ಶತ್ರುಗಳಿಂದ ಮುಕ್ತಿ ಕೊಡುವ ಮದ್ಯಪಾನಪ್ರಿಯ ಕಾಲಭೈರವ
ಭಾರತದಲ್ಲಿ ಆಯಾ ಪ್ರದೇಶಕ್ಕೆ ತಕ್ಕಂತೆ ಜನರ ಭಕ್ತಿ, ನಂಬಿಕೆ, ಆಚರಣೆಯನ್ನು ಅವಲಂಬಿಸಿಕೊಂಡು ವಿವಿಧ ರೀತಿಯ ದೇವಸ್ಥಾನಗಳಿವೆ. ಒಂದೊಂದು ದೇವಸ್ಥಾನದಲ್ಲೂ ಒಂದೊಂದು ರೀತಿಯ ಪದ್ಧತಿಯಿರುತ್ತದೆ. ಕೆಲವೊಂದು ದೇವಾಲಯಗಳಿಗೆ ತೆರಳಿದರೆ ಸರಸ್ವತಿ ಅನುಗ್ರಹ ಸಿಗುತ್ತದೆಯೆಂದು, ಇನ್ನು ಕೆಲವು ದೇವರುನ್ನು ಪೂಜಿಸಿದರೆ ಸಂತಾನ ಭಾಗ್ಯ ಲಭಿಸುತ್ತದೆಯೆಂದೂ, ಮತ್ತೆ ಕೆಲವು ವಿವಾಹ ಭಾಗ್ಯ ಒದಗಿಸುತ್ತದೆಯೆಂದೂ ನಂಬಲಾಗುತ್ತದೆ. ಆಯಾ ದೇವರು, ದೇವಸ್ಥಾನಗಳ ಬಗ್ಗೆ ಜನರು ಈ ರೀತಿಯ ವಿಶಿಷ್ಠ ನಂಬಿಕೆಯನ್ನು ಇಟ್ಟುಕೊಂಡಿರುತ್ತಾರೆ.
source and pic credit: Times now
ಇದು ಅಂಥಹದ್ದೇ ಒಂದು ದೇವಸ್ಥಾನ. ಹಿತಶತ್ರುಗಳ ಕಾಟದಿಂದ ಮುಕ್ತಿ ಕೊಡುವ ದೇವಸ್ಥಾನ. ಶತ್ರುಗಳಿಂದ ನಿಮ್ಮ ಕೆಲಸಕ್ಕೆ ವಿಘ್ನವಾಗಿದ್ರೆ ಶತ್ರುಗಳಿಂದ ಮುಕ್ತಿ ಪಡೆಯಲು ನಿಮ್ಮ ಪಾಲಿಗೆ ಅವನೊಬ್ಬನಿದ್ದಾನೆ. ನಿಮ್ಮ ಎಲ್ಲಾ ಸಮಸ್ಯೆಗಳಿಗೆಕ್ಷಣ ಮಾತ್ರದಲ್ಲಿ ಪರಿಹಾರ ನೀಡುತ್ತಾನೆ.ಅದಕ್ಕಾಗಿ ನೀವು ಅವನಿಗೆ ಲಕ್ಷ ಲಕ್ಷ ಸುರಿಯಬೇಕಾಗಿಲ್ಲ. ಭಕ್ತಿಯಿಂದಅವನ ಕಾಲಬುಡಕ್ಕೆ ತೆರಳಿ ಮದ್ಯವನ್ನು ಅರ್ಪಿಸಿದರೆ ಸಾಕು ಆತ ಪ್ರಸನ್ನನಾಗುತ್ತಾನೆ. ಅವನೇ ಕಾಲಭೈರವ.
ಮದ್ಯಪಾನಪ್ರಿಯ ಭೈರವsource and pic credit: https://www.india.com
ವ್ಯವಹಾರದಲ್ಲಿ ಪಾಲುದಾರರಿಂದ ನಿಮಗೆ ಅನ್ಯಾಯವಾಗಿದ್ದರೆ, ಇನ್ನೊಬ್ಬ ಶತ್ರು ನಿಮ್ಮ ವ್ಯವಹಾರಕ್ಕೆ ತೊಂದರೆ ಕೊಡುತ್ತಿದ್ದರೆ ಈತನ ಮೊರೆ ಹೋದರೆ ಸಾಕು. ಆತ ನಿಮ್ಮೆಲ್ಲಾ ಸಮಸ್ಯೆಗಳನ್ನು ಥಟ್ಟಂತ ಪರಿಹರಿಸುತ್ತಾನೆ. ಜೀವನದಲ್ಲಿ ಶಾಂತಿ, ನೆಮ್ಮದಿ ನೆಲೆಸುವಂತೆ ಮಾಡುತ್ತಾನೆ. ಆತನಿಗೆ ನೀವು ಭಕ್ತಿಯಿಂದ ಮದ್ಯವನ್ನು ಸಮರ್ಪಿಸಿದರೆ ಸಾಕು, ನಿಮ್ಮ ಶತ್ರು ಯಾರೇ ಆಗಿರಲಿ ಅವನಿಂದ ನಿಮಗೆ ಮುಕ್ತಿ ಕೊಡಿಸುತ್ತಾನೆ. ಆ ವ್ಯಕ್ತಿ ಅದೆಷ್ಟೇ ಬಲಿಷ್ಠನಾಗಿದ್ದರೂ ಮತ್ತೆ ಅವನಿಂದ ನಿಮಗೆ ತೊಂದರೆಯಾಗುವುದಿಲ್ಲ. ಎಲ್ಲಾ ಶತ್ರುಗಳಿಂದ ನಿಮ್ಮನ್ನು ಕಾಪಾಡುತ್ತಾನೆ ಆ ಕಾಲಭೈರವ.
source and pic credit: https://www.aajtak.in
ಮಾಘ ಮಾಸದ ಅಮಾವಾಸ್ಯೆಯೆಂದ್ರೆ ಕಾಲಭೈರವನಿಗೆ ಅಚ್ಚುಮೆಚ್ಚು. ಅಮಾವಾಸ್ಯೆಯಂದು ಸಂತುಷ್ಟನಾಗಿ ಎಲ್ಲವನ್ನೂ ದಯಪಾಲಿಸುತ್ತಾನೆ. ಅಮಾವಾಸ್ಯೆಯ ನಡುರಾತ್ರಿಯಲ್ಲಿ ಮಧ್ಯಪಾನ, ಕುಣಿತ, ಶಂಖನಾದ, ಭಂಗಿಸೊಪ್ಪು ನೀಡಿದರೆ ನಿಮಗೆ ಬಲುಬೇಗ ಒಲಿದು ಬಿಡುತ್ತಾನೆ. ನಿಮ್ಮ ಶತ್ರುಗಳನ್ನು ಹಿಮ್ಮೆಟ್ಟಿಸುತ್ತಾನೆ, ಇದೇ ಆತನ ಶಕ್ತಿ.ಅಮಾವಾಸ್ಯೆಯ ಮಧ್ಯರಾತ್ರಿಯಲ್ಲಿ 12ಗಂಟೆ ಸಮಯಕ್ಕೆ ಶವವನ್ನೇ ಸೇವಿಸುತ್ತಾನೆ. ವಾಮಾಚಾರಕ್ಕೂ ಆತನೇ ಆಧಿಪತಿ. ಆತನನ್ನು ಸಂತುಷ್ಟ ಪಡಿಸಿದರೆ, ವಾಮಾಚಾರವನ್ನೂ ಸರಾಗವಾಗಿ ಮಾಡುತ್ತಾನೆ.
ಮಂತ್ರವಾದಿಗಳೇ ಭೈರವನ ಆರಾಧಕರು
https://www.india.com
ವಾಮಾಚಾರ ಮಾಡಿ ದುಷ್ಟ ಶಕ್ತಿಗಳ ಗುಣಗಳನ್ನು ವಶಮಾಡಿಕೊಳ್ಳುವ ಮಂತ್ರವಾದಿಗಳೇ ಆತನ ಆರಾಧಕರು. ಅಮಾವಾಸ್ಯೆಯ ನಡುರಾತ್ರಿಯಲ್ಲಿ ಆತನಿಗೆ ಪ್ರಿಯವಾದ ವಸ್ತುಗಳನ್ನು ಅರ್ಪಿಸಿದರೆ ಸಾಕು ಆತ ಒಲಿಯುತ್ತಾನೆ. ಆತನೊಲಿದರೆ ಸಾಕು ದುಷ್ಟ-ಶಕ್ತಿಗಳ ಆವಾಹನೆಯಾಗುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿಯೇ ಮಂತ್ರವಾದಿಗಳು ಆತನ ಆರಾಧಕರಾಗುತ್ತಾರೆ.ಗ್ರಾಮಗಳನ್ನು ಕಾಯುವ ಮೂಲಕ ದುಷ್ಟರಕ್ಷಕನಾಗಿಯೂ ತನ್ನ ಶಕ್ತಿ ಪ್ರದರ್ಶಿಸುತ್ತಾನೆ.ಕಿನ್ನರರಿಗೆ ಕಿಂಪುರುಷರಿಗೆ, ಗಣಗಳಿಗೆ ಸೇರಿದಂತೆ ನವಗ್ರಹಗಳಿಗೆ ಈತನೇ ಕಾವಲುಗಾರ ಇವನಿಲ್ಲದಿದ್ದರೆ ದೇವತೆಗಳು,ಶತ್ರುಗಳ ಕಾಟದಿಂದ ಮುಕ್ತರಾಗುತ್ತಿರಲ್ಲಿಲ್ಲ.
ಕಾಶಿಯನ್ನು ಕಾಯುತ್ತಿರುವವನು ಇವನೇsource and pic credit: Times of India
ಭರತ ಖಂಡದ ಪುಣ್ಯಭೂಮಿಯಾದ ಕಾಶಿ ಕ್ಷೇತ್ರವನ್ನು ಕ್ಷೇತ್ರ ಪಾಲಕನಾಗಿ ಕಾಯುತ್ತಿರುವುದು ಇದೇ ಕಾಲಭೈರವ. ವಾರಣಾಸಿಯಲ್ಲಿರವ ಕಾಶಿ ವಿಶ್ವನಾಥ, ವಿಶಾಲಾಕ್ಷಿ, ಕವಡೆಯಮ್ಮ ಸೇರಿದಂತೆ 26 ಘಾಟ್ಗಳ ರಕ್ಷಣೆಗೆ ನಿಂತಿದ್ದಾನೆ. ಈತ ಕ್ಷೇತ್ರ ಪಾಲಕನಾಗಿರುವುದರಿಂದಲೇ ಇಂದಿನವರೆಗೂ ಕಾಶಿ ಕ್ಷೇತ್ರದಲ್ಲಿ ಯಾವುದೇ ದೇಶದ ಶತ್ರುಗಳ ಆಟ ನಡೆದಿಲ್ಲ ಎನ್ನುತ್ತಾರೆ ಈತನ ಶಕ್ತಿ ಬಲ್ಲವರು.
ಕ್ಷೇತ್ರಪಾಲಕನ ಜನ್ಮ ರಹಸ್ಯವೇನು..?
source and pic credt: news track english
ದೇವತೆಗಳಲ್ಲಿ ತ್ರಿಮೂರ್ತಿಗಳಲ್ಲಿ ಯಾರು ಶ್ರೇಷ್ಠರೆಂದು ವಾದ-ವಿವಾದಗಳು ಆರಂಭವಾಗಿತ್ತು. ಅಗ್ನಿ ಮತ್ತು ವಾಯುದೇವ ಸೃಷ್ಟಿಕರ್ತ ಬ್ರಹ್ಮನೇ ಶ್ರೇಷ್ಠವೆಂಬ ಅಭಿಪ್ರಾಯ ಮಂಡಿಸಿದ್ರು. ದೇವೇಂದ್ರ ಮಹೇಶ್ವರನೇ ಶ್ರೇಷ್ಠವೆಂದು ವಾದ ಮಂಡಿಸಿದ್ದರು. ವರುಣ ಹಾಗೂ ಇನ್ನಿತರೇ ದೇವರುಗಳು ವಿಷ್ಣುವೇ ಶ್ರೇಷ್ಠರೆಂದು ಅಭಿಪ್ರಾಯ ಪಟ್ಟರು.ಅಂತಿಮವಾಗಿ ದೇವತೆಗಳೆಲ್ಲಾ ಒಂದಾಗಿ ಬ್ರಹ್ಮನ ಹತ್ತಿರ ಹೋದರು ಬ್ರಹ್ಮ ನಾನೇ ಸರ್ವ ಶ್ರೇಷ್ಠನೆಂದು ತನ್ನ 5ನೇ ತಲೆಯಿಂದ ಉಚ್ಛರಿಸಿದನು. ನಾನು ಸೃಷ್ಟಿಕರ್ತ ಕ್ಷಣ ಮಾತ್ರದಲ್ಲಿಯೇ ಎಲ್ಲವನ್ನು ಸೃಷ್ಟಿಸಬಲ್ಲೇ ಎಂದು ಏರಿದ ದ್ವನಿಯಲ್ಲಿ ಉತ್ತರಿಸಿದನು. ದೇವತೆಗಳು ಬ್ರಹ್ಮನಿಂದ ಈ ಮಾತು ಕೇಳಿ ಮಹಾವಿಷ್ಣು ಬಳಿ ಹೋದರು. ಲಕ್ಷ್ಮೀಪತಿ ವಿಷ್ಣು ಮಹೇಶ್ವರನೇ ತೀರ್ಮಾನ ಮಾಡುತ್ತಾನೆ ಎಂದು ತಿಳಿಸಿದರು.
source and pic credit: https://ift.tt/3hnS7DY
ಮಾಘ ಮಾಸದ ಅಮಾವಾಸ್ಯೆ ದಿನ ಶಿವ ತನ್ನ ಪತ್ನಿ ಸಮೇತನಾಗಿ ಕಾಶಿ ಕ್ಷೇತ್ರದಲ್ಲಿ ಧ್ಯಾನದಲ್ಲಿ ತಲ್ಲೀನನಾಗಿದ್ದಸಂದರ್ಭ ಅಲ್ಲಿಗೆ ದೇವತೆಗಳೆಲ್ಲರೂ ಬಂದರು.ಮಹಾವಿಷ್ಣು ಶಿವನ ಧ್ಯಾನ ಭಗ್ನ ಮಾಡಬಾರದು ಎಂದು ಹಾಗೆಯೇ ಕಾದು ಕುಳಿತರು.ಸ್ವಲ್ಪ ಸಮಯದ ನಂತರ ಅಲ್ಲಿಗೆ ಪಂಚಮುಖಿ ಬ್ರಹ್ಮನು ಸಹ ಬಂದು ಶಿವನು ಧ್ಯಾನದಲ್ಲಿದ್ದುದನ್ನು ಕಂಡು ತಾಳ್ಮೆ ಕಳೆದುಕೊಂಡು ಅವಹೇಳಕಾರಿಯಾಗಿ ಮಾತನಾಡಿದ.ಈತನ ಮಾತಿನಿಂದ ಪಾರ್ವತಿ ನೊಂದು ಕಣ್ಣೀರು ಹಾಕುತ್ತ ನಾನು ಬೆಂಕಿಗೆ ಆಹುತಿಯಾಗುತ್ತೇನೆ ಎಂದು ನುಡಿದಾಗ ಪತ್ನಿಯ ಮಾತು ಕೇಳಿ, ಶಿವ ಧ್ಯಾನದಿಂದ ಹೊರ ಬಂದ. ನೆರೆದಿದ್ದ ದೇವತೆಗಳನ್ನ ಕುರಿತು ಬಂದ ಕಾರಣವೇನು ಎಂದು ಕೇಳಿದಾಗ ದೇವತೆಗಳು ತ್ರಿಮೂರ್ತಿಗಳಲ್ಲಿ ಶ್ರೇಷ್ಠರು ಯಾರು ಎಂಬ ವಿಷಯದಲ್ಲಿ ಬಗೆಹರಿಸಿಕೊಳ್ಳಲು ಇಲ್ಲಿಗೆ ಬಂದಿದ್ದೇವೆ ಎಂದರು.
source and pic credit: India tv
ಆಗಲೂ ಬ್ರಹ್ಮನಿಗೂ ಹಾಗೂ ಶಿವನಿಗೂ ವಾದ-ವಿವಾದ ನಡೆಯಿತು. ಶಿವ ಆಕ್ರೋಶಭರಿತನಾದ. ಬ್ರಹ್ಮನ 5ನೇ ತಲೆಯಿಂದ ನಾನು ನಾನು ಎಂಬ ಪದ ಬರುತ್ತಿರುವುದನ್ನು ಗಮನಿಸಿದ. ಕೂಡಲೇ ಮಹೇಶ್ವರತನ್ನ ಶರೀರದಿಂದ ಒಂದು ಶಕ್ತಿಯನ್ನು ಸೃಷ್ಟಿಸಿದ. ಆ ಶಕ್ತಿಯೇ ಕಾಶಿ ಕ್ಷೇತ್ರದಲ್ಲಿ ಜನ್ಮವಾಯಿತು. ಇದೇ ಅ ಶಕ್ತಿಯ ಜನ್ಮರಹಸ್ಯ.ನಾನು ಎನ್ನುತ್ತಿದ್ದ ಬ್ರಹ್ಮನ 5ನೇ ತಲೆಯನ್ನು ಶಿವನ ಶರೀರದಿಂದ ಜನ್ಮ ತಾಳಿದ ಶಕ್ತಿ ತುಂಡರಿಸಿತು. ಅದೇ ಶಕ್ತಿ ಮುಂದೆ ಕಾಶಿ ಕ್ಷೇತ್ರದ ಕ್ಷೇತ್ರಪಾಲಕವಾಯ್ತು.
ತಾನು ಜನ್ಮ ತಾಳಿದ ಶ್ರೀಕ್ಷೇತ್ರ ಕಾಶಿ ಕ್ಷೇತ್ರವನ್ನು ಕಾಯುವಂತೆ ಶಿವ ಅಪ್ಪಣೆ ನೀಡಿದ ನಂತರ ಆ ಶಕ್ತಿ ಇಂದಿಗೂ ಕಾಶಿ ಕ್ಷೇತ್ರದ ಕ್ಷೇತ್ರ ಪಾಲಕನಾಗಿ ಕಾಯುತ್ತಿದೆ. ಅದೇ ಕಾಲಭೈರವ. ಕಾಲವನ್ನು ಕಾಯುವವನೇ ಕಾಲಭೈರವ. ದುಷ್ಟ ಶಕ್ತಿಗಳ ರಕ್ಷಕನಾಗಿ ಆತನ ಆಟಾಟೋಪ ಮುಂದುವರೆದರೆ ಆತನನ್ನು ಮಟ್ಟ ಹಾಕುತ್ತಾ ಕಾಶಿ ಕ್ಷೇತ್ರದಲ್ಲಿ ನೆಲೆನಿಂತಿದ್ದಾನೆ ಎಂದು ದೈವ ಪುರಾಣ ಹೇಳಿದೆ. ಕಾಶಿ ಕ್ಷೇತ್ರದ8 ದಿಕ್ಕುಗಳಿಗೂ ಕಾಲಭೈರವ ಕಾಯುತ್ತ ಕ್ಷೇತ್ರ ಪಾಲಕನಾಗಿ ನೆಲೆ ನಿಂತಿದ್ದಾನೆ.
from ಸುದ್ದಿ - Planet Tv https://ift.tt/33Ltkl7
May 15, 2021 at 06:00PM