ಶಾಲಾ – ಕಾಲೇಜುಗಳನ್ನು ಬಂದ್ ಮಾಡುವ ಪ್ರಶ್ನೆಯೇ ಇಲ್ಲ - ಬಿ.ಸಿ ನಾಗೇಶ್
ಸದ್ಯಕ್ಕೆ ರಾಜ್ಯದಲ್ಲಿ ಶಾಲೆಗಳನ್ನು ಬಂದ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತಾನಾಡಿದ ಅವರು ಯಾವುದೇ ಕಾರಣಕ್ಕೂ ಶಾಲಾ – ಕಾಲೇಜು ಬಂದ್ ಮಾಡಲ್ಲ. ಶಾಲಾ-ಕಾಲೇಜುಗಳಿಗೆ ಟಫ್ ರೂಲ್ಸ್ ಜಾರಿ ಮಾಡಲಾಗಿದೆ. ವಸತಿ ಶಾಲೆಗಳಲ್ಲಿ ಸಾಮಾಜಿಕ ಅಂತರ ಕಡ್ಡಾಯ ಮಾಡಲಾಗಿದೆ. ವಸತಿ ಶಾಲೆಗಳಲ್ಲಿ ಸುಬ್ಬಂದಿಗೆ 2 ಡೋಸ್ ಲಸಿಕೆ ಕಡ್ಡಾಯ. ನಿಯಮ ಪಾಲನೆ ಮಾನಿಟರಿಂಗ್ ತಂಡ ರಚನೆ ಮಾಡಲಾಗಿದೆ. ಈವರೆಗೆ ಮಕ್ಕಳು, ಶಿಕ್ಷಕರು ಸೇರಿ 172 ಮಂದಿಗೆ ಸೋಂಕು ತಗುಲಿದೆ. 172 ಮಂದಿಯಲ್ಲಿ 100 ಮಂದಿ ಗುಣಮುಖರಾಗಿದ್ದಾರೆ. ವಸತಿ ಶಾಲೆ, ಹಾಸ್ಟೆಲ್ ನಲ್ಲಿ ವಿಶೇಷ ನಿಯಮ ಜಾರಿ ಮಾಡಲಾಗಿದೆ ಎಂದು ಬಿ.ಸಿ ನಾಗೇಶ್ ತಿಳಿಸಿದ್ರು.
from Planet Tv https://ift.tt/3EF9ucj
December 09, 2021 at 05:43PM
Tags:
Planet Tv