ಕನಸಿನಲ್ಲಿ ಈ ಹಣ್ಣನ್ನು ಕಂಡರೆ ಅದೃಷ್ಟ ಖುಲಾಯಿಸುತ್ತದೆ..!
source and pic credit: https://ift.tt/2r9jkPc
ಕನಸು ಪ್ರತಿಯೊಬ್ಬರಿಗೂ ಬೀಳುತ್ತದೆ. ಸುಂದರ ಕನಸು ಕಂಡು ಅದನ್ನು ಮರುದಿನ ಕಥೆಯಾಗಿ ಬಣ್ಣಿಸುವವರೂ ಇದ್ದಾರೆ. ಕನಸು ಕಂಡು ತಕ್ಷಣ ಮರೆತುಬಿಡುವವರೂ ಇದ್ದಾರೆ. ಅಥವಾ ಹಲವರಿಗೆ ಕಂಡ ಕನಸು ನೆನಪೇ ಇರುವುದಿಲ್ಲ. ಕನಸುಗಳು ಬೀಳುವುದು ಆ ಕ್ಷಣದಲ್ಲಿ ಕಹಿ ಎನಿಸಿದರೂ ಅದು ನಮಗೆ ಇನ್ನೇನೋ ಮುನ್ಸೂಚನೆಯನ್ನು ನೀಡುವಂತಿರುತ್ತದೆ. ಕೆಲವು ಕನಸುಗಳು ನಿಮಗೆ ಒಳ್ಳೆಯದನ್ನು ಮಾಡಿ, ಶುಭ ಫಲವನ್ನು ಕೊಡುತ್ತಾವಾದರೂ ಮತ್ತೆ ಕೆಲವು ಕೆಡುಕುಗಳ ಬಗ್ಗೆಎಚ್ಚರಿಕೆಯನ್ನು ಕೊಡುತ್ತವೆ. ಹೀಗಾಗಿ ಕೆಲವೊಂದು ಕನಸುಗಳು ಬಿದ್ದಾಗ ಜ್ಯೋತಿಷಿಗಳ ಮೊರೆ ಹೋಗುವುದು ಉತ್ತಮ.
source and pic credit: https://wallpaperfx.com
ಕನಸಿನಲ್ಲಿ ಹಲವರಿಗೆ ಘಟನಾವಳಿಗಳನ್ನು ಬಿಟ್ಟು ಹಣ್ಣು, ತರಕಾರಿ ವಸ್ತುಗಳ ಸಹ ಕಾಣಿಸಿಕೊಳ್ಳುವುದಿದೆ. ಆದರೆ ಈ ರೀತಿ ಕನಸಿನಲ್ಲಿ ಹಣ್ಣುಗಳು ಬರುವುದಕ್ಕೂ ಅದರದ್ದೇ ಅರ್ಥವಿದೆ. ಕನಸಿನಲ್ಲಿ ಇಂಥಹಾ ಹಣ್ಣುಗಳು ಬಂದರೆ ಅದೃಷ್ಟ, ಇಂಥಹಾ ಹಣ್ಣುಗಳು ಬಂದರೆ ದುರಾದೃಷ್ಟ ಎಂದು ನಂಬಲಾಗುತ್ತದೆ. ಕನಸುಗಳುಮುಂದೆ ಆಗುವ ಸುಖ ದುಃಖ ಘಟನೆಗಳ ಸಂಕೇತ ಆಗಿರುತ್ತದೆ. ಕನಸಿನಲ್ಲಿ ಕೆಲವು ಹಣ್ಣುಗಳು ಕಂಡರೆ ಒಳ್ಳೆಯದು ಮತ್ತೆ ಕೆಲವು ಹಣ್ಣುಗಳು ಕಂಡರೆ ಕೆಟ್ಟದ್ದು ಶಾಸ್ತ್ರಗಳ ಪ್ರಕಾರ ಯಾವ ಹಣ್ಣು ಶುಭ ಯಾವುದು ಅಶುಭ ತಿಳಿಯೋಣ.
source and pic credit: https://ift.tt/3untAS5
ಕನಸಿನಲ್ಲಿ ಬಾಳೆಹಣ್ಣುಗಳನ್ನು ನೋಡುವುದು ವೈವಾಹಿಕ ಜೀವನ ಸುಖಕರವಾಗಿರುತ್ತದೆ ಎಂಬುದನ್ನು ಸೂಚಿಸುತ್ತವೆ ಎಂದು ಹೇಳುತ್ತಾರೆ. ಬಾಳೆಹಣ್ಣುಗಳನ್ನು ಸೇವಿಸುತ್ತಿರುವಂತೆ ಕನಸಲ್ಲಿ ಕಾಣಿಸಿದರೆ ದಾಂಪತ್ಯ ಜೀವನದಲ್ಲಿ ನೀವು ಸಂಪೂರ್ಣವಾಗಿ ತೃಪ್ತರಾಗುತ್ತೀರಿ ಎಂದು ಹೇಳಲಾಗುತ್ತದೆ. ಆದರೆ, ವಿವಾಹಿತ ಪುರುಷ ತಾನೇ ಬಾಳೆಹಣ್ಣು ತಿನ್ನುತ್ತಿರುವುದನ್ನು ಕನಸಿನಲ್ಲಿ ಕಂಡಲ್ಲಿ, ಆತನ ವೈವಾಹಿಕ ಜೀವನದಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ.

source and pic credit: https://ift.tt/2Zg7Rhk
ಇನ್ನು, ಕನಸಿನಲ್ಲಿ ದಾಳಿಂಬೆ ಹಣ್ಣುಗಳನ್ನು ಕಾಣುವುದು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಇದು ಅರ್ಥಿಕ ಸಮಸ್ಯೆಯನ್ನು ಬಗೆಹರಿಸುತ್ತದೆ ಎಂದು ನಂಬಲಾಗಿದೆ. ದಾಳಿಂಬೆಯ ಕನಸು ಬೀಳುವುಆರ್ಥಿಕ ವಿಷಯಗಳಲ್ಲಿ ಬಹಳ ಶುಭ ಸಂಕೇತವಾಗಿದೆ. ಕನಸಿನಲ್ಲಿ ದಾಳಿಂಬೆಯನ್ನು ನೋಡುವುದು ಸಹ ನೀವು ಯಾರನ್ನಾದರೂ ಇಷ್ಟಪಟ್ಟರೆ ಮತ್ತು ಅವರನ್ನು ಮದುವೆಯಾಗಲು ಬಯಸಿದರೆ, ನಿಮ್ಮ ಆಸೆ ಶೀಘ್ರದಲ್ಲೇ ಈಡೇರುತ್ತದೆ ಎಂಬುದರ ಸಂಕೇತವಾಗಿದೆ.ಅಲ್ಲದೆ,ದಾಳಿಂಬೆ ಹಣ್ಣು ಕನಸಿನಲ್ಲಿ ಕಂಡರೆ ನಿಮಗೆ ಮದುವೆ ಮುಹೂರ್ತ ಕೂಡಿ ಬಂದಿದೆ ಎಂಬರ್ಥವಿದೆ. ದಾಳಿಂಬೆ ಬೀಜ ತಿಂದಂತೆ ಕನಸು ಕಂಡರೆ ಹಣ ಸಿಗುತ್ತದೆ, ಸದ್ಯದಲ್ಲೇ ಒಳ್ಳೆಯ ಸಮಾಚಾರ ಕೇಳುವಿರಿ ಎಂದು ಸಹ ಹೇಳಲಾಗುತ್ತದೆ.
source and pic credit: https://everglades.farm
ಪೇರಳೆ ಹಣ್ಣನ್ನು ತಿನ್ನುತ್ತಿರುವಂತೆ ಕನಸು ಬಿದ್ದರೆ ಅದು ನಿಮ್ಮ ಜೀವನದಲ್ಲಿ ಪ್ರಣಯವನ್ನು ಸೂಚಿಸುತ್ತದೆ. ಇದರೊಂದಿಗೆ, ತಮ್ಮ ಸಂಬಂಧಗಳಲ್ಲಿ ಕಹಿ ಎದುರಿಸುತ್ತಿರುವವರು ಶೀಘ್ರದಲ್ಲೇ ಸಿಹಿಯಾದ ಜೀವನವನ್ನು ಅನುಭವಿಸುತ್ತಿದ್ದೀರಿ ಎಂಬರ್ಥವಿದೆ. ಪೇರಳೆ ಹಣ್ಣು ಕನಸಿನಲ್ಲಿ ಬಂದರೆ ದಾಂಪತ್ಯದಲ್ಲಿ ಬಂದ ಭಿನ್ನಾಭಿಪ್ರಾಯಗಳನ್ನು ನಿವಾರಣೆಯಾಗುತ್ತದೆ ಎಂದೇ ಹೇಳಲಾಗುತ್ತದೆ.
ಕಿತ್ತಳೆ ಹಣ್ಣನ್ನು ತಿನ್ನುತ್ತಿರುವಂತೆ ಕನಸು ಬಿದ್ದರೆ ನೀವು ಶೀಘ್ರದಲ್ಲೇ ಸಮಾಜದಲ್ಲಿ ಗೌರವಾನ್ವಿತ ಸ್ಥಾನವನ್ನು ಪಡೆಯುತ್ತೀರಿಎಂದರ್ಥ. ಸಮಾಜದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗುತ್ತದೆ. ಕಿತ್ತಳೆ ಕನಸು ನಿಮ್ಮ ದೈಹಿಕ ಸೌಲಭ್ಯಗಳ ಹೆಚ್ಚಳ ಮತ್ತು ನಿಮ್ಮ ವೃತ್ತಿಪರ ಜೀವನದಲ್ಲಿನ ಪ್ರಗತಿಯನ್ನು ತೋರಿಸುತ್ತದೆಎನ್ನುತ್ತಾರೆ.

source and pic credit: https://ift.tt/1TqjAkU
ಅನಾನಸ್ ಹಣ್ಣಿನ ಕನಸನ್ನು ನೋಡುವುದರಿಂದನಾವು ಅಂದುಕೊಂಡದ್ದು ಸುಲಭವಾಗಿ ಈಡೇರುತ್ತದೆ ಎಂದು ಹೇಳಲಾಗುತ್ತದೆ. ಜೀವನದಲ್ಲಿ ಎಲ್ಲವೂ ಕ್ರಮೇಣ ನಿಮ್ಮ ಇಚ್ಚೆಗೆ ಅನುಗುಣವಾಗಿ ನಡೆಯುತ್ತದೆ. ಆರಂಭವು ಹೇಗೆ ಇದ್ದರೂ, ಅಂತ್ಯವು ನಿಮಗೆ ಅನುಕೂಲಕರವಾಗಿರುತ್ತದೆ. ಇದರರ್ಥ ಕಠಿಣ ಪರಿಶ್ರಮದ ನಂತರವೂ ನೀವು ಆರಂಭದಲ್ಲಿ ವೈಫಲ್ಯವನ್ನು ಪಡೆಯಬಹುದು, ಆದರೆ ನಂತರ ಎಲ್ಲವೂ ಯಶಸ್ವಿಯಾಗುತ್ತದೆ ಎಂಬುದಾಗಿದೆ. ಮಾವಿನ ಹಣ್ಣು ಕಂಡರೆ ಕೈಗೆ ಹಣ ಬರುತ್ತದೆ ಎಂದು ಹೇಳಲಾಗುತ್ತದೆ.
source and pic credit: https://ift.tt/2hJjhqE
ಕನಸಿನಲ್ಲಿ ನೆಲ್ಲಿಕಾಯಿ ತಿಂದ ಹಾಗೆ ಕಂಡರೆನೀವು ಕಂಡಿರುವ ಕನಸುಸದ್ಯದಲ್ಲೆ ಈಡೇರುತ್ತದೆ ಎಂಬುದರ ಸಂಕೇತವಾಗಿದೆ. ಶುಂಠಿ ತಿಂದ ಹಾಗೆ ಕನಸು ಬಿದ್ದರೆ ಗೌರವ ಸನ್ಮಾನ ದೊರಕುತ್ತದೆ ಎಂದು ಹೇಳುತ್ತದೆ ಶಾಸ್ತ್ರ. ಕನಸಿನಲ್ಲಿ ಜೀರಿಗೆ ಮತ್ತು ದ್ರಾಕ್ಷಿ ಹಣ್ಣು ಕಂಡರೆ ನಿಮ್ಮ ಆರೋಗ್ಯ ಸಮಸ್ಯೆಗಳು ಸುಧಾರಿಸುತ್ತದೆ ಎಂದು ಅರ್ಥ ಮಾಡಿಕೊಳ್ಳಬೇಕು. ಇನ್ನೂ ತೊಗರಿ ಬೇಳೆ ತಿಂದ ಹಾಗೆ ಕಂಡರೆ ನೀವು ಸಧ್ಯದಲ್ಲೇ ಹೊಟ್ಟೆ ನೋವನ್ನು ಅನುಭವಿಸಬೇಕಾಗಿ ಬರುತ್ತದೆ ಎಂದರ್ಥ. ಉಪ್ಪಿನಕಾಯಿ ತಿಂದಂತೆ ಕನಸು ಬಿದ್ದರೆ ಹೊಟ್ಟೆ ತಲೆನೋವು ಬರುವ ಸಾಧ್ಯತೆ ಇರುತ್ತದೆ.
source and pic credit: https://ift.tt/2Zg7Rhk
ಮರಗಳಲ್ಲಿ ಹಣ್ಣುಗಳನ್ನು ಕಂಡು ಅವುಗಳನ್ನು ಕೀಳುತ್ತಿರುವಂತೆ ಕನಸು ಬಿದ್ದರೆ ನಮ್ಮ ಯೋಜನೆಗಳಲ್ಲೂ ಫಲಿಸುತ್ತದೆಎಂದು ನಂಬಲಾಗುತ್ತದೆ. ಕನಸಿನಲ್ಲಿ ಹಸಿರು ಹಣ್ಣುಗಳನ್ನು ಕಂಡರೆ, ನೀವು ತಾಳ್ಮೆಯನ್ನು ಕಳೆದುಕೊಳ್ಳುತ್ತೀರಿ, ಕೆಟ್ಟ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದರ್ಥ. ಬುಟ್ಟಿಯಲ್ಲಿರುವ ಹಣ್ಣುಗಳನ್ನು ಕಂಡರೆ ಯಶಸ್ಸು ನಿಮಗೆ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತದೆ.
from ಸುದ್ದಿ - Planet Tv
May 25, 2021 at 09:08AM