ಭಾರತದಲ್ಲಿ ಇಂದಿನಿಂದ ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ ಬ್ಯಾನ್ ಆಗುತ್ತಾ..?
source and pic credit: google.com
ಹೇಳಿಕೇಳಿ ಇದು ಸೋಷಿಯಲ್ ಮೀಡಿಯಾ ಜಮಾನ. ಮೊಬೈಲ್ ಫೋನ್, ಸಾಮಾಜಿಕ ಜಾಲತಾಣಗಳಿಲ್ಲದೆ ಮನುಷ್ಯ ಬದುಕುವುದೂ ಕಷ್ಟ ಎಂಬಂತಹ ಪರಿಸ್ಥಿತಿ. ನೆಂಟರಿಷ್ಟರು, ಸ್ನೇಹಿತರು, ನೆರೆಹೊರೆಯವರು ಎಲ್ಲರ ಕಾಂಟ್ಯಾಕ್ಟ್ ಇರುವುದು ಸೋಷಿಯಲ್ ಮೀಡಿಯಾದ ಮೂಲಕವೇ. ಮದುವೆ-ಮುಂಜಿ, ಬರ್ತ್ಡೇ, ಪೂಜೆ ಹೀಗೆ ಯಾರ ಮನೆಯಲ್ಲಿ ಏನಾದ್ರೂ ಗೊತ್ತಾಗೋದು ಸೋಷಿಯಲ್ ಮೀಡಿಯಾದ ಮೂಲಕ. ಪಕ್ಕದ್ಮನೆಯಲ್ಲೇ ಯಾರಾದ್ರೂ ಸತ್ತು ಹೋದರೂ ಸಾಮಾಜಿಕ ಜಾಲತಾಣದಿಂದ ತಿಳಿದುಕೊಳ್ಳೋ ಸಮಾಜದಲ್ಲಿ ನಾವಿದ್ದೇವೆ.
ಮನುಷ್ಯನ ಜೀವನದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಅವಶ್ಯಕ ಮತ್ತು ಅನಿವಾರ್ಯವಾಗಿಬಿಟ್ಟಿದೆ. ಇವತ್ತಿನ ದಿನಗಳಲ್ಲಿ ಬಹುತೇಕ ಎಲ್ಲಾ ಸಂವಹನಗಳೂ ಸೋಷಿಯಲ್ ಮೀಡಿಯಾದ ಮೂಲಕವೇ ನಡೆಯುತ್ತದೆ. ಜಗತ್ತಿನ ಯಾವ ಮೂಲೆಯಲ್ಲಿ ಏನಾದರೂ ಸಾಮಾಜಿಕ ಜಾಲತಾಣದ ಮೂಲಕ ಥಟ್ಟಂತ ಮಾಹಿತಿ ದೊರೆಯುತ್ತದೆ. ಸೋಷಿಯಲ್ ಮೀಡಿಯಾದ ವೈರಲ್ ಆಗೋ ಟ್ರೆಂಡ್ ನಿಂದ ಹಲವು ಒಳ್ಳೆಯ ಕೆಲಸಗಳೂ, ಹಲವು ಕೆಟ್ಟ ಕೆಲಸಗಳೂ ಆಗುತ್ತಿದೆ. ಅನ್ಯಾಯವಾಗುವ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳೇ ಪ್ರಮುಖ ಸಾಕ್ಷಿಯಾಗಿ ಕಾರ್ಯನಿರ್ವಹಿಸುತ್ತಿವೆ.
source and pic credit: https://ift.tt/3eEMkWJ
ಮನುಷ್ಯ ಸೋಷಿಯಲ್ ಮೀಡಿಯಾಗಳಿಗೆ ಅಕ್ಷರಶಃ ಅಡಿಕ್ಟ್ ಆಗಿಬಿಟ್ಟಿದ್ದಾನೆ. ಐದು ನಿಮಿಷ ನೆಟ್ ವರ್ಕ್ ಸಿಗದಿದ್ದರೂ ಎಲ್ಲಿ ಏನಾಗುತ್ತಿದೆ ಎಂದು ತಿಳಿಯಲು ಸಾಧ್ಯವಿಲ್ಲ. ಸೋಷಿಯಲ್ ಮೀಡಿಯಾಗಳನ್ನು ದಿನಕ್ಕೆ ಹತ್ತು ಬಾರಿ ಇಣುಕಿ ನೋಡದೆ ದಿನವೇ ಪೂರ್ತಿಯಾಗುವುದಿಲ್ಲ. ದೈನಂದಿನ ಆಗುಹೋಗುಗಳನ್ನು ಜನರು ಸೋಷಿಯಲ್ ಮೀಡಿಯಾದಲ್ಲಿ ದಾಖಲಿಸುವುದನ್ನು ರೂಢಿ ಮಾಡಿಕೊಂಡಿದ್ದಾರೆ.ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ ಪ್ಲಾಟ್ಫಾರ್ಮ್ಗಳು ತಮ್ಮದೇ ಆದ ಬಳಕೆದಾರರನ್ನು ಹೊಂದಿವೆ. ಆದರೆ ಈ ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್ ಭಾರತದಲ್ಲಿ ಬ್ಲಾಕ್ ಆಗಲಿದೆ ಅನ್ನೋ ಸುದ್ದಿ ಕೇಳಿ ಬರುತ್ತಿದೆ.
ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ ಬ್ಯಾನ್..?
source and pic credit: https://ift.tt/2FZSdN6
ಕೇಂದ್ರ ಸರ್ಕಾರ ಸೂಚಿಸಿರುವ ಆದೇಶಗಳನ್ನು ಪಾಲಿಸದ ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ನಿಷೇಧದ ಭೀತಿ ಎದುರಾಗಿದೆ. ಫೆಬ್ರವರಿಯಲ್ಲಿ ಹೊಸ ಐಟಿ ನಿಯಮವನ್ನು ರೂಪಿಸಲಾಗಿತ್ತು. ಆ ನಿಯಮಗಳ ಪಾಲನೆಗೆ ಮೂರು ತಿಂಗಳ ಗಡುವು ನೀಡಲಾಗಿತ್ತು. ಆದರೆ, ಈಗ ಮೂರು ತಿಂಗಳ ಗಡುವು ಮುಕ್ತಾಯವಾಗಿರುವುದರಿಂದ ಸಾಮಾಜಿಕ ಜಾಲತಾಣಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಏನಿದು ಐಟಿ ನಿಯಮ..?
source and pic credit: https://ift.tt/3wqx7Rg
ಫೆಬ್ರವರಿ 25ರಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (ಎಂಇಐಟಿ) ಹೊಸ ಐಟಿ ನಿಯಮದ ಪ್ರಕಾರ ಹಲವು ನಿಯಮಗಳನ್ನು ಜಾರಿ ಮಾಡಿತ್ತು. ಸಾಮಾಜಿಕ ಜಾಲತಾಣಗಳು, ಒಟಿಟಿ ಮಾಧ್ಯಮಗಳಿಗೆ ಸಂಬಂಧಿಸಿದಂತೆ ನಿಯಮ ರೂಪಿಸಲಾಗಿತ್ತು. ಈ ನಿಯಮಗಳ ಪ್ರಕಾರ ಸಾಮಾಜಿಕ ಜಾಲತಾಣಗಳ ಮೇಲ್ವಿಚಾರಣೆಗೆ ಅಧಿಕಾರಿಗಳ ನೇಮಕ, ಭಾರತದಲ್ಲಿ ಅವರ ಹೆಸರು ಮತ್ತು ಸಂಪರ್ಕ ವಿಳಾಸ, ದೂರು ಪರಿಹಾರ, ಆಕ್ಷೇಪಾರ್ಹ ವಿಷಯದ ಮೇಲ್ವಿಚಾರಣೆ, ಆಕ್ಷೇಪಾರ್ಹ ವಿಷಯವನ್ನು ತೆಗೆದುಹಾಕುವುದು ಸೇರಿವೆ. ಇಲ್ಲಿಯವರೆಗೆ, ಕೂ ಸಂಸ್ಥೆ ಹೊರತುಪಡಿಸಿ ಯಾವುದೇ ಕಂಪನಿಯು ಅಂತಹ ಯಾವುದೇ ಅಧಿಕಾರಿಗಳನ್ನು ನೇಮಿಸಿಲ್ಲ ಎಂದು ವರದಿಯಾಗಿದೆ.
ಸಾಮಾಜಿಕ ಜಾಲತಾಣಗಳು ಹಾಗೂ ಒಟಿಟಿಗಳು ಸ್ಥಳೀಯ ಅಹವಾಲು ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ನಿಯಮದಲ್ಲಿ ತಿಳಿಸಲಾಗಿದೆ.. ರಕ್ಷಣೆ, ವಿದೇಶಾಂಗ, ಗೃಹ ಸಚಿವಾಲಯ, ಕಾನೂನು, ವಾರ್ತಾ ಮತ್ತು ಪ್ರಸಾರ, ಐಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯು ನೀತಿ ಸಂಹಿತೆ ಜಾರಿಯ ಮೇಲುಸ್ತುವಾರಿ ವಹಿಸಲಿದೆ ಎಂದು ಹೇಳಲಾಗಿದೆ.
source and pic credit: https://ift.tt/3bRSHpK
ಭಾರತ ಸರ್ಕಾರ ಹೊಸ ಐಟಿ ನಿಯಮಗಳನ್ನು ಜಾರಿ ಮಾಡಿ, ಸೋಷಿಯಲ್ ಮೀಡಿಯಾಗಳು ಈ ಹೊಸ ನಿಯಮಗಳನ್ನು ಸಮರ್ಪಕವಾಗಿ ಜಾರಿ ಮಾಡಲು ಮೂರು ತಿಂಗಳ ಗಡುವನ್ನು ಸಹ ನೀಡಿತ್ತು. ಆದರೆ ಆ ಗಡುವು ಮುಗಿದಿದ್ದರೂ ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ ಹೊಸ ನಿಯಮಗಳನ್ನು ಅಳವಡಿಸುವಲ್ಲಿ ವಿಫಲವಾಗಿವೆ. ಆದರಿಂದ ಭಾರತದಲ್ಲಿ ಈ ಅಪ್ಲಿಕೇಶನ್ಗಳು ಕಾರ್ಯನಿರ್ವಹಿಸುವುದು ಬಹುತೇಕ ಡೌಟ್ ಎಂದು ಹೇಳಲಾಗುತ್ತಿದೆ.
ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳ ದುರುಪಯೋಗವನ್ನು ತಡೆಯಲು ಪ್ರಯತ್ನಿಸಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈ ಹೊಸ ನಿಯಮವನ್ನು ರೂಪಿಸಿದೆ. ಹೊಸ ಐಟಿ ನಿಯಮಗಳ ಅಡಿಯಲ್ಲಿ ಹೆಚ್ಚುವರಿ ಕಟ್ಟುಪಾಡುಗಳನ್ನು ವಿಧಿಸಿದೆ. ಇದರಿಂದಾಗಿ ಸಾಮಾಜಿಕ ಮಾಧ್ಯಮ ಮಧ್ಯವರ್ತಿಯನ್ನು ವ್ಯಾಖ್ಯಾನಿಸಲು ಸರ್ಕಾರವು 50 ಲಕ್ಷ ನೋಂದಾಯಿತ ಬಳಕೆದಾರರನ್ನು ಮಿತಿ ನಿಗದಿಪಡಿಸಿದೆ. ಭಾರತೀಯ ಕೂ ಅಪ್ಲಿಕೇಶನ್ ಸಂಸ್ಥೆ ಹೊರತುಪಡಿಸಿ, ಇತರ ಯಾವುದೇ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳು 50 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರಬಾರದು ಅನ್ನೋ ಹೊಸ ಐಟಿ ನಿಯಮಗಳನ್ನು ಪಾಲಿಸಿಲ್ಲ ಎಂದು ತಿಳಿದುಬಂದಿದೆ.
source and pic credit: https://www.gizbot.com
ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ ಹೊಸ ನಿಯಮಗಳನ್ನು ಅನುಷ್ಠಾನಗೊಳಿಸುವ ಗಡುವು ಮೇ 25ರಂದು ಕೊನೆಗೊಳ್ಳುತ್ತದೆ.ಸಾಮಾಜಿಕ ಮಾಧ್ಯಮ ಕಂಪನಿಗಳು ನಿಯಮವನ್ನು ಪಾಲಿಸದಿದ್ದರೆ, ಭಾರತದ ಅಸ್ತಿತ್ವದಲ್ಲಿರುವ ಕಾನೂನುಗಳ ಪ್ರಕಾರ ಕ್ರಿಮಿನಲ್ ಕ್ರಮಕ್ಕೆ ಹೊಣೆಗಾರರಾಗಬಹುದು ಎಂದು ಹೇಳಲಾಗುತ್ತಿದೆ.
ಫೇಸ್ಬುಕ್ ಸಂಸ್ಥೆಯಿಂದ ನಿಯಮ ಪಾಲನೆ
source and pic credit :https://ift.tt/2gpR0VD
ಸದ್ಯ, ಫೇಸ್ಬುಕ್ ಸಂಸ್ಥೆ ನಿಯಮಗಳನ್ನು ಪಾಲಿಸಲು ಒಪ್ಪಿಗೆ ಸೂಚಿಸಿದೆ. ಐಟಿ ನಿಯಮದ ನೀತಿಗಳನ್ನು ಅನುಸರಿಸಲು ನಾವು ಬದ್ಧರಾಗಿದ್ದೇವೆ. ಫೇಸ್ಬುಕ್ ನಲ್ಲಿ ಮುಕ್ತ ಹಾಗೂ ಸುರಕ್ಷಿತವಾಗಿ ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಜನರ ಆಯ್ಕೆಗೆ ಫೇಸ್ಬುಕ್ ಬದ್ಧವಾಗಿರಲಿದೆ ಎಂದು ಸಂಸ್ಥೆ ತಿಳಿಸಿದೆ. ಕೆಲವು ಸಮಸ್ಯೆಗಳ ಕುರಿತು ಸರ್ಕಾರದ ಜತೆ ಹೆಚ್ಚಿನ ವಿವರಣೆ ಅಗತ್ಯವಿರುವುದರಿಂದ ಚರ್ಚೆಯನ್ನು ಮುಂದುವರಿಸಲಿದ್ದೇವೆ ಎಂದು ಫೇಸ್ಬುಕ್ ಸಂಸ್ಥೆ ತಿಳಿಸಿದೆ. ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಂಗಳು ಈವರೆಗೂ ಹೊಸ ನಿಯಮಗಳನ್ನು ಅಳವಡಿಸಿಕೊಂಡಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
► Subscribe to Planet Tv Kannada
https://www.youtube.com/Planet Tv Kannada
► Follow us on Facebook
https://www.facebook.com/Planettvkannada
► Follow us on Twitter
https://twitter.com/Planettvkannada
► Follow us on Instagram
https://www.instagram.com/planettvkannada
► Follow us on Pinterest
https://www.pinterest.com/Planettvkannada
► Follow us on Koo app
https://www.kooapp.com/planettvkannada
► Follow us on share chat
https://sharechat.com/planettvkannada
► Join us on Telegram
https://t.me/planettvkannada
► Follow us on Tumblr
https://www.tumblr.com/planet-tv-kannada
from ಸುದ್ದಿ - Planet Tv https://ift.tt/3bUafSj
May 26, 2021 at 07:33AM