ಯಾವ ಹೋಮ ಮಾಡಿದರೆ ಯಾವ ಫಲ ಸಿಗುತ್ತದೆ..?
source and pic credit: https://ift.tt/3yrk582
ಹಿಂದೂ ಧರ್ಮದಲ್ಲಿ ಹೋಮ-ಹವನಗಳಿಗೆ ಪ್ರಮುಖವಾದ ಸ್ಥಾನವಿದೆ. ಹೋಮ ಮಾಡುವಾಗಿನ ಭಕ್ತಿ, ಶ್ರದ್ಧೆಗಳಿಂದ ಮನುಷ್ಯನ ಮನಸ್ಸು ಶಾಂತವಾಗುತ್ತದೆ. ಪರಮಾತ್ಮನಲ್ಲಿ ವಿಲೀನಗೊಳ್ಳುತ್ತದೆ. ಈ ಮನಶಾಂತಿ ಮನಸ್ಸಿನ ಅನೇಕ ಒತ್ತಡಗಳನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಈ ನಂಬಿಕೆಗಳಿಗೆ ವೇದಗಳು ಸಹ ಪುಷ್ಟೀಕರಣ ನೀಡಿವೆ.
ಹವನದಲ್ಲಿ ಉಪಯೋಗಿಸುವ ಸಾಮಗ್ರಿಗಳು ಅಗ್ನಿಯಲ್ಲಿ ಆಹುತಿ ಬಿದ್ದು ಅದರಿಂದ ಬರುವ ಧೂಮದ ಹೊಗೆ ಸರ್ವತ್ರ ವ್ಯಾಪಕವಾಗುತ್ತದೆ. ಈ ಧೂಮದಲ್ಲಿ ಅನೇಕ ಔಷಧೀಯ ಗುಣಗಳಿರುತ್ತವೆ. ಪ್ರಕೃತಿಯಲ್ಲಿರುವ ರೋಗವನ್ನು ಹಬ್ಬಿಸುವ ವಿಷಾಣುಗಳನ್ನು ಇವು ನಾಶ ಪಡಿಸುತ್ತವೆ ಎಂದು ವೈಜ್ಞಾನಿಕ ಸಂಶೋಧನೆಗಳಿಂದ ಸಾಬೀತು ಪಟ್ಟಿದೆ.
source and pic credit: google.com
ಹಿಂದಿನಿಂದಲೂ ವೇದಗಳನ್ನು ಸಂಸ್ಕೃತಿಯ ಆಧಾರವೆಂದು ಪರಿಗಣಿಸಲಾಗುತ್ತದೆ. ವೇದಗಳ ಪ್ರಕಾರ ಹೋಮ-ಹವನವೆಂದರೆ ಶುದ್ಧಿಗೊಳಿಸಲಾದ ಅಗ್ನಿಯಲ್ಲಿ ಅರ್ಪಣೆಗಳನ್ನು ಮಾಡುವುದು ಪ್ರಮುಖ ಕ್ರಿಯೆ. ಪ್ರಾಚೀನ ಕಾಲದಿಂದಲೂ ಹೋಮ-ಹನವಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತಿತ್ತು. ವೇದ-ಪುರಾಣಗಳ ಕಥೆಗಳಲ್ಲಿ ಹೋಮ, ಯಜ್ಞಗಳ ಬಗ್ಗೆ ಹೇಳಿರುವುದುನ್ನು ನಾವು ಕೇಳಿರಬಹುದು. ಆದರೆ ಇಂಥದ್ದೇ ಹೋಮ ಮಾಡಿದರೆ ಇಂತಹದ್ದೇ ಫಲ ಸಿಗುತ್ತದೆ ಅಂತಿದೆ. ಅದನ್ನು ಅರಿತುಕೊಂಡು ಹೋಮಗಳನ್ನು ಭಕ್ತ-ಶ್ರದ್ಧೆಯಿಂದ ಮಾಡಿದರಷ್ಟೇ ಅದು ಫಲಪ್ರದವಾದೀತು.
source and pic credit: https://ift.tt/3wmV9g3
ವಿಘ್ನಗಳನ್ನು ನಿವಾರಿಸಲು, ಕಾರ್ಯದಲ್ಲಿ ಸಫಲವಾಗಲು ಗಣಹೋಮ, ಶೀಘ್ರ ವಿವಾಹ ಪ್ರಾಪ್ತಿಗಾಗಿ ಹರಿದ್ರಾ ಗಣಪತಿ ಹೋಮ, ಧನ ಪ್ರಾಪ್ತಿಗಾಗಿ ಲಕ್ಷ್ಮೀ ಗಣಪತಿ ಹೋಮ, ರೋಗ ನಿವಾರಣೆಗಾಗಿ ಧನ್ವಂತರಿ ಹೋಮ, ರೋಗ ಪರಿಹಾರಕ್ಕೆ ಮತ್ತು ಅಕಾಲ ಮೃತ್ಯು ನಿವಾರಣೆಗೆ ದೂರ್ವ ಮೃತ್ಯುಂಜಯ ಹೋಮ, ವಾಮಾಚಾರಗಳಿಂದ ಆಗುವ ಕೆಡುಕನ್ನು ನಿವಾರಿಸಲು ಆಂಜನೇಯ ಮಂತ್ರ ಹೋಮ, ಮನಸ್ಸಿನ ಕಾಮನೆ ಪೂರ್ತಿಯಾಗಲು ಚಿಂತಾಮಣಿ ಗಣಪತಿ ಸ್ತೋತ್ರ ಹೋಮ, ವಿದ್ಯಾ ಪ್ರಾಪ್ತಿಗಾಗಿ ಮೇಧಾ ಗಣಪತಿ ಹೋಮ ಮಾಡಬಹುದಾಗಿದೆ.
ಬಾಲಗಣಪತಿ ಹೋಮ
source and pic credit: google.com
ವಿವಾಹಸಿದ್ಧಿಗಾಗಿ ಬಾಲಗಣಪತಿ ಹೋಮ ಮಾಡುವುದು ಅತ್ಯುತ್ತಮ ಎನ್ನಲಾಗುತ್ತದೆ. ಸಿದ್ಧಿಗಾಗಿ ಬಾಲ ಗಣಪತಿ ಹವನ ಮಾಡಿಸಿದ ಶೇಕಡಾ 90ರಷ್ಟು ಮಂದಿಗೆ ವಿವಾಹ ಸಿದ್ಧಿ ಆಗಿದೆ. ಬಾಲ ಗಣಪತಿ ಹವನ ಎಂದರೆ ಗಣಪತಿಯನ್ನು ಒಂದು ಚಿಕ್ಕ ಮಗುವಿನ ಸ್ವರೂಪದಲ್ಲಿ ಅವನ ತಾಯಿಯಾದ ಗೌರಿ ಸಹಿತವಾಗಿ ವಿಶಿಷ್ಟವಾದ ಅತ್ಯಂತ ಗೌಪ್ಯವಾದ ಮಂತ್ರಗಳಿಂದ ಆವಾಹನೆ ಮಾಡಿ ಆರಾಧಿಸುವುದಾಗಿ. ಈ ಹವನದಲ್ಲಿ ಪಂಚದ್ರವ್ಯ ಅಥವಾ ಅಷ್ಟದ್ರವ್ಯದ ಬಳಕೆ ಆಗುತ್ತದೆ.
source and pic credit: https://ift.tt/3yhyZgZ
ಇನ್ನು, ಈ ಬಾಲಗಣಪತಿ ಹವನವನ್ನು ಸೂರ್ಯೋದಯದ ಮೊದಲೇ ಮಾಡಬೇಕು. ಹವನದಲ್ಲಿ ಪಂಚ ದ್ರವ್ಯ ಅಥವಾ ಅಷ್ಟ ದ್ರವ್ಯವನ್ನು ಮೃಗೀಯ ಮುದ್ರೆಯಲ್ಲಿ ಒಂದು ಸಾವಿರದ ಎಂಟು ಸಲ ಹಾಕಬೇಕು. ಬಾಲ ಗಣಪತಿ ಹವನ ಮಾಡುವ ಪುರೋಹಿತರಿಗೆ ಅತ್ಯಂತ ಕ್ಲಿಷ್ಟಕರ ಆದ ಈ ಮಂತ್ರದ ಉಪದೇಶ ಗೊತ್ತಿರಬೇಕು. ಹಾಗೂ ಆ ಮಂತ್ರವನ್ನು ಅವರು ಈ ಮೊದಲೇ ಜಪಿಸಿ ಸಿದ್ಧಿ ಮಾಡಿಕೊಂಡು ಬಹಳ ಬಾರಿ ಈ ಹವನ ಮಾಡಿಸಿರಬೇಕು. ಈ ಹವನ ಮಾಡಿಸಲು ನಾಲ್ಕೈದು ಜನ ಪುರೋಹಿತರ ಅವಶ್ಯಕತೆ ಇರುತ್ತದೆ.
ಧನ್ವಂತರಿ ಹವನ
source and pic credit: https://shivology.com
ಯಾವುದೇ ಅನಾರೋಗ್ಯ ಗುಣವಾಗದೆ ಮತ್ತೆ ಮತ್ತೆ ಕಾಡುತ್ತಿದ್ದಾಗ ಧನ್ವಂತರಿ ಹವನ ಸಹಿತ ಮೃತ್ಯು ಸಂಜೀವಿನಿ ಮಹಾ ಮಂತ್ರ ಹವನ ಮಾಡುತ್ತಾರೆ. ಹಲವು ಕಾಲಗಳಿಂದ ಕಾಡುತ್ತಿರುವ ವ್ಯಾಧಿಯು ಇದರಿಂದ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. ಮೃತ್ಯು ಭಯದಿಂದ ಪಾರಾಗಲು ಇರುವ ಪ್ರಮುಖವಾದ ದೇವತಾ ಉಪಾಸನೆಯೇ ಈ ಎರಡು ಹವನಗಳು. ಸಮಸ್ಯೆಗಳು ಇದ್ದಲ್ಲಿ ಈ ಮೇಲೆ ತಿಳಿಸಿದ ಹವನಗಳೆರಡನ್ನೂ ಒಂದೇ ಸಲ ಮಾಡಿಸಿದಾಗ ಮಾತ್ರ ವಿಶೇಷ ನಿರೀಕ್ಷಿತ ಫಲ ದೊರೆಯುತ್ತದೆ ಎನ್ನಲಾಗುತ್ತದೆ.
ಸರ್ಪ ಶಾಂತಿ ಹವನ
source and pic creditL https://www.homas.org
ಸರ್ಪ ಶಾಂತಿ ಹವನವನ್ನು ಸಂತಾನ ಅಪೇಕ್ಷಿತರು ಮಾಡಿಸುವುದು ವಾಡಿಕೆ. ಗಂಡ ಹಾಗೂ ಹೆಂಡತಿ ಇಬ್ಬರಿಗೂ ಸಂತಾನ ಯೋಗ ಇಲ್ಲದಿದ್ದಾಗಲೂ ಶಾಂತಿ-ಹವನ ಮಾಡಿಸಿ, ದಿವ್ಯ ಕ್ಷೇತ್ರಗಳಿಗೆ ಕಳುಹಿಸಿದ ಮೇಲೆ ಸಂತಾನ ಆದ ಉದಾಹರಣೆಗಳಿವೆ. ಭಕ್ತಿ-ಶ್ರದ್ಧೆಯಿಂದ ಈ ಹವನದಲ್ಲಿ ಪಾಲ್ಗೊಂಡರೆ ಮಕ್ಕಳಾಗುತ್ತವೆ ಎಂದು ಹೇಳಲಾಗುತ್ತದೆ.
ಲಕ್ಷ್ಮೀ ಹೋಮ

ವ್ಯಾಪಾರದಲ್ಲಿ ಲಾಭ ಆಗಬೇಕಾದಲ್ಲಿ ಲಕ್ಷ್ಮಿ ದೇವಿಯ ಸಾನ್ನಿಧ್ಯ ಬೇಕು. ಆ ಲಕ್ಷ್ಮೀ ದೇವಿಯ ಒಂದು ವಿಶೇಷ ಆರಾಧನೆ ಈ ಹವನ. ಈ ಪೂಜೆಯ ವಿಶೇಷ ಅಂದರೆ ಲಕ್ಷ್ಮೀ, ನಾರಾಯಣ ಇಬ್ಬರನ್ನೂ ನಾವು ಪೂಜಿಸುವುದು. ಲಕ್ಷ್ಮೀ ದೇವಿಯ ಹೃದಯ ಸ್ತೋತ್ರ ಮಂತ್ರಗಳ ಜೊತೆ ನಾರಾಯಣ ಹೃದಯ ಸ್ತೋತ್ರ ಮಂತ್ರಗಳನ್ನು ಸೇರಿಸಿ ಮಾಡುವ ಹವನ ಈ ಶ್ರೀ ಲಕ್ಷ್ಮೀ ನಾರಾಯಣ ಹೃದಯ ಹವನ. ಈ ಹವನ ಮಾಡಿಸುವುದರಿಂದ ಆರ್ಥಿಕ ಬಾಧೆಗಳು ನಿವಾರಣೆ ಆಗಿ ವ್ಯಾಪಾರ ಅಭಿವೃದ್ಧಿ ಆಗುತ್ತದೆ ಎಂಬುದು ನಂಬಿಕೆ.
ನವಗ್ರಹ ಹೋಮ
source and pic credit: https://www.homas.org
ನೆಮ್ಮದಿ, ಶಾಂತಿ, ಗ್ರಹಣದಲ್ಲಿ ಆಗುವ ದೋಷಗಳ ನಿವಾರಣೆಗೆ ನವಗ್ರಹ ಹೋಮ ಮಾಡುತ್ತಾರೆ. ನವಗ್ರಹಗಳಲ್ಲಿ ತೊಂದರೆ ತಾಪತ್ರಯವಿದ್ದಾಗ ಸಕಲ ಕಷ್ಟಗಳನ್ನು ಹೋಗಲಾಡಿಸಲು ಇದನ್ನು ಮಾಡುವುದು ಉತ್ತಮವೆಂದು ಹೇಳಲಾಗುತ್ತದೆ. ಇದೇ ರೀತಿ ಸದಾ ಕಾಯಿಲೆಯಿಂದ ನರಳುವಿಕೆ, ಸಂತಾನಭಾಗ್ಯವಿಲ್ಲದಿದ್ದಾಗ ಅರುಣ ಹೋಮವನ್ನು ಮಾಡಿದರೆ ಅಭಿವೃದ್ದಿ, ಯಶಸ್ಸು, ಏಳಿಗೆ ದೊರೆಯುತ್ತದೆ ಎಂದು ಹೇಳುತ್ತಾರೆ.
ಕುಬೇರ ಹೋಮ

source and pic credit: https://ift.tt/3yrk582
ವ್ಯಾಪಾರದಲ್ಲಿ ನಷ್ಠ, ಕೊಟ್ಟ ಹಣ ವಾಪಾಸು ಬರದೇ ಇರುವುದು ಇಂಥದ್ದು ಆಗದೇ ಇರುವುದಕ್ಕೆ ಕುಬೇರ ಹೋಮ ಮಾಡಬೇಕು ಎಂದು ಹೇಳುತ್ತಾರೆ. ಹಣ ವಸೂತಿಗೆ, ವ್ಯಾಪಾರದಲ್ಲಿ ಲಾಭ ದೊರಕುವುದಕ್ಕೆ ಈ ಹೋಮ ಮಾಡಿದರೆ ಶುಭ.ಎನ್ನಲಾಗುತ್ತದೆ. ಕಷ್ಟ, ನಷ್ಟ, ದಾರಿದ್ರ್ಯತೆಯ ನಿವಾರಣೆಗೆ ಹಾಗೂ ಎಲ್ಲ ರೀತಿಯ ಸುಖ, ಸಂತೋಷ, ಸೌಭಾಗ್ಯ ದೊರಕಲುಭಾಗ್ಯ ಸೂಕ್ತ ಹೋಮಮಾಡಿಸಬೇಕು ಎಂದು ಹೇಳುತ್ತಾರೆ.
ಬಾಲಗ್ರಹ ಹೋಮ

ಮಕ್ಕಳ ಉತ್ತಮ ಆರೋಗ್ಯಕ್ಕೆ ಈ ಹೋಮವನ್ನು ಮಾಡುತ್ತಾರೆ. ಮಕ್ಕಳು ಬೆಚ್ಚಿ ಬೀಳುವುದು, ಸದಾ ಹಟ,ಅಳು ಚಂಡಿ ಹಿಡಿಯುವುದು, ಅನ್ನವನ್ನು ತಿನ್ನಲು ನಿರಾಕರಿಸುವುದು ವಾಂತಿ ಮಾಡಿಕೊಳ್ಳುವುದು, ಜ್ವರದ ತೊಂದರೆ ಇದ್ದಾಗ ಈ ಹೋಮ ಮಾಡಿಸಿದರೆ ಶುಭ ಎಂದು ನಂಬಲಾಗಿದೆ,
from ಸುದ್ದಿ - Planet Tv https://ift.tt/3u3W57g
May 19, 2021 at 05:46PM