ಪುಣ್ಯಕ್ಷೇತ್ರ ರಾಮೇಶ್ವರಂನ ಮಹಿಮೆ ಅರಿಯಿರಿ

ದಶಗ್ರಂಥಿ ಬ್ರಾಹ್ಮಣನಾಗಿದ್ದ ರಾವಣನ ವಧೆಯ ಬಳಿಕ ಅಗಸ್ತ್ಯ ಋಷಿಗಳು, ಪ್ರಭು ಶ್ರೀರಾಮನಿಗೆ ಬ್ರಹ್ಮಹತ್ಯೆಯ ಪಾಪದಿಂದ ಮುಕ್ತನಾಗಲು, ಸಾಗರತೀರದಲ್ಲಿ ಜ್ಯೇಷ್ಠ ಶುದ್ಧ ದಶಮಿಯ ಮುಹೂರ್ತದಲ್ಲಿ ಶಿವಲಿಂಗವನ್ನು ಸ್ಥಾಪಿಸುವಂತೆ ಆದೇಶಿಸಿದರು.
ಈ ಕಾರಣದಿಂದ ಶಿವನ ದಿವ್ಯಲಿಂಗವನ್ನು ತರಲು ಮಾರುತಿಯು ಕೈಲಾಸಕ್ಕೆ ಹೋದನು. ಆದರೆ ಶಿವನ ದರ್ಶನವಾಗದ ಕಾರಣ ಮಾರುತಿಯು ತಪಸ್ಸನ್ನು ಪ್ರಾರಂಭಿಸಿದನು. ಕಾಲಾಂತರದಲ್ಲಿ ಶಿವನು ಪ್ರಕಟಗೊಂಡು ಮಾರುತಿಗೆ ತನ್ನ ದಿವ್ಯಲಿಂಗವನ್ನು ನೀಡಿದನು.
ಈ ಪ್ರಕ್ರಿಯೆಯಲ್ಲಿ ವಿಳಂಬವಾಗಿದ್ದರಿಂದ ಮಾರುತಿಗೆ ಮುಹೂರ್ತದ ಸಮಯಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ಸೀತೆಯು ಮರಳಿನಿಂದ ಒಂದು ಲಿಂಗವನ್ನು ತಯಾರಿಸಿ ಕೊಟ್ಟಳು. ಋಷಿಗಳ ಆದೇಶ ಪಡೆದು ನಂತರ ರಾಮನು ಅದರ ಸ್ಥಾಪನೆಯನ್ನೇ ಮಾಡಿದನು. ಇದೇ ಆ ರಾಮೇಶ್ವರದ ಲಿಂಗವಾಗಿದೆ. ಸ್ಥಳೀಯ ಜನರು ಅದನ್ನು ರಾಮನಾಥಸ್ವಾಮಿ ಎಂದು ಕರೆಯುತ್ತಾರೆ.
ವೈದ್ಯನಾಥ ಜ್ಯೋತಿರ್ಲಿಂಗ ದರ್ಶನಕ್ಕೆ ಜನ ಸಾಗರ..
ಹನುಮ ಕೈಲಾಸದಿಂದ ತಂದ ಲಿಂಗ ಏನಾಯ್ತು?: ಮಾರುತಿಯು ಮರಳಿ ಬಂದಾಗ ಅವನಿಗೆ ಶ್ರೀರಾಮನು ಲಿಂಗವನ್ನು ಸ್ಥಾಪಿಸಿರುವುದನ್ನು ಕಂಡು ಬಹಳ ದುಃಖವಾಯಿತು. ಆಗ ರಾಮನು, ಮಾರುತಿಗೆ ತಾನು ಸ್ಥಾಪಿಸಿದ ಲಿಂಗದ ಹತ್ತಿರವೇ ಅವನು ತಂದ ಲಿಂಗವನ್ನು ಸ್ಥಾಪಿಸಲು ಹೇಳಿದನು. ಅಲ್ಲದೇ, ಮಾರುತಿ ಸ್ಥಾಪಿಸಿದ ಲಿಂಗದ ದರ್ಶನ ಪಡೆಯದೇ ಇದ್ದರೆ ಭಕ್ತರಿಗೆ ರಾಮೇಶ್ವರ ದರ್ಶನದ ಫಲ ದೊರೆಯಲಾರದು ಎಂದೂ ಹೇಳಿದನು. ಈ ಲಿಂಗಕ್ಕೆ ಕಾಶಿವಿಶ್ವನಾಥ ಅಥವಾ ಹನುಮದೀಶ್ವರ ಎಂದು ಕರೆಯುತ್ತಾರೆ.

ಭಾರತದ 4 ಪವಿತ್ರ ಕ್ಷೇತ್ರಗಳಲ್ಲಿ ಇದೂ ಒಂದು: ರಾಮೇಶ್ವರಂ ದೇವಾಲಯವು ಭಾರತದ ತಮಿಳುನಾಡಿನ ರಾಮಣಾಥಪುರಂ ಜಿಲ್ಲೆಯ ಪಂಬನ್ ದ್ವೀಪದಲ್ಲಿದೆ. ಭಾರತದ 4 ಪವಿತ್ರ ಕ್ಷೇತ್ರಗಳಲ್ಲಿ ರಾಮೇಶ್ವರಂ ಕೂಡ ಒಂದು. ಉತ್ತರದ ಬದರಿನಾಥ, ಪೂರ್ವದ ಪುರಿ ಜಗನ್ನಾಥ, ಪಶ್ಚಿಮದ ದ್ವಾರಕನಾಥ, ದಕ್ಷಿಣದ ಶ್ರೀ ರಾಮನಾಥ ಅಥವಾ ರಾಮೇಶ್ವರಂ ಈ ನಾಲ್ಕು ಕ್ಷೇತ್ರಗಳು ಭಾರತದ ಪವಿತ್ರ ಕ್ಷೇತ್ರಗಳಾಗಿವೆ. ಈ ನಾಲ್ಕು ಕ್ಷೇತ್ರಗಳನ್ನು ಚಾರ್ಧಾಮ್ಗಳೆಂದೂ ಕೂಡ ಕರೆಯಲಾಗುತ್ತದೆ. ಶ್ರೀರಾಮ ಮತ್ತು ಈಶ್ವರನ ಐಕ್ಯತೆಯ ರೂಪವೇ ಈ ರಾಮೇಶ್ವರಂ ದೇವಾಲಯವಾಗಿದೆ.
ಈ ದೇವಾಲಯವು ನಾಲ್ಕು ಪವಿತ್ರ ಕ್ಷೇತ್ರಗಳಲ್ಲಿ ಒಂದು ಮಾತ್ರವಲ್ಲ, ಇದು ಕಾಶಿ ಯಾತ್ರೆಯ ಪ್ರಮುಖ ತಾಣವಾಗಿದೆ. ರಾಮೇಶ್ವರಂ ಯಾತ್ರೆಯಿಲ್ಲದೆ ಕಾಶಿ ಯಾತ್ರೆ ಅಪೂರ್ಣವೆಂಬ ನಂಬಿಕೆ ಹಿಂದೂ ಧರ್ಮೀಯರದ್ದು. ಈ ದೇವಾಲಯದ ಪ್ರತಿಯೊಂದು ಅಂಶವು ರಾಮಾಯಣದ ಘಟನೆಯನ್ನು ಹಾಗೂ ಶೈವ ಧರ್ಮ ಮತ್ತು ವೈಷ್ಣವ ಧರ್ಮದ ಏಕತೆಯನ್ನು ಸೂಚಿಸುತ್ತದೆ.
12 ಜ್ಯೋತಿರ್ಲಿಂಗಗಳ ಸಂಪೂರ್ಣ ಮಾಹಿತಿ
ಭಗವಾನ್ ರಾಮನು ಈ ಸ್ಥಳದಲ್ಲಿ ಶಿವಲಿಂಗವನ್ನು ಸ್ಥಾಪಿಸಿದನೆಂದು ಹೇಳಲಾಗುತ್ತದೆ. ಅದಲ್ಲದೇ ಆಡಳಿತಗಾರರು ಬದಲಾದಂತೆ ದೇವಾಲಯದ ನಿರ್ಮಾಣದಲ್ಲೂ ಕೂಡ ಬದಲಾವಣೆಯನ್ನು ಪಡೆದುಕೊಳ್ಳುತ್ತಾ ಹೋಯಿತು. ಮುಖ್ಯವಾಗಿ ದೇವಾಲಯದಲ್ಲಿ ರಾಮಲಿಂಗ ಮತ್ತು ಶಿವಲಿಂಗ ಎನ್ನುವ ಎರಡು ಲಿಂಗಗಳಿವೆ. ಇಂದಿಗೂ ಕೂಡ ಇಲ್ಲಿ ರಾಮನ ಭಕ್ತರು ಶಿವಲಿಂಗವನ್ನು ಪೂಜಿಸುತ್ತಾರೆ.
ಪ್ರಸಿದ್ಧ ದೊರೆಗಳು ಕಟ್ಟಿದ ದೇವಾಲಯವಿದು: ದೇವಾಲಯದಲ್ಲಿ ಲಭ್ಯವಿರುವ ಶಾಸನದ ಪ್ರಕಾರ, ರಾಮೇಶ್ವರಂನಲ್ಲಿರುವ ಪ್ರಾಚೀನ ದೇವಾಲಯವನ್ನು 12ನೇ ಶತಮಾನದಲ್ಲಿ ಲಂಕಾದ ರಾಜನಾದ ಪರಾಕ್ರಮಬಾಹು,
ದೊಡ್ಡದಾಗಿ ನಿರ್ಮಿಸಿದನೆಂದು ಹೇಳಲಾಗಿದೆ. ತದನಂತರ ಮಧುರೈನ ನಾಯಕ್ ಅರಸರಾದ ಪಾಂಡಯನು ಮತ್ತು ರಮಾನಂದ ರಾಜನು ಈ ದೇವಾಲಯವನ್ನು ಮತ್ತಷ್ಟು ಉನ್ನತಿ ಗೊಳಿಸಿದರು.
ಅನೇಕ ರಾಜವಂಶಗಳು ಈ ಸ್ಥಳದಲ್ಲಿ ಆಳ್ವಿಕೆಯನ್ನು ಮಾಡಿದ್ದು, ತಮ್ಮ ಆಳ್ವಿಕೆಯ ಸಂದರ್ಭದಲ್ಲಿ ಈ ದೇವಾಲಯಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಎಷ್ಟೇ ರಾಜ ವಂಶಗಳು ಇಲ್ಲಿ ಆಳ್ವಿಕೆಯನ್ನು ನಡೆಸಿದರೂ ಕೂಡ ಇಲ್ಲಿ ಬದಲಾಗದೇ ಉಳಿದಿರುವ ಒಂದು ಅಂಶವೆಂದರೆ ಇಲ್ಲಿನ ದ್ರಾವಿಡ ಶೈಲಿಯ ವಾಸ್ತುಶಿಲ್ಪ.

ಕಣ್ಮನ ಸೆಳೆಯುವ ವಾಸ್ತುಶಿಲ್ಪ: ರಾಮನಾಥಸ್ವಾಮಿ ದೇವಾಲಯವನ್ನು ದ್ರಾವಿಡ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯವು ಸಾಕಷ್ಟು ವಿಶಿಷ್ಟ ಲಕ್ಷಣಗಳನ್ನು ಒಳಗೊಂಡಿದೆ. ಬರೋಬ್ಬರಿ 15 ಎಕರೆ ವಿಸ್ತೀರ್ಣದಲ್ಲಿ ಈ ದೇವಾಲಯವನ್ನು ಕಟ್ಟಲಾಗಿದ್ದು, ಎತ್ತರದ, ಬೃಹತ್ ಗೋಪುರಗಳನ್ನು, ಬೃಹತ್ ಗೋಡೆಗಳನ್ನು ಮತ್ತು ಬೃಹತ್ ನಂದಿಯನ್ನು ಹೊಂದಿದೆ.

ರಾಮನಾಥಸ್ವಾಮಿ ದೇವಾಲಯದ ಮತ್ತೊಂದು ಪ್ರಮುಖ ಲಕ್ಷಣವೆಂದರೆ ಈ ದೇವಾಲಯದ ಆವರಣದಲ್ಲಿ ಮತ್ತು ದೇವಾಲಯದ ಸುತ್ತಮುತ್ತಲಿನ ಆವರಣದಲ್ಲಿ 64 ಬಾವಿಗಳಿವೆ. ಇವುಗಳು ತೀರ್ಥಸ್ನಾನದ ಬಾವಿಗಳಾಗಿವೆ. ಅಚ್ಚರಿಕರ ವಿಷಯವೆಂದರೆ ಈ ದೇವಾಲಯದಲ್ಲಿರುವ ಎಲ್ಲಾ ಬಾವಿಗಳು ಒಂದಕ್ಕೊಂದು ಹತ್ತಿರದಲ್ಲಿದ್ದರೂ ಕೂಡ ಪ್ರತಿಯೊಂದು ಬಾವಿಯ ನೀರು ಭಿನ್ನ ರುಚಿಯನ್ನು ಹಾಗೂ ರೋಗನಿರೋಧಕ ಲಕ್ಷಣವನ್ನು ಹೊಂದಿದೆ. ಇಲ್ಲಿನ ಬಾವಿಯ ನೀರಿನಿಂದ ತೀರ್ಥಸ್ನಾನ ಮಾಡುವುದರಿಂದ ಪಾಪಗಳೆಲ್ಲವೂ ಕೂಡ ಪರಿಹಾರವಾಗಿ ಮೋಕ್ಷ ದೊರೆಯುತ್ತದೆ ಎನ್ನುವ ನಂಬಿಕೆಯಿದೆ.
ರಾಮೇಶ್ವರಂ ದೇವಾಲಯವು ಒಟ್ಟು 3850 ಅಡಿ ಉದ್ದದ ಮೂರು ವಿವಿಧ ಬಗೆಯ ಪ್ರವೇಶಾಂಗಣವನ್ನು ಹೊಂದಿದೆ. ಮೊದಲ ಪ್ರವೇಶಾಂಗಣವು ಉಳಿದೆರೆಡು ಪ್ರವೇಶಾಂಗಣಕ್ಕೆ ಹೋಲಿಸಿದರೆ ಅತ್ಯಂತ ಹಳೆಯ ಪ್ರವೇಶಾಂಗಣವಾಗಿದೆ. ಎರಡನೇ ಪ್ರವೇಶಾಂಗಣವನ್ನು ಸುಮಾರು 12 ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಮತ್ತು ಈ ಪ್ರವೇಶಾಂಗಣವು 108 ಶಿವಲಿಂಗಗಳನ್ನು ಹಾಗೂ ಗಣಪತಿಯ ಪ್ರತಿಮೆಯನ್ನು ಹೊಂದಿದೆ.
ಮೂರನೇಯ ಪ್ರವೇಶಾಂಗಣವು ಅಗಾಧವಾದ 1212 ಸ್ತಂಭಗಳನ್ನು ಹೊಂದಿದ್ದು, ಪ್ರತಿಯೊಂದು ಸ್ತಂಭವು 30 ಅಡಿ ಎತ್ತರವನ್ನು ಪಡೆದಿದ್ದು ಈ ಪ್ರವೇಶಾಂಗಣವು ವಿಶ್ವದ ಅತಿ ಉದ್ದದ ಪ್ರವೇಶಾಂಗಣವೆಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.
ರಾಮೇಶ್ವರಂ ದೇವಾಲಯಕ್ಕೆ ಪ್ರತೀವರ್ಷವು ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ತನ್ನ ವಾಸ್ತುಶಿಲ್ಪದ ಮೂಲಕ ಸಾಕಷ್ಟು ಖ್ಯಾತಿಯನ್ನು ಪಡೆದ ದೇವಾಲಯ ಇದಾಗಿದೆ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ..
ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..
ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. ನಮ್ಮನ್ನ ಫಾಲೋ ಮಾಡಿ..
► Subscribe to Planet Tv Kannada: https://www.youtube.com/Planet Tv Kannada
► Follow us on Facebook: https://www.facebook.com/Planettvkannada
► Follow us on Twitter:- https://twitter.com/Planettvkannada
► Follow us on Instagram:- https://www.instagram.com/planettvkannada
► Follow us on Pinterest: https://www.pinterest.com/Planettvkannada
► Follow us on Koo app:- https://www.kooapp.com/planettvkannada
► Follow us on share chat:- https://sharechat.com/planettvkannada
► Join us on Telegram:- https://t.me/planettvkannada
► Follow us on Tumblr:- https://www.tumblr.com/planet-tv-kannada
► Follow us on Reddit https://www.reddit.com/Planet-tv-kannada