ಯುರೋಪ್ನ ಮೊತ್ತ ಮೊದಲ ಹಿಂದೂ ದೇವಾಲಯ, ಲಂಡನ್ನ ಶ್ರೀ ಸ್ವಾಮಿ ನಾರಾಯಣ ಮಂದಿರ
Image Credits : Londonist
ಭಾರತದಲ್ಲಿ ಹಿಂದೂ ಧರ್ಮಕ್ಕೆ ಶತ ಶತಮಾನಗಳ ಪರಂಪರೆಯಿದೆ. ಭಾರತ ಭೂಮಿಯನ್ನು ತೀರ್ಥ ಕ್ಷೇತ್ರಗಳ ತವರೆಂದು ಕರೆಯುತ್ತಾರೆ. ಪುರಾಣ ಇತಿಹಾಸವನ್ನು ಒಳಗೊಂಡಿರುವ ಸಾವಿರಾರು ದೇವಾಲಯಗಳನ್ನು ಇಲ್ಲಿ ಕಾಣಬಹುದು. ಈ ದೇವಾಲಯಗಳು ಭಾರತೀಯ ಸಂಸ್ಕೃತಿ, ಆಚಾರ-ವಿಚಾರ, ಕಲಾತ್ಮಕತಯನ್ನು ಪ್ರತಿನಿಧಿಸುತ್ತವೆ, ಆಯಾ ದೇವರುಗಳು ಹೆಸರಲ್ಲೂ ಹಲವಾರು ದೇವಾಲಯಗಳಿದ್ದು, ಪ್ರತಿನಿತ್ಯ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಧನ್ಯರಾಗುತ್ತಾರೆ. ಹಿಂದೂ ಧರ್ಮ, ದೇವರುಗಳಿಗೆ ಬರೀ ಭಾರತದಲ್ಲಿ ಮಾತ್ರವಲ್ಲ ಪ್ರಪಂಚದಾದ್ಯಂತ ಸಾವಿರಾರು ಭಕ್ತಾಧಿಗಳಿದ್ದಾರೆ.
ಭಾರತದ ಹೊರ ವಲಯದಲ್ಲಿಯೂ ಹಿಂದೂ ದೇವಾಲಯಗಳಿವೆ. ಅವು ಭಾರತದಲ್ಲಿ ಇರುವ ಸುಂದರವಾದ ದೇವಾಲಯಗಳಂತೆ ಅತ್ಯಂತ ಆಕರ್ಷಣೆ ಹಾಗೂ ಪ್ರಸಿದ್ಧಿಯನ್ನು ಪಡೆದುಕೊಂಡಿವೆ. ಭಾರತದ ಸನಾತನ ಧರ್ಮಕ್ಕೆ ಬೆರಗಾಗಿ ವಿಶ್ವದ ಹಲವೆಡೆ ಜನರು ಇಲ್ಲಿನ ದೇವರನ್ನು ಪೂಜಿಸುತ್ತಾರೆ. ಹಾಗಾಗಿಯೇ ವಿದೇಶದಲ್ಲಿಯೂ ಹಿಂದೂ ದೇವರ ದೇವಾಲಯಗಳನ್ನು ನೋಡಬಹುದು. ಅಮೇರಿಕಾ, ಜಪಾನ್, ಲಂಡನ್, ಆಸ್ಟ್ರೇಲಿಯಾ, ಆಫ್ರಿಕಾ ಹೀಗೆ ದೇಶದ ಹಲವೆಡೆ ಹಿಂದೂ ದೇವಸ್ಥಾನಗಳಿವೆ. ಭಾರತದಲ್ಲಿ ಇರುವ ಸುಂದರವಾದ ದೇವಾಲಯಗಳಂತೆ ಅತ್ಯಂತ ಆಕರ್ಷಣೆ ಹಾಗೂ ಪ್ರಸಿದ್ಧಿಯನ್ನು ಪಡೆದುಕೊಂಡಿವೆ
ಆದರೆ ನಿಮಗೆ ಗೊತ್ತಾ..? ವಿದೇಶದಲ್ಲಿ ಮೊತ್ತ ಮೊದಲ ಹಿಂದೂ ದೇವಾಲಯ ನಿರ್ಮಾಣವಾಗಿದ್ದು ಲಂಡನ್ ನಲ್ಲಿ. ಹೌದು, ಲಂಡನ್ ನಲ್ಲಿರುವ ಶ್ರೀ ಸ್ವಾಮಿ ನಾರಾಯಣ ಮಂದಿರ ವಿದೇಶದಲ್ಲಿರುವ ಮೊತ್ತ ಮೊದಲ ಹಿಂದೂ ದೇವಸ್ಥಾನ ಎಂದು ಕರೆಯಲ್ಪಡುತ್ತದೆ. ನೇಸ್ಡನ್ ಟೆಂಪಲ್ ಎಂದು ಸಹ ಇದನ್ನು ಕರೆಯುತ್ತಾರೆ. ಬೃಹತ್ ಆಗಿರುವ ಈ ದೇವಾಲಯ ತನ್ನ ವಿಶಿಷ್ಟತೆಯಿಂದಲೇ ಗಿನ್ನೆಸ್ ರೆಕಾರ್ಡ್ನಲ್ಲೂ ಹೆಸರು ದಾಖಲಿಸಿಕೊಂಡಿದೆ.
ನೇಸ್ಡನ್ ಟೆಂಪಲ್ ದೇವಾಲಯವನ್ನು ಸಂಪೂರ್ಣವಾಗಿ ಹಿಂದೂ ಧರ್ಮದ ಅನುಸಾರ ಕಲಾತ್ಮಕವಾಗಿ ಕಟ್ಟಲಾಗಿದೆ. ಇದನ್ನು ಬ್ರಿಟನ್ನ ಮೊದಲ ಹಿಂದೂ ದೇವಾಲಯ ಮತ್ತು ಯುರೋಪ್ನ ಮೊದಲ ಸಾಂಪ್ರದಾಯಿಕ ದೇವಸ್ಥಾನವೆಂದು ಎಂದು ಹೇಳಲಾಗುತ್ತದೆ. ಬೋಚನ್ವಾಸಿ ಶ್ರೀ ಅಕ್ಷರ್ ಪುರುಷೋತ್ತಮ್ ಸ್ವಾಮಿನಾರಾಯಣ ಸನಸ್ತಾ ಮಂದಿರ 1995ರಲ್ಲಿ ಪ್ರಮುಖ್ ಸ್ವಾಮಿ ಮಹಾರಾಜ್ರಿಂದ ನಿರ್ಮಾಣಗೊಂಡಿತು. ಇದರಡಿಯಲ್ಲೇ ಶ್ರೀ ನಾರಾಯಣ ಮಂದಿರ ನಿರ್ಮಿಸಲ್ಪಟ್ಟಿದೆ.
ಗಿನ್ನೆಸ್ ರೆಕಾರ್ಡ್ನಲ್ಲಿ ಶ್ರೀ ಸ್ವಾಮಿನಾರಾಯಣ ಮಂದಿರ
Image credits : Pinterest
ಹಲವು ಗಿನ್ನೆಸ್ ರೆಕಾರ್ಡ್ ನಲ್ಲಿ ಹೆಸರು ದಾಖಲಿಸಿರುವುದು ಲಂಡನ್ನ ಶ್ರೀ ನಾರಾಯಣ ಮಂದಿರದ ಹೆಗ್ಗಳಿಕೆ. ನೇಸ್ಟನ್ ನಲ್ಲಿರುವ ಶ್ರೀ ನಾರಾಯಣ ಮಂದಿರ ಭಾರತದಿಂದ ಹೊರದೇಶದಲ್ಲಿರುವ ಅತ್ಯಂತ ದೊಡ್ಡ ದೇವಾಲಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತದ ಸಾಧು 92 ವರ್ಷದ ಪ್ರಮುಖ್ ಸ್ವಾಮಿ ಇದನ್ನು ನಿರ್ಮಿಸಿದರು. 2,828 ಟನ್ನಷ್ಟು ಬಲ್ಗೇರಿಯನ್ ಲೈಮ್ ಸ್ಟೋನ್ ಮತ್ತು 2000 ಟನ್ ಇಟಾಲಿಯನ್ ಮಾರ್ಬಲ್ ನಿಂದ ಈ ದೇಗುಲವನ್ನು ಕಟ್ಟಲಾಗಿದೆ. 1526 ಶಿಲ್ಪಿಗಳು ಈ ಬೃಹತ್ ಶ್ರೀ ನಾರಾಯಣ ಮಂದಿರ ಕಟ್ಟುವ ಕಾರ್ಯದಲ್ಲಿ ಕೈ ಜೋಡಿಸಿದರು.
ಲಂಡನ್ನಲ್ಲಿರುವ ಈ ದೇವಸ್ಥಾನ ಕಟ್ಟುವ ಯೋಜನೆಗೆ ಐದು ವರ್ಷ ಯೋಜನೆ ರೂಪಿಸಲಾಗಿತ್ತು. ಆದರೆ ಅಚ್ಚರಿಯೆಂದರೆ ಕೇವಲ ಎರಡೂವರೆ ವರ್ಷದಲ್ಲಿ ಮಂದಿರ ಕಟ್ಟುವ ಕಾರ್ಯ ಸಂಪೂರ್ಣವಾಗಿತ್ತು. ಸಂಪೂರ್ಣವಾಗಿ ಹಿಂದೂಗಳಿಂದಲೇ ಈ ದೇವಾಲಯ ನಿರ್ಮಾಣವಾಗಿದೆ. 1992ರ ಅಗೋಸ್ಟ್ನಲ್ಲಿ ಈ ದೇವಸ್ಥಾನವನ್ನು ಕಟ್ಟಲು ಆರಂಭಿಸಲಾಯಿತು. 1992ರ ನವೆಂಬರ್ ನಲ್ಲಿ ಅತಿ ಉದ್ದವಾದ ಕಾಂಕ್ರೀಟ್ ನೆಲ ನಿರ್ಮಿಸಿದ ಹೆಗ್ಗಳಿಕೆ ಈ ದೇಗುಲಕ್ಕೆ ಲಭಿಸಿತು. ದೇವಸ್ಥಾನದ ಅಡಿಪಾಯಕ್ಕೆ 4,500 ಕಲ್ಲುಗಳನ್ನು ಬಳಸಿ 24 ಗಂಟೆಯಲ್ಲಿ ನೆಲಹಾಸನ್ನು ಸಿದ್ಧಪಡಿಸಲಾಯಿತು. 1993ರ ಜೂನ್ನಲ್ಲಿ ಕೆಲಸ ಆರಂಭಗೊಂಡಿದ್ದು, ಸರಿಯಾಗಿ ಎರಡೂವರೆ ವರ್ಷದಲ್ಲಿ ಪೂರ್ತಿಗೊಂಡಿತು.
ಶ್ರೀ ಸ್ವಾಮಿ ನಾರಾಯಣ ಮಂದಿರ ಹಿಂದೂ ಧರ್ಮದ ಶಿಲ್ಪ ಶಾಸ್ತ್ರದ ಪ್ರಕಾರ ನಿರ್ಮಾಣವಾಗಿದೆ. ದೇವಾಲಯದಲ್ಲಿರುವ ಹಿಂದೂ ದೇವಾಲಯಗಳ ವಿಗ್ರಹಗಳು ಸಂಪೂರ್ಣವಾಗಿ ಇಂಡಿಯನ್ ಮಾರ್ಬಲ್, ಇಟಾಲಿಯನ್ ಮಾರ್ಬಲ್, ಸರ್ದೀನಿಯನ್ ಗ್ರಾನೈಟ್, ಬಲ್ಗೇರಿಯನ್ಸ್ಟೋನ್ನಿಂದ ನಿರ್ಮಿಸಲ್ಪಟ್ಟಿವೆ. ಸಂಪೂರ್ಣ ದೇವಾಲಯ ನಿರ್ಮಾಣದಲ್ಲಿ ಯಾವುದೇ ರೀತಿಯಲ್ಲಿ ಕಬ್ಬಿಣ ಅಥವಾ ಸ್ಟೀಲ್ ನ್ನು ಬಳಕೆ ಮಾಡದಿರುವುದು ಇಲ್ಲಿನ ವಿಶೇಷ. ಪ್ರಮುಖ್ ಸ್ವಾಮಿಯ ನಿರ್ದೇಶನದಂತೆ ನಿರ್ಮಾತೃ ಸಿ.ಬಿ ಸೋಂಪುರ ಮತ್ತು ತಂಡ ಬರೀ ಕಲ್ಲುಗಳನ್ನಷ್ಟೇ ದೇಗುಲದ ನಿರ್ಮಾಣಕ್ಕೆ ಬಳಸಿದೆ. ವಿಶಿಷ್ಟ ಶೈಲಿಯ ಗೋಪುರ ಈ ದೇವಾಲಯದ ವಿಶೇಷ.
ದೇವಾಲಯದ ಹೊರಾಂಗಣಕ್ಕೆ ಬಲ್ಗೇರಿಯಾ ಲೈಮ್ಸ್ಟೋನ್, ಒಳಾಂಗಣಕ್ಕೆ ಇಟಾಲಿಯನ್ ಕರಾರ ಮಾರ್ಬಲ್ ಜತೆಗೆ ಭಾರತದ ಅಂಬಾಜಿ ಮಾರ್ಬಲ್ನ್ನು ಅಳವಡಿಸಲಾಗಿದೆ. ಸ್ವಾಮಿ ಮಹಾರಾಜ್ರ ಪ್ರೇರಣೆಯಿಂದ 1000ಕ್ಕಿಂತ ಹೆಚ್ಚು ಮಂದಿ ಸ್ವಯಂಪ್ರೇರಿತವಾಗಿ ಈ ದೇವಾಲಯ ನಿರ್ಮಾಣದಲ್ಲಿ ಭಾಗಿಯಾಗಿದ್ದರು. ಅಲ್ಲದೆ, ಹಲವರು ದೊಡ್ಡ ಮೊತ್ತದ ಆರ್ಥಿಕ ಸಹಾಯವನ್ನು ಒದಗಿಸಿದ್ದರು. ಮಂದಿರದ ಒಳಗೊರಿರುವ ಮರದ ಕೆತ್ತನೆ ಕೆಲಸಗಳು ಕಣ್ಮನ ಸೂರೆಗೊಳ್ಳುವಂತಿದೆ.
ಮಂದಿರದಲ್ಲಿ Understanding Hinduism ಎಂಬ ಎಕ್ಸಿಬಿಷನ್ ಇದ್ದು, ದೇವಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರ ಗಮನ ಸೆಳೆಯುತ್ತದೆ. ಇಲ್ಲಿರುವ ಸಾಂಪ್ರದಾಯಿಕ ಕೆತ್ತನೆ ಕೆಲಸ, 3ಡಿ ಪೈಂಟಿಂಗ್ಸ್ ಹಿಂದೂ ಸಂಪ್ರದಾಯದ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡುತ್ತಿದೆ. ಹಿಂದೂ ಧರ್ಮದ ಹುಟ್ಟು, ಅದರ ಪ್ರಾಮುಖ್ಯತೆ ಬಗ್ಗೆ ಜನರಿಗೆ ತಿಳಿಸುವುದು ಈ ಎಕ್ಸಿಬಿಷನ್ ನ ಉದ್ದೇಶವಾಗಿದೆ. ದೇಶ, ಧರ್ಮದ ಹಂಗಿಲ್ಲದೆ ಪ್ರತಿಯೊಬ್ಬರೂ ಕೂಡಾ ಈ ಶ್ರೀ ಸ್ವಾಮಿ ನಾರಾಯಣ ಮಂದಿರವನ್ನು ಪ್ರವೇಶಿಲು ಅವಕಾಶವಿದೆ. ದೇವಸ್ಥಾನದ ಎದುರಲ್ಲೇ ಶ್ರೀ ಸ್ವಾಮಿ ನಾರಾಯಣ ಶಾಲೆಯಿದ್ದು, ಯುರೋಪ್ನ ಮೊದಲ ಸ್ವತಂತ್ರ ಹಿಂದೂ ಶಾಲೆ ಇದಾಗಿದೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/34GSmSY
June 03, 2021 at 08:10PM