Dholkal Ganesh | Chhattisgarh | Dolkal Hills | ಗಣಪತಿಯ ದಂತ ತುಂಡಾದ ಸ್ಥಳ |ಧೋಲ್ಕಲ್ | ಛತ್ತೀಸ್ಗಢ 🙏 3000 ಅಡಿ ಎತ್ತರದ ಬೆಟ್ಟದ ಮೇಲಿದೆ ಧೋಲ್ಕಲ್ ಪ್ರಾಚೀನ ಗಣೇಶ ದೇವಾಲಯ ಗಣೇಶನನ್ನು ಮಹಾಕಾಯ, ವಿನಾಯಕ, ವಿಘ್ನೇಶ, ಏಕದಂತ, ವಕ್ರತುಂಡ, ಗಜಾನನ, ಮೂಷಿಕವಾಹನ ಹೀಗೆ ಗಣಪತಿ ನಾನಾ ಹೆಸರುಗಳಿಂದ ಕರೆಯುತ್ತಾರೆ. ಎಲ್ಲಾ ಕಾರ್ಯದಲ್ಲೂ ವಿಘ್ನ ವಿನಾಯಕ ಗಣಪನಿಗೆ ಪ್ರಪ್ರಥಮ ಪೂಜೆ ಸಲ್ಲುತ್ತದೆ. ಗಣೇಶನನ್ನು ಮೊದಲು ಪೂಜಿಸಿ ಯಾವುದೇ ಕೆಲಸವನ್ನು ಆರಂಭಿಸಿದರೂ ಯಾವುದೇ ಅಡೆತಡೆಯಿಲ್ಲದೆ ನಡೆಯುತ್ತದೆ ಅನ್ನೋ ನಂಬಿಕೆಯಿದೆ. ಭಾದ್ರಪದ ಮಾಸದಲ್ಲಿ ಬರುವ ಗಣೇಶ ಚೌತಿಯ ದಿನ, ಗಣೇಶನ ಹಬ್ಬವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ಮಾತ್ರವಲ್ಲದೆ, ಇತರ ದೇಶಗಳಲ್ಲೂ ಗಣೇಶನನ್ನು ಪೂಜಿಸಲಾಗುತ್ತದೆ. ಗಣಪತಿ ಎಲ್ಲಾ ದೇವರಿಗಿಂತಲೂ ಹೆಚ್ಚು ಜನಪ್ರಿಯವಾಗಿ ಪೂಜೆಯಲ್ಲಿ ಅಗ್ರಸ್ಥಾನ ಪಡೆದ ದೇವರು. ವಿದ್ಯಾಭ್ಯಾಸ, ವಿವಾಹ, ಉಪನಯನ, ಗೃಹಪ್ರವೇಶ, ಹೀಗೆ ಜನಜೀವನದ ಎಲ್ಲಾ ಶುಭಕಾರ್ಯಗಳಲ್ಲೂ ಗಣೇಶನಿಗೆ ಮೊದಲ ಪ್ರಾಧ್ಯಾನತೆಯಿದೆ. ಯಾವ ದೇವತಾ ಕಾರ್ಯಗಳನ್ನು ಮಾಡುವಾಗಲೂ ನಿರ್ವಿಘ್ನತಾ ಸಿದ್ಧಿಗಾಗಿ ಮೊದಲ ಪೂಜೆ ಗಣಪತಿಗೇ ಮೀಸಲಿಡಲಾಗುತ್ತದೆ. ಋಗ್ವೇದದಲ್ಲಿ ಗಣಾನಾಂ ತ್ವಾ ಗಣಪತಿಂ ಹವಾಮಹೇ ಎಂಬ ಮಾತಿದ್ದು, ಇದು ಗಣಪತಿಯ ಪೂಜೆಯ ಮುಖ್ಯಮಂತ್ರವಾಗಿ ಇಂದಿಗೂ ಪುರಸ್ಕೃತವಾಗಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಗಣೇಶನಿಗೆ ಅರ್ಪಿತವಾಗಿರುವ ಹಲವು ದೇವಾಲಯಗಳನ್ನು ನಾವು ನೋಡಬಹುದು. ಗಣೇಶನ ವಿವಿಧ ಹೆಸರಿಂದ ಪ್ರಸಿದ್ಧಿ ಹೊಂದಿರುವ ದೇವಾಲಯಗಳು ಹಲವೆಡೆ ಇವೆ. ಬಲಮುರಿ, ಎಡಮುರಿ ಎಂದು ವಿವಿಧ ಆಕಾರದ ಗಣಪತಿಯನ್ನು ಪೂಜಿಸಲಾಗುತ್ತದೆ. ಇನ್ನು ಗಣೇಶನ ಹಬ್ಬದ ಸಂದರ್ಭದಲ್ಲಿ ವಿಘ್ನ ವಿನಾಯಕನ ಭಿನ್ನ-ವಿಭಿನ್ನ ಮೂರ್ತಿಗಳನ್ನು ತಯಾರಿಸಿ ಪೂಜಿಸಲಾಗುತ್ತದೆ. ಅನಾದಿ ಕಾಲದಿಂದಲೂ ಜನರು ವಿಘ್ನ ವಿನಾಯಕನಿಗೆ ಪೂಜೆ ಸಲ್ಲಿಸಿಕೊಂಡೇ ಬರುತ್ತಿದ್ದಾರೆ. ದೇಶದ ಹಲವೆಡೆ ಗಣಪನ ಪುರಾತನ ದೇವಾಲಯಗಳಿವೆ. ಅದರಲ್ಲೊಂದು ಛತ್ತೀಸ್ ಘಡ್ನ ಧೋಲ್ಕಲ್ ನಲ್ಲಿರುವ ಪ್ರಾಚೀನ ಗಣೇಶನ ದೇವಾಲಯ. Hi Friends Please do watch the complete video and do subscribe like share and comment . #DholkalGanesh #Chhattisgarh #DolkalHills #ಗಣಪತಿಯ ದಂತ ತುಂಡಾದ ಸ್ಥಳ #ಧೋಲ್ಕಲ್ #ಛತ್ತೀಸ್ಗಢ #planettvkannada
via IFTTT
via IFTTT