ಕ್ಯಾನ್ಸರ್ ನಿಂದ ಕಣ್ಣು ಕಳೆದುಕೊಂಡರೂ.. ಪ್ರತಿಧ್ವನಿಯಲ್ಲೇ ಜಗತ್ತು ಕಂಡ ಬಾಲಕ..!
ನಾವೆಲ್ಲರೂ ರಾತ್ರಿ ಹೊತ್ತಲ್ಲಿ ವಿದ್ಯುತ್ ಹೋದ್ರೆ ಸಾಕು ಬೆಂಕಿ ಪೊಟ್ಟಣಕ್ಕಾಗಿಯೋ ಇಲ್ಲ ಟಾರ್ಚ್ಗಾಗಿಯೋ ತಡಕಾಡುತ್ತೀವಿ. ಮತ್ತೆ ಪವರ್ ಬರೋವರೆಗೂ ಜಗತ್ತೇ ಇಲ್ಲ ಎನ್ನುವಂತೆ ಕೂತುಬಿಡ್ತೀವಿ. ಆದ್ರೆ ಆ ಬಾಲಕನಿಗೆ ಕಣ್ಣುಗಳು ಕಾಣಿಸುತ್ತಿರಲಿಲ್ಲ. ಹೀಗಿದ್ರೂ ಅವನು ಸಾಮಾನ್ಯರಂತೆ ಆಡುತ್ತಿದ್ದ. ಬೈಸಿಕಲ್ ಹೊಡೀತಿದ್ದ. ಯಾರ ಸಹಾಯವಿಲ್ಲದೆ ರೋಡ್ ದಾಟುತ್ತಿದ್ದ.
ಕಣ್ಣು ಕಾಣಿಸದಿದ್ರೂ ಈತ ಸೂಪರ್ ಕಿಡ್
ಅವನ ಹೆಸರು ಬೆನ್ ಅಂಡರ್ ವುಡ್ (1992-2009) ಅಸಾಮಾನ್ಯ ಅಂಧ ಬಾಲಕ. ಈತ ಕಂಪ್ಯೂಟರ್ ನಲ್ಲಿ ನಿರಾಯಾಸವಾಗಿ ಟೈಪ್ ಮಾಡಬಲ್ಲವನಾಗಿದ್ದ. ಯಾರ ಸಹಾಯ ಇಲ್ಲದೆ ಮನೆಯಲ್ಲಿ ತಿರುಗಾಡಬಲ್ಲ. ಮೆಟ್ಟಿಲುಗಳನ್ನು ಸ್ಟಿಕ್ ಬಳಸದೆ ಇಳಿಯಬಲ್ಲ ಸೂಪರ್ ಕಿಡ್ ಆಗಿದ್ದ.
image source-Benunderwood.com
ಕಣ್ಣು ಕಾಣಿಸದ ಒಬ್ಬ ಅಂಧ ಬಾಲಕ ಇಷ್ಟೆಲ್ಲಾ ಕೆಲಸವನ್ನು ಹೇಗೆ ಮಾಡಬಲ್ಲ ಎಂದು ನಿಮಗೆ ಆಶ್ಚರ್ಯ ಆಗಬಹುದು. ಬಾಲ್ಯದಲ್ಲೇ ಕಣ್ಣು ಕಳೆದುಕೊಂಡ ಬೆನ್ ಅಂಡರ್ ವುಡ್ ಜಗತ್ತನ್ನ ಗುರುತಿಸಿದ್ದು ಪ್ರತಿಧ್ವನಿಯ ಮೂಲಕ. ತನ್ನ ಎದುರಿಗಿರುವ ವಸ್ತುವನ್ನು ಸ್ಪಷ್ಟವಾಗಿ ಗುರುತಿಸಬಲ್ಲ ವಿಶಿಷ್ಟ ಶಕ್ತಿ ಇವನಲ್ಲಿತ್ತು.
ಬೆನ್ ಜನನವಾಗಿದ್ದು ಅಮೇರಿಕಾದ ಕ್ಯಾಲಿಫೋರ್ನಿಯಾ ನಗರದಲ್ಲಿ. ಬೆನ್ ಎಲ್ಲಾ ಮಕ್ಕಳಂತೆ ಆರೋಗ್ಯವಂತನಾಗೇ ಜನಿಸಿದ. ಆದ್ರೆ ಈತ ಎರಡನೇ ವರ್ಷಕ್ಕೆ ಕಾಲಿಟ್ಟಾಗ ಕಣ್ಣುಗಳ ರೆಟಿನಾದಲ್ಲಿ ಚಿಕ್ಕ ತೊಂದರೆ ಕಾಣಿಸಿಕೊಂಡಿತು. ಅದು ಏನೆಂದು ವೈದ್ಯರು ತಿಳಿಯೋ ವೇಳೆಗೆ ಕಣ್ಣಿನ ಕ್ಯಾನ್ಸರ್ ಆವರಿಸಿತ್ತು. ಕೂಡಲೇ ವೈದ್ಯರು ರೇಡಿಯೋ ಥೆರಪಿಯನ್ನ ಆರಂಭಿಸಿದ್ರೂ, ಪ್ರಯೋಜನ ಆಗಲಿಲ್ಲ. ರೋಗ ಉಲ್ಬಣಿಸತೊಡಗಿತು. ಕೊನೆಗೆ ಅವನ ಕಣ್ಣುಗಳನ್ನ ತೆಗೆಯದೇ ವಿಧಿ ಇರಲಿಲ್ಲ. ಹಾಗೆ ಕಣ್ಣುಗಳನ್ನ ಕಳೆದುಕೊಂಡರೂ ಕೂಡ ಅವನ ದೈನಂದಿನ ಬದುಕಿಗೆ ಯಾವುದೇ ತೊಂದರೆ ಆಗಲಿಲ್ಲ.
ಬೆನ್ ಕಣ್ಣುಗಳ ಆಪರೇಷನ್ ಆದ ನಂತರ, ಒಂದು ದಿನ ತಾಯಿಯ ಜೊತೆ ಕಾರಲ್ಲಿ ಹೋಗುವಾಗ, ರಸ್ತೆ ಬದಿಯಲ್ಲಿ ಇರೋ ದೊಡ್ಡ ಬಿಲ್ಡಿಂಗ್ ನೋಡು ಎಂದು ತಾಯಿಗೆ ಹೇಳ್ತಾನೆ. ತಾಯಿ ನಕ್ಕು ಸುಮ್ಮನಾಗ್ತಾಳೆ. ಆದ್ರೆ ಆ ಹೊತ್ತಿಗೆ ಪ್ರತಿಧ್ವನಿಯ ಮೂಲಕ ಜಗತ್ತನ್ನ ಗುರುತಿಸೋ ಅವನ ಪ್ರಯಾಣ ಆರಂಭವಾಗಿರುತ್ತೆ. ಮುಂದೆ ಇದೇ ಟ್ರಿಕ್ ಪ್ರಾಕ್ಟೀಸ್ ಮಾಡತೊಡಗಿದ. ತನ್ನ ಬಾಯಿಂದ ನಿರಂತರವಾಗಿ ಕ್ಲಿಕ್ ಕ್ಲಿಕ್ ಅನ್ನೋ ಶಬ್ಧ ಮಾಡುತ್ತಾ ಎದುರಿಗಿರೋ ವಸ್ತುವಿನಿಂದ ಬರೋ ಪ್ರತಿಧ್ವನಿಯ ಆಧಾರದ ಮೇಲೆ ತನ್ನ ಸುತ್ತಮುತ್ತಲಿರುವ ಪ್ರಪಂಚವನ್ನು ಗುರುತಿಸೋ ಪ್ರಯತ್ನ ಮಾಡತೊಡಗಿದ.
image source blogs.worldbank.org
ಎಕೊಲೋಕೇಶನ್ ಹೇಗೆ ಕಲಿತ ಗೊತ್ತಾ..?
ಇದನ್ನೇ ವಿಜ್ಞಾನಿಗಳು ಹ್ಯುಮನ್ ಎಕೊಲೋಕೇಶನ್ ಅಂತಾರೆ. ಈ ಎಕೊಲೋಕೇಶನ್ ವಿಧಾನವನ್ನ ನಿರಂತರವಾಗಿ ಅಭ್ಯಾಸ ಮಾಡತೊಡಗಿದ. ಬೆನ್ನ ಈ ಸೂಪರ್ ಸೆನ್ಸ್ ಕಣ್ಣುಗಳಿಲ್ಲದ ಅವನ ಕೊರತೆಯನ್ನ ನೀಗಿಸಿತ್ತು. ಬೆನ್ಗೆ ಚಿಕಿತ್ಸೆ ನೀಡಿದ್ದ ಕಣ್ಣಿನ ಡಾಕ್ಟರ್ ಇವನ ಈ ಸೂಪರ್ ಸೆನ್ಸ್ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದರು. ಅಂಧ ಬಾಲಕನೊಬ್ಬ ವೀಡಿಯೋ ಗೇಮ್ ಆಡ್ತಾನೆ ಅಂದ್ರೆ ಯಾರಿಗೆ ತಾನೇ ಆಶ್ಚರ್ಯ ಆಗಲ್ಲ ಹೇಳಿ.
ಇವನಿಗೆ ಈ ಶಕ್ತಿ ಬಂದದ್ದು ಹೇಗೆ ಅನ್ನೋದ್ರ ಬಗ್ಗೆ ಸಾಕಷ್ಟು ಚರ್ಚೆಯಾಯ್ತು. ಬೆನ್ ಕಿವಿಗಳ ಪರೀಕ್ಷೆಯೂ ನಡೆಯಿತು. ಆದ್ರೆ ಅವನ ಕಿವಿಗಳು ಎಲ್ಲರಂತೆ 20 ಡೆಸಿಬಲ್ ಇಯರಿಂಗ್ ಕ್ಯಾಪಿಸಿಟಿ ಹೊಂದಿದ್ವು. ಆದ್ರೆ ಅವನು ಕೇಳಿದ ಪ್ರತಿಧ್ವನಿಯಿಂದ ಎದುರಿಗಿರೋ ವಸ್ತು ಮತ್ತು ಅದರ ಅಂತರ ಗ್ರಹಿಸುತ್ತಿದ್ದ. ಇವನ ಈ ಸೆನ್ಸ್ ಸಬ್ಮೆರಿನ್ಗಳಲ್ಲಿರೋ ಆಧುನಿಕ ಟೆಕ್ನಾಲಜಿಯನ್ನ ಹೋಲುತ್ತೆ. ಇವನ ಈ ಸೂಪರ್ ಸೆನ್ಸ್ ಅನ್ನು ಕೆಲ ವಿಜ್ಞಾನಿಗಳು ಪರೀಕ್ಷೆಗೆ ಒಳಪಡಿಸಿದ್ರು. ಭೂಗೋಳ ವಿಜ್ಞಾನಿಗಳು ಮತ್ತು ಮನಶಾಸ್ತ್ರಜ್ಞರು ಕೂಡ ಈ ಪರೀಕ್ಷೆಯಲ್ಲಿ ಇದ್ರು. ಪಾರ್ಕಿನಲ್ಲಿ, ರೋಡಿನಲ್ಲಿ ಅವನ ಚಲನ ವಲನಗಳನ್ನ ಗಮನಿಸಲಾಯ್ತು. ಈ ಪರೀಕ್ಷೆಯಲ್ಲಿ ಅವರಿಗೆ ನಿಗದಿತ ಫಲಿತಾಂಶ ದೊರಕಿದರೆ ಲಕ್ಷಾಂತರ ಅಂಧ ಮಂದಿಗೆ ಈ ಸೆನ್ಸ್ ತಿಳಿಸುವ ಉದ್ದೇಶವಿತ್ತು.
ನಂತ್ರ ಹ್ಯೂಮನ್ ಲ್ಯಾಬ್ನಲ್ಲಿ ಪರೀಕ್ಷೆ ನಡೆಸಲಾಯ್ತು. ತನ್ನ ಬಾಯಿಂದ ನಿರಂತರವಾಗಿ ಶಬ್ಧ ಮಾಡಿ, ಬರುವ ಪ್ರತಿಧ್ವನಿ ಆಧರಿಸಿ ವಸ್ತು ಯಾವುದೆಂದು ಗುರುತಿಸಲು ಇವನು ಯಶಸ್ವಿಯಾಗಿದ್ದ. ಪರೀಕ್ಷೆಯ ತಿಳಿದು ಬಂದದ್ದು ಒಂದೇ. ಇದು ಅವನ ಸೂಪರ್ ಸೆನ್ಸ್ ಮಾತ್ರವೇ ಆಗಿತ್ತು.
ಇದು ನಿಜಕ್ಕೂ ಅಚ್ಚರಿಯೇ. ಅರಿವು ಬರೋ ಮುಂಚೇನೆ ಕಣ್ಣುಗಳನ್ನ ಕಳೆದುಕೊಂಡ ಇವನು ಈ ವಿಶಿಷ್ಟ ಶಕ್ತಿಯನ್ನ ಗಳಿಸಿದ್ದು ಹೇಗೆ ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡೋದು ಸಹಜ. ಅದಕ್ಕೆ ಸರಿಯಾದ ಉತ್ತರ ಅವನಲ್ಲೂ ಇರಲಿಲ್ಲ
from ಸುದ್ದಿ - Planet Tv
May 10, 2021 at 11:47PM