ಬ್ರೂಸ್ಲಿ.. ಈ ಹೆಸರನ್ನ ಹೇಗೆ ಮರೆಯೋಕೆ ಸಾಧ್ಯ ಹೇಳಿ. ಇವನು ಸಮರ ಕಲೆಯ ಸರದಾರ. ಈ ಬ್ರೂಸ್ಲಿ ಬಗ್ಗೆ ಗೊತ್ತಿದ್ದವರಿಗೆ ಇವನ ಒನ್ ಇಂಚ್ ಪಂಚ್ ಬಗ್ಗೆ ಕೂಡ ತಿಳಿದಿರುತ್ತೆ. ಒನ್ ಇಂಚ್ ಪಂಚ್ ಅಂದ್ರೆ ಎದುರಾಳಿಗೆ ಕೇವಲ ಒಂದೇ ಇಂಚಿನ ಅಂತರದಿಂದ ಮುಷ್ಟಿ ಹೊಡೆತ ನೀಡೋದಾಗಿದೆ. ತುಂಬಾ ಡೇಂಜರಸ್ ಅಂಡ್ ಡೆಡ್ಲಿ ಪಂಚ್ ಅದು. ಆ ಹೊಡೆತ ತೀವ್ರತೆ ಎಷ್ಟಿರುತ್ತೆ ಅಂದರೆ, ಆ ಒಂದು ಹೊಡೆತ ಎದುರಾಳಿಯ ಪ್ರಾಣಕ್ಕೆ ಆಪತ್ತು ತರುತ್ತೆ. ಇಂತಹ ಒನ್ ಇಂಚ್ ಪಂಚ್ ರಹಸ್ಯವನ್ನ ಸಿದ್ಧಿಸಿಕೊಂಡಿರೋದೇ `ಶಿ ಎನ್ ಮಿಂಗ್'
ಶಿ ಎನ್ ಮಿಂಗ್, ಒನ್ ಇಂಚ್ ಪಂಚ್ ಸರದಾರ. ಇವನು ಚೀನಾ ದೇಶದವನು. ಮಾರ್ಷಲ್ ಆರ್ಟ್ಸ್ ನಲ್ಲಿ ತುಂಬಾನೇ ಫೇಮಸ್. ಈತ ಕೊಡೋ ಪಂಚ್ಗಳು ಮಾರಣಾಂತಿಕ. ಒಂದು ಸಲ ಮುಷ್ಟಿ ಬಿಗಿ ಹಿಡಿದು ಎದುರಾಳಿಗೆ ಪಂಚ್ ಹೊಡೆದ್ರೆ ಅವನ ಕತೆ ಫಿನಿಷ್. ಇವನ ಒನ್ ಇಂಚ್ ಪಂಚ್ ಸಂಶೋಧಕರಿಗೂ ಅಚ್ಚರಿ ಮೂಡಿಸಿತ್ತು. ಹಾಗಾಗಿ ಇವನ ಸ್ಟ್ರೆಂಥ್ ಎಷ್ಟಿದೆ ಅಂತಾನೂ ಪರೀಕ್ಷೆ ಮಾಡಲಾಯ್ತು. ಅಲ್ಲಿ ತನ್ನ ಬಾಡಿ ಸ್ಟ್ರೆಂಥ್ ಎಂಥದ್ದು ಅನ್ನೋದನ್ನ ಈತ ಸಾಬೀತುಪಡಿಸಿದ್ದ. ಗಟ್ಟಿಯಾದ ಮರದ ಪೀಸ್ನಿಂದ ಅವನ ಹೊಟ್ಟೆಗೆ ಹೊಡೆಯಲಾಯ್ತು, ಆದ್ರೆ ಆ ಮರದ ಕೋಲು ಪೀಸಾಗಿ ಬಿತ್ತು. ನಂತ್ರ ಅವನ ಬೆನ್ನಿಗೆ ಹೊಡೆಯಲಾಯ್ತು. ಹೀಗೆ ಅವನ ಸ್ಟ್ರೆಂಥ್ ಟೆಸ್ಟ್ ಮಾಡಿದಾಗಲೆಲ್ಲಾ ಕೋಲು ಮುರಿಯಿತೇ ಹೊರತು ಆತ ಅಲುಗಾಡಿರಲಿಲ್ಲ.
ಇದಾದ ನಂತರ ಆತನ ಪಂಚಿಂಗ್ ಸೀಕ್ರೆಟ್ ಪರೀಕ್ಷೆ ಮಾಡಲಾಯ್ತು. ಅದಕ್ಕಾಗಿ ಲೇಟೆಸ್ಟ್ ಟೆಕ್ನಾಲಜಿಯ ಎಕ್ಯುಪ್ಮೆಂಟ್ಗಳನ್ನ ಬಳಸಿದ್ರು. ಆ ಪರೀಕ್ಷೆಯಲ್ಲಿ ತಿಳಿದುಬಂದ ಸತ್ಯ ಅಂದ್ರೆ ಅವನ ಹೊಡೆತ ತಿಂದೋರು ಉಳಿಯೋದು ಕಷ್ಟ ಅಂತ.
ಕೊನೆಗೆ ಅವನ ಒನ್ ಇಂಚ್ ಪಂಚ್ನ ಪವರ್ ಟೆಸ್ಟ್ ಮಾಡಲಾಯ್ತು. ಈ ಟೆಸ್ಟ್ ಮುಗಿದ ಮೇಲೆ ಅವರಿಗೆ ಅಚ್ಚರಿ ಕಾದಿತ್ತು ಯಾಕೆಂದ್ರೆ, ಅವರು ಅಷ್ಟೊಂದು ಪವರ್ ಫುಲ್ ಪಂಚ್ ಈವರೆಗೂ ನೋಡಿರಲಿಲ್ಲ. ಅವನು ನೀಡೋ ಈ ಪಂಚ್ ಎದುರಾಳಿಯ ಎದೆಗೂಡಿಗೆ ತುಂಬಾನೇ ಡ್ಯಾಮೇಜ್ ಮಾಡುವಷ್ಟು ಪ್ರಬಲವಾಗಿತ್ತು. ಅವನ ಈ ಶಕ್ತಿಯೇ ಆತನನ್ನು ಸೂಪರ್ ಮ್ಯಾನ್ ಆಗಿಸಿಬಿಟ್ಟಿದೆ.
from ಸುದ್ದಿ - Planet Tv https://ift.tt/3eBOYP5
May 11, 2021 at 11:12PM