The Ghost Town ಧನುಷ್ಕೋಟಿ: ಇದು ದೆವ್ವಗಳ ನಗರ..!
source and pic credit: https://ift.tt/3hUr9nv
‘ದಿ ಗೋಸ್ಟ್ ಟೌನ್’ ಅಥವಾ ದೆವ್ವಗಳ ನಗರವೆಂದೇ ಕರೆಯಲ್ಪಡುವ ಈ ಪ್ರದೇಶ ಧನುಷ್ಕೋಟಿ. ಹೆಸರು ಕೇಳಿದರೇ ಬೆಚ್ಚಿಬೀಳುವಂತಾಗುತ್ತದೆ. ಹಾಗಂತ ಇಲ್ಲಿ ರಾತ್ರಿಯಾದರೆ ಸಾಕು ದೆವ್ವಗಳು ಓಡಾಡುತ್ತವೆ. ಜನರನ್ನು ಬೆದರಿಸುತ್ತವೆ, ಕಾಟ ಕೊಡುತ್ತವೆ ಎನ್ನುವಂತಿಲ್ಲ. ಯಾಕೆಂದರೆ ಈ ಗ್ರಾಮದಲ್ಲಿ ಇಂಥಹಾ ಘಟನೆಗಳಾಗಿವೆ ಅನ್ನೋದಕ್ಕೆ ಯಾವ ಪುರಾವೆಯೂ ಇಲ್ಲ. ಹೀಗಿದ್ದೂ ಈ ಊರಿಗೆ ದೆವ್ವಗಳ ನಗರ ಎನ್ನುತ್ತಾರೆ. ಇದಕ್ಕೆ ಕಾರಣ ಹಲವಾರು ವರ್ಷಗಳ ನಡೆದ ಇಲ್ಲಿ ನಡೆದ ಮಹಾದುರಂತ.
source and pic credit: google.com
ತಮಿಳುನಾಡಿನ ರಾಮೇಶ್ವರಂನಿಂದ 20 ಕಿ.ಮೀ ದೂರದಲ್ಲಿರುವ ಪಂಬನ್ ದ್ವೀಪದಲ್ಲಿನ ತುತ್ತತುದಿಯಲ್ಲಿ ಧನುಷ್ಕೋಟಿ ಇದೆ. ತಮಿಳುನಾಡಿನ ಈ ಸ್ಥಳ ಅರಬ್ಬೀ ಸಮುದ್ರ ಹಾಗೂ ಬಂಗಾಳಕೊಲ್ಲಿ ಎರಡರ ಗಡಿ. ಆ ಮಹಾದುರಂತ ನಡೆಯುವ ಮುನ್ನ ಅದು ಹಸಿರು ಪರಿಸರ ನಡುವೆಯಿದ್ದ, ಸಾವಿರಾರು ಜನರು ವಾಸಿಸುತ್ತಿದ್ದ ಸುಂದರವಾದ ಊರು. ಎಲ್ಲಾ ರೀತಿಯಲ್ಲೂ ಅಭಿವೃದ್ಧಿಯಾಗಿದ್ದ ನಗರವಾಗಿದ್ದ ಕಾರಣ ಪ್ರವಾಸಿಗರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ರೈಲು ನಿಲ್ದಾಣ, ಆಸ್ಪತ್ರೆ, ಶಾಲೆ ಹಾಗೂ ಅಂಚೆಕಚೇರಿಗಳು ಅಲ್ಲಿದ್ದವು. ಹೊಟೇಲ್ ಗಳು, ಅಂಗಡಿಗಳು, ರಾಮೇಶ್ವರಂಗೆ ಭೇಟಿ ನೀಡುತ್ತಿದ್ದ ಪ್ರವಾಸಿಗರಿಗಾಗಿ ವಿಶ್ರಾಂತಿ ಕೊಠಡಿಗಳೂ ಇದ್ದವು.
source and pic credit: google.com
ಒಂದು ಕಾಲದಲ್ಲಿ ಧನುಷ್ಕೋಟಿ ಭಾರತದ ಪ್ರಮುಖ ನಗರವಾಗಿತ್ತು. ಭಾರತಕ್ಕೆ ಪ್ರವೇಶಿಸುವ ಮಾರ್ಗವೂ ಆಗಿತ್ತು. ಈಗಿನ ಶ್ರೀಲಂಕಾ ಆಗ ಸಿಲೋನ್ ಆಗಿತ್ತು. ಅಲ್ಲಿನ ತಲೈಮನ್ನಾರ್ ಗೆ ಪ್ರವಾಸಿಗರು, ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಆದರೆ ಆ ಒಂದು ದುರಂತದ ನಂತರ ಆ ಊರಿನ ಚಿತ್ರಣವೇ ಬದಲಾಗಿ ಹೋಯಿತು. ಸಾವಿರಾರು ಜನರು ವಾಸವಿದ್ದ ಆ ನಗರದಲ್ಲೀಗ ಐದುನೂರಕ್ಕೂ ಹೆಚ್ಚು ಮೀನುಗಾರರು ಮಾತ್ರ ವಾಸ ಮಾಡುತ್ತಿದ್ದಾರೆ. ಉಳಿದಂತೆ ಅಲ್ಲಿ ಯಾವುದೇ ಜನವಸತಿಯಿಲ್ಲ.
ಧನುಷ್ಕೋಟಿ ಪುರಾಣದ ಹಿನ್ನಲೆ
source and pic credit: google.com
ಇಲ್ಲಿಗೆ ಧನುಷ್ಕೋಟಿ ಎಂಬ ಹೆಸರು ಬರಲು ಪೌರಾಣಿಕ ಹಿನ್ನಲೆಯೂ ಇದೆ. ಪುರಾಣಗ್ರಂಥಗಳ ಪ್ರಕಾರ ರಾಮ, ತನ್ನ ಬಿಲ್ಲಿನ ಒಂದು ತುದಿಯಿಂದ ಇಲ್ಲಿನ ಸೇತುವೆಯನ್ನು ಮುರಿದುದರಿಂದ ಈ ಸ್ಥಳಕ್ಕೆ ಧನುಷ್ಕೋಡಿ ಎಂಬ ಹೆಸರು ಬಂದಿದೆ. ಧನುಷ್ ಎಂದರೆ ಬಿಲ್ಲು, ಕೋಡಿ ಎಂದರೆ ತುದಿ. ರಾಮನು ಈ ಸ್ಥಳವನ್ನು ಸೇತುವೆಯ ನಿರ್ಮಾಣಕ್ಕೆ ಸೂಕ್ತವಾದ ಜಾಗವೆಂದು ತನ್ನ ಕೀರ್ತಿವೆತ್ತ ಬಿಲ್ಲಿನ ತುದಿಯಿಂದ ಗುರುತು ಹಾಕಿದನು ಎಂಬ ಮಂಡಣೆಯೂ ಇದೆ. ರಾಮೇಶ್ವರಕ್ಕೆ ಹೋಗುವ ಯಾತ್ರಿಗಳು ಎರಡು ಸಮುದ್ರಗಳು ಸೇರುವ ಈ ಸ್ಥಳದಲ್ಲಿ ಸ್ನಾನ ಮಾಡುವುದು ರೂಢಿಯಲ್ಲಿದೆ. ಒಂದೇ ಸರಳರೇಖೆಯಲ್ಲಿರುವ ಹಲವಾರು ಬಂಡೆಗಳು ಮತ್ತು ಪುಟ್ಟ ದ್ವೀಪಗಳ ಸಾಲನ್ನು ಹಳೆಯ ಸೇತುವೆಯ ಪಳಿಯುಳಿಕೆ ಎನ್ನುವರಲ್ಲದೆ ಇದನ್ನು ರಾಮಸೇತು ಎಂದೂ ಕರೆಯುತ್ತಾರೆ.
source and pic credit: https://ift.tt/34h7LZR
ಧನುಷ್ಕೋಟಿ ಅಥವಾ ಧನುಷ್ಕೋಡಿ
ಧನುಷ್ಕೋಟಿ ಅಥವಾ ತಮಿಳಿನಲ್ಲಿ ಧನುಷ್ಕೋಡಿ ಎಂದು ಕರೆಯಲ್ಪಡುವ ಈ ನಗರ ರಾಮೇಶ್ವರಂ ದ್ವೀಪದ ದಕ್ಷಿಣದ ತುತ್ತತುದಿಯಲ್ಲಿರುವ ಗ್ರಾಮವಾಗಿದ್ದು, ತಮಿಳುನಾಡು ರಾಜ್ಯದ ಪೂರ್ವ ತೀರದಲ್ಲಿದೆ. ಧನುಷ್ಕೋಡಿಯು ಪಾಂಬನ್ ನ ಆಗ್ನೇಯ ದಿಕ್ಕಿನಲ್ಲಿದೆ. ಧನುಷ್ಕೋಡಿಯು ಶ್ರೀಲಂಕಾದ ತಲೈಮನ್ನಾರ್ ನ ಪಶ್ಚಿಮದಿಂದ ಸುಮಾರು 18 ಮೈಲಿಗಳ ಅಂತರದಲ್ಲಿದೆ. 1964ರಲ್ಲಿ ಪಾಂಬನ್ ನಿಲ್ದಾಣದಿಂದ ಸಾಗಿಬರುವ ರೈಲು ಹಳಿಗಳು ಚಂಡಮಾರುತದ ದಾಳಿಯಿಂದ ನಾಶಹೊಂದಿ, 100 ಪ್ರಯಾಣಿಕರನ್ನು ಒಯ್ಯುತ್ತಿದ್ದ ರೈಲೊಂದು ಸಮುದ್ರದಲ್ಲಿ ಮುಳುಗಿಹೋಯಿತು.
ಸುಂದರ ನಗರ ಗೋಸ್ಟ್ ಟೌನ್ ಆಗಿದ್ಯಾಕೆ..?
source and pic credit: google.com
1964ರಲ್ಲಿ ದೊಡ್ಡ ಪ್ರವಾಹ ಧನುಷ್ಕೋಟಿಯ ಸ್ಥಿತಿಯನ್ನೇ ಬದಲಿಸಿಬಿಟ್ಟಿತು. ಇಡೀ ನಗರ ನಾಶವಾಯಿತು. ಪಂಬನ್-ಧನುಷ್ಕೋಟಿ ಪ್ಯಾಸೆಂಜರ್ ರೈಲಿನಲ್ಲಿದ್ದ 110 ಪ್ರಯಾಣಿಕರು ಪ್ರವಾಹದಲ್ಲಿ ಕೊಚ್ಚಿಹೋದರು. ಆ ದುರಂತದ ಭಾಗವಾಗಿದ್ದ ರೈಲಿನ ಕೊನೆಯ ಯಾತ್ರೆ ಯಾವ ಹಳಿಯ ಮೇಲೆ ಆಗಿತ್ತೋ ಅದು ಮಾತ್ರ ಪಳೆಯುಳಿಕೆಯಂತೆ ಅಲ್ಲೇ ಇದೆ. ಚಂಡಮಾರುತವು ಪಾಕ್ ಜಲಸಂಧಿಯನ್ನು ರಾತ್ರಿಯಲ್ಲಿ ಹೊಕ್ಕು, 1964ರ ಡಿಸೆಂಬರ್ 22-23ರ ರಾತ್ರಿ ರಾಮೇಶ್ವರ ದ್ವೀಪದ ಧನುಷ್ಕೋಡಿಯನ್ನು ಬಿರುಸಾಗಿ ಅಪ್ಪಳಿಸಿತು. ರಾಮೇಶ್ವರವನ್ನು ದಾಟುವಾಗ ಚಂಡಮಾರುತದಿಂದ ಉಂಟಾದ ಅಲೆಗಳು ಸುಮಾರು ಎಂಟು ಗಜದಷ್ಟು ಎತ್ತರ ಇದ್ದವೆಂದು ಅಂದಾಜಿಸಲಾಗಿದೆ.
1964ರ ಚಂಡಮಾರುತ
ಆ ಕರಾಳ ದಿನದಂದು 1964ರಲ್ಲಿ ಡಿಸೆಂಬರ್ 22, ರಾತ್ರಿ 11.55ರ ಸಮಯದಲ್ಲಿ ಆ ದುರಂತ ಸಂಭವಿಸಿತ್ತು, ಧನುಷ್ಕೋಡಿಯನ್ನು ಪ್ರವೇಶಿಸುತ್ತಿದ್ದ ರೈಲು ಸಂಖ್ಯೆ 653, ಪಾಂಬನ್-ಧನುಷ್ಕೋಡಿ ಪ್ಯಾಸೆಂಜರ್, ಎಂದಿನಂತೆಯೇ ಅಂದೂ ಸಹ 110 ಜನ ಪ್ರಯಾಣಿಕರು ಮತ್ತು 5 ರೈಲ್ವೇ ಸಿಬ್ಬಂದಿಗಳನ್ನು ಹೊತ್ತು ಸಾಗುತ್ತಿತ್ತು. ಧನುಷ್ಕೋಡಿಯ ರೈಲು ನಿಲ್ದಾಣದಿಂದ ಕೆಲವೇ ಗಜಗಳಷ್ಟು ದೂರವಿದ್ದಾಗ ಒಂದು ದೈತ್ಯ ಅಲೆ ರೈಲನ್ನು ಅಪ್ಪಳಿಸಿತು. ಏನಾಗುತ್ತಿದೆ ಎಂದು ರೈಲಿನಲ್ಲಿದ್ದ ಪ್ರಯಾಣಿಕರು ಊಹಿಸುವ ಮುನ್ನವೇ ಆ ಅನಾಹುತ ನಡೆದೇ ಹೋಯಿತು.
ಮಹಾಪ್ರವಾಹದಲ್ಲಿ 1800 ಮಂದಿ ಸಾವು
source and pic credit :https://www.irfca.org
ದೈತ್ಯ ಅಲೆಯ ಹೊಡೆತಕ್ಕೆ ರೈಲೇ ಕೊಚ್ಚಿಕೊಂಡು ಹೋಯಿತು. ರೈಲಿನಲ್ಲಿದ್ದ ಎಲ್ಲಾ 115 ಪ್ರಯಾಣಿಕರೂ ಸ್ಥಳದಲ್ಲೇ ಮೃತರಾದರು. ಆ ಚಂಡಮಾರುತದಲ್ಲಿ ಒಟ್ಟಾರೆ 1800 ಜನರು ಮೃತರಾದರು. ಧನುಷ್ಕೋಡಿಯ ಎಲ್ಲಾ ಮನೆಗಳು, ವಸತಿ ಗೃಹಗಳು ಮತ್ತು ಇತರ ಕಟ್ಟಡಗಳು ಚಂಡಮಾರುತದಲ್ಲಿ ಎದ್ದ ಅಲೆಗಳಲ್ಲಿ ಮುಳುಗಿಹೋದವು. ಆಗ ಎದ್ದ ದೈತ್ಯ ಅಲೆಗಳು ದ್ವೀಪದಲ್ಲಿ ಸುಮಾರು 10 ಕಿಲೋಮೀಟರ್ ಗಳವರೆಗೆ ನುಗ್ಗಿ ಪಟ್ಟಣವನ್ನು ಸಂಪೂರ್ಣವಾಗಿ ಹಾಳು ಮಾಡಿತು. ಈ ದೈತ್ಯ ಅಲೆಗಳ ರಭಸಕ್ಕೆ ಪಾಂಬನ್ ಸೇತುವೆ ಸಹ ಕೊಚ್ಚಿಕೊಂಡು ಹೋಯಿತು.
source and pic credit : https://ift.tt/3uI3hr7
ದ್ವೀಪ ಹಾಗೂ ಮುಖ್ಯಭೂಮಿಯನ್ನು ಸಂಪರ್ಕಿಸಿದ್ದ ಪಾಂಬನ್ ಸೇತುವೆ ಕೂಡಾ ಪ್ರವಾಹದಲ್ಲಿ ನಾಶವಾಯಿತು. 3000 ಮಂದಿ ಆಗ ಸಂಪರ್ಕವಿಲ್ಲದೆ ಪರದಾಡಿದ್ದರು. ನಾಲ್ಕು ರೇಡಿಯೋ ಪ್ರಸಾರಕೇಂದ್ರಗಳು ಮಾತ್ರ ಧನುಷ್ಕೋಟಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಧನುಷ್ಕೋಟಿ ಸುದ್ದಿಯನ್ನು ಬಿತ್ತರಿಸುವುದನ್ನು ಮುಂದುವರಿಸಿದ್ದವು. ನಾಶವಾದ ಸೇತುವೆ ಬಳಿ ಸತತ ಹನ್ನೆರಡು ತಾಸು ನೆಲೆನಿಂತು ರೇಡಿಯೋ ಬಾತ್ಮಿದಾರರು ಅಲ್ಲಿನ ದುರಂತದ ಬಗ್ಗೆ ವರದಿಯನ್ನು ಬಿತ್ತರಿಸಿದರು. ಈ ವಿನಾಶದ ನಂತರ, ಮದ್ರಾಸ್ ಸರ್ಕಾರವು ಈ ಪಟ್ಟಣವನ್ನು ದೆವ್ವಗಳ ನಗರ ಎಂದು ಘೋಷಿಸಿತು. ಚಂಡಮಾರುತದ ನಂತರ ಈ ಪ್ರದೇಶವು ವಾಸಿಸಲು ಯೋಗ್ಯವಾದುದಲ್ಲವೆಂದು ನಿರ್ಣಯ ನೀಡಿತು.
ಧನುಷ್ಕೋಡಿ ಬಸ್ ನಿಲ್ದಾಣದ ಬಳಿ ಚಂಡಮಾರುತದಲ್ಲಿ ಮೃತಪಟ್ಟಿರುವವರಿಗಾಗಿ ಸ್ಮಾರಕ ಕಟ್ಟಲಾಗಿದೆ. ಚಂಡಮಾರುತವು 22ನೆಯ ಡಿಸೆಂಬರ್ 1964ರ ಮಧ್ಯರಾತ್ರಿಯಿಂದ 1964ರ ಡಿಸೆಂಬರ್ 25ರ ಸಾಯಂಕಾಲದವರೆಗೂ ಧನುಷ್ಕೋಡಿ ಪಟ್ಟಣವನ್ನು ಅಪ್ಪಳಿಸಿ, ತೀವ್ರವಾದ ಹಾನಿಯನ್ನು ಉಂಟುಮಾಡಿದುದಲ್ಲದೆ ಇಡೀ ಧನುಷ್ಕೋಡಿ ಪಟ್ಟಣವನ್ನೇ ನಾಶಗೊಳಿಸಿತು ಎಂದು ಈ ಸ್ಮಾರಕದಲ್ಲಿ ಬರೆಯಲಾಗಿದೆ.
source and pic credit: https://ift.tt/1R8M1ns
1964ರ ಚಂಡಮಾರುತಕ್ಕೆ ಮುನ್ನ ಧನುಷ್ಕೋಟಿಯು ಒಂದು ಉತ್ತಮ ಪ್ರವಾಸಿ ಹಾಗೂ ತೀರ್ಥಯಾತ್ರಾ ಸ್ಥಳವಾಗಿತ್ತು. ಭಾರತ ಹಾಗೂ ಶ್ರೀಲಂಕಾದ ಏಕೈಕ ಅತಿ ಸಣ್ಣಗಡಿಪ್ರದೇಶವಿದು. 15 ಕಿ.ಮೀ ಉದ್ದ ಕಡಲತಟವೂ ಇದೆ. ಸಿಲೋನ್ (ಈಗ ಶ್ರೀಲಂಕಾ) ಕೇವಲ 18 ಮೈಲಿಗಳ ಅಂತರದಲ್ಲಿದ್ದುದರಿಂದ. ಧನುಷ್ಕೋಡಿ ಮತ್ತು ತಲೈಮನ್ನಾರ್ ಗಳ ನಡುವೆ ಪ್ರತಿ ವಾರವೂ ದೋಣಿಗಳ ಮೂಲಕ ಪ್ರವಾಸಿಗರನ್ನು ಮತ್ತು ಸಾಮಾನು ಸರಂಜಾಮುಗಳನ್ನು ಸಾಗಿಸುವ ಸೇವೆಯ ಸೌಲಭ್ಯವಿರುತ್ತಿತ್ತು. ನಗರದ ಬಗ್ಗೆ ಕುತೂಹಲವಿರುವ ಪ್ರವಾಸಿಗರು ಇವತ್ತಿಗೂ ಲಾರಿ, ಜೀಪುಗಳಲ್ಲಿ ಸಾಗಿ ಇಲ್ಲಿಗೆ ತಲುಪುತ್ತಾರೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
► Subscribe to Planet Tv Kannada
https://www.youtube.com/Planet Tv Kannada
► Follow us on Facebook
https://www.facebook.com/Planettvkannada
► Follow us on Twitter
https://twitter.com/Planettvkannada
► Follow us on Instagram
https://www.instagram.com/planettvkannada
► Follow us on Pinterest
https://www.pinterest.com/Planettvkannada
► Follow us on Koo app
https://www.kooapp.com/planettvkannada
► Follow us on share chat
https://sharechat.com/planettvkannada
► Join us on Telegram
https://t.me/planettvkannada
► Follow us on Tumblr
https://www.tumblr.com/planet-tv-kannada
from ಸುದ್ದಿ - Planet Tv https://ift.tt/3us9oOZ
May 26, 2021 at 04:57PM