ನೀರು ಕುಡಿಯಿರಿ ಎಂದ ಕ್ರಿಸ್ಟಿಯಾನೋ ರೊನಾಲ್ಡೊ; ಕೋಕಾ ಕೋಲಾ ಕಂಪೆನಿಗೆ 20 ಸಾವಿರ ಕೋಟಿ ರೂ. ನಷ್ಟ..!
Featured Image Credits : Sports Tiger
ವಿಶ್ವದ, ದೇಶದ ಹಲವಾರು ಜಾಗತಿಕ ಕಂಪೆನಿಗಳು ತಮ್ಮ ಪ್ರಾಡಕ್ಟ್ ಗಳ ಪ್ರಚಾರಕ್ಕೆ ಸ್ಟಾರ್ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತವೆ. ಟಿವಿ, ದೊಡ್ಡ ದೊಡ್ಡ ಪೋಸ್ಟರ್ಗಳು, ಇವೆಂಟ್, ಎಕ್ಸಬಿಷನ್ ಗಳಲ್ಲಿ ಸ್ಟಾರ್ಗಳನ್ನು ಬಳಸಿ ಪ್ರಾಡಕ್ಟ್ನ್ನು ಪ್ರಚುರಪಡಿಸಲಾಗುತ್ತದೆ. ಹೆಚ್ಚಾಗಿ ಸಿನಿಮಾ, ಮನರಂಜನೆ, ಕ್ರೀಡಾ ಕ್ಷೇತ್ರದ ಸೆಲಬ್ರಿಟಿಗಳನ್ನು ಜಾಹೀರಾತುಗಳಲ್ಲಿ ಬಳಸಿಕೊಳ್ಳಲಾಗುತ್ತದೆ . ಇದಕ್ಕೆ ಮುಖ್ಯ ಕಾರಣ ಸ್ಟಾರ್ಗಳು ಹೆಚ್ಚಾಗಿ ಅತ್ಯಧಿಕ ಫಾಲೋವರ್ಸ್ನ್ನು ಹೊಂದಿರುತ್ತಾರೆ. ಸ್ಟಾರ್ ಗಳು ಹೇಳಿದ ಮಾತನ್ನು ಅಭಿಮಾನಿಗಳು ಹೆಚ್ಚು ಪಾಲಿಸುತ್ತಾರೆ. ಹೀಗಾಗಿ ಪ್ರಾಡಕ್ಟ್ ಸುಲಭವಾಗಿ ಮಾರ್ಕೆಟ್ನಲ್ಲಿ ಮಹತ್ವ ಪಡೆದುಕೊಳ್ಳುತ್ತದೆ.
ಸೆಲಬ್ರಿಟಿಗಳನ್ನು ಬಳಸಿ ಪ್ರಾಡಕ್ಟ್ ಸೇಲ್ ಮಾಡುವ ಈ ಮಾರ್ಕೆಟಿಂಗ್ಗೆ ಸ್ಟಾರ್ ಡಮ್ ಹೆಚ್ಚು ಬಳಕೆಯಾಗುತ್ತದೆ. ಸ್ಟಾರ್ಗಳ ಹೌದು, ಇಲ್ಲ ಅನ್ನೋ ಸೂಚನೆಯಿಂದಲೇ ಪ್ರಾಡಕ್ಟ್ ಸೇಲ್ ಹೆಚ್ಚು ಮತ್ತು ಕಡಿಮೆಯಾಗುತ್ತದೆ. ಈ ಸ್ಟಾರ್ ಡಮ್ಗೆ ಸ್ಪಷ್ಟ ಉದಾಹರಣೆ ಫುಟ್ ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ. ಕೆಲವು ದಿನಗಳಿಂದ ಕ್ರಿಸ್ಟಿಯಾನೋ ರೊನಾಲ್ಡೋ ಮತ್ತು ಕೋಕಾಕೋಲಾ ಕಂಪೆನಿ ಹೆಚ್ಚು ಸುದ್ದಿಯಲ್ಲಿದೆ. ಇದಕ್ಕೆ ಕಾರಣವೇನು. ಕ್ರಿಸ್ಟಿಯಾನೋ ರೊನಾಲ್ಡೋ ಹೇಳಿದ್ದೇನು..? ಇದರಿಂದ ಕೋಕಾ ಕೋಲಾ ಕಂಪೆನಿಗೆ ಆಗಿದ್ದೇನು ಇಲ್ಲಿದೆ ಮಾಹಿತಿ.
ಪೋರ್ಚುಗೀಸ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ, ಹಂಗೇರಿ-ಪೋರ್ಚುಗಲ್ ಪಂದ್ಯಕ್ಕೂ ಮುನ್ನ ಯುರೋ 2020 ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರ ಮುಂಭಾಗ ಟೇಬಲ್ ನಲ್ಲಿ ಕೋಕಾ ಕೋಲಾ ಬಾಟಲಿಗಳನ್ನು ಇಡಲಾಗಿತ್ತು. ಆ ಎರಡು ಕೊಕೋ ಬಾಟಲ್ಗಳನ್ನು ಕ್ರಿಸ್ಟಿಯಾನೋ ರೊನಾಲ್ಡೊ ಅಲ್ಲಿಂದ ಸರಿಸಿ, ಅದರ ಬದಲಿಗೆ ನೀರು ಕುಡಿಯಿರಿ ಎಂದು ಹೇಳಿದ್ದಾರೆ. ನೀರಿನ್ ಬಾಟಲ್ನ್ನು ಕೈಯಲ್ಲಿ ಹಿಡಿದ ರೊನಾಲ್ಡೊ ಪೋರ್ಚುಗೀಸ್ ಭಾಷೆಯಲ್ಲಿ ಅಗುವಾ ಎಂದರೆ ನೀರು ಕುಡಿಯಿರಿ ಎಂದು ಸೂಚಿಸಿದ್ದಾರೆ.
ಇದರಿಂದಾಗಿ ಕೋಕಾ ಕೋಲಾಗೆ 4 ಬಿಲಿಯನ್ ಡಾಲರ್ ನಷ್ಟವಾಗಿದೆ ಎಂದು ತಿಳಿದುಬಂದಿದೆ. ಆಸ್ಟ್ರೇಲಿಯನ್ ಅಸೋಸಿಯೇಟ್ ಪ್ರೆಸ್ ವರದಿ ಪ್ರಕಾರ, ರೊನಾಲ್ಡೋ ಅವರ ಈ ಸೂಚನೆಯ ನಂತರ ಕೋಕಾ ಕೋಲಾ ಕಂಪೆನಿಗೆ 4 ಬಿಲಿಯನ್ ಡಾಲರ್ ನಷ್ಟವಾಗಿದೆ ಎಂದು ವರದಿಯಾಗಿದೆ. ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳಬೇಕು ಅಂದರೆ 29,200 ಕೋಟಿಗೂ ಹೆಚ್ಚು ನಷ್ಟವಾಗಿದೆ.
Image Credits : PR Week
ಅಲ್ಲದೆ ಕೋಲಾ ಪಾನೀಯವನ್ನು ಉತ್ಪಾದಿಸುವ ಕೋಕಾ ಕೋಲಾ ಕಂಪೆನಿಯ ಷೇರು ದಿಢೀರ್ ಕುಸಿತ ಕಂಡಿದೆ. ಒಂದೇ ದಿನ ಕಂಪೆನಿಯ ಷೇರು ಮೌಲ್ಯ ಶೇ 1.6ರಷ್ಟು ಇಳಿಕೆ ಕಂಡಿದೆ. ಆ ಮೂಲಕ ಕಂಪೆನಿಯ ಮೌಲ್ಯ 242 ಬಿಲಿಯನ್ಯುಎಸ್ಡಿಯಿಂದ 238 ಬಿಲಿಯನ್ ಯುಎಸ್ಡಿಗೆ ಕುಸಿಯಿತು. ಆ ಮೂಲಕ 400 ಕೋಟಿ ಅಮೆರಿಕನ್ ಡಾಲರ್ ನಷ್ಟವಾಗಿದೆ. ಅಚ್ಚರಿಯ ವಿಷಯವೆಂದರೆ ರೊನಾಲ್ಡೊ ಕೋಕಾ ವನ್ನು ದೂರ ಸರಿಸಿ ನೀರಿನ ಬಾಟಲ್ ಹಿಡಿದ ಪ್ರೆಸ್ಮೀಟ್ ಯುರೋ ಕಫ್ ಪುಟ್ಬಾಲ್ ಪಂದ್ಯಾವಳಿಗೆ ನಡೆದಿದೆ. ಯುರೋ ಕಫ್ ಪುಟ್ಬಾಲ್ ಪಂದ್ಯಾವಳಿಯಲ್ಲಿ ಕೋಕಾ ಕೋಲಾ ಕಂಪೆನಿ ಸಹ ಪ್ರಾಯೋಜಕತ್ವ ವಹಿಸಿದೆ.
ಕೋಕ್ ಸೈಡಿಗಿಟ್ಟು 'ನೀರು ಕುಡಿಯಿರಿ' ಎಂದ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ನಡೆಯಿಂದ ಕೋಕಾ ಕೋಲಾ ಕಂಪೆನಿಗೆ ಮುಜುಗರವೂ ಆಗಿದೆ. ಯುರೋ 2020ರ ಪಂದ್ಯಾವಳಿಗೆ ಕೋಕಾ ಕೋಲಾ ಅಧಿಕೃತ ಪ್ರಮೋಟರ್ ಆಗಿದ್ದರೂ, ರೊನಾಲ್ಡೋ ವರ್ತನೆ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಅವರಿಗೆ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳು, ಬೆಂಬಲಿಗರಿದ್ದಾರೆ.
36 ವರ್ಷದ ಕ್ರಿಸ್ಟಿಯಾನೋ ರೊನಾಲ್ಡೊ ತಮ್ಮ ದಾಖಲೆಗಳನ್ನು ವಿಸ್ತರಿಸಿಕೊಂಡಿದ್ದಾರೆ. ಐದು ಪ್ರತ್ಯೇಕ ಯುರೋ ಫೈನಲ್ಗಳಲ್ಲಿ ಅಂಕ ಪಡೆದ ದಾಖಲೆ ಅವರ ಹೆಸರಲ್ಲಿದೆ. ಜತೆಗೆ ಅತಿ ಹೆಚ್ಚು ಪಂದ್ಯಗಳನ್ನು ಆಡಿರುವ ದಾಖಲೆ, 2004ರ ಆರಂಭದಿಂದ ಹಂಗೇರಿ ಎದುರಿನ ತನಕ 22 ಪಂದ್ಯಗಳನ್ನು ಆಡಿದ್ದಾರೆ. ಕ್ರಿಸ್ಟಿಯಾನೊ ರೊನಾಲ್ಡೊ ಇನ್ನು ಒಂದು ಗೋಲು ಹೊಡೆದರೆ ಮೈಕೆಲ್ ಪ್ಲಾಟಿನಿ ದಾಖಲೆ ಮುರಿಯಲಿದ್ದಾರೆ. ಐದು ವರ್ಷಗಳ ಹಿಂದೆ ನಡೆದ ಫೈನಲ್ನಲ್ಲಿ ಪೋರ್ಚುಗಲ್ ಫ್ರಾನ್ಸ್ ತಂಡವನ್ನು ಮಣಿಸಿ ತನ್ನ ಮೊದಲ ಪ್ರಮುಖ ಸಾಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3vAYGGH
June 17, 2021 at 05:40PM