Featured Image Source : Bankbazaar
ಶಕ್ತಿದೇವತೆಯ ಹಬ್ಬ ನವರಾತ್ರಿ ಇಂದಿನಿಂದ ಆರಂಭವಾಗುತ್ತಿದೆ. ಒಂಭತ್ತು ದಿನ ಒಂದೊಂದು ಶಕ್ತಿದೇವತೆಯನ್ನು ಆರಾಧಿಸುವುದೇ ನವರಾತ್ರಿಯ ವಿಶೇಷ. ರಾಜ್ಯದಲ್ಲಿ ಇದನ್ನು ನಾಡಹಬ್ಬದಂತೆ ಆಚರಿಸಿಕೊಂಡು ಬರಲಾಗುತ್ತಿದೆ. ನವರಾತ್ರಿಯು ನಾಡಹಬ್ಬದ ರೂಪ ಪಡೆದು ದಸರಾ ಆಗಿದೆ. ದಸರಾ ಅಂದಕೂಡಲೇ ಮನಸ್ಸಿಗೆ ಬರುವುದು ಮೈಸೂರು ದಸರಾ. ಆದರೆ ರಾಜ್ಯದಲ್ಲಿ ಇನ್ನೂ ಹಲವೆಡೆ ಇದನ್ನು ಸಾಮೂಹಿಕ ಹಬ್ಬವಾಗಿ ಆಚರಿಸಲಾಗುತ್ತಿದೆ. ಅಂತಹ ಸ್ಥಳಗಳ ಮಾಹಿತಿ ಇಲ್ಲಿದೆ.
5 ಶತಮಾನದ ಇತಿಹಾಸವುಳ್ಳ ಮೈಸೂರು ದಸರಾ
Image Source : Holidify
ದಸರಾ ಹಬ್ಬ ಮೈಸೂರಿನಲ್ಲಿ ಆರಂಭವಾಗುವುದಕ್ಕೆ ಮುಂಚೆಯೇ ಶ್ರೀರಂಗಪಟ್ಟಣದಲ್ಲಿ ಆಚರಿಸಲಾಗುತ್ತಿತ್ತು. ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ್ಯವಾಗಿದ್ದ ಶ್ರೀರಂಗಪಟ್ಟಣದಲ್ಲಿ ರಾಜ ಶ್ರೀರಂಗರಾಯ ಆಳ್ವಿಕೆ ನಡೆಸುತ್ತಿದ್ದ. ಹಾಗಾಗಿ ವಿಜಯನಗರದ ಆಳ್ವಿಕೆಗೊಳಪಟ್ಟಿದ್ದರಿಂದ ಅಲ್ಲಿನ ಆಚರಣೆಗಳು ಇಲ್ಲಿಯೂ ಅನುಸರಿಸುವುದು ಸಾಮಾನ್ಯವಾಗಿತ್ತು. 1610ರಲ್ಲಿ ಶ್ರೀರಂಗಪಟ್ಟಣದಲ್ಲಿ ಪ್ರಾರಂಭವಾದ ದಸರಾ ನವರಾತ್ರಿ ಉತ್ಸವ 1805ರಲ್ಲಿ ಯದುವಂಶದ ಅರಸರ ರಾಜಧಾನಿ ಮೈಸೂರಿಗೆ ಸ್ಥಳಾಂತರಗೊಂಡಿತು. ಇಲ್ಲಿ ಸಾಂಸ್ಕøತಿಕ ಕಲೆಗಳ ಪ್ರದರ್ಶನ, ಸೇನೆಯ ಬಲಾಬಲ ಪರಿಚಯ, ನಾಡಿನ ಜನತೆಗೆ ರಾಜರ ದರ್ಶನ ಇತ್ಯಾದಿಗಳೆಲ್ಲವೂ ನಡೆಯುತ್ತಿದ್ದವು. ಇಂದು ಅಂದಿನ ವೈಭವ ಇಲ್ಲದಿದ್ದರೂ ಸರಳವಾಗಿ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದೆ.
ಸಾಂಕ್ರಾಮಿಕ ರೋಗ ನಿವಾರಣೆಗೆ ಕೊಡಗು ದಸರಾ!
Image Source : Travelguru blog
ಕೊಡಗನ್ನು ಆಳಿದ ಹಾಲೇರಿ ವಂಶಸ್ಥರು ವಿಜಯದಶಮಿ ಆಚರಣೆಯನ್ನು ಮಾಡುತ್ತಿದ್ದರು. ಈ ಹಿಂದೆ ಕೊಡಗಿನಲ್ಲಿ ವಿವಿಧ ಮಾರಕ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡು ಸಾವು ನೋವುಗಳು ಸಂಭವಿಸಿತ್ತು. ಇದರಿಂದ ಚಿಂತಿತರಾದ ಅಂದಿನ ಅರಸರು, ಪರಿಹಾರಕ್ಕಾಗಿ ನಾಲ್ಕು ಶಕ್ತಿ ದೇವತೆಗಳಾದ ಮಾರಿಯಮ್ಮ ದೇವರಿಗೆ ಮೊರೆ ಹೋಗಿ ಕರಗಗಳ ನಗರ ಪ್ರದಕ್ಷಿಣೆ ಮಾಡಿಸಿದರು. ಇದಾದ ಬಳಿಕ ಸಾಂಕ್ರಮಿಕ ರೋಗ ಮರೆಯಾಯಿತು. ಹೀಗೆ ಮಡಿಕೇರಿ ದಸರಾ ಆರಂಭವಾಯಿತು. ಕಳೆದ ಬಾರಿಯಂತೆ ಈ ಬಾರಿಯೂ ಸರಳ ದಸರಾ ಆಚರಿಸಲಾಗುತ್ತಿದ್ದು ಅ.7ರಂದು ಮಡಿಕೇರಿಯ ಪಂಪಿನ ಕೆರೆಯಲ್ಲಿ ಸಂಜೆ ನಗರದ ನಾಲ್ಕು ಶಕ್ತಿ ದೇವತೆಗಳ ಕರಗ ಉತ್ಸವದ ಮೂಲಕ ಆರಂಭವಾಗಲಿದೆ. ಅ.15ರಂದು ರಾತ್ರಿ ಮಡಿಕೇರಿಯ ದಶ ದೇವಾಲಯಗಳ ಮಂಟಪಗಳ ಶೋಭಾಯಾತ್ರೆ ನಡೆಯಲಿದೆ.
ಮಂಗಳೂರಲ್ಲಿ ನವದುರ್ಗೆಯರ ಆರಾಧನೆ
Image Source : coastaltimesnews
ವಿಶ್ವವಿಖ್ಯಾತ ಮೈಸೂರು ದಸರಾ ಮಾದರಿಯಲ್ಲೇ ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ನವರಾತ್ರಿಯ ನವದುರ್ಗಾರಾಧನೆ `ಮಂಗಳೂರು ದಸರಾ' ನಾಡಿನ ಮೈಮನ ಸೂರೆಗೊಳ್ಳುತ್ತದೆ. ಈ ಬಾರಿಯೂ ಕಳೆದ ಬಾರಿಯಂತೆ ಕೋವಿಡ್ ಮಾರ್ಗಸೂಚಿಯೊಂದಿಗೆ `ನಮ್ಮ ದಸರಾ ನಮ್ಮ ಸುರಕ್ಷೆ' ಎಂಬ ಘೋಷವಾಕ್ಯದಡಿ ಅ.7ರಿಂದ ಅ.16ರವರೆಗೆ ನಡೆಯಲಿದೆ. ಶಾರದಾ ಮೂರ್ತಿಯ ವಿಸರ್ಜನೆಯ ದಸರಾ ಮೆರವಣಿಗೆ ಹೊರತುಪಡಿಸಿ ಉಳಿದ ದಿನಗಳಲ್ಲಿ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರತಿವರ್ಷದಂತೆ ನಡೆಯಲಿವೆ. ಅ.7ರಂದು ಶಾರದೆ ಸೇರಿದಂತೆ ನವದುರ್ಗೆಯರ ಪ್ರತಿಷ್ಠಾಪನೆ ನಡೆಯಲಿದೆ. ಅ.15ರಂದು ಮಹಾಪೂಜೆ ನಡೆದು ರಾತ್ರಿ 8ರಿಂದ ಕ್ಷೇತ್ರದೊಳಗೆ ಸರಳ ಮೆರವಣಿಗೆಯೊಂದಿಗೆ ಪುಷ್ಕರಣಿಯಲ್ಲಿ ಶಾರದಾ ವಿಸರ್ಜನೆ ಮಾಡಲಾಗುತ್ತದೆ.
ಹಂಪಿಯಲ್ಲಿ ಐತಿಹಾಸಿಕ ಬನ್ನಿ ಮಹೋತ್ಸವ
Image Source : Adotrip
ವಿಜಯನಗರ ಸಾಮ್ರಾಜ್ಯದ ಕಾಲದಲ್ಲೇ ಹಂಪಿ ಪ್ರದೇಶದಲ್ಲಿ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಆ ಪರಂಪರೆಯನ್ನು ಈಗಲೂ ವಾಲ್ಮೀಕಿ ನಾಯಕ ಸಮಾಜ ಮುಂದುವರಿಸಿಕೊಂಡು ಬರುತ್ತಿದೆ. ಶ್ರೀಕೃಷ್ಣದೇವರಾಯರ ಕಾಲದಲ್ಲಿ ಸೋಲರಿಯದ ಏಳು ಸಾವಿರ ಸೈನಿಕರವುಳ್ಳ ಬೇಡರ ಪಡೆಯಿತ್ತು. ಆ ಬೇಡರ ವಂಶಸ್ಥರೇ ಇಂದಿಗೂ ದಸರಾ ಹಬ್ಬವನ್ನು ಆಚರಿಸಿಕೊಂಡು ಬರುತ್ತಿz್ದÁರೆ. ಹೊಸಪೇಟೆಯ ಧರ್ಮದ ಗುಡ್ಡದಲ್ಲಿ ದೇವರ ಬನ್ನಿಯನ್ನು ಮುಡಿಯಲಾಗುತ್ತದೆ. ಹೊಸಪೇಟೆಯ ಏಳುಕೇರಿ, ಕಮಲಾಪುರದ ಏಳುಕೇರಿ ಮತ್ತು ನಾಗೇನಹಳ್ಳಿ, ಬಸವನದುರ್ಗ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಶಕ್ತಿ ದೇವತೆಗಳನ್ನು ದೇವರ ಗುಡಿಗಳಲ್ಲಿ ಪ್ರತಿಷ್ಠಾಪಿಸಿ 9 ದಿನಗಳವರೆಗೆ ಪೂಜಿಸಲಾಗುತ್ತದೆ. ಆನಂತರ ನಗರಕ್ಕೆ ಆಗಮಿಸಿ ಇಡೀ ದಿನ ಭಜನೆ, ಕೋಲಾಟ ನಡೆಯುತ್ತದೆ. ಮಾರನೇ ದಿನ ಊರಬನ್ನಿ ನಡೆಯುತ್ತದೆ.
ರಂಭಾಪುರಿ, ಶೃಂಗೇರಿಯಲ್ಲಿ ಸಂಭ್ರಮದ ಶರನ್ನವರಾತ್ರಿ
Image Source : sringeri.net
ಚಿಕ್ಕಮಗಳೂರು ಜಿಲ್ಲೆಯ ರಂಭಾಪುರೀ ಪೀಠ ಹಾಗೂ ಶೃಂಗೇರಿ ಪೀಠದಲ್ಲಿ ಶರನ್ನವರಾತ್ರಿ ಆಚರಣೆ ಮಾಡಲಾಗುತ್ತಿದೆ. ಶೃಂಗೇರಿಯಲ್ಲಿ ಶ್ರೀ ಶಾರಾದಾಂಬೆಗೆ 9 ದಿನ ವಿಶೇಷ ಅಲಂಕಾರ ಮಾಡಲಾಗುವುದು. ಕೊನೆಯ ದಿನ ಶೃಂಗೇರಿಯ ರಾಜಬೀದಿಯಲ್ಲಿ ರಥೋತ್ಸವ, ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ. ಬಾಳೆಹೊನ್ನೂರಿನ ರಂಭಾಪುರೀ ಪೀಠ ಈ ಬಾರಿಯ ದಸರಾ ಮಹೋತ್ಸವ ಆಚರಣೆಗೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕಡೆನಂದಿಹಳ್ಳಿ ಗ್ರಾಮ ಆಯ್ಕೆ ಮಾಡಿಕೊಂಡಿದೆ. ಶರನ್ನರಾತ್ರಿಯ 9 ದಿನವೂ ರಂಭಾಪುರೀ ಪೀಠ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತದೆ. ಕೊನೆಯ ದಿನ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ. ಸಂಪ್ರದಾಯದಂತೆ ಡಾ. ಪ್ರಸನ್ನ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ದಸರಾ ದರ್ಬಾರ್ ನಡೆಸಿಕೊಡಲಿದ್ದಾರೆ.
6 ಕೆಸಿಕೆಎಂ 2
ಮೈಸೂರಿನಂತೆ ಶಿವಮೊಗ್ಗದಲ್ಲೂ ಜಂಬೂ ಸವಾರಿ
Image Source : Vijaya karnataka
ಮೈಸೂರಿನಂತೆ ಶಿವಮೊಗ್ಗದಲ್ಲೂ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ದಸರಾಕ್ಕೆ ಚಾಲನೆ ನೀಡಲಾಗುತ್ತದೆ. 9 ದಿನಗಳ ಕಾಲ ನಡೆಯುವ ದಸರಾ ಆಚರಣೆಯಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು, ರೈತ ದಸರಾ, ಮಹಿಳಾ ದಸರಾ, ಪರಿಸರ ದಸರಾ, ಕಲಾ ದಸರಾ, ಯುವ ದಸರಾ, ಆಹಾರ ದಸರಾ, ಸಾಂಸ್ಕøತಿಕ ದಸರಾ, ಮಕ್ಕಳ ದಸರಾ, ಕ್ರೀಡಾ ದಸರಾ ಹೀಗೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುತ್ತವೆ. ವಿಜಯದಶಮಿಯಂದು ಅಂಬಾರಿಯ ಮೇಲೆ ದೇವಿಯ ಮೆರವಣಿಗೆ ಮಾಡಲಾಗುತ್ತದೆ. ಜಂಬೂ ಸವಾರಿ ಬನ್ನಿಮಂಟಪಕ್ಕೆ ತೆರಳಿ ಬನ್ನಿ ಕಡಿಯುವುದರೊಂದಿಗೆ ದಸರಾ ಮುಗಿಯುತ್ತದೆ. ನಂತರ ರಾವಣ ಸಂಹಾರ ಆಗುತ್ತಿದ್ದಂತೆ ಚಿತ್ತಾಕರ್ಷಕ ಪಟಾಕಿಗಳನ್ನು ಸಿಡಿಸಿ ಸಾರ್ವಜನಿಕರಿಗೆ ಮನರಂಜನೆ ನೀಡಲಾಗುತ್ತದೆ.
ದಾಂಡೇಲಿಯಲ್ಲಿ ರಾಮಲೀಲಾ ಉತ್ಸವ
Image Source : delhionline.in
ಉತ್ತರ ಕನ್ನಡದ ದಾಂಡೇಲಿಯಲ್ಲಿ ಕಳೆದ ಆರು ದಶಕಗಳಿಂದ ದಸರಾ ಪ್ರಯುಕ್ತ ರಾಮಲೀಲಾ ಉತ್ಸವ ಆಚರಿಸಲಾಗುತ್ತಿದೆ. ದುಷ್ಟಶಕ್ತಿಗಳ ಪ್ರತೀಕವಾದ ಅಸುರರ ಪ್ರತಿಕೃತಿಗಳನ್ನು ದಹಿಸುವುದು ಇಲ್ಲಿನ ವಿಶೇಷತೆ. ಸುಮಾರು 50 ಅಡಿ ಎತ್ತರದ ರಾವಣ, 45 ಅಡಿ ಎತ್ತರದ ಕುಂಭಕರ್ಣ ಮತ್ತು 30 ಅಡಿ ಎತ್ತರದ ಮೇಘನಾದನ ಪ್ರತಿಕೃತಿಗಳನ್ನು ದಹಿಸುತ್ತಿದ್ದಂತೆ ದಾಂಡೇಲಿಯ ದಸರಾಕ್ಕೆ ತೆರೆಬೀಳುತ್ತದೆ. ಸಿಡಿಮದ್ದುಗಳ ಪ್ರದರ್ಶನ ಜನತೆಗೆ ಇನ್ನಷ್ಟು ರಂಜನೆ ಒದಗಿಸುತ್ತದೆ. ದಾಂಡೇಲಿ ಕಾಗದ ಕಾರ್ಖಾನೆಗೆ ಉದ್ಯೋಗಿಗಳು, ಕಾರ್ಮಿಕರಾಗಿ ಉತ್ತರ ಭಾರತದಿಂದ ಬಂದವರು ತಮ್ಮ ಜತೆ ರಾಮಲೀಲಾ ಉತ್ಸವ, ದಾಂಡಿಯಾವನ್ನೂ ತಂದರು. ಕೊರೋನಾ ಪೂರ್ವ ಕಾಲದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಮಂದಿ ಈ ವೈಭವವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಕಳೆದ ವರ್ಷದಿಂದ ಕೊರೋನಾದಿಂದಾಗಿ ರಾಮಲೀಲಾ ಉತ್ಸವ ಕಳೆಗುಂದಿದೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3AjWWE0
October 07, 2021 at 02:58PM