ಶನಿದೆಸೆಯಿಂದ ಉಂಟಾಗುವ ಸಮಸ್ಯೆಗಳೇನು..? ಅದಕ್ಕೇನು ಪರಿಹಾರ..?
source and pic credit: https://ift.tt/2LHLaKz
ಶನಿ ದೆಸೆ ಎಂದರೆ ಎಲ್ಲರಿಗೂ ಭಯ. ಶನಿಯ ಹೆಸರು ಕೇಳಿದಾಕ್ಷಣ, ಯಾವ ರೀತಿಯ ಕಷ್ಟಗಳನ್ನು ಎದುರಿಸಬೇಕಾದೀತೋ ಎ<ಬ ಚಿಂತೆ ಕಾಡುತ್ತದೆ. ಕರ್ಮಕ್ಕೆ ತಕ್ಕ ಫಲವನ್ನು ನೀಡುವವನು ಶನಿದೇವ. ಶನಿಯ ದೃಷ್ಟಿ ಬೀರಿದ ಮೇಲೆ ಸಂಕಷ್ಟ ತಪ್ಪಿದ್ದಲ್ಲ ಎಂದು ಹೇಳಲಾಗುತ್ತದೆ.ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುವಂತೆ ಜಾತಕದಲ್ಲಿ ಶನಿಯ ಅಶುಭ ಪ್ರಭಾವ ಬೀರಲು ಆರಂಭವಾದಾಗ ಅನೇಕ ಕಷ್ಟ-ನಷ್ಟಗಳನ್ನು ಎದುರಾಗುತ್ತವೆ. ವ್ಯಕ್ತಿಯ ಜಾತಕದಲ್ಲಿ ಶನಿದೆಸೆ, ಶನಿ ಮಹಾದೆಸೆಯು ನಡೆಯುತ್ತಿದ್ದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಜಾತಕದಲ್ಲಿ ಶನಿ ಕೆಟ್ಟ ಸ್ಥಿತಿಯಲ್ಲಿದ್ದಾಗ ಅನಾರೋಗ್ಯ, ಆರ್ಥಿಕ ಸಮಸ್ಯೆ, ಉದ್ಯೋಗ ಸಮಸ್ಯೆ ಇವೆಲ್ಲವೂ ಎದುರಾಗುತ್ತದೆ. ಇದರಿಂದ ಜೈಲಿಗೆ ಹೋಗುವುದು, ಆಸ್ಪತ್ರೆ ಸೇರುವುದು, ಉದ್ಯೋಗ ತೊರೆಯುವುದು ಈ ಮೊದಲಾದ ಸಮಸ್ಯೆಗಳು ಉಂಟಾಗುತ್ತವೆ. ಆದರೆ ಶನಿಯು ಶುಭ ಸ್ಥಿತಿಯಲ್ಲಿದ್ದಾಗ ಯಾವುದೇ ವಿಘ್ನವಿಲ್ಲದೆ ಎಲ್ಲವೂ ಶುಭಕರವಾಗುತ್ತದೆ.ಶನಿಯು ಕೆಟ್ಟ ಹಂತಕ್ಕೆ ಹೋದರೆ ಅದರ ದುಷ್ಪರಿಣಾಮಗಳನ್ನು ತಡೆಯಲು ಜ್ಯೋತಿಷಿಗಳು ಹಲವು ಮಾರ್ಗಗಳನ್ನು ಸೂಚಿಸಿದ್ದಾರೆ.
source and pic credit: https://ift.tt/3vUmtBX
ಶನಿದೆಸೆ ಎಂದರೇನು..?
ಹಿಂದೂ ಧರ್ಮದಲ್ಲಿ ಬಳಸುವ ಪದದೆಸೆ. ಇದು ಒಂದು ಕಾಲಾವಧಿಯನ್ನು ಸೂಚಿಸುತ್ತದೆ.ಇದು ಗ್ರಹಗಳ ಚಲನೆಯನ್ನು, ಜನ್ಮ ಕುಂಡಲಿಯಲ್ಲಿ ಗ್ರಹಗಳ ವಿಶಿಷ್ಠ ಸ್ಥಾನಗಳನ್ನು ತಿಳಿಸುತ್ತದೆ. ದೆಸೆ ಒಂದು ನಿರ್ದಿಷ್ಟ ಸಮಯವನ್ನು ಹೊಂದಿರುತ್ತದೆ. ಅದು ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆಎಂದು ನಂಬಲಾಗುತ್ತದೆ. ಶನಿ ಮಹಾದೆಸೆ ಎನ್ನುವುದು ಜನ್ಮವಾದಾಗ ಚಂದ್ರನು ಯಾವ ರಾಶಿಯಲ್ಲಿರುತ್ತಾನೋ, ಆ ರಾಶಿಯಲ್ಲಿ ಶನಿ ಇದ್ದರೆ ದೆಸೆ ಆರಂಭವಾಗುತ್ತದೆಎಂದರ್ಥ. ಶನಿ ಮಹಾದೆಸೆ ಸಾಮಾನ್ಯವಾಗಿ 19 ವರ್ಷಗಳು.
ಶನಿಯು ನಾಲ್ಕನೇ ಅಥವಾ ಎಂಟನೇ ಮನೆಯಲ್ಲಿ ಇದ್ದಾಗ ಶನಿ ದೆಸೆ ಕಾಡುತ್ತದೆಎಂದು ಹೇಳುತ್ತಾರೆ. ಇದರ ಅವಧಿ ಎರಡೂವರೆ ವರ್ಷ. ಶನಿದೆಸೆಯಿದ್ದ ಸಮಯದಲ್ಲಿ ವ್ಯಕ್ತಿ ಯಾವುದೇ ಕೆಲಸ ಮಾಡಿದರೂ ಯಶಸ್ಸು ದೊರಕುವುದಿಲ್ಲ. ಮುಟ್ಟಿದ ಎಲ್ಲಾ ವಿಷಯಗಳಲ್ಲೂ ಸೋಲುಂಟಾಗುತ್ತದೆ. ಹೀಗಾಗಿಯೇ ಶನಿದೆಸೆಯಿದ್ದ ಸಮಯದಲ್ಲಿ ಜ್ಯೋತಿಷ್ಯರ ಮೊರೆಹೋಗಿ ಪರಿಹಾರ ಮಾಡುತ್ತಾರೆ.
source and pic credit: https://ift.tt/2ZXE6RX
ಪುರಾಣಗಳಲ್ಲೂ ಶನಿದೆಸೆಯಿಂದ ತೊಂದರೆಕ್ಕೊಳಗಾದ ರಾಜರ ಬಗ್ಗೆ ಉಲ್ಲೇಖಿಸಲಾಗಿದೆ. ರಾಮನು ರಾಜನಾಗಿದ್ದರೂ, ಅವನು ತನ್ನ ಇಡೀ ರಾಜ್ಯವನ್ನು, ಸಂಪತ್ತನ್ನು ತನ್ನ ಸಹೋದರನಿಗೆ ಬಿಟ್ಟು ವನವಾಸಕ್ಕೆ ತೆರಳಿ ಕಷ್ಟಗಳನ್ನು ಅನುಭವಿಸಿದನು. ಮಹಾಭಾರತದಲ್ಲಿ ಪಾಂಡವರು ಕಾಡಿನಲ್ಲಿ ಅಜ್ಞಾತವಾಸ ಅನುಭವಿಸಿದರು.ಪೌರಾಣಿಕ ಕಥೆಗಳ ಪ್ರಕಾರ ಶಿವನೇ ಪಾಪಿಗಳನ್ನು ಶಿಕ್ಷಿಸಲು ಶನಿಗೆ ಈ ಜವಾಬ್ದಾರಿ ಕೊಟ್ಟನು ಎಂದು ಹೇಳಲಾಗುತ್ತದೆ.ನೀವು ಈ ಹಿಂದೆ ಮಾಡಿದ ಕರ್ಮ ಫಲಗಳಿಗೆ ಅನುಸಾರವಾಗಿ ಅದರ ಫಲವನ್ನು ಅನುಭವಿಸಬೇಕಾಗುತ್ತದೆಎಂದು ಹೇಳಲಾಗುತ್ತದೆ.
ಶನಿದೆಸೆಯಿಂದ ಪಾರಾಗಲು ಏನು ಮಾಡಬೇಕು..?

source and pic credit: https://ift.tt/2FLzuri
ಶನಿ ಕಾಟದಿಂದ ಪಾರಾಗಲು ಮಹಾದೆಸೆ ಹವನ ಮಾಡಿಸುವುದು ಉತ್ತಮ ಎಂದು ಜ್ಯೋತಿಷಿಗಳು ಹೇಳುತ್ತಾರೆ.ಶನಿ ಪರಿಹಾರ ಮಂತ್ರಗಳನ್ನು 23 ಸಾವಿರ ಬಾರಿ ಪಠಿಸುವುದು ಉತ್ತಮ ಪರಿಹಾರ, ಈ ಮಂತ್ರವನ್ನು ಪಠಿಸುವುದರಿಂದ ಶನಿಯ ದುಷ್ಪರಿಣಾಮಗಳಿಂದ ಪಾರಾಗಬಹುದಾಗಿದೆ. ಶುಕ್ಲಪಕ್ಷದ ಪ್ರತಿ ಶನಿವಾರ 108 ಬಾರಿ ಪಠಿಸುವುದೂ ಕೂಡ ಉತ್ತಮ ಪರಿಹಾರ.ಶುಕ್ಲ ಪಕ್ಷದ ಶನಿವಾರದಂದು ಶನಿ ಸ್ತೋತ್ರವನ್ನು ಪಠಿಸುವುದರಿಂದ ಶನಿದೆಸೆಯಿಂದ ಮುಕ್ತಿ ಪಡೆದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಹನುಮಾನ್ ಚಾಲೀಸ ಪಠಿಸುವುದೂ ಕೂಡ ಶನಿ ಕಾಟಕ್ಕೆ ಉತ್ತಮ ಪರಿಹಾರಎನ್ನಲಾಗುತ್ತದೆ. ಅಲ್ಲದೆ, ಪ್ರತಿ ಶನಿವಾರ ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಉರಿಸಿಡುವುದು ಉತ್ತಮ.
source and pic credit: https://www.patrika.com
ಶಿವನಿಗೆ ರುದ್ರಾಭಿಷೇಕ ಹಾಗೂ ಪೂಜೆ ಮಾಡುವುದು ಉತ್ತಮ ಫಲವನ್ನು ನೀಡುತ್ತದೆ. ಸೋಮವಾರ ಮತ್ತು ಶನಿವಾರದ ದಿನದಂದು ಶಿವಲಿಂಗಕ್ಕೆ ನೀರಿನ ಅಭಿಷೇಕ ಮಾಡುವುದೂ ಕೂಡ ಉತ್ತಮ ಎಂದು ಪರಿಗಣಿಸಲಾಗಿದೆ.ಶನಿವಾರದ ದಿನ ಹಾಲು, ಎಳ್ಳು ಹಾಗೂ ನೀರನ್ನು ಶಿವನಿಗೆ ಅರ್ಪಿಸಬೇಕು. ಶನಿಯನ್ನು ಪೂಜಿಸುವ ಸಮಯದಲ್ಲಿ ಮದ್ಯ, ಮಾಂಸ ಸೇವಿಸಬೇಡಿ. ಶನಿಯ ಮಹಾದೆಸೆಯಿಂದ ಹೊರಬರಲು ಕಪ್ಪು ಬಟ್ಟೆಯನ್ನು ಧರಿಸುವುದು ಉತ್ತಮ.
source and pic credit: https://ift.tt/2T3m4iy
ಇಷ್ಟೇ ಅಲ್ಲದೆಶನಿವಾರದಂದು ಶನಿದೇವನಿಗೆ ನೀಲಿ ಬಣ್ಣದ ಶಂಖಪುಷ್ಪವನ್ನು ಅರ್ಪಿಸಬೇಕು. ಕಪ್ಪು ಬಣ್ಣದ ಬತ್ತಿಯಲ್ಲಿ ಎಳ್ಳೆಣ್ಣೆ ದೀಪವನ್ನು ಹಚ್ಚಬೇಕುಎಂದು ಹೇಳುತ್ತಾರೆ. ಪ್ರತಿನಿತ್ಯ ಶನಿ ಸ್ತೋತ್ರವನ್ನು ಪಠಿಸುವುದು ಉತ್ತಮ.ಇದರಿಂದ ಮನಸ್ಸಿನಲ್ಲಿರುವ ಗೊಂದಲ ಪರಿಹಾರವಾಗಿ ನೆಮ್ಮದಿ ಸಿಗುತ್ತದೆ ಎಂದು ಹೇಳುತ್ತಾರೆ. ಶನಿ ದೆಸೆ ಸಮಯದಲ್ಲಿ ಹೆಚ್ಚು ಆತಂಕಕ್ಕೆ ಒಳಗಾಗದೆ, ದೇವರನ್ನು ಪ್ರಾರ್ಥಿಸಿಎಲ್ಲವೂ ಒಳಿತಾಗುತ್ತದೆ.
from ಸುದ್ದಿ - Planet Tv https://ift.tt/3wgBXAv
May 20, 2021 at 09:18AM