ದೇಹದಲ್ಲಿ ಆಮ್ಲಜನಕದ ಮಟ್ಟ ಹೆಚ್ಚಾಗಲು ಏನೆಲ್ಲಾ ಆಹಾರ ಸೇವಿಸಬೇಕು..?
source and pic credit: https://ift.tt/2nJ6VQs
ದೇಶದಲ್ಲಿ ಕೊರೋನಾ ಸೋಂಕಿನ ಪ್ರಮಾಣ ತೀವ್ರಗತಿಯಲ್ಲಿ ಹೆಚ್ಚಾಗುತ್ತಿದೆ. ಇದರಲ್ಲಿ ಹೆಚ್ಚಾಗಿ ಹಲವಾರು ಮಂದಿ ಆಕ್ಸಿಜನ್ ಸಿಗದೆ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ದೇಹದಲ್ಲಿ ಆಕ್ಸಿಜನ್ ಲೆವೆಲ್ ಹೆಚ್ಚು ಮಾಡುವಂತಹಾ ಆಹಾರಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು. ನಾವು ಸೇವಿಸುವ ಆಹಾರಗಳು ನಮ್ಮ ದೇಹದಲ್ಲಿನ ಆಕ್ಸಿಜನ್ ಲೆವೆಲ್ ನ್ನು ನಿರ್ಣಯಿಸುತ್ತವೆ. ಆಮ್ಲಜನಕ ಹೆಚ್ಚಿಸುವ ಆಹಾರಗಳನ್ನು ಸೇವಿಸಿದರೆ, ನಿಮ್ಮ ದೇಹದ ಆಮ್ಲಜನಕ ಮಟ್ಟ ಹೆಚ್ಚುತ್ತದೆ. ಇದಲ್ಲದೇ ಆಮ್ಲಜನಕ ಸಮೃದ್ಧ ಆಹಾರದಿಂದ ದೇಹದ ಕೊಬ್ಬು ಹೆಚ್ಚಾಗುವುದಿಲ್ಲ. ಆಮ್ಲಜನಕಯುಕ್ತ ಆಹಾರ ದೇಹವನ್ನು ರಕ್ಷಿಸುತ್ತದೆ.
source and pic credit: https://ift.tt/2ypn01c
ಕಾಲ ಬದಲಾದಂತೆ ಮನುಷ್ಯನ ಆಹಾರ ಪದ್ಧತಿಯೂ ಬದಲಾಗಿದೆ. ಮನೆಯಲ್ಲೇ ಬೆಳೆದ ಸೊಪ್ಪು-ತರಕಾರಿ, ಹಣ್ಣುಗಳನ್ನು ತಿನ್ನುತ್ತಿದ್ದ ಮನುಷ್ಯ ಜಂಕ್ ಫುಡ್ ಗಳಿಗೆ ಹೆಚ್ಚು ಅಡಿಕ್ಟ್ ಆಗಿದ್ದಾನೆ. ಹಾಗಾಗಿಯೇ ಹೊಸ ಹೊಸ ಕಾಯಲೆಗಳು, ಆರೋಗ್ಯ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಾಗಿ ಆಮ್ಲಜನಕ ಭರಿತ ಆಹಾರ ಸೇವಿಸುವ ಮೂಲಕ ದೇಹದಲ್ಲಿನ ಶಕ್ತಿಯನ್ನು ಕಾಪಾಡಿಕೊಳ್ಳಬಹುದು. ಯಾವುದೇ ಆಯಾಸ ನಿಮ್ಮನ್ನು ಕಾಡುವುದಿಲ್ಲ. ಸ್ನಾಯುಗಳಲ್ಲಿ ನೋವು ಕಡಿಮೆಯಾಗುತ್ತದೆ.
ಆಹಾರ ಪದ್ಧತಿ ಸರಿ ಮಾಡುವುದರಿಂದ ಬಹುತೇಕ ಹಲವು ರೋಗಗಳನ್ನು ದೂರವಿಡಬಹುದು ಎಂದು ಹೇಳಲಾಗುತ್ತದೆ.ಹೀಗಾಗಿಯೇದೇಹದಲ್ಲಿ ಆಕ್ಸಿಜನ್ ಲೆವೆಲ್ ಕಾಪಾಡಿಕೊಳ್ಳುವ ಆಹಾರ ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ. ಹಾಗಾದರೆ ದೇಹದಲ್ಲಿ ಆಕ್ಸಿಜನ್ ಲೆವೆಲ್ ಹೆಚ್ಚಾಗಲು ಯಾವ ಆಹಾರ ಸೇವಿಸಬೇಕು ಅನ್ನೋ ಪ್ರಶ್ನೆ ಹಲವರಲ್ಲಿ ಮೂಡುವುದು ಸಹಜ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಯಾವೆಲ್ಲಾ ಆಹಾರ ಸೇವಿಸಬೇಕು..?
https://www.webmd.com
ಆಂಟಿಆಕ್ಸಿಡೆಂಟ್ ಜೀರ್ಣಕ್ರಿಯೆ ವೇಳೆ ಆಕ್ಸಿಜನ್ ಮಟ್ಟವನ್ನು ಹೆಚ್ಚು ಮಾಡುತ್ತದೆ.ಹೀಗಾಗಿ ಆಂಟಿಆಕ್ಸಿಡೆಂಟ್ ಅಧಿಕವಾಗಿ ಇರುವ ಆಹಾರ ಸೇವನೆ ಮಾಡಬೇಕು.ಇವುಗಳಲ್ಲಿ ಮುಖ್ಯವಾಗಿ ಬ್ಲೂಬೆರ್ರಿಗಳು, ಕ್ರಾನ್ಬೇರಿ, ಕಿಡ್ನಿ ಬೀನ್ಸ್, ಸ್ಟ್ರಾಬೇರಿ, ಪ್ಲಮ್ಸ್ ಮತ್ತು ಬ್ಲ್ಯಾಕ್ ಬೆರ್ರಿಯು ಪ್ರಮುಖವಾಗಿದೆ. ದೇಹಕ್ಕೆ ಬೇಕಾಗುವ ಪ್ರಮುಖ ಕೊಬ್ಬಿನಾಮ್ಲವೆಂದರೆ ಅದು ವಿಟಮಿನ್ ಎಫ್, ಇದು ರಕ್ತನಾಳಗಳಲ್ಲಿ ಹಿಮೋಗ್ಲೋಬಿನ್ ಕೊಂಡೊಯ್ಯುವಂತಹ ಆಮ್ಲಜನಕ ಮಟ್ಟವನ್ನು ಹೆಚ್ಚಿಸುವುದು. ಇದು ಸೋಯಾಬೀನ್, ಅಕ್ರೋಟ ಮತ್ತು ಅಗಸೆ ಬೀಜಗಳಲ್ಲಿ ಲಭ್ಯವಿದೆ.
https://www.webmd.com
ಆಹಾರದಲ್ಲಿ ಆಮ್ಲಜನಕ ಹೆಚ್ಚಿಸಲು ಹೆಚ್ಚು ಹಣ್ಣುಗಳನ್ನು ಹಾಗೂ ತರಕಾರಿಗಳನ್ನು ಸೇವಿಸಬಹುದಾಗಿದೆ. ಸಲಾಡ್, ಪಲ್ಯ ರೂಪದಲ್ಲಿ ತರಕಾರಿಗಳನ್ನು ಸೇವಿಸಬಹುದು. ಜಂಕ್ ಫುಡ್ಸ್ ತಿನ್ನುವುದಕ್ಕಿಂತಲೂ, ಆರೋಗ್ಯ ಹೆಚ್ಚಿಸುವ ಹಣ್ಣು ಹಾಗೂ ತರಕಾರಿಗಳನ್ನು ಸೇವಿಸುವುದು ಉತ್ತಮ ಎಂದು ಹೇಳಲಾಗುತ್ತದೆ. ಹಣ್ಣುಗಳಲ್ಲಿ ಸಮೃದ್ಧವಾದ ಜೀವಸತ್ವಗಳು ಹಾಗೂ ಖನಿಜಗಳ ಜತೆಗೆ ಅವು ಕ್ಷಾರೀಯಾ ಪದಾರ್ಥಗಳನ್ನು ಹೊಂದಿರುತ್ತದೆ. ಇದರಿಂದಾಗಿ ಕೆಲವು ಹಣ್ಣುಗಳ ಸೇವನೆ ದೇಹದಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚು ಮಾಡುತ್ತದೆ.
ದ್ರಾಕ್ಷಿ, ಪಪ್ಪಾಯಿ, ಕಲ್ಲಂಗಡಿ ಕಿವಿ ಫ್ರುಟ್ ಹೆಚ್ಚು ಸೇವಿಸಿ
source and pic credit: https://ift.tt/3v1Vxju
ಕಚ್ಚಾ ಬಾಳೆಹಣ್ಣುಗಳಲ್ಲಿ ಕ್ಷಾರವು ಉತ್ತಮ ಪ್ರಮಾಣದಲ್ಲಿ ಕಂಡು ಬರುತ್ತದೆ. ಈ ಹಣ್ಣು ಆಮ್ಲಜನಕ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇನ್ನು ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚಾಗಿರುವುದರಿಂದಇದರ ಸೇವನೆ ರಕ್ತ ಕಣಗಳಿಗೆ ಆಮ್ಲಜನಕ ಪೂರೈಕೆಯನ್ನು ಹೆಚ್ಚಿಸುತ್ತದೆ.ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆಮ್ಲ ಹೆಚ್ಚಾಗಿದ್ದು, ಇದು ದೇಹಕ್ಕೆ ಶಕ್ತಿ ನೀಡುವುದಲ್ಲದೇ ಮತ್ತು ರೋಗಗಳಿಂದ ರಕ್ಷಣೆ ಒದಗಿಸುತ್ತದೆ. ದ್ರಾಕ್ಷಿ ಹಣ್ಣಿನಲ್ಲಿ ಉತ್ತಮವಾದ ಉತ್ಕರ್ಷಣಾ ನಿರೋಧಕಗಳು ಇದ್ದು, ಇದು ದೇಹದ ಆಮ್ಲಜನಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
source and pic credit: https://www.eatthis.com
ಪಪ್ಪಾಯಿ ಹಣ್ಣಿನಲ್ಲಿ ಪಿಹೆಚ್ ಮೌಲ್ಯವು 8.5ಕ್ಕಿಂತ ಹೆಚ್ಚಿರುವ ಕಾರಣ ಬಹುತೇಕ ಎಲ್ಲಾ ರೋಗಿಗಳಿಗೆ ಪಪ್ಪಾಯಿ ಹಣ್ಣು ತಿನ್ನುವಂತೆ ಸೂಚಿಸಲಾಗುತ್ತದೆ. ಇದು ರಕ್ತ ಕಣಗಳಲ್ಲಿನ ಆಮ್ಲಜನಕವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಕಲ್ಲಂಗಡಿ ಹಣ್ಣು ಸಹ ಉತ್ತಮ ಪ್ರಮಾಣದ ಕ್ಷಾರವನ್ನು ಹೊಂದಿರುತ್ತದೆ. ಇದರಲ್ಲಿ ದೇಹಕ್ಕೆ ಬೇಕಾಗುವ ಪಿಹೆಚ್ ಮಟ್ಟವು 8ಕ್ಕಿಂತ ಹೆಚ್ಚಿರುತ್ತದೆ.ಫೈನಾಪಲ್, ಒಣದ್ರಾಕ್ಷಿ, ಫ್ಯಾಷನ್ ಫ್ರುಟ್ ಅನ್ನು ಹೆಚ್ಚು ಸೇವಿಸಬೇಕು. ಯಾಕೆಂದರೆ ಇದರಲ್ಲಿ ಪಿಹೆಚ್ ಮಟ್ಟ 8.5ಕ್ಕಿಂತ ಹೆಚ್ಚಾಗಿರುತ್ತದೆ. ತರಕಾರಿಗಳನ್ನು ಜ್ಯೂಸ್ ಮಾಡಿ ಕುಡಿಯುವುದು ಸಹ ಉತ್ತಮ.
ಆಮ್ಲಜನಕ ಹೆಚ್ಚಿಸುವ ತರಕಾರಿಗಳು
source and pic credit: https://ift.tt/2wgnZVc
ಕ್ಷಾರವು ಹಣ್ಣುಗಳಲ್ಲಿ ಮಾತ್ರವಲ್ಲ , ತಾಜಾ ತರಕಾರಿಗಳಲ್ಲಿಯೂ ಇದೆ. ಈ ತರಕಾರಿಗಳನ್ನು ಪ್ರತಿ ದಿನ ನಿಮ್ಮ ಆಹಾರದಲ್ಲಿ ಸೇವಿಸುವುದರಿಂದ ನಿಮ್ಮ ದೇಹಕ್ಕೆ ಆಮ್ಲಜನಕದ ಕೊರತೆ ಉಂಟಾಗುವುದಿಲ್ಲ. ಸೌತೆಕಾಯಿಯಲ್ಲಿ ಉತ್ತಮ ಪ್ರಮಾಣದ ನೀರಿನ ಅಂಶವಿದೆ. ಈ ಕಾರಣದಿಂದಾಗಿ ಇದು ದೇಹದಲ್ಲಿ ಉತ್ತಮ ಪ್ರಮಾಣದ ಆಮ್ಲಜನಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಎಲೆಕೋಸಿನಲ್ಲಿ ಅನೇಕ ಜೀವಸತ್ವ ಹಾಗೂ ಉತ್ಕರ್ಷಣಾ ನಿರೋಧಕಗುಣಗಳಿರುವ ಕಾರಣ, ಇದು ದೇಹಕ್ಕೆ ಆಮ್ಲಜನಕ ಅಂಶವನ್ನು ಒದಗಿಸುತ್ತದೆ.
source and pic credit: https://ift.tt/3fnAVvw
ಆಲೂಗಡ್ಡೆಯಲ್ಲಿಯೂ ಖನಿಜಗಳ ಜತೆಗೆ ಪೊಟ್ಯಾಶಿಯಂ ಮತ್ತು ಮೆಗ್ನೇಶಿಯಂ ಪ್ರಮಾಣಇರುತ್ತದೆ. ಇದನ್ನು ಸೇವಿಸುವುದರಿಂದ ದೇಹದಲ್ಲಿನ ಆಮ್ಲಜನಕ ಮಟ್ಟವು ಹೆಚ್ಚಾಗುತ್ತದೆ. ಕ್ಯಾರೆಟ್ ತರಕಾರಿಯೂ ಸಹ ದೇಹಕ್ಕೆ ಆಮ್ಲಜನಕ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.ಪಾಲಕ್ ಸೊಪ್ಪು5.1 ಮತ್ತು 5.7 ರ ನಡುವೆ ಪಿಹೆಚ್ ಮಟ್ಟವನ್ನು ಹೊಂದಿದ್ದು, ಇದು ಸಹ ದೇಹದಲ್ಲಿ ಆಕ್ಸಿಜನ್ ಲೆವೆಲ್ ಹೆಚ್ಚಿಸಲು ಅತ್ಯುತ್ತಮ.ಕ್ಯಾಪಿಕ್ಸಂನಲ್ಲಿ ಪಿಹೆಚ್ ವ್ಯಾಲ್ಯೂ 8.5ರಷ್ಟು ಇರುತ್ತದೆ. ಅಲ್ಲದೆ ವಿಟಮಿನ್ ಎ ಕ್ಯಾಪ್ಸಿಕಂನಲ್ಲಿ ಹೆಚ್ಚಾಗಿದ್ದು, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ.
source and pic credit: https://ift.tt/2gkx8oB
ಹಣ್ಣುಗಳು ಹಾಗೂ ತರಕಾರಿಗಳನ್ನು ಹೊರತುಪಡಿಸಿ ಇತರ ಅನೇಕ ಆಹಾರಗಳಿಂದಸಹ ಆಮ್ಲಜನಕವನ್ನು ಪಡೆಯಬಹುದು. ಆದ್ದರಿಂದ ನಿಯಮಿತವಾಗಿ ಇವುಗಳನ್ನು ಸಹ ಸೇವಿಸುವುದು ಉತ್ತಮ.ಬೆಳ್ಳುಳ್ಳಿ ಸೇವನೆಯೂ ಉತ್ತಮ. ಗ್ರೀನ್ ಟೀ, ಮೊಳಕೆಯೊಡೆದ ಬೀಜಗಳು, ಅಗಸೆ ಬೀಜಗಳು ದೇಹದಲ್ಲಿ ಆಕ್ಸಿಜನ್ ಲೆವೆಲ್ ಹೆಚ್ಚಿಸಲು ಸಹಕಾರಿ.
ಕಾಫಿ, ಟೀ ಬಿಡಿ ಗ್ರೀನ್ ಟೀ ಕುಡಿಯಿರಿ
source and pic credit: https://www.nfcr.org
ಕಾಫಿಯಲ್ಲಿ ಪಿಹೆಚ್ ಮಟ್ಟ 5ರಷ್ಟಿದ್ದರೆ, ಗ್ರೀನ್ ಟೀ ಯಲ್ಲಿ ಪಿಹೆಚ್ ಮಟ್ಟ 7ಕ್ಕಿಂತ ಹೆಚ್ಚಿದೆ. ಆದ್ದರಿಂದ ಇದು ಉತ್ತಮ ಪ್ರಮಾಣದ ಕ್ಷಾರವನ್ನು ಹೊಂದಿರುತ್ತದೆ.ಹೀಗಾಗಿ ಕಾಫಿ, ಟೀ ಸೇವನೆ ಕಡಿಮೆ ಮಾಡಿ ಗ್ರೀನ್ ಟೀ ಹೆಚ್ಚು ಕುಡಿಯಬೇಕು. ಮೊಳಕೆಯೊಡದ ಬೀಜಗಳನ್ನು ದಿನ ನಿತ್ಯ ಸೇವಿಸುವುದು ಒಳ್ಳೆಯದು. ಏಕೆಂದರೆ ಮೊಳಕೆ ಕಾಳುಗಳಲ್ಲಿ ಉತ್ತಮ ಪ್ರಮಾಣದ ಕ್ಲೋರೋಫಿಲ್ ಹೊಂದಿರುತ್ತದೆ. ಇದು ದೇಹದಲ್ಲಿ ಆಮ್ಲಜನಕವನ್ನು ಹೆಚ್ಚಿಸಲು ಉತ್ತಮ ಮೂಲವಾಗಿದೆ.ಅಗಸೆ ಬೀಜಗಳಲ್ಲಿ ಉತ್ತಮ ಪ್ರಮಾಣದ ಒಮೆಗಾ 3 ಮತ್ತು ಕೊಬ್ಬಿನಾಮ್ಲಗಳಿವೆ. ಇದರ ಜೊತೆಗೆ ಸಾಕಷ್ಟು ಫೈಬರ್ ಕೂಡಾ ಇದ್ದು, ಇದು ದೇಹದಲ್ಲಿನ ಆಮ್ಲಜನಕದ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
source and pic credit: The Economic times
ಮನುಷ್ಯನ ದೇಹದಲ್ಲಿ ಶೇ. 60ರಷ್ಟು ನೀರಿನಾಂಶವಿದೆ. ಹೀಗಾಗಿ ದೇಹಕ್ಕೆ ನೀರು ಅತೀ ಅಗತ್ಯ ಎನ್ನುವುದನ್ನು ನಾವು ತಿಳಿಯಬೇಕು.ಹೆಚ್ಚೆಚ್ಚು ನೀರು ಕುಡಿದಷ್ಟೂ ದೇಹದ ಆರೋಗ್ಯದ ಸಮತೋಲನ ಕಾಪಾಡಬಹುದು.ದೇಹದ ಅಂಗಾಂಶಗಳು ಬೆಳೆಯಲು, ಗಂಟುಗಳು ಲ್ಯೂಬ್ರಿಕೆಂಟ್ ಆಗಿರಲು ಮತ್ತು ದೇಹದ ತಾಪಮಾನ ಕಾಪಾಡಲು ನೀರು ಅತೀ ಅಗತ್ಯ. ಈ ಆಹಾರಗಳನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿ ಆಕ್ಸಿಜನ್ ಮಟ್ಟ ಕಡಿಮೆಯಾಗುವುದನ್ನು ತಡೆಯಬಹುದು. ಮಾತ್ರವಲ್ಲ ಕಾಯಿಲೆಗಳಿಂದ ದೂರವಿಬಹುದು. ಮೇಲೆ ಹೇಳಿರುವ ಹಣ್ಣು, ತರಕಾರಿ ಮಾತ್ರವಲ್ಲದೆ ಹೆಚ್ಚು ನೀರು ಕುಡಿಯುವುದಿರಂ ಸಹ ಹೆಲ್ತೀ ಆಗಿರಬಹುದು.
from ಸುದ್ದಿ - Planet Tv https://ift.tt/3ht8pv6
May 15, 2021 at 10:00AM