ಬೃಹತ್ ಆನ್ಲೈನ್ ಮಾರಾಟ ಸಂಸ್ಥೆ ಅಮೆಜಾನ್ಗೆ (Amazon) ಜಾಗತಿಕ ಮಟ್ಟದಲ್ಲಿ ಭಾರೀ ಹಿನ್ನಡೆಯಾಗಿದೆ. ಇಟಲಿಯ ಆಂಟಿಟ್ರಸ್ಟ್ ನಿಯಂತ್ರಕರು (Antitrust Regulators) ಅಮೆಜಾನ್ ಸಂಸ್ಥೆಗೆ ಬರೋಬ್ಬರಿ $1.3 ಶತಕೋಟಿ (fined $1.3 billion) ದಂಡವನ್ನು ವಿಧಿಸಿದ್ದಾರೆ. ಆನ್ಲೈನ್ ಶಾಪಿಂಗ್ ಜಗತ್ತಿನಲ್ಲಿ ಅಮೆಜಾನ್ ತನ್ನ ಪ್ರಾಬಲ್ಯವನ್ನು ಬಳಸಿಕೊಂಡು ಅಕ್ರಮ ಎಸಗಿರುವ ಆರೋಪದ ಮೇಲೆ ದಂಡ ವಿಧಲಾಗಿದೆ. ಇಟಾಲಿಯನ್ ಮಾರಾಟಗಾರರು ಅಮೆಜಾನ್ (ಎಫ್ಬಿಎ) ಮೂಲಕವೇ ಪೂರೈಸುವಂತೆ ಮಾಡಿದೆ ಎಂದು ಆರೋಪಿಸಲಾಗಿದೆ. ಈ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಅಮೆಜಾನ್ ತಿಳಿಸಿದೆ. ಕಳೆದ ತಿಂಗಳಷ್ಟೇ, ಆಪಲ್ ಮತ್ತು ಬೀಟ್ಸ್ ಉತ್ಪನ್ನಗಳ ಪೂರೈಕೆಯನ್ನು ಮಿತಿಗೊಳಿಸಲು ಸಂಚು ರೂಪಿಸಿದ ಆರೋಪದ ಮೇಲೆ ಅಮೆಜಾನ್ , ಆಪಲ್ ಎರಡರ ಮೇಲೂ ಇದೇ ಇಟಾಲಿಯನ್ ಆಂಟಿಟ್ರಸ್ಟ್ ನಿಯಂತ್ರಕರು ದಂಡ ವಿಧಿಸಿದ್ದರು. ಆಗ ಅಮೆಜಾನ್ಗೆ ಕೇವಲ $77 ಮಿಲಿಯನ್ ಫೈನ್ ಹಾಕಲಾಗಿತ್ತು. ಆದರೆ ಈಗ ಹಾಕಿರುವ ದಂಡದ ಮೊತ್ತ ವಿಶ್ವಾದ್ಯಂತ ಸುದ್ದಿಗೆ ಗ್ರಾಸವಾಗಿದೆ.
ಇತರೆ ಮಾರಾಟಗಾರರಿಗೆ ಹಾನಿ ಮಾಡಿದ ಅಮೆಜಾನ್!
ಅಮೆಜಾನ್ ತನ್ನ ಪ್ಲಾಟ್ಫಾರ್ಮ್ನಲ್ಲಿ ಮಾರಾಟಗಾರರಿಗೆ ಅದರ ಎಫ್ಬಿಎ ಲಾಜಿಸ್ಟಿಕ್ಸ್ ಸೇವೆಯನ್ನು ಬಳಸಲು ಅವಕಾಶ ಬೀಡುತ್ತೆ. FBA ಗೆ ಸೈನ್ ಅಪ್ ಮಾಡಿದ ಮಾರಾಟಗಾರರು ತಮ್ಮ ಸರಕುಗಳನ್ನು ಲೇಬಲ್ನೊಂದಿಗೆ ಗುರುತಿಸಬಹುದು. ಆದರೆ Amazon ಆನ್ಲೈನ್ ಮಾರಾಟಗಾರರಿಗೆ ತಮ್ಮನ್ನು ತಾವು ಸೈಟ್ನಲ್ಲಿ ಪ್ರಮೋಟ್ ಮಾಡಿಕೊಳ್ಳುವುದನ್ನು ತಡೆಯುವ ಮೂಲಕ ಸ್ಪರ್ಧಾತ್ಮಕ ಇ-ಕಾಮರ್ಸ್ ಲಾಜಿಸ್ಟಿಕ್ಸ್ ಆಪರೇಟರ್ಗಳಿಗೆ ಹಾನಿ ಮಾಡಿದೆ.ಈ ಹಿನ್ನೆಲೆಯಲ್ಲಿ ಅಮೆಜಾನ್ ದಂಡಕ್ಕೆ ಗುರಿಯಾಗಿದೆ.
from Planet Tv https://ift.tt/3y88jj2
December 09, 2021 at 10:25PM