ಬ್ರಹ್ಮ, ವಿಷ್ಣು, ಮಹೇಶ್ವರರು ನೆಲೆಸಿರುವ ಸ್ಥಳ ತ್ರ್ಯಂಬಕೇಶ್ವರ

ತ್ರ್ಯಂಬಕೇಶ್ವರವು ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ತ್ರಿಂಬಕ್ ಪಟ್ಟಣದಲ್ಲಿನ ಒಂದು ಪ್ರಾಚೀನ ಹಿಂದೂ ದೇವಾಲಯ. ಇದು ನಾಶಿಕ್ ನಗರದಿಂದ 28 ಕಿ.ಮೀ. ದೂರದಲ್ಲಿ ಗೋದಾವರಿ ನದಿಯ ಉಗಮಸ್ಥಾನದ ಬಳಿಯಲ್ಲಿದೆ. ಶಿವದೇವಾಲಯವಿರುವ ಈ ಕ್ಷೇತ್ರವು ದ್ವಾದಶ ಜ್ಯೋತಿಲಿರ್ಂಗಗಳಲ್ಲಿ ಒಂದು.
ಸಮೀಪದಲ್ಲಿನ ಬ್ರಹ್ಮಗಿರಿ ಬೆಟ್ಟದಸಾಲಿನಲ್ಲಿ ಉದ್ಬವಿಸುವ ಗೋದಾವರಿ ನದಿಯು ಭಾರತ ಜಂಬೂದ್ವೀಪದ ಅತಿ ಉದ್ದದ ನದಿಯಾಗಿದೆ. ತ್ರ್ಯಂಬಕೇಶ್ವರದ ಕುಶಾವರ್ತ ಎಂಬ ಕುಂಡದಿಂದ ಮುಂದೆ ಗೋದಾವರಿಯ ಹರಿವು ಸ್ಪಷ್ಟವಾಗುವುದರಿಂದ ಈ ಸ್ಥಾನವನ್ನು ಹಿಂದೂ ಶ್ರದ್ಧಾಳುಗಳು ಪವಿತ್ರವೆಂದು ಭಾವಿಸಿ ಪುಣ್ಯಸ್ನಾನ ಕೈಗೊಳ್ಳುವರು.
ಇಲ್ಲಿ ಜ್ಯೋತಿರ್ಲಿಂಗಕ್ಕಿದೆ ಮೂರು ಮುಖಗಳು!: ತ್ರ್ಯಂಬಕೇಶ್ವರದ ವೈಶಿಷ್ಟ್ಯವೆಂದರೆ ಇಲ್ಲಿನ ಜ್ಯೋತಿರ್ಲಿಂಗವು ಮೂರು ಮುಖಗಳನ್ನು ಹೊಂದಿದ್ದು ಈ ಮುಖಗಳು ಬ್ರಹ್ಮ, ವಿಷ್ಣು ಮತ್ತು ಶಿವನ ಪ್ರತೀಕವಾಗಿವೆ. ಭಾರತದ ಉಳಿದ ಹನ್ನೊಂದು ಜ್ಯೋತಿರ್ಲಿಂಗಗಳೆಲ್ಲವೂ ಶಿವಪ್ರಧಾನವಾಗಿವೆ. ಬ್ರಹ್ಮಗಿರಿ ಬೆಟ್ಟಗಳ ತಪ್ಪಲಿನಲ್ಲಿರುವ ತ್ರ್ಯಂಬಕೇಶ್ವರ ದೇವಾಲಯವು ಕರಿಕಲ್ಲಿನಿಂದ ಕಟ್ಟಲ್ಪಟ್ಟಿದ್ದು ಸುಂದರ ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ಇಲ್ಲಿಂದ 7 ಕಿ.ಮೀ. ದೂರದಲ್ಲಿರುವ ಅಂಜನೇರಿ ಪರ್ವತವು ಹನುಮಂತನ ಜನ್ಮಸ್ಥಾನವೆಂದು ಹೇಳಲಾಗುತ್ತದೆ.

ಭಕ್ತರು ಗೋದಾವರಿನದಿಯಲ್ಲಿ ಮಿಂದು ಶಿವನ ಪೂಜೆಗೆ ಹೋಗಬೇಕು. ದೇವಾಲಯದ ಸುತ್ತ ಮುತ್ತ ಗೋರಾರಾಮ, ಕಾಲಾರಾಮ , ಆಂಜನೇಯ, ದುರ್ಗಾ ಮೊದಲಾದ ಅನೇಕ ಪುರಾತನ ಸುಂದರ ದೇವಾಲಯಗಳಿವೆ. ಅವುಗಳನ್ನೆಲ್ಲಾ ದರ್ಶನ ಮಾಡಿಕೊಂಡು ಪಂಚವಟಿಗೆ ಹೋಗಬೇಕು. ಸೀತಾಮಾತೆ ನೆಲಸಿದ ಪಂಚ ವಟ ವೃಕ್ಷಗಳ ದರ್ಶನ ಮಾಡಿಕೊಂಡು ರಾಮಾಯಣ ಕಾಲಕ್ಕೆ ಹೋಗಿಬರಬಹುದು.
ಶ್ರೀ ತ್ರ್ಯಂಭಕೇಶ್ವರ ಜ್ಯೋತಿಲಿರ್ಂಗ ದೇವಾಲಯದ ಪ್ರಾಂಗಣ ಬಹಳ ವಿಶಾಲವಾಗಿದೆ. ಮಂಗಳಾರತಿ ಮಾಡುವಾಗ ಮಾತ್ರ ಶ್ರೀ ಜ್ಯೋತಿರ್ಲಿಂಗ ಸ್ಪಷ್ಟವಾಗಿ ಕಾಣುತ್ತದೆ. ಒಂದೇ ಪೀಠದ ಮೇಲೆ ಮೂರು ಸಣ್ಣ ಸಣ್ಣ ಲಿಂಗಗಳಿವೆ. ಅವನ್ನು ಬ್ರಹ್ಮ ವಿಷ್ಣು ಮಹೇಶ್ವರ ರೂಪವೆಂದು ಹೇಳುತ್ತಾರೆ. ಗರ್ಭಗುಡಿಯೆದುರು ಗಣಪತಿಯ ಹಾಗೂ ಇತರೆ ವಿಗ್ರಹಗಳಿವೆ.. ಮುಂದಿನ ಮಂಟಪದಲ್ಲಿ ಭವ್ಯವಾದ ನಂದಿಯ ದೊಡ್ಡ ವಿಗ್ರಹವಿದೆ. ಇಲ್ಲಿ ಶ್ರಾವಣ ಮಾಸ ಹಾಗೂ ಸೋಮವಾರದಂದು ವಿಶೇಷ ಪೂಜೆ ಇರುತ್ತವೆ..
ಪುಣ್ಯಕ್ಷೇತ್ರ ರಾಮೇಶ್ವರಂನ ಮಹಿಮೆ ಅರಿಯಿರಿ
ಶ್ರೀ ತ್ರ್ಯಂಭಕೇಶ್ವರ ಜ್ಯೋತಿರ್ಲಿಂಗ ದರ್ಶನದಿಂದ ಸಕಲ ಪಾಪಗಳೂ ನಾಶವಾಗಿ ಸುಖ ಶಂತಿ ದೊರೆಯುವುದೆಂದು ಭಕ್ತರ ನಂಬುಗೆ. ಈಗಿನ ಈ ದೇವಾಲಯವನ್ನು ಪೇಶ್ವೆ ಬಾಲಾಜಿ ಬಾಜಿರಾವ್ (ನಾನಾ ಸಾಹೇಬ್) ಕಟ್ಟಿಸಿದನೆಂದು ಇತಿಹಾಸ ಹೇಳುತ್ತದೆ. ದೇವಾಲಯದ ಆವರಣದಲ್ಲಿ ಸುಂದರವಾದ ಅಮೃತಕುಂಡವಿದೆ. ನಾಸಿಕದಲ್ಲಿ 12 ವರ್ಷಕ್ಕೊಮ್ಮೆ ಕುಂಭ ಮೇಳ ನೆಡೆಯುತ್ತದೆ. ಲಕ್ಷಾಂತರ ಜನ ಸೇರುತ್ತಾರೆ..

ತ್ರ್ಯಂಬಕೇಶ್ವರನ ಬಗ್ಗೆ ಪುರಾಣ ಏನು ಹೇಳುತ್ತೆ? : ಗಂಗೆಯನ್ನು ಬ್ರಹ್ಮನು ಪೂಜಿಸಿದಾಗ ತ್ರಿವಿಕ್ರಮನ ಪಾದದಿಂದ ಹೊರಟ ಗಂಗೆಯು ಶಿವನ ಜಟೆಯಲ್ಲಿ ಬಂಧಿಸಲ್ಪಟ್ಟಳು. ಭೂಮಿಯಲ್ಲಿ 24 ವರ್ಷಗಳಕಾಲ ಮಳೆ ಇಲ್ಲದೆ ಬರಗಾಲ ಬಂದಿತು . ಗೌತಮ ಮುನಿಯು ತ್ರ್ಯಂಬಕೇಶ್ವರದಲ್ಲಿದ್ದ ಅವನ ಆಶ್ರಮದಲ್ಲಿದ್ದನು. ಅವನು ನೀರಿಗಾಗಿ ತಪಸ್ಸು ಮಾಡಿದನು. ವರುಣನು ಅವನ ತಪಸ್ಸಿಗೆ ಮೆಚ್ಚಿ ಅವನ ಆಶ್ರಮ ಪ್ರದೇಶಕ್ಕೆ ಮಾತ್ರ ಮಳೆ ಸುರಿಸಿದನು.
ಗೌತಮನು ಬೆಳಿಗ್ಗೆ ಬೀಜ ಬಿತ್ತಿ - ಸಂಜೆ ಫಸಲು ಕೊಯಿದು ಎಲ್ಲರಿಗೂ ಉಣಬಡಿಸುತ್ತಿದ್ದನು. ಋಷಿ ಸಮೂಹವೆಲ್ಲಾ ಅವನ ಆಶ್ರಮದಲ್ಲಿ ಆಶ್ರಯ ಪಡೆದರು. ಆ ಋಷಿಗಳ ಆಶೀರ್ವಾದ ಬಲದಿಂದ ಗೌತಮನ ಪುಣ್ಯ ಹೆಚ್ಚಿ ಇಂದ್ರನ ಪದವಿಗೆ ಆಪತ್ತು ಬಂದಿತು. ಇಂದ್ರನು ಮೋಡಗಳಿಗೆ ದೇಶಾದ್ಯಂತ ಮಳೆ ಸುರಿಸಲು ಆಜ್ಞೆಮಾಡಿದನು. ಅದರಿಂದ ಋಷಿಗಳೆಲ್ಲಾ ಅವರವರ ಆಶ್ರಮಗಳಿಗೆ ಹಿಂತಿರುಗಿ , ಗೌತಮನ ಪ್ರಾಮುಖ್ಯತೆ ಕಡಿಮೆಯಾಗಿ ಅವನ ಪುಣ್ಯ ಫಲವೂ ಕಡಿಮೆಯಾಗಲಿ ಎಂದು ಇಂದ್ರನು ಯೋಚಿಸಿದನು. ಆದರೆ ಗೌತಮನು ಋಷಿಗಳಿಗೆ ತನ್ನಲ್ಲಿಯೇ ಇರಲು ಒತ್ತಾಯ ಮಾಡಿದನು.
ಒಂದುದಿನ ತನ್ನ ಹೊಲದಲ್ಲಿ ದನಗಳು ಮೇಯುತ್ತಿರುವುದನ್ನು ಕಂಡು ಒಂದು ಹಸುವಿಗೆ ಒಂದು ದರ್ಭೆಯಿಂದ ಹೊಡೆದನು. ಆ ಹಸು ಅದಕ್ಕೇ ಸತ್ತುಹೋಯಿತು. ಅದು ಪಾರ್ವತೀದೇವಿಯ ಗೆಳತಿ ಜಯಾ ಗೋವಿನ ರೂಪದಿಂದ ಬಂದಿದ್ದಳು.

ಋಷಿಗಳು ಗೋಹತ್ಯೆಯನ್ನು ನೋಡಿ ಅವನ ಆಶ್ರಮ ಬಿಟ್ಟು ಹೊರಟರು ಗೌತಮನು ಚಿಂತಿತನಾಗಿ ಗೋಹತ್ಯೆಯ ದೋಷ ಹೋಗಲು ಏನು ಮಾಡಬೇಕೆಂದು ಕೇಳಿದನು. ಅದಕ್ಕೆ ಅವರು ಗಂಗಾ ಜಲದಲ್ಲಿ ಸ್ನಾನ ಮಾಡಿದರೆ ಗೋಹತ್ಯೆಯ ದೋಷ ಪರಿಹಾರವಾಗುವುದೆಂದು ಹೇಳಿದರು.
ಗಂಗೆಯು ಶಿವನ ಜಟೆಯಲ್ಲಿ ಬಂಧಿತಳಾಗಿದ್ದಳು. ಗೌತಮನು ಶಿವನನ್ನು ಕುರಿತು ತಪಸ್ಸು ಮಾಡಿ ಭೂಮಿಗೆ ನೀರ ಹರಿಸಲು ಕೇಳಿದನು. ಶಿವನು ಗಂಗೆಗೆ ಹೇಳಿದರೂ ಅವಳು ಶಿವನನ್ನು ಬಿಟ್ಟು ಬರಲು ಇಷ್ಟಪಡಲಿಲ್ಲ. ಆಗ ಶಿವನು ಬ್ರಹ್ಮಗಿರಿ ಬೆಟ್ಟದ ಮೇಲೆ ತಾಂಡವ ನೃತ್ಯ ಮಾಡಿ ತನ್ನ ಜಟೆಯನ್ನು ಕೊಡಹಿದನು.
ವೈದ್ಯನಾಥ ಜ್ಯೋತಿರ್ಲಿಂಗ ದರ್ಶನಕ್ಕೆ ಜನ ಸಾಗರ..
ಗಂಗೆ ಅಲ್ಲೊಂದು ಕಡೆ ಇಲ್ಲೊಂದು ಕಡೆ ಬಿದ್ದು ಹರಿದು ಹೋಗಿ ಗೌತಮನ ಸ್ನಾನಕ್ಕೆ ಸಿಗಲಿಲ್ಲ. ಆಗ ಗೌತಮನು ದರ್ಭೆಯನ್ನು ಮಂತ್ರಿಸಿ ಅದರ ಕಟ್ಟೆ ಮಾಡಿ ಅದರಲ್ಲಿ ಶಿವನ ಜಟೆಯ ನೀರು ಬೀಳುವಂತೆ ಮಾಡಿದನು ಆಗ ಗಂಗಾಜಲ ಸಾಕಷ್ಟು ಸಂಗ್ರಹವಾಗಿ ಗೌತಮನು ಅದರಲ್ಲಿ ಸ್ನಾನ ಮಾಡಿ ಗೋಹತ್ಯೆಯ ದೋಷವನ್ನು ಕಳೆದುಕೊಂಡನು. ಆ ಗಂಗೆಯ ಕೊಳಕ್ಕೆ ಕುಶಾವರ್ತ ಎಂದು ಹೆಸರು ಬಂದಿತು. ಅಲ್ಲಿಂದಲೇ ಬ್ರಹ್ಮಗಿರಿ ಬೆಟ್ಟದಲ್ಲಿ ಗೋದಾವರಿ ನದಿಯು ಹುಟ್ಟಿ ಆಂಧ್ರದ ರಾಜಮುಂಡ್ರಿಯಲ್ಲಿ ಸಮುದ್ರ ಸೇರುವುದು.

ತ್ರ್ಯಂಬಕೇಶ್ವರದಲ್ಲಿ ನಾನಾ ಬಗೆಯ ಧಾರ್ಮಿಕ ವಿಧಿಗಳನ್ನು ಮಾಡುತ್ತಾರೆ. ನಾರಾಯಣ ಬಲಿ, ತ್ರಿಪಿಂಡಿವಿಧಿ, ಕಾಳಸರ್ಪ ಶಾಂತಿ ಇತ್ಯಾದಿಗಳನ್ನು ನೆರವೇರಿಸಲಾಗುತ್ತದೆ...
ಮೂರನೇ ಮರಾಠಾ ಯುದ್ಧದ ನಂತರ ಬ್ರಿಟಿಷರು ಈ ದೇವಾಲಯಕ್ಕೆ ಸೇರಿದ ಪ್ರಸಿದ್ಧವಾದ ನಸ್ಸಕ ವೆಂಬ ವಜ್ರವನ್ನು ಕೊಂಡೊಯ್ದರು. ಈ ವಜ್ರವು ಈಗ ಅಮೆರಿಕದ ಕನೆಕ್ಟಿಕಟ್ ಗ್ರೀನಿಚ್ನಲ್ಲಿರುವ ಎಡ್ವರ್ಡ ಜೆ ಹ್ಯಾಂಡ್ ಎಂಬುವವರ ಹತ್ತಿರ ಇದೆ ಎಂದು ಹೇಳಲಾಗಿದೆ.
ಇಲ್ಲಿ ನೀಲ ಪರ್ವತದ ಮೇಲೆ ನೀಲಾಂಬ, ಮನ್ನಾಂಬಾ, ರೇಣುಕಾ ದೇವಿಯರು, ಪರಶುರಾಮನು ತಪಸ್ಸು ಮಾಡುವುದನ್ನು ನೋಡಲು ಬಂದಿರುವುದಾಗಿ ಹೇಳುತ್ತಾರೆ. ಪರಶುರಾಮನು ಅವರಿಗೆ ಅಲ್ಲಿಯೇ ನೆಲೆಸಲು ಕೋರಿಕೊಂಡನು. ಅವರು ಅಲ್ಲಿಯೇ ನೆಲಸಿದರು ಅವರೆಲ್ಲರ ದೇವಾಲಯಗಳು ಅಲ್ಲಿವೆ. ಹಾಗೆಯೇ ದತ್ತಾತ್ರೇಯ ಮುನಿಯೂ ಅಲ್ಲಿಗೆ ಭೇಟಿ ನೀಡಿ ಅಲ್ಲಿ ಕೆಲವುಕಾಲ ನೆಲಸಿದರು.
ಅಲ್ಲಿ ಶ್ರೀ ದತ್ತಾತ್ರೇಯ ದೇವಾಲಯವೂ ಇದೆ ಇವಲ್ಲದೆ ಇದರ ಹತ್ತಿರವೇ ಪುರಾತನ ನೀಲಕಂಠೇಶ್ವರ ದೇವಾಲಯ, ನೀಲಕಂಠೇಶ್ವರ ಆಶ್ರಮ, ಖಂಡೋಬಾ ಮಂದಿರ, ರೇಣುಕಾದೇವೀ ಮಂದಿರಗಳು ನೀಲ ಪರ್ವತದ ತಪ್ಪಲಲ್ಲಿ ಇವೆ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..
ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. ನಮ್ಮನ್ನ ಫಾಲೋ ಮಾಡಿ..
► Subscribe to Planet Tv Kannada: https://www.youtube.com/Planet Tv Kannada
► Follow us on Facebook: https://www.facebook.com/Planettvkannada
► Follow us on Twitter:- https://twitter.com/Planettvkannada
► Follow us on Instagram:- https://www.instagram.com/planettvkannada
► Follow us on Pinterest: https://www.pinterest.com/Planettvkannada
► Follow us on Koo app:- https://www.kooapp.com/planettvkannada
► Follow us on share chat:- https://sharechat.com/planettvkannada
► Join us on Telegram:- https://t.me/planettvkannada
► Follow us on Tumblr:- https://www.tumblr.com/planet-tv-kannada
► Follow us on Reddit https://www.reddit.com/Planet-tv-kannada