ಭಾರತದ ಕೊನೆಯ ಗ್ರಾಮ ಸುಂದರ ‘ಮನಾ’
source and pic credit: http://singhruby.com
ಭಾರತ..ನಮ್ಮ ಹೆಮ್ಮೆಯ ದೇಶ. ದೇಶದ ಬಗ್ಗೆ ನಮಗೆಲ್ಲಾ ಹಲವು ವಿಷಯಗಳು ಗೊತ್ತು. ನಮ್ಮ ದೇಶದ ಸಂಸ್ಕೃತಿ, ಆಚಾರ-ವಿಚಾರ, ಸ್ವಾತಂತ್ರ್ತಹೋರಾಟಗಾರರು, ನಾಡಿಗಾಗಿ ಹೋರಾಡಿದ ನಾಯಕರು, ಸಮಾಜ ಸುಧಾರಕರು, ಹಲವು ರಾಜ್ಯಗಳು, ಹಲವು ಭಾಷೆಗಳು ಹೀಗೆ ಹಲವು ವಿಚಾರಗಳಿವೆ. ಆದರೆ ನಮ್ಮ ದೇಶದ ಬಗ್ಗೆ ನಮಗೆಷ್ಟು ಗೊತ್ತಿದೆಯೋ ನಮಗೆ ಗೊತ್ತಿರದ ವಿಷಯಗಳು ಸಹ ಹಲವಾರು. ಅದರಲ್ಲೊಂದು ವಿಚಾರ ನಾವು ಹೇಳಲು ಹೊರಟಿರುವುದು. ಭಾರತದ ಕೊನೆಯಗ್ರಾಮ ‘ಮನಾ”ದಬಗ್ಗೆ ಒಂದಿಷ್ಟು ತಿಳಿಯೋಣ.
source and pic credit: Tripoto
ಭಾರತದ ಕೊನೆಯ ಗ್ರಾಮ ಯಾವುದು ಅನ್ನುವುದಕ್ಕಿಂತ ಭಾರತದ ಕೊನೆಯ ಗ್ರಾಮಗಳು ಯಾವುವು ಅನ್ನುವುದು ಹೆಚ್ಚು ಸೂಕ್ತ.ಯಾಕೆಂದರೆ,ಭಾರತದ ಸುತ್ತಲೂ ಬೇರೆ ದೇಶದೊಂದಿಗಿನ ಗಡಿಯಲ್ಲಿ ಇರುವ ಎಲ್ಲ ಗ್ರಾಮಗಳೂ ಭಾರತದ ಕೊನೆಯ ಗ್ರಾಮಗಳೇ ಆಗುತ್ತವೆ.ಆದರೆ, ಅಧಿಕೃತವಾಗಿ ಭಾರತದ ಕೊನೆಯ ಗ್ರಾಮ ಎಂದು ಕರೆಯಲ್ಪಡುವುದು ಉತ್ತರಾಖಂಡದ ಚಾಮೋಲಿ ಜಿಲ್ಲೆಯಲ್ಲಿರುವ ಮನಾ ಗ್ರಾಮ. ಇದನ್ನು ದೇವಭೂಮಿ, ಭೂಮಿಯ ಮೇಲಿನ ಸ್ವರ್ಗ ಎಂದೂ ಕರೆಯಲಾಗುತ್ತದೆ. ಭಾರತ ಮತ್ತು ಟಿಬೆಟ್ ಗಡಿಯಲ್ಲಿರುವ ಮನಾ ಭಾರತದ ಕೊನೆಯ ಗ್ರಾಮ ಎನಿಸಿಕೊಂಡಿದೆ.
ಏನಿದರ ವಿಶೇಷತೆ?
source and pic credit: https://ift.tt/3hUVFhn
ಭಾರತದ ಕೊನೆಯ ಗ್ರಾಮ ಮನಾಗೂ ಹಲವು ವಿಶೇಷತೆಗಳಿವೆ. ಈ ಗ್ರಾಮ ಸಮುದ್ರ ಮಟ್ಟದಿಂದ ಸುಮಾರು 10500 ಅಡಿಗಳ ಎತ್ತರದಲ್ಲಿ ಪವಿತ್ರವಾದ ಸರಸ್ವತಿ ನದಿಯ ದಡದಲ್ಲಿ ಇರುವುದು ಇದರ ವಿಶೇಷ.ಅದಕ್ಕಿಂತ ಹೆಚ್ಚಾಗಿ, ಅತ್ಯಂತ ಪ್ರಸಿದ್ಧ ಯಾತ್ರಾ ಸ್ಥಳ ಬದರಿನಾಥ ದೇವಾಲಯದಿಂದ ಇದು ಕೇವಲ ಐದು ಕಿ.ಮೀ ದೂರದಲ್ಲಿದೆ. ಅಲ್ಲದೆ, ಈ ಸ್ಥಳದ ಇನ್ನೊಂದು ವಿಶೇಷತೆಯೆಂದರೆ ಈ ಪ್ರದೇಶವು ದೇಶದ ಪ್ರಸಿದ್ಧ ಟ್ರೆಕ್ಕಿಂಗ್ ಪ್ರದೇಶಗಳಲ್ಲಿ ಒಂದು.
source and pic credit: The Indian Express
ಪಾಂಡವರು ಸ್ವರ್ಗಕ್ಕೆ ಹೋಗುವಾಗ ಇದೇ ಗ್ರಾಮದ ಮೂಲಕ ಪ್ರಯಾಣಿಸಿದ್ದರು ಎನ್ನುವ ಐತಿಹ್ಯ ಇದೆ.ಹಾಗೆ ಹೋಗುವಾಗ ಸರಸ್ವತಿ ನದಿಗೆ ಅಡ್ಡವಾಗಿ ಕಟ್ಟಿದ ಸೇತುವೆ ಇಂದಿಗೂ ಇದೆ. ಅದನ್ನ ಭೀಮ ಸೇತು ಅನ್ನುತ್ತಾರೆ.ಮನಾ ಗ್ರಾಮದ ಸುತ್ತಲೂ ಹಲವು ಪೌರಾಣಿಕ ಮತ್ತು ಧಾರ್ಮಿಕ ಸ್ಥಳಗಳು ಕೂಡಾ ಇವೆ.ಅವುಗಳಲ್ಲಿ ಕೆಲವು, ನೀಲಕಾಂತ ಶಿಖರ, ತಪ್ತ ಕುಂಡ, ವ್ಯಾಸ ಗುಹೆ, ಚರಣ ಪಾದುಕಾಮೊದಲಾದವು. ಇದಲ್ಲದೇ ಸುಂದರವಾದ ಹಲವು ಜಲಪಾತಗಳು ಈ ಗ್ರಾಮದಲ್ಲಿವೆ.
source and pic credit: https://www.tripoto.com
ಭಾರತದ ಕೊನೆಯ ಟೀ ಸ್ಟಾಲ್, ಕೊನೆಯ ಗ್ರಾಮದ ಊಟ, ಲಾಸ್ಟ್ ವಿಲೇಜ್ ಪ್ರಾಡಕ್ಟ್ , ಇನ್ನೂ ಬೇರೆ ಬೇರೆ ಕೂಗುಗಳೊಂದಿಗೆ ವ್ಯಾಪಾರ ಮಾಡುತ್ತ ತಮ್ಮ ಬದುಕನ್ನ ರೂಪಿಸಿಕೊಂಡಿರುವ ವ್ಯಾಪಾರಸ್ಥರನ್ನು ಈ ಗ್ರಾಮದಲ್ಲಿ ನೋಡಬಹುದು. ಹಚ್ಚ ಹಸಿರಿನ ಬೆಟ್ಟದ ಮಧ್ಯೆ ಇರುವ ಮನಾ ಗ್ರಾಮ ತನ್ನ ಸೌಂದರ್ಯದಿಂದಲೇ ಎಲ್ಲರನ್ನು ಸೆಳೆಯುತ್ತದೆ. ಹ್ಯಾಂಡ್ ಮೇಡ್ ವಸ್ತುಗಳನ್ನು ಈ ಗ್ರಾಮದಲ್ಲಿ ಹೆಚ್ಚಾಗಿ ಮಾರುತ್ತಾರೆ.
source and pic credit: google.com
ನೀಲಕಾಂತ ಶಿಖರ,ಅತ್ಯಂತ ಸುಂದರವಾದ ಹಿಮಾಚ್ಛಾದಿತ ಶಿಖರ. ಪರ್ವತಾರೋಹಣ ಮಾಡುವವರನ್ನ ಕೈಬೀಸಿ ಕರೆಯುತ್ತದೆ.ತಪ್ತ ಕುಂಡದಲ್ಲಿ ವರ್ಷಪೂರ್ತಿ ನೈಸರ್ಗಿಕವಾಗಿ ಬಿಸಿನೀರು ಬರುತ್ತಿರುತ್ತದೆ. ಈ ಕುಂಡದ ಸ್ನಾನ ಎಲ್ಲಾ ಚರ್ಮರೋಗಗಳನ್ನ ವಾಸಿ ಮಾಡುತ್ತದೆ ಅನ್ನುವುದುಜನರ ನಂಬಿಕೆ. ಪೌರಾಣಿಕ ಹಿನ್ನಲೆಯುಳ್ಳ ವ್ಯಾಸ ಗುಹೆಯೂ ಇದೇ ಗ್ರಾಮದಲ್ಲಿದೆ.
source and pic credit: Tripoto
ಮಹಾಭಾರತದ ಕರ್ತೃ ವ್ಯಾಸ ಋಷಿಗಳು ಈ ಗುಹೆಯಲ್ಲಿ ವಾಸಿಸುತ್ತಿದ್ದರು ಅನ್ನುವುದು ಪ್ರತೀತಿ.ವಿಷ್ಣುವಿನ ಪಾದದ ಗುರುತು ಎಂದು ಹೇಳಲಾಗುವ ಸುಂದರವಾದ ಕಲ್ಲಿನ ಬೆಟ್ಟವೊಂದು ಇಲ್ಲಿದ್ದು ಇದನ್ನುಚರಣ ಪಾದುಕಾಎಂದು ಕರೆಯುತ್ತಾರೆ. ಮನಾ ಗ್ರಾಮದಲ್ಲೇ ಸರಸ್ವತಿ ಹಾಗೂ ಅಲಕಾನಂದ ನದಿಗಳು ಸಂಗಮವಾಗುತ್ತದೆ. ಜೊತೆಗೆ ಪ್ರಾಚೀನಕಾಲದ ಮಂದಿರ ಹಾಗೂ ಗುಹೆಗಳು ಈ ಊರಿನಲ್ಲಿದೆ..
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
► Subscribe to Planet Tv Kannada
https://www.youtube.com/Planet Tv Kannada
► Follow us on Facebook
https://www.facebook.com/Planettvkannada
► Follow us on Twitter
https://twitter.com/Planettvkannada
► Follow us on Instagram
https://www.instagram.com/planettvkannada
► Follow us on Pinterest
https://www.pinterest.com/Planettvkannada
► Follow us on Koo app
https://www.kooapp.com/planettvkannada
► Follow us on share chat
https://sharechat.com/planettvkannada
► Join us on Telegram
https://t.me/planettvkannada
► Follow us on Tumblr
https://www.tumblr.com/planet-tv-kannada
from ಸುದ್ದಿ - Planet Tv https://ift.tt/3ueFyxt
May 24, 2021 at 04:24PM