೂರಿ ಪಾತ್ರದಲ್ಲಿ ರೀಬಾ ಜಾನ್, ತಬಾಸುಮ್ ಪಾತ್ರದಲ್ಲಿ ಅನು ಪ್ರಭಾಕರ್, ಅಹ್ಮದ್ ಪಾತ್ರದಲ್ಲಿ ರವಿಶಂಕರ್ ಗಮನ ಸೆಳೆಯುತ್ತಾರೆ.
ಪ್ರೈಮ್ ಕನೆಕ್ಷನ್ ಇರುವವರ ಕೂಡಲೇ ರತ್ನನ್ ಪ್ರಪಂಚದೊಳಗೆ ಹೋಗಿ ಬನ್ನಿ. ಮತ್ತೆ ನೀವು ಆ ಪ್ರಪಂಚಕ್ಕೆ ಹೋಗಬೇಕು ಅನಿಸದಿದ್ದರೆ ಮುಳ್ಳಂದಿ ಮು***ಡಿ ಮೇಲಾಣೆ. ಪ್ರೈಮ್ ಇಲ್ಲದವರು, ಕೂಡಲೇ ಸದಸ್ಯತ್ವ ಪಡೀರಿ ಇಲ್ಲವೇ ಸ್ನೇಹಿತರ ಅಕೌಂಟ್ನಿಂದ ಲಾಗಿನ್ ಆಗಿ ವೀಕ್ಷಿಸಿ.
ವಿ.ಸೂ: ಸಿನಿಮಾ ನೋಡ್ತಾ ನೋಡ್ತಾ ಕಣ್ಣೀರು ಬರಬಹುದು. ಬರಬಹುದು ಏನು ಬಂದೇ ಬರುತ್ತೆ, ಪಕ್ಕದಲ್ಲಿ ಟವೆಲ್ ಇಟ್ಕೊಳ್ಳೋದು ಮರೀಬೇಡಿ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3EcYfqD
October 25, 2021 at 03:01PM