ಶಿಲ್ಪಕಲೆಯ ನೆಲೆವೀಡು ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ 🙏| halebidu Temple Hi Friends Welcome Back to our channel in this video we give information about Halebidu temple , So watch video till end and do subscribe to our channel . ಭಾರತದಲ್ಲಿ ಅಸಂಖ್ಯಾತ ಪುರಾತನ ದೇವಾಲಯಗಳಿವೆ. ವಿಭಿನ್ನ ಕೆತ್ತನೆ, ಕುಸುರಿ ಮತ್ತು ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲ್ಪಟ್ಟಿರುವ ದೇವಾಲಯಗಳನ್ನು ನಾವಿಲ್ಲಿ ನೋಡಬಹುದು. ಭಾರತದ ಶ್ರೀಮಂತ ಪರಂಪರೆ, ಸಂಸ್ಕೃತಿ, ಆಚಾರ-ವಿಚಾರವನ್ನು ಈ ದೇವಾಲಯಗಳು ಪ್ರತಿನಿಧಿಸುತ್ತವೆ. ಅತ್ಯಪೂರ್ವ ಕೆತ್ತನೆ ಕೆಲಸ ಮಾಡಿರುವ ಕಂಬಗಳು, ಮಂಟಪಗಳು, ಅದ್ಭುತ ಶೈಲಿಯ ಗೋಪುರಗಳು ನಿಬ್ಬೆರಗಾಗಿಸುತ್ತವೆ. ಪ್ರಪಂಚದಲ್ಲಿಯೇ ಸಾಂಪ್ರದಾಯಿಕ ಮಟ್ಟದಲ್ಲಿ ಗುರುತಿಸಿಕೊಂಡ ಹಲವು ದೇವಸ್ಥಾನಗಳು ಕರ್ನಾಟಕ ರಾಜ್ಯದಲ್ಲಿವೆ. ಹಲವು ರಾಜವಂಶದ ಕಾಲದಲ್ಲಿ ಅತ್ಯದ್ಭುತ ದೇವಾಲಯಗಳು ನಿರ್ಮಾಣಗೊಂಡಿವೆ. ಕರ್ನಾಟಕದ ಅತಿಪ್ರಸಿದ್ಧ ದೇವಸ್ಥಾನಗಳಲ್ಲಿ ಕರ್ನಾಟಕದ ಹಾಸನ ಜಿಲ್ಲೆಯ ಹಳೇಬೀಡಿನ ಹೊಯ್ಸಳೇಶ್ವರ ದೇವಸ್ಥಾನ ಕೂಡಾ ಒಂದು. ಹಳೇಬೀಡು ಶಿಲ್ಪಕಲೆಯ ನೆಲೆವೀಡು. ಇದು ಶಿವನಿಗೆ ಅರ್ಪಿತವಾದ ಐತಿಹಾಸಿಕ ದೇವಾಲಯವಾಗಿದೆ. ಇದನ್ನು ಹೊಯ್ಸಳೇಶ್ವರ ದೇವಸ್ಥಾನ, ಹಳೆಬೀಡು ದೇವಸ್ಥಾನ ಎಂದು ಕೂಡಾ ಕರೆಯುತ್ತಾರೆ, ಹಳೇಬೀಡಿನ ಮೊದಲ ಹೆಸರು ದೋರಸಮುದ್ರ. ಕ್ರಿ.ಶ. 950ಕ್ಕೆ ಮೊದಲೇ ರಾಷ್ಟ್ರಕೂಟರ ದೊರೆ ಭಾವದೋರ ಎಂಬಾತ ಇಲ್ಲಿ ಕೆರೆಯನ್ನು ನಿರ್ಮಿಸಿ ರಾಜ್ಯಭಾರ ಮಾಡಿದ್ದರಿಂದ ಇದಕ್ಕೆ ದೋರಸಮುದ್ರ ಎಂದು ಹೆಸರು ಬಂದಿತ್ತು ಎಂದು ಹೇಳುತ್ತಾರೆ. ಹೆಸರು ಹಳೆಯ ಬೀಡಾದರೂ, ಇಲ್ಲಿನ ಶಿಲ್ಪಕಲೆಗಳು ನವನವೀನ, ನಿತ್ಯನೂತನ. ಹಳೆಯ ಬೀಡಿನಲ್ಲಿ ಹಲವಾರು ಅತ್ಯಂತ ಸುಂದರ ದೇಗುಲಗಳಿವೆ. #halebidu #belluru #hoysala #sculpture #planettvkannada
via IFTTT
via IFTTT