ಯಾವ ಬೆರಳಿನಿಂದ ಹಣೆಗೆ ಕುಂಕುಮ ಹಚ್ಚಬೇಕು..? ಇದರ ಹಿಂದಿರುವ ಕಾರಣಗಳೇನು..?
source and pic credit:https://ift.tt/2FYuPSH
ಭಾರತೀಯ ಸಂಸ್ಕೃತಿಯಲ್ಲಿ ಕುಂಕುಮಕ್ಕೆ ಹೆಚ್ಚಿನ ಮಹತ್ವವಿದೆ. ‘ಸಿಂಧೂರಮ್ ಸೌಂದರ್ಯ ಸಾಧನಂ’ ಎಂಬ ಮಾತೇ ಇದೆ. ಸೌಂದರ್ಯದಲ್ಲಿ ಕುಂಕುಮಕ್ಕೆ ಅಷ್ಟು ಪ್ರಾಧಾನ್ಯತೆಯಿದೆ. ಹೆಣ್ಣುಮಕ್ಕಳನ್ನು ಸಂಬೋಧಿಸುವಾಗ ಚಿ। ಸೌ। ಹ। ಕುಂ। ಶೋ ಎಂದು ಬರೆಯುತ್ತಾರೆ. ಅದರ ವಿಸ್ತೃತ ರೂಪ ಚಿರಂಜೀವಿ ಸೌಭಾಗ್ಯವತಿ ಹರಿದ್ರಾ ಕುಂಕುಮ ಶೋಭಿತೇ ಎಂದಾಗಿದೆ. ಸೌಭಾಗ್ಯವತಿಯಾಗಿ ಎಂದು ಕುಂಕುಮ ಹಚ್ಚಿಕೊಂಡು ಇರು, ಹರಿದ್ರಾ ಕುಂಕುಮ ಶೋಭಿತೇ ಅರಿಶಿನ ಕುಂಕುಮ ಹಚ್ಚಿಕೊಂಡು ಶೋಭಿಸು ಎಂದರ್ಥ.
source and pic credit: https://ift.tt/2G9dmWd
ಕುಂಕುಮ ಎನ್ನುವುದು ಕೆಂಪು ಬಣ್ಣದ ಪುಡಿ. ಇದನ್ನು ಅರಿಶಿನ ಮತ್ತು ಸುಣ್ಣದ ಕಲ್ಲಿನ ಪುಡಿಯ ಜೊತೆ ಸ್ವಲ್ಪ ಎಣ್ಣೆ ಹಾಕಿ ಮಿಶ್ರಣ ಮಾಡಿ ತಯಾರಿಸುತ್ತಾರೆ. ಕುಂಕುಮ ಹಿಂದೂ ಹೆಣ್ಣುಮಕ್ಕಳ ಸಿಂಗಾರದ ವಸ್ತುಗಳಲ್ಲೊಂದು. ಯಾವ ಆಭರಣಗಳನ್ನು ತೊಡದಿದ್ದರೂ ಹಣೆಗೆ ಕುಂಕುವಿಟ್ಟರೆ ಸಾಕು ಸುಂದರವಾಗಿ ಶೋಭಿಸುತ್ತಾರೆ. ಯಾರನ್ನಾದರೂ ನೋಡುವಾಗಲೂ ಎಲ್ಲಾ ಆಭರಣಗಳನ್ನು ಬಿಟ್ಟು ಥಟ್ಟಂತ ಗಮನ ಸೆಳೆಯುವುದು ಹಣೆಯಲ್ಲಿರುವ ಕುಂಕುಮ.
ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಇರುವ ಪ್ರಯೋಜನ
source and pic credit: https://www.patrika.com
ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಬ್ರಹ್ಮಾಂಡದಲ್ಲಿನ ಚೈತನ್ಯವು ಆಕರ್ಷಿತವಾಗುತ್ತದೆ ಎಂಬ ನಂಬಿಕೆಯಿದೆ. ಹಣೆಗೆ ಕುಂಕುಮ ಹಚ್ಚುವುದರಿಂದ ಕೆಟ್ಟ ಶಕ್ತಿಗಳಿಗೆ ಆಜ್ಞಾಚಕ್ರದಿಂದ ಶರೀರದಲ್ಲಿ ಸೇರಿಕೊಳ್ಳಲು ಅಡಚಣೆಯುಂಟಾಗುತ್ತದೆ. ಕುಂಕುಮದಿಂದ ಕೆಟ್ಟ ಶಕ್ತಿಗಳಿಂದ ರಕ್ಷಣೆಯಾಗುತ್ತದೆ ಎಂದು ಹೇಳಲಾಗುತ್ತದೆ. ಆದುದರಿಂದ ಸ್ತ್ರೀಯರು ಬಿಂದಿಗಿಂತ ಕುಂಕುಮವನ್ನು ಹಚ್ಚಿಕೊಳ್ಳಬೇಕು ಎಂದು ಹೇಳುತ್ತಾರೆ.
ಹಣೆಯ ಮೇಲಿನ ಸ್ನಾಯುಗಳ ಒತ್ತಡವು ಕಡಿಮೆಯಾಗಿ ಮುಖವು ಪ್ರಕಾಶಮಾನವಾಗಿ ಕಾಣಿಸುತ್ತದೆ. ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಸ್ತ್ರೀಯರ ಆತ್ಮಶಕ್ತಿಯು ಜಾಗೃತವಾಗಿ ಅವರಲ್ಲಿ ಶಕ್ತಿತತ್ತ್ವವನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯು ನಿರ್ಮಾಣವಾಗುತ್ತದೆ ಎಂದು ನಂಬಲಾಗುತ್ತದೆ. ಸ್ತ್ರೀಯರು ಭ್ರೂಮಧ್ಯದಲ್ಲಿ ಕುಂಕುಮ ವನ್ನು ಹಚ್ಚಿಕೊಂಡಾಗ ದೇವಿಯ ಆಶೀರ್ವಾದವು ಸಿಗುತ್ತದೆ. ಅಥವಾ ಇತರ ಸ್ತ್ರೀಯರು ಹಚ್ಚಿದಾಗ ಅವರಲ್ಲಿನ ತಾರಕ ಶಕ್ತಿತತ್ತ್ವದ ಸ್ಪಂದನಗಳು ಜಾಗೃತವಾಗುತ್ತವೆ ಮತ್ತು ವಾತಾವರಣದಲ್ಲಿನ ಶಕ್ತಿತತ್ತ್ವದ ಪವಿತ್ರಕಗಳು ಆ ಸ್ತ್ರೀಯರತ್ತ ಆಕರ್ಷಿತವಾಗುತ್ತವೆ ಎಂಬ ನಂಬಿಕೆಯಿದೆ.
source and pic credit: https://www.jagran.com
ಹಣೆ ಮೇಲೆ ಕುಂಕುಮ ಧರಿಸಿದರೆ ಅದರಿಂದ ದೇಹದ ಆರೋಗ್ಯದ ಮೇಲೂ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಕುಂಕುಮವನ್ನು ಹಚ್ಚಿಕೊಳ್ಳಲು ಹುಬ್ಬುಗಳ ನಡುವಿನ ಜಾಗವನ್ನು ಒತ್ತಿಕೊಳ್ಳುವುದರಿಂದ ದೇಹದಲ್ಲಿ ಉಂಟಾಗುವ ಅನೇಕ ಸಕಾರಾತ್ಮಕ ಪರಿಣಾಮಗಳನ್ನು ಪೂರ್ವಿಕರು ಕಂಡುಕೊಂಡಿದ್ದರು. ಕುಂಕುಮ ಹಚ್ಚುವುದರಿಂದ ಗ್ರಹಿಕೆಯು ಕೂಡ ಹೆಚ್ಚಾಗುತ್ತದೆ. ತಲೆನೋವು ಕಡಿಮೆ ಮಾಡಲು ಸಹ ಕುಂಕುಮ ಸಹಾಯ ಮಾಡುತ್ತದೆ. ಚರ್ಮ ಬೇಗ ಸುಕ್ಕಾಗುವುದನ್ನು ತಡೆಯುತ್ತದೆ ಎಂದು ನಂಬಲಾಗಿದೆ.
ಯಾವ ಬೆರಳಿನಿಂದ ಕುಂಕುಮ ಹಚ್ಚಬೇಕು..?
source and pic credit: https://ift.tt/3w1DaLJ
ದೇವಸ್ಥಾನದಲ್ಲಿ, ದೇವರ ಪೂಜೆಯಲ್ಲಿ, ಹಬ್ಬ ಹರಿದಿನಗಳಲ್ಲಿ ನಾವು ಕುಂಕುಮವನ್ನೇನೋ ಹಣೆಗಿಡುತ್ತೇವೆ. ಆದರೆ ನಾವು ಹಣೆಗೆ ಕುಂಕುವಿಡುವ ರೀತಿ ಸರಿಯಾಗಿದೆಯಾ ಅನ್ನೋದು ಹಲವರಿಗೆ ಗೊತ್ತಿಲ್ಲ. ಕುಂಕುವ ಇಡುವ ರೀತಿಯಿಂದಲೂ ನಮಗೆ ಶುಭ-ಅಶುವ ಉಂಟಾಗುತ್ತದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
source and pic credit: punjab keasari
ಪುರುಷರು ಭ್ರೂಮಧ್ಯದಲ್ಲಿ ಮಧ್ಯದ ಬೆರಳಿನಿಂದ ಕುಂಕುಮದ ಉದ್ದ ತಿಲಕವನ್ನು ಹಚ್ಚಬೇಕು. ಸ್ತ್ರೀಯರು ತಮಗೆ ಅನಾಮಿಕಾದಿಂದ (ಕಿರುಬೆರಳಿನ ಪಕ್ಕದ ಬೆರಳು) ಗೋಲಾಕಾರದ ಕುಂಕುಮವನ್ನು ಹಚ್ಚಬೇಕು ಎಂದು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಇನ್ನು ಪುರುಷರಿರಲಿ ಅಥವಾ ಸ್ತ್ರೀಯರಿರಲಿ ಅವರು ಇತರರಿಗೆ ಕುಂಕುಮವನ್ನು ಹಚ್ಚುವಾಗ ಮಧ್ಯಮಾವನ್ನು (ಮಧ್ಯದ ಬೆರಳು) ಉಪಯೋಗಿಸಬೇಕು, ಏಕೆಂದರೆ ಇತರರನ್ನು ಸ್ಪರ್ಶಿಸುವಾಗ ಬೆರಳಿನ ಮೂಲಕ ಅವರಲ್ಲಿರುವ ಕೆಟ್ಟ ಶಕ್ತಿಗಳು ನಮ್ಮ ದೇಹದಲ್ಲಿ ಸೇರಿಕೊಳ್ಳುವ ಸಾಧ್ಯತೆಯಿರುತ್ತದೆ ಎಂದು ಹೇಳಲಾಗುತ್ತದೆ.
ವಿವಿಧ ರೀತಿಯಲ್ಲಿ ಕುಂಕುಮ ಬಳಸುವ ಸಂಪ್ರದಾಯ
source and pic credit: Hari bhoomi
ಭಾರತೀಯ ಪರಂಪರೆಯಲ್ಲಿ, ಹಿಂದೂ ಸಂಸ್ಕೃತಿಯಲ್ಲಿ ಕುಂಕುಮಕ್ಕೆ ಅಗ್ರ ಸ್ಥಾನವಿದೆ. ಆದರೆ ಆಯಾಯ ಪ್ರದೇಶದಲ್ಲಿ ಒಂದೊಂದು ರೀತಿಯಲ್ಲಿ ಕುಂಕುಮ ಇಡುವ ಸಂಪ್ರದಾಯವಿದೆ. ಉತ್ತರ ಭಾರತದಲ್ಲಿ ಕೂದಲಿನ ಬೈತಲೆಯ ಭಾಗದಲ್ಲಿ ಕುಂಕುಮ ನೀಳವಾಗಿ ಹಚ್ಚಿಕೊಳ್ಳುತ್ತಾರೆ. ಅಲ್ಲದೆ, ಉತ್ತರ ಭಾರತದಲ್ಲಿ ಮದುವೆಯಾದ ಸ್ತ್ರೀಯರು ಮಾತ್ರ ಕುಂಕುಮ ಹಚ್ಚಿಕೊಳ್ಳುವ ಸಂಪ್ರದಾಯವಿದೆ. ಆದರೆ ದಕ್ಷಿಣ ಭಾರತದಲ್ಲಿ ಮದುವೆಯಾದ ಸ್ತ್ರೀಯರು ಮಾತ್ರವಲ್ಲ ಎಲ್ಲಾ ಹೆಣ್ಣುಮಕ್ಕಳು ಸಾಮಾನ್ಯವಾಗಿ ಕುಂಕುಮವನ್ನಿಡುತ್ತಾರೆ.
source and pic credit:https://ift.tt/2FYuPSH
ಒಬ್ಬೊಬ್ಬರು ಒಂದೊಂದು ರೀತಿ ಕುಂಕುಮ ಧರಿಸುತ್ತಾರೆ. ವೈಷ್ಣವರು ಬಿಳಿಯ ಗೆರೆಗಳ ನಡುವೆ ಕುಂಕುಮವನ್ನು ಹಚ್ಚುವುದನ್ನು ನೋಡಬಹುದು. ಇಲ್ಲಿ ಲಕ್ಷ್ಮೀದೇವಿಯ ಪಾದಕಮಲವೆಂದು ಪರಿಗಣಿಸಲಾಗುತ್ತದೆ, ಬಿಳಿ ಗೆರೆಗಳು ಶ್ರೀಮನ್ನಾರಾಯಣನ ಪಾದಗಳ ಚಿಹ್ನೆಯಾಗಿವೆ. ವಿವಿಧ ಸಾಧುಸಂತರೂ ಕುಂಕುಮವನ್ನು ತಿಲಕವಾಗಿ ವಿವಿಧ ರೂಪದಲ್ಲಿ ಬಳಸುತ್ತಾರೆ. ಬ್ರಹ್ಮಾನಂದ ಪುರಾಣದಲ್ಲಿ ಕೆಂಪು ತಿಲಕವು ಸಂಯಮ ಮತ್ತು ವಿನಯವನ್ನು ಉಂಟುಮಾಡುತ್ತದೆ ಎನ್ನಲಾಗಿದೆ.
from ಸುದ್ದಿ - Planet Tv https://ift.tt/3w2ySnv
May 13, 2021 at 09:53AM