ಪ್ರಕೃತಿ ಎಲ್ಲವನ್ನೂ ಮತ್ತೆ ಮರಳಿ ಪಡೆಯುತ್ತದೆ..!
ಪ್ರಕೃತಿ ಎಂದರೆ ಸೃಷ್ಟಿ.ನೈಸರ್ಗಿಕ, ಭೌತಿಕ ಅಥವಾ ವಸ್ತು ಪ್ರಪಂಚ ಅಥವಾ ವಿಶ್ವ.ಹುಟ್ಟು-ಮರಣ, ಅಂದು-ಇಂದು-ನಾಳೆ, ಹೊಸತು, ಹಳತು, ಒಳ್ಳೆಯದ್ದು, ಕೆಟ್ಟದ್ದು ಎಲ್ಲವನ್ನೂ ನಿರ್ಣಯಿಸುವ ಅನಂತ. ಪ್ರಕೃತಿ ಮಾತೆ ಜೀವಸಂಕುಲಕ್ಕೆ ನೀಡಿರುವ ಕೊಡುಗೆ ಅಷ್ಟಿಷ್ಟಲ್ಲ. ಪರಿಸರದಿಂದಲೇ ಮಾನವ,ಪ್ರಾಣಿಗಳ ಜೀವನ ಆರಂಭವಾಗುತ್ತದೆ. ಪ್ರಕೃತಿಯಿಲ್ಲದೆ, ಪ್ರಕೃತಿಯ ಕೊಡುಗೆಯಿಲ್ಲದೆ ಮನುಷ್ಯನಿಲ್ಲ. ಮಾನವ ವಿಜ್ಞಾನ-ತಂತ್ರಜ್ಞಾನದಲ್ಲಿ ಅದೆಷ್ಟು ಮುಂದುವರಿದರೂ ನಿರ್ಸಗವನ್ನು ಮೀರಿ ಬೆಳೆಯಲು ಸಾಧ್ಯವಿಲ್ಲ. ಆದರೆ ಅಚ್ಚರಿಯೆಂದರೆ ಮಾನವನಿಗೆ ಈ ಸತ್ಯ ತಿಳಿದಿಲ್ಲ.
source and pic credit: google.com
ಮನುಷ್ಯ ತನಗೆ ಹುಟ್ಟು ನೀಡಿದ ಪ್ರಕೃತಿಯನ್ನೇ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾನೆ. ಮಾನವನ ದುರಾಸೆಗೆ ಭೂಮಿ, ನೀರು, ಗಾಳಿ, ಮಣ್ಣು ಎಲ್ಲವೂ ಕಲುಷಿತವಾಗುತ್ತಿದೆ. ಎಲ್ಲವನ್ನೂ ಗಳಿಸಿಕೊಳ್ಳುವ ಹಪಹಪಿಯಲ್ಲಿ ಭೂಮಿಯನ್ನು ಸೀಳುತ್ತಿದ್ದಾನೆ, ಮಣ್ಣನ್ನು ಬಗೆಯುತ್ತಿದ್ದಾನೆ. ಹರಿಯುವ ನೀರಿಗೇ ತಡೆಯೊಡ್ಡುತ್ತಿದ್ದಾನೆ. ಕ್ರೌರ್ಯಕ್ಕೂ ಮೀರಿದ ಎಲ್ಲಾ ಕೆಲಸಗಳನ್ನೂ ಮಾನವ ಮಾಡಿಯಾಗಿದೆ. ಆದರೆ ಪ್ರಕೃತಿ ಮಾತೆ ಶಾಂತಚಿತ್ತವಾಗಿ ಎಲ್ಲವನ್ನೂ ಸಹಿಸುತ್ತಿದೆ. ನೆರೆ, ಸುನಾಮಿ, ಭೂಕಂಪಗಳು, ಮಹಾಮಾರಿಗಳು ಆಗೊಮ್ಮೆ ಈಗೊಮ್ಮೆ ಶಾಂತಚಿತ್ತ ಪ್ರಕೃತಿಯ ಕ್ರೌರ್ಯವನ್ನು ಹೊರಗೆಡಹುತ್ತವೆ. ಮನುಷ್ಯ ತನ್ನಿಂದ ಕಿತ್ತು ಪಡೆದುಕೊಂಡ ಎಲ್ಲವನ್ನೂ ಭೂಮಿ ಶಾಂತಚಿತ್ತವಾಗಿ ಮತ್ತೆ ಮರಳಿಪಡೆಯುತ್ತದೆ.
source and pic credit: https://ift.tt/2XHew6B
ಜಪಾನಿನ ಐಷಾರಾಮಿ ವಸತಿಗೃಹ
source and pic credit: https://ift.tt/2XHew6B
ಜಪಾನಿನ ಹೊರವಲಯದಲ್ಲಿರುವ ದ್ವೀಪವೊಂದರಲ್ಲಿ ಪ್ರವಾಸಿಗರನ್ನು ಸೆಳೆಯುತ್ತಿದ್ದ ಐಷಾರಾಮಿ ವಸತಿಗೃಹವೊಂದು ಶಾಶ್ವತವಾಗಿ ಮುಚ್ಚಿದ ಬಳಿಕ ವರುಷಗಳ ಬಳಿಕ ಅಲ್ಲಿ ಕಂಡು ಬಂದ ಚಿತ್ರಣ ಇದು. ವರ್ಷಗಳ ಹಿಂದೆ ಹಚಿಜೋ ರಾಯಲ್ ಹೊಟೇಲ್ ಜಪಾನ್ ನ ಪ್ರಸಿದ್ಧ ಐಷಾರಾಮಿ ಹೊಟೇಲ್ ಗಳಲ್ಲಿ ಒಂದಾಗಿತ್ತು. ರಜಾ ಸಮಯದಲ್ಲಿ ಸಮಯ ಕಳೆಯಲು ಜನರು ಇಲ್ಲಿನ ಸಮುದ್ರ ತೀರಕ್ಕೆ, ದ್ವೀಪಕ್ಕೆ ಬರುತ್ತಿದ್ದರು. ವರ್ಷಗಳಿಂದೀಚೆ ಪ್ರವಾಸಿಗರೇ ಬರದ ಕಾರಣ ಐಷಾರಾಮಿ ಹೊಟೇಲ್ ಮುಚ್ಚಲ್ಪಟ್ಟಿತ್ತು. ತನ್ನ ಮಡಿಲನ್ನು ಆಕ್ರಮಿಸಿದ್ದ ಬೃಹತ್ ಹೊಟೇಲ್ ನ್ನು ಪ್ರಕೃತಿ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಐಷಾರಾಮಿ ಹೊಟೇಲ್, ರೂಮುಗಳು ಹುಲ್ಲುಗಾವಲಿನಿಂದ ಮುಚ್ಚಿಹೋಗಿದೆ.
ಹಸಿರು ‘ಲಿಫ್ಟ್’ ಆಗಿದೆ
source and pic credit: https://ift.tt/2XHew6B
ಬೃಹತ್ ಮಾಲ್, ಶಾಪಿಂಗ್ ಕಾಂಪ್ಲೆಕ್ಸ್ ಇಲ್ಲದೆ ಮನುಷ್ಯನಿಗೆ ಉಸಿರಾಡಲೇ ಸಾಧ್ಯವಿಲ್ಲವೇನೋ ಎಂಬಂತಾಗಿದೆ ಪರಿಸ್ಥಿತಿ. ದೊಡ್ಡ ದೊಡ್ಡ ಮಾಲ್ ಗಳಲ್ಲಿ ದೊಡ್ಡ ದೊಡ್ಡ ಲಿಫ್ಟ್ ಗಳಲ್ಲಿ ಜನರೋ ಜನರು. ಆದರೆ, ಜನರೆಲ್ಲರೂ ಹೋದ ಬಳಿಕ ಅಲ್ಲಿ ಪ್ರಕೃತಿಯೇ ಲಿಫ್ಟ್ ಆಗಿದೆ. ಎಸ್ಕಲೇಟರ್ ಸಂಪೂರ್ಣವಾಗಿ ಹಸಿರು ಎಲೆಗಳಿಂದ, ಬಳ್ಳಿಗಳಿಂದ ಮುಚ್ಚಿ ಹೋಗಿದೆ.
ಭೂಮಿಯ ಚಕ್ರ
source and pic credit: https://ift.tt/2XHew6B
ಜಾತ್ರೆ, ಅಮ್ಯೂಸ್ ಮೆಂಟ್ ಪಾರ್ಕ್ ನಲ್ಲಿ ಇಂಥಹಾ ವೀಲ್ ಗಳಲ್ಲಿ ಕುಳಿತು ಎಲ್ಲರೂ ಎಂಜಾಯ್ ಮಾಡಿರುತ್ತಾರೆ. ಎತ್ತರೆತ್ತರಕ್ಕೆ ತಿರುಗುವ ಈ ವೀಲ್ ನಲ್ಲಿ ಕುಳಿತು ಪ್ರಕೃತಿಯನ್ನು ಮೇಲಿನಿಂದ ನೋಡಿ ಆಸ್ವಾದಿಸಬಹುದು. ಆದರೆ ಇಲ್ಲಿ ಪ್ರಕೃತಿಯೇ ಈ ಮನುಷ್ಯ ನಿರ್ಮಿತ ವೀಲ್ ನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ತಾನೇ ಎತ್ತರವೆಂದು ಬೀಗುತ್ತಿದ್ದ ಯಂತ್ರ ನಿಸರ್ಗದ ಮುಂದೆ ಶರಣಾಗಿದೆ.
ಕ್ಯಾಲಿಫೋರ್ನಿಯಾದ ಪಿಯಾನೋ ಟ್ರೀ
source and pic credit: https://ift.tt/2XHew6B
ಇದು ಕ್ಯಾಲಿಫೋನಿಯಾದಲ್ಲಿ ಅರಣ್ಯವೊಂದರಲ್ಲಿ ಕಂಡು ಬಂದಿರುವ ಚಿತ್ರ. ಪಿಯಾನೋಗಳು ಹೆಚ್ಚಾಗಿ ತುಸು ಭಾರವಿದ್ದು, ಒಂದೆಡೆಯಿಂದ ಇನ್ನೊಂದೆಡೆ ಕೊಂಡೊಯ್ಯುವುದು ಸ್ಪಲ್ಪ ಕಷ್ಟ. ಹೀಗಾಗಿ ಅರಣ್ಯ ವೀಕ್ಷಣೆಗೆ ಬಂದವರು ಯಾರೋ ಈ ಪಿಯಾನೋವನ್ನು ಬಿಟ್ಟು ಹೋಗಿರಬಹುದು ಎಂದು ಹೇಳಲಾಗ್ತಿದೆ. ಮರವೊಂದು ಮಾತ್ರ ಇದು ಬೆಲೆಬಾಳುವ ಸಂಗೀತ ಉಪಕರಣ ಎಂಬುದನ್ನೂ ಗಣನೆಗೆ ತೆಗೆದುಕೊಳ್ಳುತ್ತದೆ ತನ್ನ ಪಾಡಿಗೆ ತಾನು ಬೃಹಾದಾಕಾರವಾಗಿ ಬೆಳೆಯುತ್ತಿದೆ.
ಮರದಲ್ಲಿ ಸೈಕಲ್
source and pic credit: https://ift.tt/2XHew6B
ನೆಲದಲ್ಲಿ ಸೈಕಲ್ ತುಳಿಯುತ್ತಾ ಹೋಗುವುದನ್ನು ನೋಡಿರಬಹುದು. ಆದರೆ ಇಲ್ಲಿ ಮರವೇ ಸೈಕಲ್ ತುಳಿಯುತ್ತಿದೆ ನೋಡಿ. ಯಾರೋ ಸಣ್ಣ ಮಕ್ಕಳು ಬಿಟ್ಟು ಹೋದ ಸೈಕಲ್ ಮರಕ್ಕೂ ಆಪ್ತವೆನಿಸರಬೇಕು. ಅದಕ್ಕೇ ಸೈಕಲ್ನ್ನೂ ಜತೆಗಿರಿಸಿಕೊಂಡು ಬೆಳೆದುಬಿಟ್ಟಿದೆ.
ಬೃಹತ್ ಹಡಗು
source and pic credit: https://ift.tt/2XHew6B
ಈ ಚಿತ್ರವನ್ನೊಮ್ಮೆ ನೋಡಿ ಮನಸ್ಸಿದ್ದರೆ ಮಾರ್ಗವಿದೆ ಅನ್ನೋ ಮಾತು ಎಷ್ಟು ನಿಜ ಅನ್ನೋದು ಸ್ಪಷ್ಟವಾಗುತ್ತದೆ. ಕಣ್ಣಿಗೂ ನಿಲುಕದಷ್ಟು ಎತ್ತರ, ಅಗಲವಿರುವ ಹಡಗು ಚಾಲನೆಯಲ್ಲಿದ್ದಾಗ ಅದೆಷ್ಟೋ ಜನರನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುತ್ತದೆ. ನಿಷ್ಕ್ರಿಯವಾಗಿ ಒಂದೆಡೆ ನಿಂತಾಗ ಅದು ನೆಲದಲ್ಲಾದರೂ ಸರಿ, ನೀರಲ್ಲಾದರೂ ಸರಿ ಎಲ್ಲ ನಾನೇ ಎಲ್ಲವೇ ಎಂದು ಪ್ರಕೃತಿಗೇ ಗೆದ್ದು ಬೀಗಿದೆ. ಬೃಹತ್ ಆಕಾರದ ಹಡಗು ಹಚ್ಚ ಹಸಿರಿನ ಮರವಾಗಿ ಕಂಗೊಳಿಸುತ್ತಿದೆ. ಹಡಗನ್ನು ಸೀಳಿ ಬೇರುಗಳು ಸಹ ನೀರಿನಲಳೊಗೆ ಇಳಿದಿವೆ ಎಂದು ಬೇರೆ ಹೇಳಬೇಕಾಗಿಲ್ಲ.
ಹಸಿರು ಕಾರು
source and pic credit: https://ift.tt/2XHew6B
ಒಂದಾನೊಂದು ಕಾಲದಲ್ಲಿ ಮನೆಯಲ್ಲೊಂದು ಕಾರಿದ್ದರೆ ಸಾಕು ನಾಲ್ಕೂರಿಗೆ ಗೊತ್ತಿರುತ್ತಿತ್ತು. ಆದರೆ ಈಗ ಕೈಗೆಟುಕುವ ಬೆಲೆಯಲ್ಲಿ ಲೋನ್, ಇಎಂಐ ಇರುವುದರಿಂದ ಕೈಗೊಂದು, ಕಾಲಿಗೊಂದು ಕಾರುಗಳಿವೆ. ಜನರು ಬಟ್ಟೆ ಬದಲಾಯಿಸಿದಂತೆ ಕಾರುಗಳನ್ನು ಬದಲಾಯಿಸುತ್ತಿದ್ದಾರೆ. ಹೀಗೆ ಬೇಕಾಬಿಟ್ಟಿ ಕಾರುಗಳ ಮಧ್ಯೆ ಬೇಡವಾಗಿ ಮೂಲೆ ಸೇರಿದ ಕಾರೊಂದು ಈ ರೀತಿ ಹಸಿರು ಕಾರಾಗಿ ಪರಿವರ್ತನೆಯಾಗಿದೆ.
ಪಾಚಿಗಟ್ಟಿದ ಬಸ್ಸು
source and pic credit: https://ift.tt/2XHew6B
ಮೊದಲ ಬಾರಿ ಬಸ್ಸೊಂದು ರಸ್ತೆಯಲ್ಲಿ ಓಡಾಡುವಾಗ ಜನರೆಲ್ಲರೂ ಅಚ್ಚರಿಯಿಂದ ನೋಡಿದ್ದರಂತೆ. ಆಮೇಲೆಲ್ಲಾ ಬೇಕಾಬಿಟ್ಟಿ ಬಸ್ಸುಗಳು, ಬೃಹತ್ ವಾಹನಗಳು ರಸ್ತೆಗಿಳಿದು ಆ ಕುರಿತು ಇರುವ ಅಚ್ಚರಿಯೇ ಹೊರಟು ಹೋಯಿತು. ಜನಜಂಗುಳಿ ರಸ್ತೆಯಲ್ಲಿರಬೇಕಾದ ಬಸ್ಸನ್ನು ದಟ್ಟ ಅರಣ್ಯದಲ್ಲಿ ತಂದು ಯಾರು ಬಿಟ್ಟರೋ ಗೊತ್ತಿಲ್ಲ. ಪರಿಸರ ಮಾತ್ರ ಅಕ್ಕರೆಯಿಂದ ಅಪ್ಪಿಕೊಂಡಿದೆ.
ಗ್ರೀನ್ ಹೌಸ್
source and pic credit: https://ift.tt/2XHew6B
ಅದೊಂದು ಪುಟ್ಟ ಊರು. ಪುಟ್ಟ ಪುಟ್ಟದಾದ ಒಂದಷ್ಟು ಮನೆಗಳು. ಪಟ್ಟಣದ ವ್ಯಾಮೋಹಕ್ಕೆ ಸಿಲುಕಿ ಎಲ್ಲವೂ ಗುಳೆ ಹೋದರೇನೋ ಗ್ರಾಮಕ್ಕೆ ಗ್ರಾಮವೇ ಹಸಿರು ಹೊದ್ದು ಮಲಗಿದೆ. ಮನುಷ್ಯರುವ ವಾಸವಿದ್ದ ಮನೆಗಳೆಲ್ಲಾ ಪ್ರಕೃತಿಯ ಮನೆಯಾಗಿದೆ.
source and pic credit: https://ift.tt/2XHew6B
ಕಾಂಕ್ರೀಟ್ ಕಾಡುಗಳಂತಾಗಿರುವ ನಾಡಿನಲ್ಲಿ ಇಂತಹಾ ಹಸಿರ ರಾಶಿ ಇಂದಿನ ಅತ್ಯಗತ್ಯ. ಇಂಥಹಾ ಗ್ರೀನ್ ಹೌಸ್ ನಿಂದಾಗಿಯೇ ಪ್ರಕೃತಿ ತಂಪಾಗಿರುತ್ತೆ ಅಲ್ವಾ..
source and pic credit: https://ift.tt/2XHew6B
ಅದೆಷ್ಟೋ ಭವ್ಯವಾದ ಬಂಗಲೆಗಳು, ರೈಲಿನ ಹಳಿ, ಮುಳುಗಿದ ಹಡಗು, ವಾಹನಗಳು ಪಾಚಿಗಟ್ಟಿದ ಶೂ ಎಲ್ಲವೂ ಹೀಗೆ ಮೌನವಾಗಿ ಪ್ರಕೃತಿಯ ಮುಂದೆ ಶರಣಾಗಿವೆ. ಏನಾಗಿದ್ದರೂ ಪ್ರಕೃತಿಯ ಮುಂದೆ ಯಾವತ್ತಾದರೂ ಒಂದು ದಿನ ಸೋಲೊಪ್ಪಿಕೊಳ್ಳಬೇಕು ಎಂಬುದನ್ನು ತೋರಿಸುತ್ತದೆ.
source and pic credit: https://ift.tt/2XHew6B
ಅಣುವಿನಿಂದ ಹಿಡಿದು ಬೃಹದಾಕಾರದ ವಸ್ತುಗಳೂ ಪ್ರಕೃತಿಯ ಮುಂದೆ ಏನೇನೂ ಅಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಮನುಷ್ಯ ದೌರ್ಜನ್ಯ ಮೆರೆಯುತ್ತಾ ಹೋದಂತೆಲ್ಲಾ ಪ್ರಕೃತಿ ಶಾಂತಚಿತ್ತವಾಗಿ ತನ್ನೆಲ್ಲಾ ವಸ್ತುಗಳನ್ನು ಮರಳಿ ಪಡೆಯುತ್ತದೆ. ಇವೆಲ್ಲವೂ ಯಾವತ್ತಿಗೂ ನನ್ನದೇ, ನೀವೇನಿದ್ದರೂ ಮೂರು ದಿನ ಬಂದು ಹೋಗಲು ಇದ್ದ ಅತಿಥಿಗಳು ಎಂಬ ಮೌನ ಸಂದೇಶ ಸಾರುತ್ತದೆ.
from ಸುದ್ದಿ - Planet Tv
May 11, 2021 at 09:46AM