ಮಂಗಳಮುಖಿಯರ ಅಂತ್ಯಸಂಸ್ಕಾರ ರಾತ್ರೋರಾತ್ರಿ ಮಾಡುವುದ್ಯಾಕೆ ಗೊತ್ತಾ..?
source and pic credit: https://ift.tt/3onkJP5
ಮಂಗಳಮುಖಿಯರು ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ..ಅತ್ತ ಹೆಣ್ಣೂ ಅಲ್ಲದ ಇತ್ತ ಗಂಡೂ ಅಲ್ಲದ ಒಂದು ವಿಶಿಷ್ಟ ವ್ಯಕ್ತಿಯ ಮನಸ್ಥಿತಿ..ಸಾಮಾನ್ಯವಾಗಿ ಇಂತವರನ್ನು ತೃತೀಯ ಲಿಂಗಿಗಳು, ಮಂಗಳಮುಖಿಯರು ಎಂದು ಕರೆಯುತ್ತಾರೆ.. ಹುಟ್ಟಿನಿಂದಲೇ ಕೆಲವರು ಹಾರ್ಮೋನ್ ಗಳಲ್ಲಿ ಸಮಸ್ಯೆ ಹೊಂದಿದವರಾಗಿದ್ದು, ಅವರ ಮಾನಸಿಕ ಸ್ಥಿತಿಯೂ ಹೆಣ್ಣುಮಕ್ಕಳಂತಿರುತ್ತೆ.ಮಂಗಳಮುಖಿಯರು ಸಾಮಾನ್ಯರಂತೆ ಜೀವನ ನಡೆಸುವುದಿಲ್ಲ. ಅವರ ನಡೆ, ನುಡಿಯಿಂದ ಹಿಡಿದು ಜೀವನ ನಡೆಸುವ ವಿಧಾನ ಕೂಡ ಭಿನ್ನವಾಗಿರುತ್ತೆ.ಜನನದಿಂದ ಹಿಡಿದು ಮರಣದವರೆಗೆ ಬೇರೆಬೇರೆ ನಿಯಮಗಳನ್ನು ಅವರು ಪಾಲನೆ ಮಾಡ್ತಾರೆ.
source and pic credit: telegraph India
ಮಂಗಳಮುಖಿಯರು ಶವವನ್ನು ಯಾರಿಗೂ ತೋರಿಸುವುದಿಲ್ಲ..!
ಪ್ರಪಂಚದಲ್ಲಿ ಎಲ್ಲರ ನಡುವೆಯೇ ಬದುಕುತ್ತಿದ್ರೂ ಮಂಗಳಮುಖಿಯರ ಆಚರಣೆ ಸಂಪ್ರದಾಯಗಳೆಲ್ಲವೂ ವಿಭಿನ್ನ..ಮಂಗಳಮುಖಿಯರ ಸಮುದಾಯದಲ್ಲಿಯಾರಾದರೂ ಮೃತಪಟ್ಟರೆ ಶವವನ್ನು ಮುಚ್ಚಿಡಲಾಗುತ್ತದೆ. ಬೆಳಗ್ಗೆ ಎಂದೂ ಶವಯಾತ್ರೆ ಹೊರಡುವುದಿಲ್ಲ. ರಾತ್ರಿಯೇ ಶವದ ಅಂತ್ಯಸಂಸ್ಕಾರ ನಡೆಯುತ್ತದೆ. ಮಂಗಳ ಮುಖಿಯರ ಶವವನ್ನು ಯಾರೂ ನೋಡಬಾರದು ಎನ್ನುವ ಕಾರಣಕ್ಕೆ ರಾತ್ರಿ ಶವಯಾತ್ರೆ ನಡೆಸುತ್ತಾರೆ. ಅವರ ಸಮುದಾಯ ಬಿಟ್ಟು ಬೇರೆ ಸಮುದಾಯದ ಮಂಗಳಮುಖಿಯರೂ ಈ ಶವಯಾತ್ರೆಯಲ್ಲಿ ಪಾಲ್ಗೊಳ್ಳುವುದಿಲ್ಲ.
ತೀರಿಕೊಂಡ ಮಂಗಳಮುಖಿಯ ಶವವನ್ನು ಬೇರೆ ಸಮುದಾಯದ ಮಂಗಳಮುಖಿಯರೇ ಆಗಿರಲಿ ಅಥವಾ ಗಂಡು ಹೆಣ್ಣಾಗಿರಲಿ ನೋಡಬಾರದು ಎಂಬುದೇ ಇವರ ಮುಖ್ಯ ಉದ್ದೇಶವಾಗಿದೆ. ಈ ರೀತಿ ಶವಯಾತ್ರೆಯನ್ನು ಮುಚ್ಚಿಟ್ಟು ಮಾಡುವುದಕ್ಕೆ ಕಾರಣವಿದ್ಡು, ಯಾರಾದರೂ ಗಂಡಾಗಲಿ ಹೆಣ್ಣಾಗಲಿ ಮಂಗಳಮುಖಿಯರ ಶವಯಾತ್ರೆಯನ್ನು ನೋಡಿದರೆ ಅವರು ಮುಂದಿನ ಜನ್ಮದಲ್ಲಿ ಮಂಗಳಮುಖಿಯಾಗಿ ಹುಟ್ಟುತ್ತಾರೆ ಎಂಬುದು ಇವರ ನಂಬಿಕೆಯಾಗಿದೆ. ಅಲ್ಲದೆ, ಮಂಗಳಮುಖಿಯರು ಸತ್ತಾಗ ಆ ಸಮುದಾಯದ ಯಾವುದೇ ಬೇರೆ ಮಂಗಳಮುಖಿಯರು ಕಣ್ಣೀರು ಹಾಕುವುದಿಲ್ಲ. ತಮ್ಮ ಜೊತೆಗಾರರನ್ನು ಕಳೆದುಕೊಂಡ ನೋವಿದ್ದರೂ, ಅದನ್ನು ಹೊರಗೆ ವ್ಯಕ್ತಪಡಿಸುವುದಿಲ್ಲ.
source and pic credit: naukri nama
ಮಂಗಳಮುಖಿಯರು ಸತ್ತಾಗ ಕೆಲವರು ಹಣ ಹಂಚುತ್ತಾರೆ. ಅದಕ್ಕೆ ಒಂದು ಮುಖ್ಯ ಕಾರಣವಿದೆ. ಅದೇನೆಂದರೆ ಮಂಗಳಮುಖಿಯರು ಬದುಕಿದ್ದಾಗ, ಈ ಜಗತ್ತು ಅವರನ್ನು ನೋಡುವ ರೀತಿ, ತಿರಸ್ಕಾರ ಮನೋಭಾವನೆ,ಬೇರೆ ಯಾರಿಗೂ ಹೇಳಿಕೊಳ್ಳಲಾಗದ ಹಿಂಸೆ, ಅವರು ಬದುಕುವುದಕ್ಕೆ ಪಡುವ ನಾನಾ ರೀತಿಯ ಕಷ್ಟಗಳು ಇವೆಲ್ಲದರಿಂದ ಅವರು ಮುಕ್ತಿ ಪಡೆದಿರುತ್ತಾರೆ.ಈ ಉದ್ದೇಶಕ್ಕಾಗಿಯೇ ಮಂಗಳಮುಖಿಯರು ಸತ್ತಾಗ ಕೆಲವರು ಹಣ ಹಂಚುತ್ತಾರೆ. ಹಿಂದೂ ಧರ್ಮದ ಮಂಗಳಮುಖಿಯರು ಶವಯಾತ್ರೆಯಲ್ಲಿ, ತೀರಿಕೊಂಡ ಮಂಗಳಮುಖಿಯ ಶವಕ್ಕೆ ಚಪ್ಪಲಿಯಿಂದ ಹೊಡೆಯುತ್ತಾರೆ. ಇದಕ್ಕೆ ಮೂಲ ಕಾರಣ ಮತ್ತೆ ಮುಂದಿನ ಜನ್ಮದಲ್ಲಿ ನೀನು ಯಾವುದೇ ಕಾರಣಕ್ಕೂ ಮಂಗಳಮುಖಿಯಾಗಿ ಹುಟ್ಟಬಾರದುಎಂದು. ಮಂಗಳಮುಖಿಯರ ಸತ್ತಾಗ ಯಾವುದೇ ಕಾರಣಕ್ಕೂ ಅವರು ಶವವನ್ನು ಸುಡುವುದಿಲ್ಲ ಮಣ್ಣು ಮಾಡಿ ಸಮಾಧಿ ಮಾಡುತ್ತಾರೆ.
ಮಂಗಳಮುಖಿಯರಲ್ಲೇ ಚಾಲ್ತಿಯಲ್ಲಿವೆ ಹಲವು ಪಂಗಡಗಳು
ಭಾರತದಲ್ಲಿ ಕಂಡುಬರುವ ಮಂಗಳಮುಖಿಯರಲ್ಲಿ ಸುಮಾರು ಏಳು ಪಂಗಡಗಳಿವೆ. ಇವುಗಳನ್ನು ಘರಾನಾಗಳು ಅಂತಲೂ ಕರೆಯುತ್ತಾರೆ.. ಲಸಕರ, ಲಲಾಂಗರ್ಸ ಬೆಂಡಿ ಬಜಾರ್, ಡೋಂಗ್ರಿವಾಲಾ, ಪೂಣವಾಲಾ, ಚಕ್ಕಾವಾಲ, ಗುಲಾಕ್ಕವಾಲಾ, ಈ ರೀತಿ ಪಂಗಡಗಳಿದ್ದು, ಪ್ರತಿಯೊಂದು ಪಂಗಡಗಳಿಗೂ ಒಬ್ಬೊಬ್ಬ ನಾಯಕರಿರುತ್ತಾರೆ. ಆ ಗುರುಗಳನ್ನು ಇವ್ರು ಮಮ್ಮೀ ಎಂದು ಕರೆಯುತ್ತಾರೆ. ಭಾರತದ ಯಾವುದೇ ಮೂಲೆಯಲ್ಲಿ ಮಂಗಳಮುಖಿಯರಿದ್ದರೂ ಅವರಿಗೆ ಈ ಮಮ್ಮೀ ಅನ್ನೋ ನಾಯಕರು ಇದ್ದೇ ಇರುತ್ತಾರೆ. ಅಂತವರು ಈ ಮೇಲೆ ಹೇಳಿದ ಈ ಯಾವುದಾದರೊಂದ ಪಂಗಡಗಳಿಗೆ ಸೇರಿದವರಾಗಿರುತ್ತಾರೆ.
source and pic credit: india legal
ಒಂದು ಅಂದಾಜಿನ ಪ್ರಕಾರ ನಮ್ಮ ಭಾರತದಲ್ಲಿ ಸುಮಾರು ಐವತ್ತು ಲಕ್ಷಕ್ಕೂ ಅಧಿಕ ಮಂಗಳ ಮುಖಿಯರಿದ್ದಾರೆ ಅಂತ ಅಂದಾಜಿಸಲಾಗಿದೆ.ಆದರದಲ್ಲಿ ಇವರನ್ನು ಶಿವಶಕ್ತಿ ಅಂತ ಕರೆಯುತ್ತಾರೆ. ತಮಿಳುನಾಡಿನಲ್ಲಿ ಇವರನ್ನು ಅರವಣ್ಣೀಸ್ ಅಂತ ಕರೆಯುತ್ತಾರೆ. ಪುರಾಣಗಳಲ್ಲೂ ಇವರ ಉಲ್ಲೇಖವಿದೆ.
ಮಹಾಭಾರತದಲ್ಲಿ ಅರ್ಜುನ ಮತ್ತು ನಾಗಕನ್ನಿಕೆಗೆ ಜನಿಸಿದ ಅರವಣ ಎನ್ನುವ ಮಗುವನ್ನ ಕುರುಕ್ಷೇತ್ರ ಯುದ್ಧವನ್ನ ಗೆಲ್ಲೋಕೆ ಕಾಳಿಗೆ ಬಲಿಕೊಡೋಕೆ ನಿರ್ಧರಿಸಲಾಗುತ್ತೆ. ಆದ್ರೆ ಹಾಗೆ ಅರವಣನನ್ನ ಕಾಳಿಗೆ ಬಲಿ ಕೊಡೋದಕ್ಕೂ ಮುನ್ನ ಅದಕ್ಕೆ ಒಂದು ಷರತ್ತನ್ನ ವಿಧಿಸಲಾಗುತ್ತೆ.. ಅದೇನಪ್ಪ ಅಂದ್ರೆ ಅರವಣನ ಜೊತೆ ಒಂದು ಹೆಣ್ಣು ಇಡೀ ಒಂದು ರಾತ್ರಿ ಕಾಲ ಕಳೆಯಬೇಕು ಅಂತ.. ಆಗ ಸಾಯುವುದಕ್ಕೆ ಸಿದ್ಧವಾಗಿರೋ ಅರವಣನನ್ನು ಮದುವೆಯಾಗೋದಕ್ಕೆ ಯಾರೂ ಒಪ್ಪೋದಿಲ್ಲ.. ಆಗ ಶ್ರೀಕೃಷ್ಣ ಮೋಹಿನಿ ಅವತಾರದಲ್ಲಿ ಬಂದು ಅರವಣನನ್ನು ಮದುವೆಯಾಗ್ತಾನೆ.. ಈ ಹಿನ್ನಲೆಯಲ್ಲಿ ತಮಿಳುನಾಡಿನ ಹಿಜಡಾಗಳು ಇವರನ್ನೇ ತಮ್ಮ ಪೂರ್ವಿಕರು ಅಂತ ತಿಳಿದುಕೊಂಡು ತಮ್ಮನ್ನ ತಾವು ಅರವಾಣಿಗಳು ಅಂತ ಕರೆದುಕೊಳ್ಳುತ್ತಾರೆ.
sorce and pic credit: https://edtimes.in
ಇನ್ನು, ಪಾಂಡವರು ಒಂದು ವರ್ಷ ಅಜ್ಞಾತವಾಸದ ಸಮಯದಲ್ಲಿ ಅರ್ಜುನ ಬೃಹನ್ನಳೆ ವೇಷದಲ್ಲಿ ಉತ್ತರೆಗೆ ನೃತ್ಯ ಕಲಿಸಿದ್ದು, ಅಷ್ಟೇ ಅಲ್ಲ ರಥದ ಸಾರಥಿಯಾಗಿದ್ದೂ ನಿಮ್ಮೆಲ್ಲರಿಗೂ ಗೊತ್ತಿರುವ ವಿಚಾರವೇ.. ಈ ರೀತಿ ಈ ಮಂಗಳ ಮುಖಿಯರು ಅನಾದಿ ಕಾಲದಿಂದಲೂ ಎಲ್ಲೆಡೆಯೂ ಇದ್ದರು ಅನ್ನೋದು ತಿಳಿಯುತ್ತೆ.ಇನ್ನು ಇಂತಹ ಮಂಗಳ ಮುಖಿಯರು ಭೂಚಾರ ತಾಯಿ ಮತ್ತು ಶಿವನ ಆರಾಧಕರಾಗಿದ್ದಾರೆ.ತಮಿಳುನಾಡಿನಲ್ಲಿ ಇವರು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಒಂದು ದೊಡ್ಡ ಹಬ್ಬವನ್ನು ಆಚರಿಸುತ್ತಾರೆ.ತಮಿಳುನಾಡಿನ ವಿಲ್ಲಾಪುರಂ ಜಿಲ್ಲೆಯ ಉಲ್ಲಾಂಡಪೇಟೆ ತಾಲ್ಲೂಕಿನ ಕೂವಗಂ ಎಂಬ ಗ್ರಾಮದಲ್ಲಿ ಅರವಾಣಿಗಳ ದೇವಾಲಯ ಕೂಡಾ ಇದೆ..
ಮಂಗಳಮುಖಿಯಾಗುತ್ತೇನೆ ಅಂದ್ರೆ ಹೆಣ್ಣಾಗಿ ಬಾಳಬೇಕು ಒಂದು ವರ್ಷ
source and pic credit: goa chronicle
ಗಂಡಾಗಿ ಹುಟ್ಟಿ ಹೆಣ್ಣಿನ ಭಾವನೆ ಬಂದು ಯಾರಾದರೂ ಮಂಗಳಮುಖಿಯಾಗಬೇಕು ಅನ್ನೋ ಬಾವನೆ ಬಂದರೆ ಅಂತವರಿಗೆ ಮಂಗಳಮುಖಿಯಾಗಲು ಒಂದು ವರ್ಷ ಸಮಯ ಕೊಡುತ್ತಾರೆ.. ಅವರ ಗುಂಪಿಗೆ ಸೇರಿಕೊಂಡಿದ್ದಾರೆಂದು ತಕ್ಷಣವೇ ಮಂಗಳಮುಖಿ ಮಾಡೋದಿಲ್ಲ, ನಿರ್ವಾಣ ಮಾಡೋದಿಲ್ಲ.ನಿರ್ವಾಣ ಎಂದರೆ ಪುರುಷ ತನ್ನ ಲೈಂಗಿಕ ಅಂಗಗಳನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆಸಿಕೊಳ್ಳುವುದು ಎಂದರ್ಥ.ಇದಕ್ಕಾಗಿ ಒಂದು ವರ್ಷದವರೆಗೆ ಸಾತ್ಲಾದಲ್ಲಿ ಇರಬೇಕಾಗುತ್ತದೆ.ಸಾತ್ಲಾ ಎಂದರೆ ಹೆಣ್ಣಿನ ಉಡುಪು ಧರಿಸಿ ಒಂದು ವರ್ಷ ಅವರ ಆಚಾರ ವಿಚಾರಗಳನ್ನು ಪಾಲನೆ ಮಾಡಬೇಕಾಗುತ್ತದೆ. ಅವರಿಗೆ ಬಲವಂತ ಮಾಡೋದಿಲ್ಲ ಮತ್ತು ನಿರ್ವಾಣ ಮಾಡಿಸಿಕೊಳ್ಳೋದಕ್ಕೆ ಅವರಿಗೆ ಒಂದು ವರ್ಷ ಬೇಕಾಗುತ್ತದೆ.. ಅದೂ ಒಂದು ವರ್ಷಗಳ ಕಾಲ ಅವರು ಬಿಕ್ಷೆ ಬೇಡಿದ ದುಡ್ಡಿನಿಂದಲೇ ಆಗಬೇಕು..ಇದು ಕೂಡಾ ಅವರ ಪದ್ಧತಿಗಳಲ್ಲೊದಾಗಿದೆ.
source and pic credit: Business standard
ಕುಂಭಮೇಳದಲ್ಲಿ ಮಂಗಳಮುಖಿ ಕಿನ್ನರ ಅಖಾರಗಳ ಸಂಭ್ರಮ..!
ಮಂಗಳಮುಖಿಯರ ಪಂಗಡದಲ್ಲಿ ಕಿನ್ನರ ಅಖಾಡ ಅನ್ನೋ ಹೊಸ ಪಂಗಡವೊಂದು ತಲೆ ಎತ್ತಿದೆ.. ಹಿಂದೂ ಸನಾತನ ಧರ್ಮದಲ್ಲಿ ಕಿನ್ನರರಿಗೆ ಉಪದೇವತಾ ಸ್ಥಾನವಿದೆ ಎಂದು ಹೇಳಿಕೊಳ್ಳುವ ಇವರು, ಆ ಸನಾತನ ಪರಂಪರೆಯ ಕುಡಿಗಳು ನಾವು ಅಂತ ಜೀವನ ನಡೆಸುತ್ತಿದ್ದಾರೆ. ಹಿಮಾಲಯದಿಂದ ಬಂದ ಇವರು ತೊಂದರೆ ಅಥವಾ ಅಪಾಯದ ಸಮಯದಲ್ಲಿ ಮಾನವರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾರೆ ಎಂದು ನಂಬಲಾಗಿದೆ. ಅವರ ಲಕ್ಷಣವನ್ನು ಮಹಾಭಾರತದ ಆದಿಪರ್ವದಲ್ಲಿ ಸ್ಪಷ್ಟಪಡಿಸಲಾಗಿದೆ. ಇಂತಹ ಕಿನ್ನರನ ಹೆಸರಿನಿಂದ ಈಗ ಮಂಗಳಮುಖಿಯರ ಅಖಾರವೊಂದು ಸಿದ್ಧಗೊಂಡು ವಿಶಿಷ್ಟ ಆಚಾರ ವಿಚಾರಗಳಿಂದ ಜಗತ್ತಿನ ಗಮನ ಸೆಳೆಯುತ್ತಿದೆ.
source and pic credit: Dna India
ನಾವು ಸಾಧುಗಳಲ್ಲ ಉಪಾದೇವತೆಗಳು ಎಂದು ಹೇಳಿಕೋಳ್ಳುವ ಇವರು. ಶೃಂಗಾರಕ್ಕೆ ಪ್ರಥಮ ಆಧ್ಯತೆ ನೀಡುತ್ತಾರೆ.. ಅಚ್ಚುಕ್ಕಟ್ಟಾಗಿ ಭಾರತೀಯ ಪರಂಪರೆಯ ಪ್ರತೀಕವಾದ ಸೀರೆಯನ್ನುಟ್ಟು, ಹಣೆಗೆ ದೊಡ್ಡದಾಗಿ ತಿಲಕವನ್ನಿಟ್ಟುಕೊಂಡು, ಭಸ್ಮ ಧರಿಸಿ ನೋಡಲು ಅರ್ಚಕರಂತೆ ಕಂಡುಬರುವ ಇವರು ತಮ್ಮ ಆರಾಧ್ಯ ದೈವನಾದ ಶಿವನನ್ನ ಖುಷಿ ಪಡಿಸೋದಕ್ಕಾಗಿ ಹೀಗೆ ಶೃಂಗಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇವೆ ಅಂತಾರೆ.
ದುರಂತದ ವಿಚಾರ ಅಂದ್ರೆ ಒಂದು ಸರ್ವೇ ಪ್ರಕಾರ ಬಾಂಬೈನಲ್ಲಿ ವಾಸವಿರುವ ಮಂಗಳಮುಖಿಯರಲ್ಲಿ ಸುಮಾರು ಅರ್ಧದಷ್ಟು ಜನರಿಗೆ ಎಚ್.ಐ.ವಿ. ಸೋಂಕಿದೆ ಎಂದು ಸರ್ವೇಯಲ್ಲಿ ಗೊತ್ತಾಗಿದೆ.ಕೆಲವರು ಮಾತ್ರ ಕೆಟ್ಟದಾಗಿ ವ್ಯವಹರಿಸಿ ಈ ಸಮುದಾಯಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ. ಮಂಗಳಮುಖಿಯರು ಸಮಾಜದ ಮುಖ್ಯವಾಹಿನಿಗೆ ಬರಲು ಅವರನ್ನು ಎಲ್ಲರಂತೆ ನೋಡಬೇಕಾದ ಅಗತ್ಯವಿದೆ. ಸಾಮಾಜಿಕ ನ್ಯಾಯದೊಂದಿಗೆ ಉತ್ತಮ ನೆಲೆ, ಶಿಕ್ಷಣ ಕೆಲಸ ಗೌರವ ಪಡೆದುಕೊಂಡು ಬದುಕುವಂತಾದರೆ ಮಾತ್ರ ಮಂಗಳಮುಖಿಯರ ಜೀವನ ಹಸನಾಗಲು ಸಾಧ್ಯ.
from ಸುದ್ದಿ - Planet Tv
May 24, 2021 at 07:15PM