ಬಿಸಿನೀರು ಕುಡಿಯವುದರಿಂದ ಕೊರೋನಾ ಬರುವುದಿಲ್ಲ ಅನ್ನೋದು ಸುಳ್ಳು..!
source and pic credit: https://ift.tt/2AGV0u5
ಕೊರೋನಾ ಸೋಂಕು ಹರಡಲು ಶುರುವಾದಾಗಿನಿಂದಲೂ ಜನರಲ್ಲಿ ಆತಂಕ ಹೆಚ್ಚಾಗುತ್ತಲೇ ಇದೆ. ಮಾಸ್ಕ್ ಧರಿಸಿ, ಜನರಿಂದ ಅಂತರ ಕಾಪಾಡಿದರೂ ಭಯ ಯಾರನ್ನೂ ಬಿಟ್ಟಿಲ್ಲ. ಕೊರೋನಾ ಬರದಂತೆ ಹಾಗೆ ಮಾಡಬಹುದಂತೆ, ಹೀಗೆ ಮಾಡಬಹುದಂತೆ ಅನ್ನೋ ಹಲವು ಸುದ್ದಿಗಳು ನಿಜಾನ, ಸುಳ್ಳಾ ಅನ್ನೋದು ಮತ್ತಷ್ಟು ಆತಂಕಕ್ಕೆ ಕಾರಣವಾಗುತ್ತದೆ. ಅಲ್ಲದೆ, ಈ ರೀತಿಯ ಕಷಾಯ ಕುಡಿಯುವುದರಿಂದ ಕೊರೋನಾ ನಿಮ್ಮ ಬಳಿಯೂ ಸುಳಿಯುವುದಿಲ್ಲ, ಈ ಮಂತ್ರ ಪಠಿಸಿ ಪೂಜೆ ಮಾಡುವುದರಿಂದ ಸೋಂಕು ಬರಲ್ಲ ಹೀಗೆ ಮೊದಲಾದ ವದಂತಿಗಳು ಹಬ್ಬುತ್ತಲೇ ಇವೆ.
source and pic credit: google.com
ಅದೇ ರೀತಿ ಬಿಸಿ ಬಿಸಿ ನೀರು ಕುಡಿಯುವುದರಿಂದ ಕೊರೋನಾ ಸೋಂಕು ಬರುವುದಿಲ್ಲ. ಬಿಸಿಯಾದ ನೀರಿನಲ್ಲಿ ಸ್ನಾನ ಮಾಡಿದರೆ ವೈರಸ್ ಸಾಯುತ್ತದೆ ಹೀಗೆ ಹಲವು ಸುದ್ದಿಗಳು ಸಹ ಹರಿದಾಡುತ್ತಿವೆ. ಆದರೆ ಇದು ನಿಜವಲ್ಲ ಅನ್ನೋದನ್ನು ಕೇಂದ್ರ ಸರ್ಕಾರವೇ ಸ್ಪಷ್ಟಪಡಿಸಿದೆ. ಕೊರೋನಾದ ಕುರಿತಾಗಿ ಹಲವಾರು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಬಿಸಿ ಬಿಸಿಯಾದ ನೀರಲ್ಲಿ ಸ್ನಾನ ಮಾಡುವುದರಿಂದ, ಸಾಕಷ್ಟು ಬಿಸಿ ನೀರು ಕುಡಿಯುವುದರಿಂದ ಕೊರೋನಾ ಬರುವುದಿಲ್ಲ ಎಂಬ ವದಂತಿ ಹಬ್ಬುತ್ತಿದೆ. ಆದರೆ ನಿಜವಲ್ಲ ಎಂದು ಸ್ಪಷ್ಟಪಡಿಸಿದೆ.
source and pic credit: https://www.mashed.com
ಕೊರೋನಾ ವೈರಸ್ ಅನ್ನು ಹೋಗಲಾಡಿಸಲು 60-75 ಡಿಗ್ರಿ ಸೆಲ್ಸಿಯನ್ ಬಿಸಿಯಾದ ನೀರು ಅಗತ್ಯ. ಇಷ್ಟು ಬಿಸಿಯಾದ ನೀರಿನಲ್ಲಿ ಮಾತ್ರ ಕೊರೋನಾ ವೈರಸ್ ಸಾಯುತ್ತದೆ ಎಂದು ಮೈ ಗವರ್ನಮೆಂಟ್ ಇಂಡಿಯಾ ತನ್ನ ಟ್ವೀಟ್ ನಲ್ಲಿ ತಿಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ (WHO) ವ್ಯಕ್ತಿಯು ಸ್ನಾನ ಮಾಡುವ ಸಮಯದಲ್ಲಿ ದೇಹದ ಉಷ್ಣಾಂಶ 36.5 ನಿಂದ 37 ಡಿಗ್ರಿ ಸೆಲ್ಸಿಯಸ್ ಇರುತ್ತದೆ.
source and pic credit: https://ift.tt/3t4JP7x
ಹೀಗಾಗಿ ಬಿಸಿ ನೀರನ್ನು ಕುಡಿಯುವುದರಿಂದ, ಅಥವಾ ಬಿಸಿನೀರಿನಲ್ಲಿ ಗಾರ್ಗಲ್ ಮಾಡುವುದರಿಂದ ವೈರಸ್ ಹೋಗುತ್ತದೆ ಅನ್ನೋದು ನಿಜವಲ್ಲ. ಬದಲಾಗಿ ಉಗುರುಬೆಚ್ಚಗಿನ ನೀರಿಗೆ ಸ್ಪಲ್ಪ ಅರಿಶಿನ ಹಾಗೂ ಉಪ್ಪು ಬೆರೆಸಿಕೊಂಡು ಕುಡಿಯಬಹುದು ಎಂದು ಆಯುಷ್ ಇಲಾಖೆ ಸಲಹೆ ನೀಡಿದೆ.
source and pic credit: Times of India
ಭಾರತ ಸರ್ಕಾರದ ಆಯುಷ್ ಇಲಾಖೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮನೆಯಲ್ಲೇ ತಯಾರಿಸಬಹುದಾದ ಕಷಾಯವೊಂದನ್ನು ಪರಿಚಯಿಸಿದೆ. ತುಳಸಿ, ದಾಲ್ಚಿನ್ನಿ, ಶುಂಠಿ, ಕರಿಮೆಣಸು ಸೇರಿಸಿ ತಯಾರಿಸುವ ಈ ಕಷಾಯ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಲಾಗಿದೆ. ಆ ಕಷಾಯ ಮಾಡುವ ವಿಧಾನ ಹೀಗಿದೆ..
ಬೇಕಾದ ಸಾಮಗ್ರಿಗಳು
ತುಳಸಿ 9-10 ಎಲೆಗಳು
ದಾಲ್ಚಿನ್ನಿ 2
ಕರಿಮೆಣಸು ಅರ್ಧ ಸ್ಪೂನ್
ಶುಂಠಿ ಸ್ಪಲ್ಪ
ಬಿಸಿನೀರು 1 ಕಪ್
source and pic credit:I ndia times.com
ಮಾಡುವ ವಿಧಾನ
ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನು ಅದೇ ಅಳತೆಯಲ್ಲಿ ಒಣರೂಪದಲ್ಲಿ ತೆಗೆದುಕೊಳ್ಳಬೇಕು. ಇದೆಲ್ಲವನ್ನೂ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ಇದರಲ್ಲಿ ತಲಾ 3 ಗ್ರಾಂನ್ನು ತೆಗೆದುಕೊಂಡು ಸಣ್ಣ ಟೀ ಬ್ಯಾಗ್ ಗಳನ್ನಾಗಿ ಮಾಡಿಕೊಳ್ಳಬೇಕು. ಬಳಿಕ ಇದನ್ನು 150 ಬಿಸಿಯಾದ ನೀರಿಗೆ ಹಾಕಿಟ್ಟು ದಿನಕ್ಕೆರಡು ಬಾರಿ ಕುಡಿಯಬೇಕು. ಈ ಕಷಾಯಕ್ಕೆ ಒಗರಾದ ರುಚಿಯಿರುವ ಕಾರಣ ಕುಡಿಯಲು ಕಷ್ಟ ಎಂದುಕೊಳ್ಳುವವರು ಸ್ಪಲ್ಪ ಬೆಲ್ಲ, ನಿಂಬೆರಸ, ಒಣದ್ರಾಕ್ಷಿಯನ್ನು ಸೇರಿಸಿಕೊಳ್ಳಬಹುದು.

ಮೂಗು ಕಟ್ಟುವುದು, ಕಫ ಈ ಮೊದಲಾದ ಸಮಸ್ಯೆಯಿದ್ದಲ್ಲಿ ಬಿಸಿನೀರಿನ ಆವಿ ತೆಗೆದುಕೊಳ್ಳವುದರಿಂದ ಕಡಿಮೆಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಹೀಗಾಗಿ ಬಿಸಿನೀರು ಕುಡಿಯುವುದರಿಂದ ಕೊರೋನಾ ಬರಲ್ಲ ಅನ್ನೋದು ನಿಜವಲ್ಲ. ಬದಲಾಗಿ ಸರಿಯಾದ ರೀತಿಯಲ್ಲಿ ಮಾಸ್ಕ್ ಧರಿಸಿ, ಜನರಿಂದ ಅಂತರ ಕಾಪಾಡಿಕೊಂಡು, ಆಗಾಗ ಕೈಗಳನ್ನು ತೊಳೆಯುವುದರಿಂದ ನಾವು ಕೊರೋನಾ ವೈರಸ್ ನಿಂದ ದೂರವಿರಬಹುದು.
from ಸುದ್ದಿ - Planet Tv https://ift.tt/3tPeiFO
May 13, 2021 at 03:19PM