ಲಾಕ್ ಡೌನ್ ನಲ್ಲಿ ತೂಕ ಹೆಚ್ಚಿಸಿಕೊಂಡ್ರಾ..? ಸುಲಭವಾಗಿ ತೂಕ ಇಳಿಸಿಕೊಳ್ಳಲು ಇಲ್ಲಿದೆ ಟಿಪ್ಸ್
ದೇಹದ ತೂಕ ಇಳಿಸಿಕೊಂಡು ಫಿಟ್ ಆಗಿರಬೇಕೆಂದು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ಅದಕ್ಕಾಗಿ ಯೋಗ, ವ್ಯಾಯಾಮ, ಡಯಟ್ ಅಂತ ಹಲವು ಮಾರ್ಗಗಳನ್ನು ಅನುಸರಿಸುತ್ತಾರೆ. ಆದರೆ ಲಾಕ್ ಡೌನ್ ನಿಂದಾಗಿ ತುಂಬಾ ಸಣ್ಣಗಿರುವವರು ಸಹ ತಿಂದು ತಿಂದು ಸಡನ್ ಆಗಿ ತೂಕ ಹೆಚ್ಚಿಸಿಕೊಂಡಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಬೇಕಾಬಿಟ್ಟಿ ಫುಡ್ ಮಾಡ್ಕೊಂಡು ತಿಂದು ಮನೆಯಿಂದ ಹೊರಹೋಗದೆ, ಹೆಚ್ಚು ಚಟುವಟಿಕೆಗಳಿಲ್ಲದೆ ಮನೆಯಲ್ಲೇ ಸಮಯ ಕಳೆಯುವ ಕಾರಣ ಈ ರೀತಿ ತೂಕ ಹೆಚ್ಚಾಗಿರುವ ಸಾಧ್ಯತೆಯೇ ಹೆಚ್ಚು, ಈ ರೀತಿಯ ದಿಢೀರ್ ತೂಕ ಹೆಚ್ಚಳ ಹಲವರ ತಲೆನೋವಿಗೆ ಕಾರಣವಾಗಿದೆ.
ಡೋಂಟ್ ವರಿ, ಈ ರೀತಿ ತೂಕ ಹೆಚ್ಚಿಸಿಕೊಂಡವರು ಸುಲಭವಾಗಿ, ಆರೋಗ್ಯಕರವಾಗಿ ಕೆಲವೇ ದಿನಗಳಲ್ಲಿ ಸಣ್ಣಗಾಗಲು ಇಲ್ಲಿದೆ ಕೆಲವು ಟಿಪ್ಸ್..
source and pic credit: https://ift.tt/2hJjhqE
ಆಹಾರ ತಜ್ಞರು ಹೇಳುವ ಪ್ರಕಾರ ಕಡಿಮೆ ಕೊಬ್ಬಿನ ಅಂಶಗಳಿರುವ ಆಹಾರ ಸ್ವೀಕರಿಸುವುದು,ಫಾಸ್ಟ್ ಫುಡ್ ಗಳ ಸೇವನೆ ಕಡಿಮೆ ಮಾಡುವುದು, ಮನೆಯಲ್ಲೇ ಕೈಗೊಳ್ಳಬಹುದಾದ ಫಿಟ್ನೆಸ್ ಸೂತ್ರಗಳನ್ನು ಅಳವಡಿಸುವುದರಿಂದ ಸಣ್ಣ ಅವಧಿಯಲ್ಲೇ ತೂಕ ಇಳಿಸಿಕೊಳ್ಳಬಹುದು. ಅಲ್ಲದೆ ನಿರ್ಧಿಷ್ಟ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದನ್ನು ಮಾತ್ರ ರೂಢಿಸಿಕೊಳ್ಳಬೇಕು. ಬೆಳಗ್ಗಿನ ಬ್ರೇಕ್ ಫಾಸ್ಟ್, ಮಧ್ಯಾಹ್ನದ ಲಂಚ್, ರಾತ್ರಿಯ ಊಟ ಬಿಟ್ಟು ಉಳಿದ ಸಮಯಗಳಲ್ಲಿ ಆಗಾಗ ತಿನ್ನುತ್ತಿರುವ ಅಭ್ಯಾಸ ಒಳ್ಳೆಯದಲ್ಲ ಇದರಿಂದ ತೂಕ ತನ್ನಿಂದ ತಾನೇ ಹೆಚ್ಚಾಗುತ್ತಾ ಹೋಗುತ್ತದೆ.
source and pic credit: https://www.eatthis.com
ತೂಕ ಇಳಿಸಿಕೊಳ್ಳಲು ಮುಂದಾಗುವ ಮುನ್ನ ಮೊತ್ತ ಮೊದಲಾಗಿ ಈ ವಿಚಾರವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಪ್ರಮುಖವಾಗಿ ನೀವು ಒಮ್ಮೆ ತೂಕ ಕಳೆದುಕೊಂಡ ಬಳಿಕ ಅದನ್ನು ಕಾಪಾಡಿಕೊಂಡು ಹೋಗಬೇಕು. ಹೆಚ್ಚಿನವರು ತೂಕ ಇಳಿಸಿದ ಬಳಿಕ ಮತ್ತೆ ಅದೇ ರೀತಿಯಾಗಿ ತಿನ್ನಲು ಆರಂಭಿಸುವರು. ಇದು ದೊಡ್ಡ ತಪ್ಪು. ಇದರಿಂದಾಗಿ ದಿಢೀರ್ ಆಗಿ ಮತ್ತೆ ತೂಕ ಹೆಚ್ಚಳವಾಗುತ್ತದೆ. ಇದು ಆರೋಗ್ಯಕ್ಕೂ ಸಹ ಹಾನಿಕಾರ.
ಮೊದಲಾಗಿ, ಯಾವ ವಿಧದ ಆಹಾರಗಳು ಮತ್ತು ಆಹಾರದ ಗುಂಪು ತೂಕ ಕಳೆದುಕೊಳ್ಳಲು ತುಂಬಾ ಸಹಕಾರಿ ಆಗಲಿದೆ ಎಂದು ನೀವು ತಿಳಿಯಬೇಕು. ಕೆಲವರು ತಿನ್ನುವ ಆಹಾರ ಪ್ರಮಾಣವನ್ನು ಸಂಪೂರ್ಣವಾಗಿ ಕಡಿಮೆ ಮಾಡಿ, ಜ್ಯೂಸ್ ಹಣ್ಣುಗಳ ಮೊರೆ ಹೋಗುತ್ತಾರೆ. ಆದರೆ ಈ ರೀತಿ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಆಹಾರ ಸೇವನೆ ನಿಗದಿತ ಪ್ರಮಾಣಕ್ಕಿಂತ ಕಡಿಮೆಯಾದರೆ ಆರೋಗ್ಯ ಹದಗೆಡುವ ಸಾಧ್ಯತೆಯೂ ಇದೆ.
source and pic credit: google.com
ಹಲವಾರು ಮಂದಿ ಬೆಳಗ್ಗೆ ತಿಂಡಿ ತಿನ್ನದೆ, ಅವಸರ ಅವಸರವಾಗಿ ದಿನ ಆರಂಭಿಸುತ್ತಾರೆ. ಅಥವಾ ಪ್ರೊಸೆಸ್ಡ್ ತಿಂಡಿ-ತಿನಿಸುಗಳನ್ನು ತಿನ್ನುವುದೂ ಇದೆ. ಕೆಲಸಕ್ಕೆ ಹೋಗುವ ಜನರು, ಕಾಲೇಜಿಗೆ ಹೋಗುವ ಮಂದಿ ಹೆಚ್ಚಾಗಿ ಫಾಸ್ಟ್ ಫುಡ್ ತಿನ್ನುತ್ತಾರೆ. ಆದರೆ ಇದು ಉತ್ತಮ ಪದ್ಧತಿಯಲ್ಲ. ನಮ್ಮ ಆರೋಗ್ಯ ವ್ಯವಸ್ಥೆ ಮತ್ತು ತೂಕ ಹೆಚ್ಚಲು ಇಂಥ ಅನಾರೋಗ್ಯಕರ ಪದ್ಧತಿಯೂ ಕಾರಣ. ಈ ರೀತಿಯ ಆಹಾರ ಪದ್ಧತಿ ಆರೋಗ್ಯವನ್ನು ಕೆಡಿಸುವುದು ಮಾತ್ರವಲ್ಲದೆ, ತೂಕವನ್ನು ಬೆಳಗ್ಗೆ ಆದಷ್ಟು ಬಿಸಿಯಾದ, ಮನೆಯಲ್ಲೇ ಮಾಡಿದ ತಿಂಡಿ ಸೇವಿಸಿ.
ಹಣ್ಣು, ತರಕಾರಿ ಹೆಚ್ಚು ತಿನ್ನಿ
source and pic credit: https://ift.tt/3bWYKtt
ಆರೋಗ್ಯ ತಜ್ಞರು ಸಲಹೆ ನೀಡುವಂತೆ ನಾವು ಪ್ರತಿನಿತ್ಯ ಐದರಿಂದ ಏಳು ಬಾರಿ ಹಣ್ಣು ಅಥವಾ ತರಕಾರಿ ಸೇವಿಸಬೇಕು. ಹಣ್ಣು ಮತ್ತು ತರಕಾರಿಗಳು ಫೈಬರ್ ಅಂಶವನ್ನು ಹೊಂದಿರುತ್ತದೆ. ದೇಹದ ಪಚನಕ್ರಿಯೆ ಅಥವಾ ಜೀರ್ಣಶಕ್ತಿ ಉತ್ತಮಗೊಳ್ಳಲು ಸಹಕಾರಿಯಾಗುತ್ತದೆ. ಉನ್ನತ ಮಟ್ಟದ ಆಂಟಿಆಕ್ಸಿಡೆಂಟ್ ಗಳು ಇರುವಂತಹ ಹಣ್ಣುಗಳಾಗಿರುವಂತಹ ಲಿಂಬೆ, ಕಿತ್ತಳೆ ಇತ್ಯಾದಿಗಳನ್ನು ಹೆಚ್ಚು ಸೇವಿಸಿ. ತಾಜಾ ಹಣ್ಣುಗಳನ್ನು ಬಳಸಿಕೊಂಡು ಜ್ಯೂಸ್ ತಯಾರಿಸಿಕೊಂಡು ತಯಾರಿಸುವುದು ಸಹ ಉತ್ತಮ.
ಕಡಿಮೆ ಕೊಬ್ಬು ಇರುವಂತಹ ಮೊಸರು ಸಹ ಸೇವಿಸುವುದು ಒಳ್ಳೆಯದು. ಬ್ರಾಕೋಲಿ, ಬಸಳೆ, ಬದನೆ ಇತ್ಯಾದಿ ತರಕಾರಿಗಳನ್ನು ಹೆಚ್ಚು ಬಳಸಿಕೊಳ್ಳಿ. ಮೆಟೊ, ಸೌತೆಕಾಯಿ, ಹಸಿರೆಲೆಗಳ ಹೆಚ್ಚು ಸೇವನೆ ದೇಹದ ಆರೋಗ್ಯ ಸರ್ವತೋಮುಕವಾಗಿ ವೃದ್ಧಿಯಾಗಲು ಸಹಾಯ ಮಾಡುತ್ತದೆ.
source and pic credit: https://www.heart.org
ಆಗಾಗ ಹಸಿವೆಂದು ಜಂಕ್ ಫುಡ್ ತಿನ್ನುವ ಬದಲು ಪ್ರೊಟೀನ್ ಅಧಿಕವಾಗಿ ಹೊಂದಿರುವ ಡ್ರೈ ಫ್ರೂಟ್ಸ್ ಗಳನ್ನು ಸೇವಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಕುರುಕಲು ತಿಂಡಿ, ಕರಿದ, ಖಾರ ಪದಾರ್ಥಗಳನ್ನು ತಿನ್ನುವುದರಿಂದ ತೂಕ ಹೆಚ್ಚುತ್ತದೆ. ಊಟ-ತಿಂಡಿಯ ನಡುವಿನ ಸಣ್ಣ ಹಸಿವನ್ನು ಓಡಿಸಲು ಡ್ರೈ ಫ್ರೂಟ್ಸ್ ಉತ್ತಮ ಆಯ್ಕೆ.
source and pic credit: https://ift.tt/3oVBhhg
ಹೆಚ್ಚು ನೀರು ಕುಡಿಯಿರಿ
ಪ್ರತಿನಿತ್ಯ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದು ಒಳ್ಳೆಯದು. ಟಾಕ್ಸಿಕ್ ಅಂಶಗಳನ್ನು ದೇಹದಿಂದ ಹೊರಹಾಕಲು ಹೆಚ್ಚೆಚ್ಚು ನೀರು ಕುಡಿಯಿ. ಸುಸ್ತು, ತಲೆ ನೋವು ಹಾಗೂ ಪಚನಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಾದ ಹೊಟ್ಟೆ ಉಬ್ಬರ, ಅಸಿಡಿಟಿ ಇತ್ಯಾದಿಗಳು ಇದರಿಂದ ಕಡಿಮೆಯಾಗುತ್ತದೆ.
ಊಟ ಮಾಡುವಾಗ ಮೊಬೈಲ್ ಒತ್ತುವುದು, ಟಿವಿ ನೋಡುವುದು ಹಲವರ ಅಭ್ಯಾಸ. ಅದನ್ನು ನಿಲ್ಲಿಸಿ. ಗಮನ ಬೇರೆಡೆಯಿದ್ದಾಗ ನಾವು ಎಷ್ಟು ಪ್ರಮಾಣದ ಆಹಾರ ಸೇವಿಸಿದೆವು ಅನ್ನೋದು ನಮ್ಮ ಗಮನಕ್ಕೆ ಬರುವುದಿಲ್ಲ. ಹಸಿವೆಯಿಲ್ಲದಿರದ್ದರೂ ಸುಮ್ಮನೆ ತಿನ್ನುತ್ತಾ ಹೋಗುತ್ತವೆ. ಟಿವಿ ನೋಡುತ್ತಾ, ಮೊಬೈಲ್ ಒತ್ತುತ್ತಾ ಒತ್ತಡದಲ್ಲಿ ಆಹಾರ ಸೇವನೆ ಮಾಡಿದಂತಾಗುತ್ತದೆ.. ಅದರಿಂದ ಕೆಲವು ಬಾರಿ ಓವರ್ ಈಟಿಂಗ್ ಅಥವಾ ಅಶಿಸ್ತಿನ ಆಹಾರ ಸೇವನೆ ಅಭ್ಯಾಸ ಹೆಚ್ಚಾಗಬಹುದು.
source and pic credit: https://ift.tt/2AGV0u5
ಮಲಗುವ 2 ಗಂಟೆ ಮೊದಲೇ ಊಟ ಮಾಡಿ
ತೂಕ ಇಳಿಸಿಕೊಳ್ಳಲು ಪಾಲಿಸಬೇಕಾದ ಅತಿಮುಖ್ಯ ಅಂಶ ಇದು. ಊಟ ಮತ್ತು ನಿದ್ದೆಯ ನಡುವೆ ಸಮರ್ಪಕ ಅಂತರವಿರಬೇಕಾದುದು ಅಗತ್ಯ. ಹಲವರುಇನ್ನೇನು ಮಲಗುವ ಹೊತ್ತಾಯ್ತು ಎನ್ನುವಾಗ ಊಟ ಮಾಡುತ್ತಾರೆ. ತಕ್ಷಣ ಮಲಗಿ ಬಿಡುತ್ತಾರೆ. ಈ ಕ್ರಮ ಸರಿಯಲ್ಲ. ರಾತ್ರಿ ಮಲಗುವುದಕ್ಕೆ ಸುಮಾರು 2 ಗಂಟೆ ಮೊದಲು ಊಟ ಮಾಡಬೇಕು. ಹಾಗೂ ರಾತ್ರಿ ವೇಳೆ ಕಡಿಮೆ ಪ್ರಮಾಣದ ಊಟ ಮಾಡಬೇಕು. ಜೀರ್ಣಕ್ಕೆ ಸುಲಭವಾಗುವಂತೆ ಆಹಾರ ಸೇವಿಸಿ. ಇದರಿಂದ ಉತ್ತಮ ನಿದ್ರೆ ಮಾಡಲು ಕೂಡ ಸಹಾಯವಾಗುತ್ತದೆ. ತೂಕ ಹೆಚ್ಚಿಸಿಕೊಂಡು ಈಗ ತೂಕ ಇಳಿಸಲು ನೀವು ಬಯಸುತ್ತೀರಾದರೆ ಈ ಅಂಶಗಳನ್ನು ಅಳವಡಿಸಿ, ಪಾಲಿಸಿ. ಇಷ್ಟೇ ಅಲ್ಲದೆ, ನಿಯಮಿತವಾಗಿ ವ್ಯಾಯಾಮವನ್ನೂ ಮಾಡಿ.
from ಸುದ್ದಿ - Planet Tv https://ift.tt/34kZ010
May 27, 2021 at 07:14PM