ಆಕಳಿಕೆ ಬರುವುದು ನಿದ್ದೆ ಆಗದೇ ಇರುವುದರಿಂದ, ಸೋಮಾರಿತನದಿಂದಲ್ಲ..ಮತ್ಯಾಕೆ..?
source and pic credit: https://cathe.com
ಮನುಷ್ಯನ ಜೀವನದಲ್ಲಿ ಆಕಳಿಸುವುದು, ತೂಕಡಿಸುವುದು, ಏಳುವುದು, ಬೀಳುವುದು ಇದೆಲ್ಲಾ ಸಹಜಕ್ರಿಯೆಗಳು. ಆದರೆ ಅದರ ಹಿಂದಿರುವ ಕಾರಣಗಳು ಮಾತ್ರ ನಮ್ಮ ಊಹೆಗೂ ನಿಲುಕದ್ದು. ಎಲ್ಲರಿಗೂ ತಿಳಿದಂತೆ ಆಕಳಿಸುವುದು ಬಹಳ ಸಾಮಾನ್ಯ ಹಾಗೂ ಸಹಜ ಕ್ರಿಯೆ. ಹಲವರು, ಹಲವುಸಂದರ್ಭಗಳಲ್ಲಿಆಕಳಿಸುತ್ತಾರೆ. ಕೆಲವುಗಂಭೀರವಾದಸಂದರ್ಭಗಳಲ್ಲಿಆಕಳಿಸುವುದುನಗೆಪಾಟಲಿಗೀಡಾಗುತ್ತದೆ. ಪ್ರಮುಖಮೀಟಿಂಗ್ ನಲ್ಲೋ, ಸತ್ತಮನೆಯಲ್ಲೋಆಕಳಿಸಿದರೆಅದೂಅಭಾಸವೇಸರಿ.
source and pic credit:https://ift.tt/2x2scqQ
ಆಕಳಿಸುವವರನ್ನು ಸೋಮಾರಿ ಎನ್ನುವುದನ್ನು ನಾವು ನೋಡಿದ್ದೇವೆ.ಆದರೆ ನಿಮಗೆ ಗೊತ್ತಾ, ಆಕಳಿಕೆಗೂ ಸೋಮಾರಿತನ ಅಥವಾ ನಿದ್ರೆಗೂ ಯಾವುದೇ ಸಂಬಂಧ ಇಲ್ಲ.ವಿಚಿತ್ರವೆಂದರೆ ತಾಯಿಯ ಗರ್ಭದಲ್ಲಿ ಭ್ರೂಣ11ನೇ ವಾರದಲ್ಲಿಯೂ ಆಕಳಿಸುತ್ತದೆಯಂತೆ. ಕೆಲವು ವೈದ್ಯರುಗಳು, ಆಕಳಿಕೆ ಜ್ವರದ ತೀಕ್ಷ್ಣತೆಯನ್ನು ಕಡಿಮೆ ಮಾಡುವ ಒಂದು ಕ್ರಿಯೆ ಎನ್ನುತ್ತಾರೆ. ಆಕಳಿಕೆಯ ಮೂಲಕ ದೇಹವು ತನಗೆ ಅವಶ್ಯವಿರುವ ಹೆಚ್ಚುವರಿ ಆಮ್ಲಜನಕವನ್ನು ಪಡೆಯುತ್ತದೆ ಎಂದು ವಿಜ್ಞಾನಿಗಳು ಪ್ರತಿಪಾದಿಸುತ್ತಾರೆ.
source and pic credit: https://www.asiaone.com
ಮಕ್ಕಳುಶಾಲೆಯಲ್ಲಿ ಪಾಠಕೇಳುವಾಗ, ಯುವಕರುಇಷ್ಟವಿಲ್ಲದಪೂಜೆಪುನಸ್ಕಾರಕ್ಕೆಹೋದಾಗ, ಹಿರಿಯರುಸಿನಿಮಾಥಿಯೇಟರ್ಗೆಹೋದಾಗಹೀಗೆಹಲವರುಹಲವುಸಂದರ್ಭದಲ್ಲಿಆಕಳಿಸುತ್ತಾರೆ. ಸಾಮಾನ್ಯವಾಗಿಸೋಮಾರಿತನಉಂಟಾದರೆ, ನಿದ್ದೆಕಡಿಮೆಯಾದರೆಆಕಳಿಕೆಬರುತ್ತದೆಎಂದುಹೇಳುತ್ತಾರೆ. ಆದರೆನಿಜವಾಗಿಯೂಆಕಳಿಸುವುದರಹಿಂದಿರುವಕಾರಣಗಳುಅದಲ್ಲ.
ತೂಕಡಿಕೆ ಬಂದಾಗಲೂ ಆಕಳಿಕೆ ಬರುತ್ತದೆ ಎಂಬುದು ಮತ್ತೊಂದು ಅನಿಸಿಕೆ. ಆದರೆ ಇದು ಶುದ್ಧ ಸುಳ್ಳುಎನ್ನುತ್ತದೆ ಅಧ್ಯಯನ. ಬಹಳಷ್ಟು ಮಂದಿ ರಾತ್ರಿಯಿಡೀ ಮಲಗಿದ್ದರೂ ಬೆಳಗ್ಗೆಯೆದ್ದು ಆಕಳಿಸುತ್ತಾರೆ. ಹೀಗಾಗಿ ಇದು ನಿದ್ದೆಯಿಂದಲ್ಲ ಅನ್ನೋದು ಸ್ಪಷ್ಟವಾಗುತ್ತದೆ.
source and pic credit: https://www.freepik.com
ವೈದ್ಯರುಗಳು, ಆಕಳಿಕೆ ಜ್ವರದ ತೀಕ್ಷ್ಣತೆಯನ್ನು ಕಡಿಮೆ ಮಾಡುವ ಒಂದು ಕ್ರಿಯೆ ಎಂದು ವ್ಯಾಖ್ಯಾನಿಸುತ್ತಾರೆ. ಆಕಳಿಕೆಯ ಮೂಲಕ ದೇಹವು ತನಗೆ ಅವಶ್ಯವಿರುವ ಹೆಚ್ಚುವರಿ ಆಮ್ಲಜನಕವನ್ನು ಪಡೆಯುತ್ತದೆ ಎಂದು ಪ್ರತಿಪಾದಿಸುತ್ತಾರೆ. ಮನುಷ್ಯನ ಆಕಳಿಕೆಯ ಅವಧಿ ಕೇವಲ 6 ಸೆಕೆಂಡ್. ಮನುಷ್ಯ ಆಕಳಿಸುವ ಸಂದರ್ಭದಲ್ಲಿ ಹೃದಯದ ಬಡಿತ ಹೆಚ್ಚಾಗಿರುತ್ತದೆಎಂದು ಹೇಳಲಾಗುತ್ತದೆ.
20 ವಾರಗಳ ಭ್ರೂಣವೂಆಕಳಿಸುತ್ತದೆ
source and pic credit: Times of India
ಭ್ರೂಣದ4ಡಿ ಅಲ್ಟ್ರಾಸೌಂಡ್ ಇಮೇಜ್ನ ಅದ್ಯಯನಗಳ ಪ್ರಕಾರ ಅತಿ ಕಡಿಮೆ ಅಂದರೆ 11 ವಾರದ ಭ್ರೂಣಕ್ಕೂ ಆಕಳಿಕೆಯ ವಿದ್ಯೆಕರಗತವಾಗಿರುತ್ತದೆ ಎನ್ನಲಾಗುತ್ತದೆ. ವಿಜ್ಞಾನಿಗಳು ಇದನ್ನು ಮೆದುಳು ಬೆಳವಣಿಗೆಯ ಆರಂಭವೆಂದು ಗುರುತಿಸಿದ್ದಾರೆ.
ಆಕಳಿಕೆ ಒಂದು ರೀತಿಯಲ್ಲಿ ಸಾಂಕ್ರಾಮಿಕ
source and pic credit: https://www.bbc.com
ಆಕಳಿಕೆ ಸಾಂಕ್ರಾಮಿಕ ಎಂಬುದನ್ನು ಎಲ್ಲರೂ ಗಮನಿಸಿರಬಹುದು.ಅಧ್ಯಯನದಲ್ಲಿ ಕಂಡುಕೊಂಡಂತೆ ಗುಂಪಿನ ಯಾರಾದರೊಬ್ಬರು ಆಕಳಿಸಿದರೆ ಸುತ್ತಮುತ್ತಲಿರುವ ಐದಾರು ಮಂದಿ ಕೆಲವೇ ನಿಮಿಷಗಳಲ್ಲಿ ಆಕಳಿಸುತ್ತಾರಂತೆ.
ಇನ್ನು, ನಿಮಗೆ ರಾತ್ರಿ ಪೂರ್ತಿ ನಿದ್ದೆಯಾಗಿದ್ದು, ನಿಮಗೆ ಹಗಲು ಪೂರ್ತಿ ಸುಸ್ತಾಗುವ ಅನುಭವವಾಗುತ್ತಿದ್ದರೆ, ಆಗಿಂದಾಗೆ ಆಕಳಿಕೆ ಬರುತ್ತಿದ್ದರೆ ಇದು ಹೃದಯ ಸಂಬಂಧಿ ಕಾಯಿಲೆಯ ಲಕ್ಷಣವೂ ಇರಬಹುದು ಎನ್ನುತ್ತಾರೆ ತಜ್ಞರು. ಈ ರೀತಿ ವಿನಾಕಾರಣ ಪದೇ ಪದೇ ಆಕಳಿಕೆ ಬರುವುದರಿಂದ ಹಾರ್ಟ್ ಅಟ್ಯಾಕ್, ಸ್ಟ್ರೋಕ್ ಬರುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತದೆ.
ಆಕಳಿಕೆಯ ಪ್ರಯೋಜನಗಳುsource and pic credit: https://ift.tt/2U6d3k8
ಕಾರಣ ಏನೇ ಇರಲಿ ಆದರೆ ಈ ರೀತಿ ಆಕಳಿಸುವುದರಿಂದ ನಮ್ಮ ದೇಹಕ್ಕೆ, ಆರೋಗ್ಯಕ್ಕೆ ಹಲವು ಪ್ರಯೋಜನಗಳಿದೆ ಎಂದು ಹೇಳಲಾಗುತ್ತದೆ. ಆಕಳಿಸಿದಾಗಮೆದುಳು ತಂಪಾಗುತ್ತದಂತೆ. ಹಾಗಾಗಿ ಇದರಿಂದ ನಮ್ಮ ಮೆದುಳಿನ ಆರೋಗ್ಯ ಯಾವಾಗಲೂ ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ನಾವು ಮಾನಸಿಕವಾಗಿ ಹೆಚ್ಚು ಸಧೃಡರಾಗುತ್ತೇವೆ ಎಂದು ತಿಳಿದುಬಂದಿದೆ.
from ಸುದ್ದಿ - Planet Tv https://ift.tt/3w7Wqr9
May 17, 2021 at 04:17PM