ಹಾವುಗಳನ್ನು ಪೂಜಿಸುವ ಅಪರೂಪದ ದೇವಾಲಯ..! | mannarasala temple history | Planet tv kannada Hi Friends Welcome Back to our channel in this video we will give information about mannarasala nagaraja temple . ಇಲ್ಲಿ ಸಿಗುವ ಅರಿಶಿನ ಮೈಗೆ ಹಚ್ಚಿದರೆ ಎಂಥಹಾ ರೋಗವೂ ಪರಿಹಾರ..! ಭಾರತ ಅಂದ್ರೆ ವೈವಿಧ್ಯತೆಯಲ್ಲಿ ಏಕತೆ ಇರೋ ದೇಶ. ವಿವಿಧ ಭಾಷೆ, ಸಂಸ್ಕೃತಿ, ಆಚಾರ-ವಿಚಾರ, ಸಂಪ್ರದಾಯಗಳು ಭಾರತದ ವಿಶೇಷ. ಜತೆಗೇ ಭಿನ್ನ-ವಿಭಿನ್ನ ದೇವಾಲಯಗಳೂ ಇಲ್ಲಿವೆ. ಆಯಾ ಪ್ರದೇಶದ ನಂಬಿಕೆಗೆ ತಕ್ಕಂತೆ ವಿಶಿಷ್ಟವಾದ ದೇವಾಲಯಗಳು ರೂಪುಗೊಳ್ಳುತ್ತವೆ. ಅಲ್ಲಿ ನಡೆದ ಯಾವುದೋ ಘಟನೆಗೆ ಸಂಬಂಧಿಸಿದಂತೆ ಜನರಲ್ಲಿಯೂ ನಂಬಿಕೆ ಬೆಳೆದಿರುತ್ತದೆ. ಇದಕ್ಕೆ ಅನುಸಾರವಾಗಿ ದೇವರಿಗೆ ಮಾತ್ರವಲ್ಲದೆ, ವ್ಯಕ್ತಿಗೆ, ವಸ್ತುವಿಗೆ ದೇಶದ ಹಲವೆಡೆ ದೇವಾಲಯವನ್ನು.ಕಟ್ಟಿರಬಹುದನ್ನು ನೋಡಿರಬಹುದು. ದೇಶದ ಹಲವೆಡೆ ಶಿವ, ವಿಷ್ಣು, ಕೃಷ್ಣ, ಗಣೇಶ, ಸುಬ್ರಹ್ಮಣ್ಯ, ದೇವಿ, ದೇವಿಯ ಹಲವು ಅವತಾರಗಳ ದೇವಾಲಯಗಳನ್ನು ನಾವು ನೋಡಿದ್ದೇವೆ. ಅದಲ್ಲದೆ ದೇಶದಲ್ಲಿ ವಿಚಿತ್ರವೆನಿಸುವ, ವಿಚಿತ್ರ ಆಚರಣೆಯನ್ನು ಪಾಲಿಸಿಕೊಂಡು ಬಂದಿರುವ, ವಸ್ತು ಅಥವಾ ಪ್ರಾಣಿಗಳನ್ನು ಪೂಜಿಸುವ ಹಲವು ದೇವಸ್ಥಾನಗಳಿವೆ. ಸಾವಿರಾರು ಇಲಿಗಳಿಂದಲೇ ತುಂಬಿರುವ ಇಲಿಯನ್ನೇ ಪೂಜಿಸುವ ದೇವಸ್ಥಾನ ರಾಜಸ್ಥಾನದ ಕರ್ಣಿಮಾತಾ ದೇವಾಲಯ. ಹಾವನ್ನು ಪೂಜಿಸುವ ದೇವಸ್ಥಾನ ಕೇರಳದ ಆಲಪ್ಪುಳ ಜಿಲ್ಲೆಯಲ್ಲಿದೆ. ಹೌದು, ಅಚ್ಚರಿ ಎನಿಸಿದರೂ ಇದು ನಿಜ. ಕೇರಳದಲ್ಲಿ ಈ ರೀತಿ ಸರ್ಪಗಳನ್ನೇ ಪೂಜಿಸುವ ದೇವಾಲಯವೊಂದಿದೆ. ಕೇರಳದ ಆಲಪ್ಪುಳ ಜಿಲ್ಲೆಯಲ್ಲಿ ಹಾವುಗಳನ್ನು ಪೂಜಿಸುವ ಮಹಾ ಮನ್ನರಸಲ ಶ್ರೀ ನಾಗರಾಜ ದೇವಸ್ಥಾನವಿದೆ. ಈ ದೇವಸ್ಥಾನದ ಪ್ರಥಮ ಪುರೋಹಿತೆ ಐದು ತಲೆಯ ಹಾವುಗಳಿಗೆ ಜನ್ಮ ನೀಡಿದಳು ಎಂದು ಐತಿಹ್ಯವಿದೆ. ಹೀಗಾಗಿ ಇಂದಿಗೂ ಈ ದೇವಾಲಯವನ್ನು ಸರ್ಪವೇ ರಕ್ಷಿಸುತ್ತದೆ ಎಂದು ನಂಬಲಾಗಿದೆ. ಈ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಬರುತ್ತಾರೆ. #mannarasalatemplehistory #planettvkannada
via IFTTT
via IFTTT