ಕಂಚಿ ಭೂಮಂಡಲದ ಮಧ್ಯಭಾಗವೇ?
ಕಾಮಾಕ್ಷಿಯನ್ನು ಬೇಡಿದರೆ ಮಕ್ಕಳಾಗುತ್ತೆ!
Image credit : Facebook
ಕಾಂಚೀಪುರ ಮಹಾಶಕ್ತಿ ಪೀಠದ ಬಗ್ಗೆ ನಿಮಗೆಷ್ಟು ಗೊತ್ತು?
ದಕ್ಷ ಯಜ್ಞದಿಂದ ಸತಿಯನ್ನು ಕಳೆದುಕೊಂಡ ಶಿವನು, ಆಕೆಯ ದೇಹವನ್ನು ಹೊತ್ತು ತಾಂಢವವಾಡುವಾಗ ಲೋಕದ ಹಿತಕ್ಕಾಗಿ ವಿಷ್ಣುವು ಸುದರ್ಶನ ಚಕ್ರ ಪ್ರಯೋಗಿಸಿ ಸತಿಯ ದೇಹವನ್ನು ತುಂಡರಿಸಿದಾಗ, ಸತಿಯ ನಾಭಿ ಎಂದರೆ ಹೊಕ್ಕಳು ಭಾಗ ಬಿದ್ದಿದ್ದು ಕಾಂಚೀಪುರಂನಲ್ಲಿ.
ದಂತಕಥೆಗಳು ಮತ್ತು ಸ್ಥಳೀಯ ನಂಬಿಕೆಗಳ ಪ್ರಕಾರ, ಕಾಂಚೀಪುರಂನ ಶ್ರೀ ಕಾಮಾಕ್ಷಿ ಅಮ್ಮನ್ ದೇವಸ್ಥಾನವು ಅನಾದಿ ಕಾಲದಿಂದಲೂ ಇದೆ. ಕಾಮಾಕ್ಷಿ ಎಂಬುದು ಕಾ-ಸರಸ್ವತಿ, ಮಾ-ಲಕ್ಷ್ಮಿ ಮತ್ತು ಅಕ್ಷ-ಕಣ್ಣುಗಳು ಎಂಬ ಮೂರು ಪದಗಳ ಸಂಯೋಜನೆಯಾಗಿದೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ದೇವಾಲಯದ ಹೆಸರು ಲಕ್ಷ್ಮಿ ಮತ್ತು ಸರಸ್ವತಿ ದೇವತೆಗಳಿಂದ ಸಂಕೇತಿಸಲ್ಪಟ್ಟ ದೇವತೆಯನ್ನು ಸೂಚಿಸುತ್ತದೆ.
ಕಾಂಚೀಯನ್ನು ನಾಭಿಸ್ಥಾನ ಎಂದೇಕೆ ಕರೆಯುತ್ತಾರೆ?
ಕಾಂಚೀಪುರಂನ ಶ್ರೀ ಕಾಮಾಕ್ಷಿ ಅಮ್ಮನ್ ದೇವಸ್ಥಾನವು 51 ಶಕ್ತಿ ಪೀಠಗಳಲ್ಲಿ ಪ್ರಮುಖವಾದದ್ದು. 18 ಮಹಾ ಶಕ್ತಿಪೀಠಗಳ ಪೈಕಿ 2ನೇಯದ್ದು. ಪುರಾಣಗಳ ಪ್ರಕಾರ, ಈ ಸ್ಥಳವು ನಾಬಿಸ್ಥಾನ ಅಥವಾ ಭೂಮಿಯ ಕೇಂದ್ರ ಸ್ಥಾನ ಅಂದರೆ ಮಧ್ಯಭಾಗ ಎಂದು ನಂಬಲಾಗಿದೆ.
ಭಂಡಾಸೂರನನ್ನು ಸಂಹರಿಸಿದ ಕಾಮಾಕ್ಷಿ
Image Credits : Pinterest
ಪುರಾಣಗಳ ಪ್ರಕಾರ ಅಸುರ ಭಂಡಾಸುರನನ್ನು ಕೊಲ್ಲಲು ಕಾಮಾಕ್ಷಿ ದೇವಿಯು ಜನ್ಮ ಪಡೆದಳು ಎಂದು ನಂಬಲಾಗಿದೆ. ಅವಳು ಕನ್ಯಾ ಸ್ವರೂಪ ಪಡೆದು ಈ ದೇವಾಲಯದಲ್ಲಿ ವಾಸಿಸುತ್ತಿದ್ದಳು. ಹೀಗಾಗೆ ಇಲ್ಲಿನ ದೇವತೆ ಸ್ವಯಂಭು ಎಂದು ನಂಬಲಾಗಿದೆ. ದೇವಿಯು ಈ ದೇಗುಲದಲ್ಲಿ ಸ್ತುಲಾ, ಸುಕ್ಷಮಾ, ಮತ್ತು ಶುನ್ಯಾ ಎಂಬ ಅವತಾರಗಳಲ್ಲಿ ಇದ್ದಾಳೆ ಎಂದು ನಂಬಲಾಗಿದೆ.
ಆದಿ ಶಂಕರರಿಂದ ಕಟ್ಟಲ್ಪಟ್ಟ ದೇಗುಲವಿದು
ಕಾಂಚೀಪುರಂನ ಶ್ರೀ ಕಾಮಾಕ್ಷಿ ಅಮ್ಮನ್ ದೇವಾಲಯದ ಇತಿಹಾಸವು 7ನೇ ಶತಮಾನದಷ್ಟು ಹಿಂದಿನದು, ಇದು ಭಾರತದ ಜನಪ್ರಿಯ ಆಧ್ಯಾತ್ಮಿಕ ಗುರು ಆದಿ ಶಂಕರಾಚಾರ್ಯರ ಪ್ರವಚನಗಳ ಸಂಕೇತವಾಗಿ ಸ್ಥಾಪನೆಯಾಯಿತು.
ಐತಿಹಾಸಿಕ ಅಂಕಿ ಅಂಶಗಳು ಹೇಳುವಂತೆ ಗುರುಗಳು ಈ ದೇವಾಲಯದ ಶ್ರೀ ಚಕ್ರವನ್ನು ಸ್ಥಾಪಿಸಿದ್ದರು. ಶ್ರೀ ಕಾಮಾಕ್ಷಿ ಅಮ್ಮನ ದೇವಾಲಯವನ್ನು 1600 ವರ್ಷಗಳ ಹಿಂದೆ ಪಲ್ಲವರು ನಿರ್ಮಿಸಿದರೆಂದು, ಆ ಬಳಿಕ ಈ ಪ್ರದೇಶವನ್ನು ಆಳಿದ ಚೋಳ ಹಾಗೂ ವಿಜಯನಗರ ಅರಸರು ಜೀರ್ಣೋದ್ಧಾರ ಮಾಡಿದರೆಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.
Image credits : https://ift.tt/3wn4uoa
ಪದ್ಮಾಸನದಲ್ಲಿ ಕುಳಿತಿದ್ದಾಳೆ ಕಾಮಾಕ್ಷಿ!
ಈ ದೇಗುಲದ ವಿಶೇಷತೆ ಎಂದರೆ ದೇವಿಯು ನಿಂತಿರುವ ಭಂಗಿಯಲಿಲ್ಲ. ಬದಲಾಗಿ ಪದ್ಮಾಸನದಲ್ಲಿ ಕುಳಿತಿದ್ದಾಳೆ. ಇದು ಶಾಂತಿ ಮತ್ತು ಸಮೃದ್ಧಿಯನ್ನು ಸೂಚಿಸುವ ಯೋಗಿ ಭಂಗಿಯಾಗಿದೆ. ದೇವಿಯು ತನ್ನ ತೋಳುಗಳಲ್ಲಿ ಕಬ್ಬಿನ ಜಲ್ಲೆ ಹಾಗೂ ಐದು ಹೂವುಗಳನ್ನು ಹಿಡಿದಿದ್ದಾಳೆ. ಹೂವಿನ ನಡುವೆ ಗಿಳಿ ಕೂಡ ಇದೆ.
ಕಾಂಚೀಪುರಂನ ವಿಶೇಷತೆ ಎಂದರೆ ಇಲ್ಲಿ ಶಿವ ಹಾಗೂ ವಿಷ್ಣುವಿನ ನೂರಾರು ದೇಗುಲಗಳಿವೆ. ಆದರೆ ದೇವಿಗೆಂದು ಇರುವುದು ಕಾಮಾಕ್ಷಿ ಅಮ್ಮನ ದೇಗುಲ ಮಾತ್ರ. ನೂರಾರು ದೇಗುಲಗಳಿರುವ ಈ ಊರಿನಲ್ಲಿ ಒಂದೇ ಒಂದು ದೇಗುಲವಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಪುತ್ರ ಸಂತಾನಕ್ಕಾಗಿ ದಶರಥನೇ ಇಲ್ಲಿ ಬೇಡಿದ್ದ!
ಶ್ರೀ ರಾಮ, ಲಕ್ಷ್ಮಣರ ತಂದೆ, ಸೂರ್ಯವಂಶದ ದೊರೆ ದಶರಥ ಮಹಾರಾಜನು ಪುತ್ರ ಸಂತಾನಕ್ಕಾಗಿ ಇಲ್ಲಿ `ಪುತ್ರ ಕಾಮೇಚ ಯಜ್ಞ'ವನ್ನು ಮಾಡಿದ್ದನೆಂದು, ಆ ಬಳಿಕ ಆತನಿಗೆ 4 ಪುತ್ರರು ಜನಿಸಿದರು ಎಂದು ನಂಬಲಾಗಿದೆ. ಮಾರ್ಕಂಡೇಯ ಪುರಾಣದ ಪ್ರಕಾರ, ಕಾಮಾಕ್ಷಿ ದೇವಿಯೇ ಸೂರ್ಯವಂಶದ ಕುಲದೇವತೆ ಎನ್ನಲಾಗಿದೆ.
ಇದೇ ಕಾರಣದಿಂದಾಗಿ ಮಕ್ಕಳಾಗದವರು ಕಾಂಚೀಪುರದ ಕಾಮಾಕ್ಷಿ ಅಮ್ಮನಲ್ಲಿ ಬೇಡಿಕೊಂಡರೆ ಅವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.
Image credits : https://ift.tt/3wn4uoa
from ಸುದ್ದಿ - Planet Tv https://ift.tt/3bFKPI0
May 20, 2021 at 01:56PM
